ಅಂದು ಸುಳ್ಯದಲ್ಲಿ ಮೆಕ್ಯಾನಿಕ್‌; ಇಂದು ಆಕಾಶ್‌ ಕ್ಷಿಪಣಿ ವಿಭಾಗದ ಯೋಧ


Team Udayavani, Mar 5, 2018, 10:09 AM IST

5-March-1.jpg

ಪ್ರಯತ್ನವೊಂದಿದ್ದರೆ ಯಾವುದೂ ಅಸಾಧ್ಯವಲ್ಲ. ಅದಕ್ಕೆ ಮತ್ತೂಂದು ಉದಾಹರಣೆ ಇಲ್ಲಿದೆ. ಬಡತನದಲ್ಲೇ ಇದ್ದರೂ ತಂದೆಯ ಕ್ಯಾಂಟೀನ್‌ನಲ್ಲೇ ಕೆಲಸ ಮಾಡಿ, ಶಿಕ್ಷಣವನ್ನೂ ಕಲಿತು ಮೆಕ್ಯಾನಿಕ್‌ ಆಗಿದ್ದವರು ಪ್ರಯತ್ನ ಪಟ್ಟು ಸೇನೆಗೆ ಸೇರಿದ್ದಾರೆ. ದೇಶಸೇವೆಯ ಉನ್ನತ ಕೆಲಸಕ್ಕೆ ಸಮರ್ಪಿಸಿಕೊಂಡಿದ್ದಾರೆ. 

ಕಡಬ: ಜೀವನೋಪಾಯಕ್ಕಾಗಿ ತಂದೆಗಿದ್ದದ್ದು ಪುಟ್ಟ ಕ್ಯಾಂಟೀನ್‌. ಅದೇ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತ, ವಿದ್ಯಾಭ್ಯಾಸ ಪೂರೈಸಿ ಸೈನಿಕನಾಗಬೇಕು ಎಂಬ ತಮ್ಮ ಆಕಾಂಕ್ಷೆ ಯನ್ನು ಈಡೇರಿಸಿಕೊಂಡವರು ಹವಾಲ್ದಾರ್‌ ಹರಿಪ್ರಸಾದ್‌ ಕೆ. ಭೂಸೇನೆಯ ವಾಯುರಕ್ಷಣಾ ವಿಭಾಗದ ಆಕಾಶ್‌ ಕ್ಷಿಪಣಿ ರೆಜಿಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹರಿಪ್ರಸಾದ್‌, ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಕೊಡೆಂಕಿರಿ ಮನೆಯವರು. ಸೇನೆಯಲ್ಲಿ ಕಳೆದ 16 ವರ್ಷಗಳಿಂದ ಸಾರ್ಥಕ ಸೇವೆ ಸಲ್ಲಿಸಿದ್ದಾರೆ.

ಪ್ರೇರಣೆಯಾದ ದೈಹಿಕ ಶಿಕ್ಷಣ ಶಿಕ್ಷಕ
ಹರಿಪ್ರಸಾದ್‌ ಅವರು ಪ್ರಾಥಮಿಕ ಶಿಕ್ಷಣವನ್ನು ಕೊಳ್ತಿಗೆಯ ಪೆರ್ಲಂಪಾಡಿ ಸರಕಾರಿ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಬೆಳ್ಳಾರೆಯ ಸರಕಾರಿ ಪ್ರೌಢಶಾಲೆಯಲ್ಲಿ ಪಡೆದು ಬಳಿಕ ಸುಳ್ಯದ ಕೆವಿಜಿ ಐಟಿಐನಲ್ಲಿ ವ್ಯಾಸಂಗ ಮಾಡಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ಕಬಡ್ಡಿ, ವಾಲಿಬಾಲ್‌, ಓಟ ಇತ್ಯಾದಿ ಕ್ರೀಡಾ ಚಟುವಟಿಕೆಗಳಲ್ಲಿ ಅವರು ಮುಂದಿದ್ದರು. ಈ ಹಿನ್ನೆಲೆಯಲ್ಲಿ ಪೆರ್ಲಂಪಾಡಿಯಲ್ಲಿ ಹರಿಪ್ರಸಾದ್‌ ಅವರ ತಂದೆಯ ಕ್ಯಾಂಟೀನ್‌ಗೆ ಮಧ್ಯಾಹ್ನ ಊಟಕ್ಕೆ ಬರುತ್ತಿದ್ದ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್‌ ಪಾಲ್ತಾಡಿ ಸೇನೆಗೆ ಸೇರುವಂತೆ ಪ್ರೇರೇಪಣೆ ನೀಡಿದ್ದರು. ಐಟಿಐ ಬಳಿಕ ಸುಳ್ಯದ ಗ್ಯಾರೇಜ್‌ ಒಂದರಲ್ಲಿ ಮೆಕ್ಯಾನಿಕ್‌ ಆಗಿದ್ದರೂ, ಸೇನೆಗೆ ಸೇರುವ ಉತ್ಸಾಹದಿಂದ 2002ರಲ್ಲಿ ಮಂಗಳೂರಿನ ಕದ್ರಿಯಲ್ಲಿ ನಡೆದ ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗಿಯಾಗಿ ಆಯ್ಕೆಯಾಗಿದ್ದರು. ಸೇನೆಗೆ ಸೇರುವಲ್ಲಿ ಹೆತ್ತವರ, ಸೋದರರ ಪ್ರೋತ್ಸಾಹವೂ ಇತ್ತು. ಇದು ದೇಶಸೇವೆಗೆ ಅವಕಾಶ ಕಲ್ಪಿಸಿದೆ. ಇಲ್ಲದೇ ಹೋಗಿದ್ದರೆ ಇಂದು ನಾನು ಯಾವುದೋ ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್‌ ಆಗಿರುತ್ತಿದ್ದೆ ಎನ್ನುತ್ತಾರೆ.

ಸೇನೆಯ ಕ್ರೀಡಾ ತಂಡದೊಂದಿಗೆ ಕ್ರೀಡಾಳುವಾಗಿ.

ಕುಟುಂಬ
ಬೆಳಿಯಪ್ಪ ಗೌಡ ಮತ್ತು ತಾರಾವತಿ ಹರಿಪ್ರಸಾದ್‌ ಅವರ ಹೆತ್ತವರು. ಶಿಕ್ಷಕಿ ವನಿತಾ ಅವರನ್ನು 2012ರಲ್ಲಿ ವರಿಸಿದ್ದಾರೆ. ಹರಿಪ್ರಸಾದ್‌ ದಂಪತಿ ಪುತ್ರ ಅಲೋಕ್‌ ಜೊತೆ ಅಮೃತಸರದಲ್ಲಿ ವಾಸ್ತವ್ಯದಲ್ಲಿದ್ದಾರೆ. ಪುತ್ರ ಅಲೋಕ್‌ ಜಲಂಧರ್‌ನ ಆರ್ಮಿ ಪಬ್ಲಿಕ್‌ ಸ್ಕೂಲ್‌ನಲ್ಲಿ ಯುಕೆಜಿಯಲ್ಲಿ ಕಲಿಯುತ್ತಿದ್ದಾನೆ. ಅನಾರೋಗ್ಯ ಮತ್ತು ವೃದ್ಧಾಪ್ಯದ ಕಾರಣದಿಂದಾಗಿ ಕ್ಯಾಂಟೀನ್‌ ಮುಚ್ಚಿರುವ ತಂದೆ-ತಾಯಿ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಅಣ್ಣ ಗುರುಪ್ರಸಾದ್‌ ವಿದೇಶದಲ್ಲಿ ಉದ್ಯೋಗಿಯಾಗಿದ್ದು, ತಮ್ಮ ಜಯರಾಮ ಊರಿನಲ್ಲಿ ಸಹಕಾರಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
     ಪತ್ನಿ ಮತ್ತು ಪುತ್ರನೊಂದಿಗೆ.

16 ವರ್ಷಗಳಿಂದ ದೇಶಸೇವೆ
2002ರಲ್ಲಿ ಸೇನೆಗೆ ಸೇರ್ಪಡೆಗೊಂಡು ಮಹಾರಾಷ್ಟ್ರದ ನಾಸಿಕ್‌ನಲ್ಲಿ ತರಬೇತಿ ಮುಗಿಸಿದ ಬಳಿಕ ಗುಜರಾತ್‌ನ ವಡೋದರ, ಸೂರತ್‌, ಪಂಜಾಬ್‌ನ ಭಟಿಂಡ, ಜಲಂಧರ್‌ ಮುಂತಾದೆಡೆ ಹರಿಪ್ರಸಾದ್‌ ಸೇವೆ ಸಲ್ಲಿಸಿದ್ದಾರೆ. 2 ವರ್ಷ ರಾಷ್ಟ್ರೀಯ ರೈಫಲ್ಸ್‌ನ ವಿಭಾಗದಲ್ಲಿ ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ ಅನುಭವ ರೋಚಕ ಎನ್ನುತ್ತಾರೆ. 2014ರಲ್ಲಿ ಅವರಿಗೆ ಪದೋನ್ನತಿಯಾಗಿದ್ದು, ಆಕಾಶ್‌ ಕ್ಷಿಪಣಿ ರೆಜಿಮೆಂಟ್‌ನಲ್ಲಿ ಅಮೃತಸರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಯುವಕರು ಸೇನೆಗೆ ಸೇರಲು ಮನಸ್ಸು ಮಾಡಬೇಕು
ದೇಶಕ್ಕಾಗಿ ಸೇವೆ ಮಾಡುವ ತುಡಿತ ಪ್ರತಿಯೊಬ್ಬ ಯುವಕರಲ್ಲಿರಬೇಕು. ಸೇನೆಯಲ್ಲಿ ಕೆಲಸ ಮಾಡುವುದು ಕೇವಲ ಒಂದು ಉದ್ಯೋಗವಲ್ಲ. ಅದೊಂದು ದೇಶ ಸೇವೆಯ ಸ್ಮರಣೀಯ ಅನುಭವ. ಈ ನಿಟ್ಟಿನಲ್ಲಿ ಸೇನೆಗೆ ಸೇರಲು ಪ್ರೇರಣೆ ನೀಡಲು ಕಾರ್ಯಕ್ರಮಗಳು ನಡೆಯಬೇಕು. ನಾನು ಊರಿಗೆ ಬಂದಾಗ ಭಾಗವಹಿಸುವ ಕ್ರೀಡಾಕೂಟಗಳಲ್ಲಿ ಯುವಕರಿಗೆ ಸೇನೆಗೆ ಸೇರಲು ಪ್ರೇರಣೆ ನೀಡುವ ಕೆಲಸ ಮಾಡುತ್ತಿದ್ದೇನೆ.
 – ಹರಿಪ್ರಸಾದ್‌ ಕೆ. 

ಸೈನಿಕರ ಸೇವೆ ಮಹತ್ವದ್ದು
ಇಂದು ಇಡೀ ದೇಶದ ಜನರು ನೆಮ್ಮದಿಯಾಗಿ ಜೀವಿಸುತ್ತಿದ್ದರೆ ಅದರಲ್ಲಿ ನಮ್ಮ ದೇಶದ ಸೈನಿಕರ ಪಾಲು ಅತ್ಯಂತ ಮಹತ್ವದ್ದು. ಅಂತಹ ಸೈನಿಕರಲ್ಲಿ ಒಬ್ಬರಾಗಿ ನನ್ನ ಪತಿ ದೇಶ ಸೇವೆ ಮಾಡುತ್ತಿರುವ ಕುರಿತು ನಮಗೆ ತುಂಬಾ ಹೆಮ್ಮೆ ಇದೆ.
 – ವನಿತಾ ಹರಿಪ್ರಸಾದ್‌, ಪತ್ನಿ

ನಾಗರಾಜ್‌ ಎನ್‌.ಕೆ.

ಟಾಪ್ ನ್ಯೂಸ್

1-allu

Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2(1

Kumbra ಜಂಕ್ಷನ್‌ನಲ್ಲಿ ಈಗ ಸೆಲ್ಫಿ ಪಾಯಿಂಟ್‌ ಆಕರ್ಷಣೆ!

1

Belthangady: ಕಾನನ ವಾಸಿಗಳಿಗೆ ಮೆಸ್ಕಾಂ ಬೆಳಕು!

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Belthangady: ಅಪಘಾತದಲ್ಲಿ ಗಾಯಗೊಂಡು 14 ವರ್ಷ ಜೀವನ್ಮರಣ ಹೋರಾಟ ಮಾಡಿದ್ದ ಶಿಕ್ಷಕಿ ಸಾವು

Belthangady: 14 ವರ್ಷ ಜೀವನ್ಮರಣ ಸ್ಥಿತಿಯಲ್ಲಿದ್ದ ಶಿಕ್ಷಕಿ ಸಾವು

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-allu

Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು

R Ashwin: ಅಶ್ವಿ‌ನ್‌ಗೆ ಖೇಲ್‌ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ

R Ashwin: ಅಶ್ವಿ‌ನ್‌ಗೆ ಖೇಲ್‌ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ

Virat Kohli: ಬಾಕ್ಸಿಂಗ್‌ ಡೇ ಟೆಸ್ಟ್‌ಗೂ ಮುನ್ನ ವಿರಾಟ್‌ ನೂತನ ಕೇಶ ವಿನ್ಯಾಸ

Virat Kohli: ಬಾಕ್ಸಿಂಗ್‌ ಡೇ ಟೆಸ್ಟ್‌ಗೂ ಮುನ್ನ ವಿರಾಟ್‌ ನೂತನ ಕೇಶ ವಿನ್ಯಾಸ

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ

Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ

Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.