ಗುತ್ತುಪಾರ-ಬಾಳೆಗುಳಿ ರಸ್ತೆ ದುರಸ್ತಿಗೊಳಿಸಲು ಗ್ರಾಮಸ್ಥರ ಆಗ್ರಹ
Team Udayavani, Jul 25, 2018, 11:54 AM IST
ನಿಡ್ಪಳ್ಳಿ : ಬೆಟ್ಟಂಪಾಡಿ ಗ್ರಾ.ಪಂ. ವ್ಯಾಪ್ತಿಯ ಗುತ್ತುಪಾರ ಬಾಳೆಗುಳಿ ತೆರಳುವ ಪಂಚಾಯತ್ ರಸ್ತೆಯ ಸ್ಥಿತಿ ಶೋಚನೀಯವಾಗಿದೆ. ಈ ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಲಪಾಡಿಯಿಂದ ಗುತ್ತು ಕೊರಿಂಗಿಲ ಬೆದ್ರಾಡಿ ಪೊಯ್ಯೆ ಮೂರ್ಕಾಜೆ ಮಜಲುಗುಡ್ಡೆ ಪಾರ ನೀರಾಜೆ ಬಾಳೆಗುಳಿ ಸಂಪರ್ಕ ರಸ್ತೆಯು ಸುಮಾರು 1.5ರಿಂದ 2 ಕಿ.ಮೀ. ಉದ್ದವಿದೆ. ಈ ಕಚ್ಚಾ ರಸ್ತೆ ಕೆಸರುಮಯವಾಗಿದೆ. 50ಕ್ಕಿಂತಲೂ ಹೆಚ್ಚು ಮನೆ ಹಾಗೂ ಕೊರಿಂಗಿಲ ಮಸೀದಿ ಇರುವ ಪ್ರದೇಶಕ್ಕೆ ಹೋಗುವ ರಸ್ತೆ ಇದಾ ಗಿದೆ. ಬಾಳೆಗುಳಿಗೆ ಹೋಗಿ ಸೇರಿದರೆ ಅಲ್ಲಿಂದ ಪೇರಲ್ತಡ್ಕ, ದೂಮಡ್ಕ, ಒಡ್ಯ ಪಾಣಾಜೆ ಸಂಪರ್ಕಿಸಲು ಈ ಭಾಗದ ಜನರಿಗೆ ಬಹಳ ಸಮೀಪವಿರುವ ರಸ್ತೆ ಇದಾಗಿದೆ. ಗುತ್ತು ಎನ್ನುವಲ್ಲಿ 50 ಮೀಟರ್ ರಸ್ತೆ ಮಾತ್ರ ಕಾಂಕ್ರಿಟ್ ಆಗಿದೆ. ಈ ರಸ್ತೆಯ ಸಣ್ಣ ಮಟ್ಟದ ದುರಸ್ತಿಗೆ ಪಂಚಾಯತ್‌ನಿಂದ ಅನುದಾನ ಬಿಡುಗಡೆಯಾಗಿತ್ತು. ಹೊರತು ಶಾಸಕ, ಸಂಸದರ ನಿಧಿಯಿಂದ ಯಾವುದೇ ಹೆಚ್ಚಿನ ಅನುದಾನ ಈವರೆಗೆ ಬಿಡುಗಡೆಯಾಗಿಲ್ಲ ಎಂದು ಈ ಭಾಗದ ಜನರು ಹೇಳುತ್ತಾರೆ.
ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ
ಮಳೆ ನೀರು ಹರಿಯಲು ಚರಂಡಿ ವ್ಯವಸ್ಥೆಯೂ ಇಲ್ಲಿ ಸಮರ್ಪಕವಾಗಿಲ್ಲದ ಕಾರಣ ಮಳೆನೀರು ರಸ್ತೆಯಲ್ಲಿ ನಿಂತು ಕೆಸರುಮಯವಾಗಿದೆ. ರಸ್ತೆಯ 2 ಕಡೆ ಮೋರಿಯ ಅವಶ್ಯಕತೆಯೂ ಇದೆ. ಶಾಲಾ ಮಕ್ಕಳು ಕೂಡ ಈ ರಸ್ತೆಯಲ್ಲಿ ನಡೆದಾಡಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ತಮ್ಮ ಮನೆ ತಲುಪಬೇಕಾದರೆ ಜನರು ಪರದಾಡಬೇಕಾದ ಸ್ಥಿತಿ ಇದೆ. ಕಾಂಕ್ರೀಟ್ ಅಥವಾ ಡಾಮರು ಹಾಕಿದರೆ ಮಾತ್ರ ಈ ರಸ್ತೆಯಲ್ಲಿ ಸಂಚರಿಸ ಬಹುದು. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಎಂದು ಸಾರ್ವಜನಿಕರು ಹೇಳುತ್ತಾರೆ.
ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಡಾಮರು ಹಾಕುವಂತೆ ಕಳೆದ ಬಾರಿ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಗ್ರಾ.ಪಂ.ನಿಂದ ದೊಡ್ಡ ಮೊತ್ತದ ಅನುದಾನ ನೀಡಲು ಅಸಾಧ್ಯವಾದ ಕಾರಣ ಈ ಬಾರಿಯೂ ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ. ಇದಕ್ಕೆ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಅಗುವವರೆಗೂ ಪ್ರಯತ್ನ ಮುಂದುವರಿಸಲಾಗುವುದು.
– ದಿವ್ಯಾ ಪಾರ, ಬೆಟ್ಟಂಪಾಡಿ ಗ್ರಾ.ಪಂ. ಸದಸ್ಯರು
ಡಾಮರು ಭಾಗ್ಯ ಕರುಣಿಸಿ
ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದೆ. ಪಾದಚಾರಿಗಳಿಗೂ ಇಲ್ಲಿ ತೆರಳಲು ಕಷ್ಟವಾಗುತ್ತಿದೆ. ಪ್ರತಿ ಸಲ ಇದಕ್ಕೆ ಕಾಂಕ್ರೀಟ್ ಹಾಕುವಂತೆ ನಾವು ಒತ್ತಾಯಿಸುತ್ತಾ ಬಂದಿದ್ದೇವೆ. ಆದರೆ ಇದುವರೆಗೆ ಯಾರಿಂದಲೂ ಸ್ಪಂದನೆ ದೊರೆತಿಲ್ಲ. ಸಂಚಾರಕ್ಕೆ ಅಯೋಗ್ಯವಾದ ಈ ರಸ್ತೆಗೆ ಡಾಮರು ಭಾಗ್ಯ ಆದಷ್ಟು ಬೇಗ ಸಿಗಲಿ ಎನ್ನುವುದು ನಮ್ಮ ಆಗ್ರಹ.
– ಚಂದ್ರಶೇಖರ ಗೌಡ ಪಾರ,
ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.