ಪೇಟೆ ನಡುವಿನ ಕಾಡಿನಲ್ಲಿ ಮಕ್ಕಳಿಗಾಗಿ ಆ್ಯಂಪಿ ಥಿಯೇಟರ್
Team Udayavani, Apr 22, 2018, 11:09 AM IST
ಪುತ್ತೂರು: ಪೇಟೆ ನಡುವೆ ಒಂದು ಕಾಡು ಜೀವ ತಳೆಯುತ್ತಿದೆ. ಈ ಕಾಡಿನ ನಡುವೆ ಮಕ್ಕಳಿಗಾಗಿ ಆ್ಯಂಪಿ ಥಿಯೇಟರ್ ನಿರ್ಮಿಸಬೇಕೆಂಬ ಪ್ರಸ್ತಾವವನ್ನು ಸರಕಾರಕ್ಕೆ ಕಳುಹಿಸಲಾಗಿದೆ.
ಪುತ್ತೂರು ಪೇಟೆಯನ್ನು ಕಣ್ಸೆರೆಯಲ್ಲಿ ಹಿಡಿಯಬಲ್ಲ ಸ್ಥಳ ಬಿರುಮಲೆ ಗುಡ್ಡ. ಇದರ ತುದಿಯಲ್ಲಿ ಗಾಂಧಿ ಮಂಟಪ, ಆಯಕಟ್ಟಿನ ಜಾಗ ಇದೆ. ಇಲ್ಲಿನ ವಿಸ್ತಾರ ಜಾಗದಲ್ಲಿ ಒಂದಷ್ಟನ್ನು ಅಂದರೆ 14 ಎಕರೆಯನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ಇದರ ಉದ್ದೇಶ, ಪೇಟೆ ನಡುವೆ ಕಾಡನ್ನು ನಿರ್ಮಿಸುವುದು. ವಾಯುವಿಹಾರಕ್ಕೆ, ವಾಕಿಂಗ್‌ಗೆ, ಕಾಡಿನ ಪರಿಸರ ಸವಿಯುವ ಕಾರಣಕ್ಕೆ ಅರಣ್ಯದಂತೆ ನಿರ್ಮಿಸಬೇಕೆಂಬ ತುಡಿತ ಅರಣ್ಯ ಇಲಾಖೆಯದ್ದು. ಮೊದಲ ಹಂತದ ಕಾಮಗಾರಿ ಶೇ. 75ರಷ್ಟು ಪೂರ್ಣಗೊಂಡಿದೆ. ಎರಡನೇ ಹಂತದ ಕಾಮಗಾರಿ ನಡೆಸಲು ಮುಂದಾಗಿದೆ. ಇದರಲ್ಲಿ ಆ್ಯಂಪಿ ಥಿಯೇಟರನ್ನು ಸೇರಿಸಿಕೊಳ್ಳಲಾಗಿದೆ.
1.25 ಕೋಟಿ ರೂ. ಅನುದಾನ
ಪ್ರತಿ ಜಿಲ್ಲೆಗೊಂದು ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ್ನು ರಾಜ್ಯ ಸರಕಾರ ನೀಡಿತ್ತು. ಆದರೆ ಕರಾವಳಿ ಜಿಲ್ಲೆಗಳಿಗೆ ತಾಲೂಕಿ ಗೊಂದ ರಂತೆ ವೃಕ್ಷೋದ್ಯಾನ ನೀಡಲಾಗಿದೆ. ಇದರಲ್ಲಿ ಪುತ್ತೂರು ತಾಲೂಕಿನ ಬಿರುಮಲೆ ಗುಡ್ಡದಲ್ಲಿ ವೃಕ್ಷೋದ್ಯಾನ ನಿರ್ಮಾಣ ಆಗುತ್ತಿದೆ. ಇದು ಐದು ವರ್ಷದ ಯೋಜನೆ. ಒಟ್ಟು 1.25 ಕೋಟಿ ರೂ.ನಷ್ಟು ಅನುದಾನ ನೀಡಲಾಗಿದೆ. ಮೊದಲ ಹಂತದ ಯೋಜನೆಯಲ್ಲಿ 30 ಲಕ್ಷ ರೂ. ಮಂಜೂರಾಗಿದೆ. ಪುತ್ತೂರಿನ ಕಾಮಗಾರಿ ವೇಗವಾಗಿ ಪೂರ್ಣಗೊಳ್ಳುತ್ತಿದೆ. ಇದನ್ನು ಗಮನಿಸಿದ ಅರಣ್ಯ ಇಲಾಖೆ ಪುತ್ತೂರಿಗೆ ಹೆಚ್ಚುವರಿ 11.5 ಲಕ್ಷ ರೂ. ಗಳನ್ನು ಮಂಜೂರುಗೊಳಿಸಿದೆ. ಇಷ್ಟು ಅನುದಾನವನ್ನು ಬಳಸಿಕೊಂಡು ಸ್ವಾಗತ ಗೇಟ್, ಟಿಕೇಟ್ ಕೌಂಟರ್, ಚೈನ್ ಲಿಂಕ್ ಬೇಲಿ, ಮುಳ್ಳುತಂತಿ ಬೇಲಿ ಹಾಗೂ ವಾಕಿಂಗ್ ಪಾಥ್, ಪೆರಾಗೋಲ, ಕುಳಿತುಕೊಳ್ಳಲು ಕಟ್ಟೆ, ಬೋರ್‌ವೆಲ್, 700 ವಿವಿಧ ಬಗೆಯ ಗಿಡಗಳನ್ನು ನೆಡಲಾಗಿದೆ.
ಈಗ ಎರಡನೇ ಹಂತದ ಕಾಮಗಾರಿಗೆ ಅರಣ್ಯ ಇಲಾಖೆ ಮುಂದಾಗಿದೆ. ಇದರಲ್ಲಿ ಪ್ರಮುಖವಾಗಿ ಆ್ಯಂಪಿ ಥಿಯೇಟರ್ ನಿರ್ಮಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಕಾಂಕ್ರೀಟ್ ವಸ್ತುಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ, ನೈಸರ್ಗಿಕ ವಸ್ತುಗಳಿಂದಲೇ ಆ್ಯಂಪಿ ಥಿಯೇಟರ್ ಹಾಗೂ ಇತರ ಕೆಲಸಗಳನ್ನು ನಿರ್ಮಾಣ ಮಾಡಲಿದೆ.
ಮಕ್ಕಳ ಬರ್ತ್‌ಡೇ ಪಾರ್ಟಿ, ಅಂಗನವಾಡಿಗಳ ವಾರ್ಷಿಕೋತ್ಸವ, ವಾರದ ಸಾಂಸ್ಕೃತಿಕ ಕಾರ್ಯಕ್ರಮ, ಕೌಟುಂಬಿಕ ಮನರಂಜನೆಗಾಗಿ ಈ ಆ್ಯಂಪಿ ಥಿಯೇಟರನ್ನು ಬಳಸಿಕೊಳ್ಳಬಹುದು. ಆ್ಯಂಪಿ ಥಿಯೇಟರ್ ಅಂದರೆ ಒಂದು ಪಾರ್ಕ್‌ನಂತೆ. ಇದರೊಳಗೆ ಕುಳಿತುಕೊಂಡಾಗ ಅರಣ್ಯದ ಅನುಭವ ಆಗಬೇಕು. ಪೇಟೆ ಜೀವನದಿಂದ ಬೇಸತ್ತು ಹೋದವರು, ಮತ್ತೆ ಕಾಡಿನ ಸಹವಾಸಕ್ಕೆ ಬರಬೇಕು ಎನ್ನುವ ಮಹದುದ್ದೇಶವಿದೆ.
ಏನಿದು ಆ್ಯಂಪಿಥಿಯೇಟರ್?
ಆ್ಯಂಪಿ ಥಿಯೇಟರ್ ಎನ್ನುವುದು ಗ್ರೀಕ್ ಪದ. ಬಯಲು ಮಂಟಪ ಎನ್ನುವುದೇ ಇದರ ಅರ್ಥ. ಬಿರುಮಲೆ ಗುಡ್ಡದಲ್ಲಿ ಮಕ್ಕಳಿಗಾಗಿ ನಿರ್ಮಿಸುವ ಕಾರಣ, 30 ಮಕ್ಕಳು ಕುಳಿತುಕೊಳ್ಳುವಷ್ಟು ಸ್ಥಳಾವಕಾಶ ಇಡಲಾಗುವುದು. ನಡುವಿನಲ್ಲಿ ಸ್ಟೇಡಿಯಂ, ಸುತ್ತ ಕುಳಿತುಕೊಳ್ಳಲು ಆಸನ. ಕಾಂಕ್ರೀಟ್ ಕಡಿಮೆ ಮಾಡಿ, ಮಣ್ಣಿನ ಕಲ್ಲುಗಳನ್ನು ಬಳಸಿ ನಿರ್ಮಾಣ ಕಾರ್ಯ ಮಾಡಲಾಗುವುದು.
3ಡಿ ಫೂಟೋ
ಅರಣ್ಯದ ಬಗೆಗಿನ ಫೂಟೋ, ಸಿನಿಮಾ, ಪ್ರಾಣಿ- ಪಕ್ಷಿಗಳ ಮಾಹಿತಿ ನೀಡುವುದು, 3ಡಿಯಲ್ಲಿ ಫೂಟೋಗಳನ್ನು ತೋರಿಸುವ ಕೆಲಸ ಮಾಹಿತಿ ಕೇಂದ್ರದಲ್ಲಿ ನಡೆಯಲಿದೆ. ಈ ಮೊದಲಿದ್ದ ಗ್ರಂಥಾಲಯವನ್ನು ನವೀಕರಣಗೊಳಿಸಿ ಬಳಸಿ ಕೊಳ್ಳಲಿದೆ. ಇದಕ್ಕೆಲ್ಲ ಟಿಕೆಟ್ ಶುಲ್ಕ ವಿಧಿಸುವ ಆಲೋಚನೆ ಇದೆ. ಆದರೆ ಶುಲ್ಕ ಎಷ್ಟು ಎನ್ನುವುದು ಇನ್ನೂ ತೀರ್ಮಾನವಾಗಿಲ್ಲ.
ಸರಕಾರಕ್ಕೆ ಪ್ರಸ್ತಾಪ
ಕಾಡಿನ ವಾತಾವರಣ ಪರಿಚಯಿಸುವ ಉದ್ದೇಶವೇ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ. ಇದರೊಳಗಡೆ ಆ್ಯಂಪಿ ಥಿಯೇಟರ್ ನಿರ್ಮಿಸಬೇಕೆಂದು ಸರಕಾರಕ್ಕೆ ಪ್ರಸ್ತಾಪ ಕಳುಹಿಸಲಾಗಿದೆ. ಮಕ್ಕಳ ಪ್ರತಿಭೆ ಇಲ್ಲಿ ಬೆಳಗಬೇಕು. ಹಾಗೆಂದು ಇದರೊಳಗಡೆ ಇಡೀ ದಿನಕ್ಕೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಸಂಜೆ ಹೊತ್ತು ಮಾತ್ರ ಬಂದು ವಿರಮಿಸಿ, ಖುಷಿ ಪಟ್ಟು ಹೋಗಬಹುದು.
– ವಿ.ಪಿ. ಕಾರ್ಯಪ್ಪ,
ವಲಯ ಅರಣ್ಯಾಧಿಕಾರಿ,
ಪುತ್ತೂರು
ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.