ಚರಂಡಿ ನಿರ್ವಹಣೆ ಇಲ್ಲ; ರಸ್ತೆ ಪೂರ್ತಿ ಗುಂಡಿಯೇ ಎಲ್ಲ
Team Udayavani, Nov 23, 2017, 4:29 PM IST
ನಿಡ್ಪಳ್ಳಿ: ಸರಿಯಾದ ನಿರ್ವಹಣೆ ಇಲ್ಲದೆ ರಸ್ತೆಗಳು ತೀರಾ ಹದಗೆಟ್ಟಿದ್ದು ಸಂಚಾರಕ್ಕೆ ಅನಾನುಕೂಲವಾಗಿ ಪರಿಣಮಿಸಿದೆ. ರಸ್ತೆಯ ಬದಿ ಚರಂಡಿ ದುರಸ್ತಿ ಮಾಡದೆ ಮಳೆಗಾಲದಲ್ಲಿ ನೀರು ರಸ್ತೆಯಲ್ಲಿ ಹರಿದು ಹೋಗುತ್ತದೆ. ಇದರಿಂದ ಗುಂಡಿ ಬಿದ್ದು, ರಸ್ತೆಯ ಡಾಮರು ಎದ್ದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿರುವುದಂತು ಸತ್ಯ.
ಗಿಡ ಗಂಟಿಗಳು ರಸ್ತೆಯನ್ನು ನುಂಗುತ್ತಿವೆ. ಚರಂಡಿ ನಿರ್ವಹಣೆ ಮಾಡದಿರುವುದು ಒಂದು ಕಡೆಯಾದರೆ ರಸ್ತೆ ಬದಿಯಲ್ಲಿ ಪೊದರು, ಗಿಡ ಗಂಟಿಗಳು ಬೆಳೆದು ಅರ್ಧ ರಸ್ತೆಯೆ ಮಾಯವಾಗುತ್ತಿದೆ. ಮುಳ್ಳು, ಪೊದರು ಬೆಳೆದು ಪಾದಚಾರಿಗಳ ಮೈ ಪರಚುವಂತಾಗಿದ್ದು ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಇದಕ್ಕೆ ನಿಡ್ಪಳ್ಳಿಯ ಲೋಕೋಪಯೋಗಿ ಇಲಾಖೆಯ ಈ ರಸ್ತೆ ಒಂದು ನಿದರ್ಶನ.
ಡಾಮರು ಹಾಕಿ 3 ವರ್ಷ
ನಿಡ್ಪಳ್ಳಿ ಗ್ರಾಮದ ಕುಕ್ಕುಪುಣಿಯಿಂದ ಶಾಂತಾದುರ್ಗಾ ದೇವಾಲಯದವರೆಗೆ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಅಭಿವೃದ್ಧಿ ಇಲಾಖೆಯ ವತಿಯಿಂದ ರಸ್ತೆ ನಿರ್ಮಾಣವಾಗಿ ಡಾಮರುಗೊಂಡು 3 ವರ್ಷ ಕಳೆದಿದೆ. ಆನಂತರ ಈ ರಸ್ತೆಯನ್ನು, ರಸ್ತೆ ಬದಿಯನ್ನು ನಿರ್ವಹಣೆ ಮಾಡದಿರುವುದರಿಂದ ರಸ್ತೆ ಹದಗೆಡುತ್ತಿದೆ. ಈ ಬಗ್ಗೆ ಯಾವ ಜನಪ್ರತಿನಿಧಿಗಳೂ ಚಕಾರವೆತ್ತ ದಿರುವುದು ದುರಂತ. ಹೀಗಾದರೆ ಸಾರ್ವಜನಿಕ ಆಸ್ತಿ-ಪಾಸ್ತಿಗಳನ್ನು ರಕ್ಷಿಸುವುದಾದರು ಯಾರು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಇದಕ್ಕೆ ಸಂಬಂಧಿಸಿದ ಇಲಾಖೆ ತತ್ಕ್ಷಣ ಸ್ಪಂದಿಸುವ ಅನಿವಾರ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಮೃತದೇಹ ಪಿಕಪ್ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.