ದೇವಸ್ಥಾನದಲ್ಲಿ ಕಳವು: ಸಿಸಿ ಕ್ಯಾಮರಾದಲ್ಲಿ ಕಳ್ಳರ ಚಲನವಲನ ಸೆರೆ
Team Udayavani, Dec 26, 2019, 9:25 AM IST
ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಕಟ್ಟೆಯ ಸಂಗಬೆಟ್ಟುನಲ್ಲಿರುವ, ಪಣಂಬೂರು ಶ್ರೀ ವೀರಭದ್ರ ಮಹಾಮ್ಮಾಯಿ ದೇವಸ್ಥಾನಕ್ಕೆ ಕಳ್ಳರು ನುಗ್ಗಿದ್ದು, ದೇವಸ್ಥಾನದ ಒಳಗಿರುವ ಕಾಣಿಕೆ ಡಬ್ಬಿ ಕೊಂಡೊಯ್ದ ಘಟನೆ ಸಂಭವಿಸಿದೆ.
ಡಿ.25 ರ ಮಧ್ಯರಾತ್ರಿ 2.30 ವೇಳೆ ಘಟನೆ ಸಂಭವಿಸಿದ್ದು, ಕಳ್ಳರ ಚಲನ ವಲನ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.
ಇಬ್ಬರು ವ್ಯಕ್ತಿಗಳು ದೇವಸ್ಥಾನಕ್ಕೆ ಒಳಗೆ ನುಗ್ಗಿದ ಚಿತ್ರ ಸಿ.ಸಿ.ಕ್ಯಾಮಾರದಲ್ಲಿ ಸೆರೆಯಾಗಿದೆ.
ಶ್ರೀ ವೀರಭದ್ರ ಹಾಗೂ ಮಹಾಮ್ಮಾಯಿ ದೇವಸ್ಥಾನದ ನವೀಕರಣಗೊಂಡು ಇತ್ತೀಚಿಗೆ ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವ ನಡೆದಿತ್ತು.
ಕಳ್ಳರು ಶ್ರೀವೀರಭದ್ರ ದೇವಸ್ಥಾನದ ಬೀಗ ಮುರಿದುದೇವಸ್ಥಾನದ ಒಳಹೊಕ್ಕು ಗರ್ಭಗುಡಿಯ ಒಳಹೊಕ್ಕಲು ಪ್ರಯತ್ನಿಸಿದ್ದಾರೆ. ಗರ್ಭಗುಡಿಯ ಒಳಗೆ ಹೋಗಲು ಸಾಧವಾಗದೆ ಬಳಿಕ ಕಾಣಿಕೆ ಡಬ್ಬಿ ಎಬ್ಬಿಸಿ ಹೊರಕ್ಕೆ ಕೊಂಡೊಯ್ದು ಹಣ ತೆಗೆದು ಡಬ್ಬಿಯನ್ನು ಬಿಸಾಡಿದ್ದಾರೆ.
ಮಹಮ್ಮಾಯಿ ದೇವಸ್ಥಾನದ ಹಂಚು ತೆಗೆದು ಒಳಗೆ ನುಗ್ಗಿದ ಕಳ್ಳರು ಅಲ್ಲೂ ಗರ್ಭಗುಡಿಗೆ ನುಗ್ಗಲು ಪ್ರವೇಶ ಮಾಡಿ ವಿಫಲರಾದ ಅವರು ಅಲ್ಲಿನ ದೊಡ್ಡ ಕಾಣಿಕೆ ಡಬ್ಬಿಯನ್ನು ಕೊಂಡು ಹೋಗಿದ್ದಾರೆ.
ಈ ಡಬ್ಬಿಯನ್ನು ವಾಹನದ ಮೂಲಕವೇ ಕೊಂಡುಹೋಗಿರಬಹುದು ಎಂದು ಅಂದಾಜಿಸಲಾಗಿದೆ.
ಬೆಳಗ್ಗೆ ಅರ್ಚಕರು ಬಂದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಗುರಿಕಾರರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ಬಂಟ್ವಾಳ ಗ್ರಾಮಾಂತರ ಎಸ್..ಐ. ಪ್ರಸನ್ನ ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ.
ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.