ವಿದ್ಯಾರ್ಜನೆಗೆ ವಯಸ್ಸಿನ ಮಿತಿಯಿಲ್ಲ: ಕಾಶೀ ಶ್ರೀ
Team Udayavani, Oct 6, 2017, 7:00 AM IST
ಮಂಗಳೂರು: ಕಲಿಕೆ ನಿರಂತರ ಪ್ರಕ್ರಿಯೆ, ವಿದ್ಯೆಯನ್ನು ಸಂಪಾದಿಸುವ ಎಲ್ಲರೂ ವಿದ್ಯಾರ್ಥಿಗಳು. ವಿದ್ಯಾರ್ಜನೆಗೆ ವಯಸ್ಸಿನ ಮಿತಿ ಇರುವುದಿಲ್ಲ ಎಂದು ಶ್ರೀ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.
ಕೊಂಚಾಡಿಯ ಶ್ರೀ ಕಾಶೀ ಮಠದಲ್ಲಿ ವೀರವೆಂಕಟೇಶ ಚಾರಿ ಟೆಬಲ್ ಟ್ರಸ್ಟ್ ವತಿಯಿಂದ ಆಯೋ ಜಿಸ ಲಾದ ದಿ| ಮಿಜಾರು ಗೋವಿಂದ ಪೈ ಹಾಗೂ ದಿ| ಮಿಜಾರು ಮನೋರಮಾ ಪೈ, ಜಯಶ್ರೀ ರಾಮದಾಸ ಕಾಮತ್ ಮುಂಡ್ಕೂರು, ಹಾಗೂ ಕಾಪು ಶ್ರೀ ಸದಾನಂದ ನಾಯಕ್ ಟ್ರಸ್ಟ್ನ ವಿದ್ಯಾರ್ಥಿವೇತನ ವಿತರಣೆ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಟ್ರಸ್ಟಿನ ಕಾರ್ಯದರ್ಶಿ ಟಿ. ಗಣಪತಿ ಪೈ ಅವರು ಟ್ರಸ್ಟಿನ ಚಟುವಟಿಕೆಗಳನ್ನು ವಿವರಿಸಿದರು. ಟ್ರಸ್ಟಿನ ಅಧ್ಯಕ್ಷ ಎ.ಕೆ. ಮಂಜುನಾಥ್ ಶೆಣೈ ಶ್ರೀಗಳ ಪಾದಪೂಜೆ ಮಾಡಿದರು. ಕೆಲವು ವಿದ್ಯಾರ್ಥಿಗಳಿಗೆ ಸ್ವಾಮೀಜಿಯವರು ಸಾಂಕೇತಿಕವಾಗಿ ವಿದ್ಯಾರ್ಥಿವೇತನ ವಿತರಿಸಿದರು.
ಸಮ್ಮಾನ
ಕೆ ಸಿಇಟಿಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಪ್ರತೀಕ್ ಎಸ್. ಶೆಣೈ ಅವರನ್ನು ಸಮ್ಮಾನಿಸಲಾಯಿತು. ಟ್ರಸ್ಟಿನ ಪ್ರಮುಖ ದಾನಿಗಳಾದ ಜಯಶ್ರೀ ರಾಮದಾಸ ಕಾಮತ್, ಎಂ. ಪದ್ಮನಾಭ ಪೈ, ಎ.ಕೆ. ಮಂಜುನಾಥ ಶೆಣೈ ಅವರನ್ನು ಟ್ರಸ್ಟಿನ ವತಿಯಿಂದ ಸ್ವಾಮೀಜಿಯವರು ಸಮ್ಮಾನಿಸಿದರು.
ಸಿಎ ಎಂ.ಎನ್. ಪೈ ಅವರ ನೇತೃತ್ವ ದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಅಶೋಕ್ ಕಾಮತ್, ಅಶ್ವತ್ಥ್ ಶೆಣೈ, ವಿದ್ಯಾ ಮಲ್ಯ, ಪ್ರತೀûಾ ಪೈ, ಶ್ರೀಕಾಂತ್ ಶೆಣೈ, ಅತುಲ್ ಕುಡ್ವಾ, ಡಾ| ಪುಷ್ಪಾ ಕಿಣಿ, ಇನ್ಫೋಸಿಸ್ ಮುಖ್ಯಸ್ಥ ವಾಸುದೇವ್ ಕಾಮತ್ ಅವರು ವಿದ್ಯಾರ್ಥಿ ಗಳಿಗೆ ವ್ಯಕ್ತಿತ್ವ ವಿಕಸನದ ಬಗ್ಗೆ ತರಬೇತಿ ನೀಡಿದರು.
ಸುಮಾರು 700 ಮಂದಿ ವಿದ್ಯಾರ್ಥಿ ಗಳಿಗೆ 20 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಟ್ರಸ್ಟಿನ ಖಜಾಂಚಿ ಗಣೇಶ್ ಪ್ರಸಾದ್ ಮಲ್ಯ ವಂದಿಸಿದರು. ಸಿ.ಎ.ಎಂ. ಜಗನ್ನಾಥ್ ಕಾಮತ್ ಹಾಗೂ ಟಿ. ಅರುಣ್ ಪೈ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಜೋಡೋ ಯಾತ್ರೆಯಲ್ಲಿ”ನಗರ ನಕ್ಸಲರು’: ಮಹಾರಾಷ್ಟ್ರ ಸಿಎಂ ಫಡ್ನವೀಸ್
WPL 2025: ವನಿತಾ ಪ್ರೀಮಿಯರ್ ಲೀಗ್ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್ಬಿಐ
PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.