ಪೇಪರ್‌ ಹಾಕಿ ವಿದ್ಯೆ ಕಲಿತ ಯುವಕ ಇಂದು ವೀರ ಸೈನಿಕ

Team Udayavani, Mar 2, 2018, 10:08 AM IST

2-March-1.jpg

ಮನೆಯಲ್ಲಿ ತೀವ್ರ ಬಡತನ. ಆದರೂ ಅದನ್ನು ಮೆಟ್ಟಿನಿಂತು ಪೇಪರ್‌ ಹಾಕಿ, ಕ್ಯಾಟರಿಂಗ್‌ ಮಾಡಿ, ವಿದ್ಯೆ ಕಲಿತು ದೇಶಸೇವೆಗೈವ ಸೈನಿಕನಾಗುವ ಕನಸು ಈಡೇರಿಸಿಕೊಂಡರು. ಈ ಮೂಲಕ ಅವರೀಗ ಇಡೀ ಸಮಾಜಕ್ಕೇ ಆದರ್ಶಪ್ರಾಯರಾದರು!

ಮಂಗಳೂರು: ಬಾಲ್ಯದಲ್ಲಿ ವಿದ್ಯೆ ಕಲಿಯಲು, ಜೀವನ ಸಾಗಿಸುವುದಕ್ಕೆ ಕಷ್ಟಪಟ್ಟರೂ, ಮುಂದೊಂದು ದಿನ ದೇಶಕ್ಕೆ, ಊರಿಗೆ ಕೀರ್ತಿ ತಂದ ಹಲವರಿದ್ದಾರೆ. ಅಂತಹವರಲ್ಲೊಬ್ಬರು ಬಂಟ್ವಾಳ ತಾಲೂಕಿನ ಅಮ್ಟಾಡಿಯ ಮೈರ ಮನೆಯ ಯೋಧ ಸುಧಾಕರ್‌ ಶೆಟ್ಟಿ ಬಂಟ್ವಾಳ. ಸುಧಾಕರ್‌ ಅವರು ಬಾಲ್ಯದಲ್ಲಿ ಕಷ್ಟವನ್ನೇ ಕಂಡಿದ್ದು ಪೇಪರ್‌ ಹಾಕಿ, ಕ್ಯಾಟರಿಂಗ್‌ ಮಾಡಿ ವಿದ್ಯೆ ಕಲಿತರು. ಅವರೀಗ ದೇಶಸೇವೆಯ ಕೈಂಕರ್ಯದಲ್ಲಿದ್ದು ದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ಕಮಾಂಡೋ ಆಗಿದ್ದಾರೆ. 
ಕರ್ತವ್ಯ ನಿರತ ಸುಧಾಕರ ಶೆಟ್ಟಿ

ಕಲಿಕೆ, ಸೈನ್ಯಕ್ಕೆ ಸೇರ್ಪಡೆ
ಕಿನ್ನಿಬೆಟ್ಟು ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಸುಧಾಕರ್‌ ಬಳಿಕ ಬಂಟ್ವಾಳ ಎಸ್‌ವಿಎಸ್‌ ಕನ್ನಡ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ಶಿಕ್ಷಣ ಮುಗಿಸಿದ್ದಾರೆ. ಮುಂದೆ ಎಸ್‌ವಿಎಸ್‌ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಮಂಗಳೂರಿನಲ್ಲಿ ಫೈರ್‌ ಆ್ಯಂಡ್‌ ಸೇಫ್ಟಿ ಕೋರ್ಸ್‌ ಮಾಡುತ್ತಿರುವಾಗಲೇ 2012ರಲ್ಲಿ ಸೇನೆಗೆ ಸೇರಿದ್ದರು.

ಬಳಿಕ ಹುಬ್ಬಳ್ಳಿಯಲ್ಲಿ ತರಬೇತಿ ಮುಗಿಸಿ, ಲಕ್ನೋಕ್ಕೆ ಪೋಸ್ಟಿಂಗ್‌ ಆಗಿತ್ತು. ನಂತರದಲ್ಲಿ ಶ್ರೀನಗರದಲ್ಲಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ರಾಷ್ಟ್ರಪತಿ ಭವನದ ಭದ್ರತೆಗೆ ನಿಯೋಜನೆಯಾಗಿದ್ದಾರೆ. ಕರ್ತವ್ಯ ಅವಧಿಯಲ್ಲಿ 6 ತಿಂಗಳು ಆಫ್ರಿಕಾದ ಕಾಂಗೋದ ವಿಶ್ವಸಂಸ್ಥೆ ಕೇಂದ್ರದಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ. ಸುಧಾಕರ್‌ ಅವರು ಆಗ್ರಾದಲ್ಲಿ ಪ್ಯಾರಾ ಕಮಾಂಡೋ ತರಬೇತಿಯನ್ನೂ ಪೂರೈಸಿದ್ದಾರೆ.

ಸ್ನೇಹಿತರಾದ ಗಣೇಶ್‌ ಕೊಟ್ಟಾರಿ ಅವರು ನೀಡಿದ ಮಾರ್ಗದರ್ಶನವೇ ತನ್ನನ್ನು ಸೇನೆಗೆ ಸೇರಲು ಪ್ರೇರಣೆ ನೀಡಿತ್ತು ಎಂದು ಸುಧಾಕರ್‌ ಹೇಳುತ್ತಾರೆ.ಫಿಟ್ನೆಸ್ ಬಗ್ಗೆ, ಅವರು ನೀಡಿದ ಸಲಹೆ ಪ್ರೇರಣೆಗಳು ದೇಶಸೇವೆ ಸಲ್ಲಿಸಲು ಅನುಕೂಲ ಮಾಡಿಕೊಟ್ಟಿವೆ ಎಂದು ಹೇಳುತ್ತಾರೆ. 

ಸಹೋದರಿಯ ತ್ಯಾಗ
ಅಮ್ಟಾಡಿಯ ಮೈರ ಮನೆಯ ದಿ| ಸಂಜೀವ ಶೆಟ್ಟಿ-ಪದ್ಮಾವತಿ ದಂಪತಿಯ ಇಬ್ಬರು ಮಕ್ಕಳಲ್ಲಿ ಸುಧಾಕರ್‌ ಕಿರಿಯರು. ಅವರಕ್ಕ ಬಬಿತಾ ಶೆಟ್ಟಿ. ಸಣ್ಣ ವಯಸ್ಸಿಗೆ ತಂದೆ ತೀರಿಕೊಂಡಿದ್ದಾಗ ತಾಯಿ ಬೀಡಿ ಕಟ್ಟಿ ಇಬ್ಬರು ಮಕ್ಕಳನ್ನೂ ಸಲಹಿದ್ದರು. ಬಬಿತಾ ಅವರಿಗೆ ಮದುವೆಯಾಗಿ ಗುಜರಾತ್‌ನಲ್ಲಿದ್ದಾಗ, ತಾಯಿಗೆ ಅನಾರೋಗ್ಯವಾಗಿದ್ದು, ಅವರು ಕೂಡಲೇ ತಮ್ಮನ ನೆರವಿಗೆ ಬಂದಿದ್ದರು. ತಮ್ಮನ ಶಿಕ್ಷಣ, ಬೆಳವಣಿಗೆಗೆ ಆಸರೆಯಾಗಿದ್ದರು. ಅಕ್ಕ ಬಬಿತಾರಿಂದಾಗಿ ಸುಧಾಕರ್‌ ಅವರು ಒಂದು ಹಂತಕ್ಕೆ ಬಂದು ನಿಂತಿದ್ದರು. ಆಕೆಯ ತ್ಯಾಗದಿಂದಾಗಿಯೇ ನಾನಿಂದು ದೇಶಸೇವೆ ಮಾಡುವಂತಾಗಿದೆ ಎಂದು ಸೈನಿಕ ಸುಧಾಕರ್‌ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಮರೆಯಲಾಗದ ಕ್ಷಣ
2016, ಸೆ.18ರ ಹೊತ್ತಿಗೆ ಸುಧಾಕರ್‌ ಶೆಟ್ಟಿ ಅವರು ಶ್ರೀನಗರ ಜೆಎಂಕೆಯ ಬಿಬಿ ಕ್ಯಾಂಪ್‌ನಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ
ನರ್ಸಿಂಗ್‌ ಸೆಕ್ಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಉರಿ ಸೇನಾ ಶಿಬಿರದ ಮೇಲೆ ದಾಳಿ ನಡೆದಿದ್ದು, 17 ಮಂದಿ ಯೋಧರು ಮೃತಪಟ್ಟು, 39 ಮಂದಿ ಗಂಭೀರ ಗಾಯಗೊಂಡಿದ್ದರು. ಈ ವೇಳೆ ಮೃತದೇಹ ಹಾಗೂ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಬೇಕಿತ್ತು. ಇದು ತನ್ನ ಸೇನಾವಧಿಯಲ್ಲಿ ಮರೆಯಲಾಗದ ಕ್ಷಣವಾಗಿದೆ ಎಂದು ಸುಧಾಕರ್‌ ವಿವರಿಸುತ್ತಾರೆ.

ದೇಶದ ಸೇವೆಯ ಯೋಗ
ನಾನು ಬಡತನದಿಂದಲೇ ಮೇಲೆ ಬಂದವನು. ತಾಯಿ ಕಷ್ಟಪಟ್ಟು ಸಾಕಿದ್ದು, ಶಿಕ್ಷಣಕ್ಕಾಗಿ ಅಕ್ಕ ಬೆಂಬಲ ನೀಡಿದ್ದರಿಂದ ಇಂದು ದೇಶಸೇವೆಯ ಯೋಗ ಬಂದೊದಗಿದೆ.
-ಸುಧಾಕರ್‌ ಶೆಟ್ಟಿ
ಕಮಾಂಡೋ

ಕಿರಣ್‌ ಸರಪಾಡಿ

ಟಾಪ್ ನ್ಯೂಸ್

BBMP-ED

illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಕಚೇರಿ ಮೇಲೆ ಇ.ಡಿ. ದಾಳಿ

Bjp-Rijiju

Waqf Report: ಅಮಿತ್‌ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್‌ ರಿಜಿಜು ಮೂಲಕ ಸಲ್ಲಿಕೆ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Train; ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ

Train; ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ

Dakshina Kannada ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು

Dakshina Kannada ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಒನ್‌ ನೇಶನ್‌-ಒನ್‌ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್‌

Mangaluru: ಒನ್‌ ನೇಶನ್‌-ಒನ್‌ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್‌

Mangaluru: ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೆಪಿಟಿ ದಾರಿದೀಪ: ಸಚಿವ ಡಾ| ಎಂ.ಸಿ. ಸುಧಾಕರ್‌

Mangaluru: ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೆಪಿಟಿ ದಾರಿದೀಪ: ಸಚಿವ ಡಾ| ಎಂ.ಸಿ. ಸುಧಾಕರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BBMP-ED

illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಕಚೇರಿ ಮೇಲೆ ಇ.ಡಿ. ದಾಳಿ

Bjp-Rijiju

Waqf Report: ಅಮಿತ್‌ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್‌ ರಿಜಿಜು ಮೂಲಕ ಸಲ್ಲಿಕೆ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.