ನಗರದ ಹಲವೆಡೆ ಚರಂಡಿಯದ್ದೇ ಸಮಸ್ಯೆ
Team Udayavani, May 1, 2019, 6:20 AM IST
ಸ್ಥಗಿತಗೊಂಡ ಕಾಮಗಾರಿ ತತ್‌ಕ್ಷಣ ಆರಂಭಿಸಿ
ನಗರದ ಬಿಜೈ ಮುಖ್ಯರಸ್ತೆಯಲ್ಲಿ ಸ್ವರ್ಣದೀಪ ಮತ್ತು ರೆಹೊಬೊತ್ ಫ್ಲ್ಯಾಟ್‌ಗಳ ಬಳಿ ತೋಡು ಮತ್ತು ಫುಟ್ ಪಾತ್ ಕಾಮಗಾರಿಗೆ ಅಗೆಯಲಾಗಿದೆ. ಆದರೆ ಕಳೆದ ಎರಡು ತಿಂಗಳಿನಿಂದ ಈ ಕಾಮಗಾರಿ ಸ್ಥಗಿತಗೊಂಡಿದ್ದು, ಗುಂಡಿ ಅಗೆದಿರುವುದನ್ನು ಹಾಗೆಯೇ ಬಿಡಲಾಗಿದೆ. ಇದರಿಂದ ಮಳೆಗಾಲದಲ್ಲಿ ನೀರು ಹರಿದು ಹೋಗದೆ, ಗುಂಡಿಯಲ್ಲಿ ತುಂಬುವ ಕೆಸರು ಮಿಶ್ರಿತ ನೀರು ಫ್ಲ್ಯಾಟ್‌ಗಳ ಒಳಗೆ ನುಗ್ಗಬಹುದು ಎಂಬ ಆತಂಕ ಎದುರಾಗಿದೆ. ಅಧಿಕಾರಿಗಳು ಹಾಗೂ ಕಾಮಗಾರಿ ವಹಿಸಿಕೊಂಡವರೊಡನೆ ಮಾತನಾಡಿದರೆ ಅವರಿಂದ ಯಾವುದೇ ರೀತಿಯ ಸ್ಪಂದನೆ ಇಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಅದಕ್ಕೂ ಮುನ್ನ ಸ್ಥಗಿತಗೊಂಡ ಕಾಮಗಾರಿಯನ್ನು ತತ್‌ಕ್ಷಣ ಮುಗಿಸಬೇಕು.
-ಜಿ. ಆರ್. ಪ್ರಭು, ಬಿಜೈ
ಸೊಳ್ಳೆ ಕಾಟದ ಭೀತಿ
ಬಜಾಲ್ ಪ್ರಗತಿನಗರದಲ್ಲಿ ಮುಡಾ ಲೇಔಟ್ ಜಾಗದಲ್ಲಿ ಹೊಸದಾಗಿ ಒಳಚರಂಡಿ ಕಾಮಗಾರಿ ನಿರ್ಮಾಣ ಮಾಡಲಾಗಿದೆ. ಆದರೆ, ಈ ಒಳಚರಂಡಿಯ ಒಂದು ಭಾಗದಲ್ಲಿ ಸಂಪೂರ್ಣ ಕಾಮಗಾರಿ ಮುಕ್ತಾಯಗೊಳಿಸಲಾಗಿದ್ದು, ಇನ್ನೊಂದೆಡೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಒಳಚರಂಡಿಯು ಕಳೆದೆರಡು ತಿಂಗಳಿನಿಂದ ತೆರೆದ ಸ್ಥಿತಿಯಲ್ಲೇ ಇದ್ದು, ನೀರು ನಿಂತುಕೊಂಡಿದೆ. ಇದರಿಂದ ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಭೀತಿಯೂ ಎದುರಾಗಿದೆ. ಈ ಬಗ್ಗೆ ಹಲವಾರು ಬಾರಿ ಸ್ಥಳೀಯ ಕಾರ್ಪೊರೇಟರ್ ಬಳಿ ತಿಳಿಸಿದ್ದರೂ, ಸಮಸ್ಯೆ ನಿವಾರಣೆಯಾಗಿಲ್ಲ. ಸ್ಥಳೀಯವಾಗಿ ಎಂಟು ಮನೆಗಳಿದ್ದು, ಮಳೆಗಾಲ ಆರಂಭವಾದರೆ ಸಮಸ್ಯೆ ಬಿಗಡಾಯಿಸಲಿದೆ.
– ಪುರುಷೋತ್ತಮ ಬಜಾಲ್ , ಸ್ಥಳೀಯರು
ಚರಂಡಿ ವ್ಯವಸ್ಥೆ ಸರಿ ಮಾಡಿ
ನಗರದ ಬಂಗ್ರಕೂಳೂರು ಕೊಟ್ಟಾರ ಚೌಕಿ ಗ್ಯಾರೇಜೊಂದರ ಬಳಿ ಲೇಔಟ್ ಮಾಡುವುದಕ್ಕಾಗಿ ನೀರು ಹರಿಯುವ ಚರಂಡಿ ಮೇಲೆ ಸಂಪೂರ್ಣ ಮಣ್ಣು ಮುಚ್ಚಲಾಗಿದೆ. ಇದರಿಂದ ತ್ಯಾಜ್ಯ ನೀರು ಇಲ್ಲಿ ಶೇಖರಣೆಗೊಂಡು ಕೃತಕ ನೆರೆ ಉಂಟಾಗುವ ಭೀತಿ ಇಲ್ಲಿನ ನಾಗರಿಕರಿಗಿದೆ. ಕಳೆದ ವರ್ಷ ಸಂಭವಿಸಿದ ಕೃತಕ ನೆರೆಯಿಂದಾಗಿ ಕೊಟ್ಟಾರ ಚೌಕಿಯಲ್ಲಿ ಅನೇಕ ಮನೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ. ಆ ದೃಷ್ಟಾಂತ ಕಣ್ಣೆದುರೇ ಇದ್ದರೂ, ಸಂಬಂಧಪಟ್ಟವರು ಕಣ್ಣು ಮುಚ್ಚಿ ಕುಳಿತಿರುವುದು ದುರಂತ. ಈಗಾಗಲೇ ಚರಂಡಿಯಲ್ಲಿ ತುಂಬಿರುವ ನೀರು ಗಬ್ಬು ನಾತ ಬೀರುತ್ತಿದ್ದು, ಸೊಳ್ಳೆ ಉತ್ಪತ್ತಿ ತಾಣವಾಗುವ ಭೀತಿ ಇದೆ. ತತ್‌ಕ್ಷಣ ಸಂಬಂಧಪಟ್ಟ ಇಲಾಖೆ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು.
– ಬಿ. ವಿಷ್ಣುಮೂರ್ತಿ, ಎಂ. ದೇವದಾಸ್, ಬಂಗ್ರಕೂಳೂರು ನಾಗರಿಕ ಸಮಿತಿ
ಚರಂಡಿ ಸರಿಪಡಿಸಿ
ಜೆಪ್ಪು ಗುಜ್ಜರಕೆರೆ ಬಳಿ ಇರುವ ಮಾರ್ನಮಿಕಟ್ಟೆ ಹಿಂಭಾಗದಲ್ಲಿ ತೆರೆದ ಚರಂಡಿಯಲ್ಲಿ ಚರಂಡಿ ನೀರು ಶೇಖರಣೆಯಾಗಿ ಸೊಳ್ಳೆ ಕಾಟದ ಭೀತಿ ಎದುರಾಗಿದೆ. ತ್ಯಾಜ್ಯ ತುಂಬಿದ ನೀರು ವಾಸನೆಯಿಂದ ಕೂಡಿದ್ದು, ಇಲ್ಲಿ ನಡೆದಾಡುವುದೇ ಕಷ್ಟವಾಗುತ್ತಿದೆ. ಸಂಬಂಧಪಟ್ಟವರು ಇತ್ತ ಕಡೆ ಶೀಘ್ರ ಗಮನ ಹರಿಸಿ ಇಲ್ಲಿನ ನಿವಾಸಿಗಳಿಗೆ ನೆಮ್ಮದಿಯ ಜೀವನ ಕಲ್ಪಿಸಿಕೊಡಬೇಕು.
– ಸ್ಥಳೀಯರು, ಮಾರ್ನಮಿಕಟ್ಟೆ
ಕಲುಷಿತ ನೀರಿನಿಂದ ರೋಗ ಹರಡುವ ಭೀತಿ
ಜಪ್ಪು ಎರಾಡಿ ಮಹಾಕಾಳಿಪಡಿ³ನ ತೋಡಿಗೆ ಸಮೀಪದ ವಸತಿ ಸಮುಚ್ಚಯ ಮತ್ತು ಮನೆಯವರು ಒಳಚರಂಡಿ ನೀರನ್ನು ನೇರವಾಗಿ ಬಿಟ್ಟಿದ್ದರಿಂದ ನೀರು ಕಲುಷಿತಗೊಂಡಿದೆ. ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ರೋಗ ಹರಡುವ ಭೀತಿ ಎದುರಾಗಿದೆ. ಈ ಭಾಗದಲ್ಲಿ ಹೋಗುವಾಗ ಮೂಗಿಗೆ ಕೈ ಹಿಡಿದು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಈ ತೋಡಿನಲ್ಲಿ ಹೂಳುಗಳು ತುಂಬಿದ್ದು ಹೂಳೆತ್ತುವ ಕೆಲಸವಾಗಿಲ್ಲ. ಕಳೆದ ಬಾರಿ ಮಳೆ ಬಂದ ಸಂದರ್ಭ ತೋಡಿನಲ್ಲಿ ನೀರು ತುಂಬಿ ಕೃತಕ ನೆರೆ ಸೃಷ್ಟಿಯಾಗಿತ್ತು. ಈ ಬಾರಿ ಸಂಬಂಧಪಟ್ಟ ಅಧಿಕಾರಿಗಳು ಸರಿಯಾದ ಕ್ರಮ ಜರಗಿಸದೆ ಇದ್ದಲ್ಲಿ ಈ ಬಾರಿಯೂ ಸಮಸ್ಯೆ ಎದುರಾಗಲಿದೆ.
-ಸ್ಥಳೀಯರು, ಜಪ್ಪು
ಅಂಚೆ ಕಚೇರಿ ಸಮೀಪ ಕಸದ ರಾಶಿ
ಮಂಗಳೂರಿನ ಹಂಪನಕಟ್ಟೆ ಅಂಚೆ ಕಚೇರಿಯ ಪಕ್ಕದಲ್ಲಿರುವ ಖಾಲಿ ಸ್ಥಳದಲ್ಲಿ ಕಸದ ರಾಶಿ ತುಂಬಿಕೊಂಡಿದೆ. ನಗರದ ಬಹುಮುಖ್ಯ ಜಾಗದಲ್ಲಿರುವ ಖಾಲಿ ಜಾಗದಲ್ಲಿ ಕೆಲವರು ಕಸ ತಂದು ಸುರಿಯುತ್ತಿದ್ದಾರೆ. ಪರಿಣಾಮವಾಗಿ ಕಳೆದ ಕೆಲವು ದಿನಗಳಿಂದ ಕಸ ತುಂಬಿ, ಗಾಳಿಗೆ ಹಾರುತ್ತಿದೆ. ಅಕ್ಕ ಪಕ್ಕ ಅಂಗಡಿ-ಕಚೇರಿಗಳು ಇರುವುದರಿಂದ ಇಲ್ಲಿಗೆ ಬರುವ ಜನರಿಗೆ ಕಸ-ತ್ಯಾಜ್ಯ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ನಗರ ಸ್ವತ್ಛ ಮಾಡುವವರು ಕೂಡ ಈ ಜಾಗದಲ್ಲಿ ತುಂಬಿರುವ ಕಸವನ್ನು ಕ್ಲೀನ್ ಮಾಡಿದರೆ ಉತ್ತಮ.
-ಸ್ಥಳೀಯರು, ಹಂಪನಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Fraud Case: 3.25 ಕೋಟಿ ವಂಚನೆ ಕೇಸ್; ಐಶ್ವರ್ಯ ದಂಪತಿ ಮತ್ತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.