ಬೆಲೆ ಕೊಂಚ ಏರಿದ್ದರೂ ತೆಂಗಿನಕಾಯಿ ಮಾರುಕಟ್ಟೆಯಲ್ಲಿ ಇಲ್ಲ ಉತ್ಸಾಹ
Team Udayavani, Apr 22, 2018, 2:27 PM IST
ನಗರ : ಹವಾಮಾನದಂತೆ ಮಾರುಕಟ್ಟೆ ಧಾರಣೆಯೂ ಕೃಷಿ ಜತೆ ಚೆಲ್ಲಾಟ ಆಡುತ್ತಲೇ ಬಂದಿದೆ. ಈ ಏರಿಳಿತಕ್ಕೆ ಸಿಕ್ಕಿ ಕೃಷ್ಯುತ್ಪನ್ನ ಧಾರಣೆಗಳು ಚೇತರಿಕೆ ಹಾದಿ ಹಿಡಿಯುವುದು ಬಲು ವಿರಳ. ಧಾರಣೆ ಸ್ಥಿರತೆ ಕಂಡದ್ದೇ ಆದರೆ, ಕೃಷಿಕರು ಮಾತ್ರವಲ್ಲ ವರ್ತಕರೂ ಫುಲ್ ಖುಷಿ.
ಬೇಸಾಯ ಮಾಡುತ್ತಿದ್ದ ಕಾಲದಲ್ಲಿ ಊಟಕ್ಕೆ ತೊಂದರೆ ಇಲ್ಲ ಎಂಬ ಸ್ಥಿತಿ ಇತ್ತು. ಬರಬರುತ್ತಾ ವಾಣಿಜ್ಯ ಬೆಳೆಗಳು ಆಕರ್ಷಿಸತೊಡಗಿದವು. ಜೀವನ ಮಟ್ಟ ಮೇಲ್ಮುಖವಾಗಿ ಸಾಗಿತು. ಬೇಸಾಯದ ಜಾಗವನ್ನು ವಾಣಿಜ್ಯ ಕೃಷಿ ಆಕ್ರಮಿಸತೊಡಗಿತು. ವಾಣಿಜ್ಯ ಕೃಷಿಗಳ ಧಾರಣೆ ಸ್ಥಿರವಾಗಿ ನಿಂತದ್ದೇ ಇಲ್ಲ. ಪ್ರತಿದಿನ ಧಾರಣೆ ಬದಲಾವಣೆಯಿಂದಾಗಿ, ಇದರ ನಾಗಾಲೋಟಕ್ಕೆ ತಕ್ಕಂತೆ ಕೃಷಿಕರೂ ಹೆಜ್ಜೆ ಹಾಕಬೇಕಾಗಿದೆ.
ಕೃಷ್ಯುತ್ಪನ್ನ ಧಾರಣೆ ಸ್ಥಿರತೆ ಕಂಡದ್ದೇ ಆದರೆ, ಇದಕ್ಕೆ ತಕ್ಕನಾಗಿ ಜೀವನ ಮಟ್ಟ ಹೊಂದಿಕೊಳ್ಳುತ್ತದೆ. ವರ್ತಕರೂ ಧೈರ್ಯದಿಂದ ಉತ್ಪನ್ನಗಳ ಖರೀದಿಗೆ ಮುಂದಾಗುತ್ತಾರೆ. ಅದೇ ಧಾರಣೆಯನ್ನು ನಂಬಿಕೊಂಡು ಇತರ ವ್ಯವಹಾರಗಳಿಗೂ ಮುಂದಾಗಬಹುದು. ಒಂದಷ್ಟು ದಿನ ಉತ್ಪನ್ನಗಳನ್ನು ದಾಸ್ತಾನು ಇಟ್ಟುಕೊಂಡರೂ ಚಿಂತೆ ಇರುವುದಿಲ್ಲ. ಧಾರಣೆಯ ಹಾವು- ಏಣಿ ಆಟದಲ್ಲಿ ಉತ್ಪನ್ನಗಳನ್ನು ದಾಸ್ತಾನು ಮಾಡಲೂ ಕೃಷಿಕರು ಹಿಂದೆ- ಮುಂದೆ ನೋಡುವಂತಾಗಿದೆ. ಕಳೆದೊಂದು ವಾರದಲ್ಲಿ ಧಾರಣೆಗಳು ಏರಿಳಿಕೆ ಕಂಡಿವೆ. ಅಡಿಕೆ, ತೆಂಗು, ಕೊಕ್ಕೋ ಕೊಂಚ ಏರುಮುಖ, ಕಾಳುಮೆಣಸು ಇಳಿಕೆ, ರಬ್ಬರ್ ಸ್ಥಿರ ಧಾರಣೆಯಲ್ಲಿ ಮುಂದುವರಿಯುತ್ತಿವೆ.
ಏರು ಗತಿ ಕಾಣದ ಅಡಿಕೆ
ಹಿಂದಿನ ಶನಿವಾರ 262 ರೂ.ನಲ್ಲಿದ್ದ ಹಳೆ ಅಡಿಕೆ, ಈ ಶನಿವಾರ 265 ರೂ.ಗೆ ಖರೀದಿಯಾಗಿದೆ. ಹೊಸ ಅಡಿಕೆ 220 ರೂ.ನಲ್ಲಿ ಸ್ಥಿರವಾಗಿದೆ. ಸಾಮಾನ್ಯವಾಗಿ ಈ ಹೊತ್ತಿನಲ್ಲಿ ಧಾರಣೆ ಏರಿಕೆ ಕಾಣಬೇಕಿತ್ತು. ಆದರೆ ಮಾರುಕಟ್ಟೆ ಹಿಡಿತ ಬಿಗಿಯಾಗಿ ಇರುವುದರಿಂದ, ಧಾರಣೆ ಚೇತರಿಕೆ ಹಾದಿ ಹಿಡಿಯುತ್ತಿಲ್ಲ. ಇದಕ್ಕೆ ಪೂರಕವಾಗಿ ಇಂಡೋನೇಷ್ಯಾ, ಥಾಯಿಲಂಡ್, ಬರ್ಮಾ, ಶ್ರೀಲಂಕಾದಿಂದ ಈಗಲೂ ಅಡಿಕೆ ಆಮದಾಗುತ್ತಿವೆ ಎಂದೇ ಹೇಳಲಾಗುತ್ತಿದೆ. ಆದ್ದರಿಂದ ದೊಡ್ಡ ಪ್ರಮಾಣದಲ್ಲಿ ಧಾರಣೆ ಏರಿಕೆ ನಿರೀಕ್ಷಿಸುವುದು ಕಷ್ಟವೇ ಆಗಿದೆ.
ಹೊರರಾಜ್ಯಗಳಿಂದ ಸಣ್ಣ ಪ್ರಮಾಣದಲ್ಲಿ ಬೇಡಿಕೆ ವ್ಯಕ್ತವಾಗುತ್ತಿವೆ. ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ರಾಜ್ಯಗಳಿಂದ ಉತ್ತಮ ಬೇಡಿಕೆ ಬಂದರೆ, ಸಹಜವಾಗಿ ಅಡಿಕೆಗೆ ಬೇಡಿಕೆ ಕುದುರಲಿದೆ. ಇದು ಧಾರಣೆ ಮೇಲೆ ಪರಿಣಾಮ ಬೀರಲಿದೆ.
ಹಿಂದಿನ ವಾರ 25 ರೂ.ಗೆ ಇಳಿಕೆಯಾಗಿದ್ದ ಕರಿಚಿನ್ನದ ಬೆಲೆ, ಈ ವಾರ ಮತ್ತೆ 5 ರೂ. ಕುಸಿತ ಕಂಡಿದೆ. ಕಾಳುಮೆಣಸು 320 ರೂ.ಗೆ ಬಿಕರಿಯಾಗಿದೆ. ಸದ್ಯದ ಸ್ಥಿತಿಯಲ್ಲಿ ಕಾಳುಮೆಣಸು ಧಾರಣೆ ಏರಿಕೆ ಸಂಭವ ಇಲ್ಲ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಹಿಂದಿನ ವರ್ಷ 680 ರೂ.ವರೆಗೂ ತಲುಪಿದ್ದ ಧಾರಣೆ, ಈ ಬಾರಿ ಅರ್ಧಾಂಶ ಕುಸಿತ ಕಂಡಿರುವುದು ಸಹಜವಾಗಿ ಆತಂಕದ ವಿಷಯವೇ.
ಖುಷಿ ನೀಡಿದ ಕೊಕ್ಕೋ
ಮುಂದಿನ ತಿಂಗಳು ಕೊಕ್ಕೋ ಸೀಸನ್. ಇದರಿಂದಾಗಿ ಕೊಕ್ಕೋ ಧಾರಣೆಯಲ್ಲಿ ಏರಿಕೆ ಕಂಡುಬರುತ್ತಿದ್ದು, 53 ರೂ.ನಲ್ಲಿದ್ದ ಹಸಿ ಕೊಕ್ಕೋ 56 ರೂ.ಗೆ ಖರೀದಿಯಾಗಿದೆ. 5 ರೂ. ಏರಿಕೆ ಕಂಡಿರುವ ಒಣ ಕೊಕ್ಕೋ 175 ರೂ. ತಲುಪಿದೆ. ಕೊಕ್ಕೋ ಬೆಳೆಗೆ ಒಣ ಹವೆ ಇದ್ದಷ್ಟು ಉತ್ತಮ. ಮಳೆ ಸುರಿದರೆ ಧಾರಣೆ ಮೇಲೆ ಹೊಡೆತ ಬೀಳುತ್ತದೆ. ಈಗಷ್ಟೇ ಮಾರುಕಟ್ಟೆಗೆ ಆವಕ ಶುರುವಾಗಿರುವ ಕೊಕ್ಕೋ, ದೇಶೀಯವಾಗಿ ಏರುಮುಖವಾಗಿ ಸಾಗುವ ಸಾಧ್ಯತೆ ಹೆಚ್ಚಿದೆ.
ಗೇರುಬೀಜ ದರ ಕುಸಿತ
ಇದು ಗೇರುಬೀಜದ ಸೀಸನ್. ಫಸಲು ಕೈಗೆ ಸಿಗುತ್ತಿದ್ದಂತೆ ಮಾರುಕಟ್ಟೆ ಹಾದಿ ಹಿಡಿಯುವವರು ಅಧಿಕ. ಈ ಕಾರಣಕ್ಕಾಗಿಯೋ ಗೊತ್ತಿಲ್ಲ, 142 ರೂ.ನಿಂದ 150 ರೂ.ವರೆಗೆ ಬೆಲೆ ಕುದುರಿಸುತ್ತಿದ್ದ ಗೇರುಬೀಜ, ಈ ಶನಿವಾರ 135 ರೂ.ಗೆ ಕುಸಿದಿದೆ. ಈ ವರ್ಷ ಇಳುವರಿ ಕಡಿಮೆ ನಿಜ. ಇದಕ್ಕೆ ತಕ್ಕಂತೆ ಬೇಡಿಕೆ ಹೆಚ್ಚಾಗಬೇಕಿತ್ತು.
ತೆಂಗಿನಕಾಯಿ ಧಾರಣೆ ಏರಿಳಿತ
ಹಿಂದಿನ ವಾರ ಇಳಿಕೆಯಾಗಿದ್ದ ತೆಂಗು ಧಾರಣೆ, ಈ ಬಾರಿ ಕೊಂಚ ಏರಿಕೆ ಕಂಡಿದೆ. 41 ರೂ.ನಲ್ಲಿದ್ದ ಧಾರಣೆ ಹಿಂದಿನ ಶನಿವಾರ 39 ರೂ.ಗೆ ಖರೀದಿಯಾಗಿತ್ತು. ಈ ಶನಿವಾರ ಮತ್ತೆ 41 ರೂ.ಗೆ ತಲುಪಿದೆ. ಹಾಗೆಂದು ತೆಂಗಿನಕಾಯಿ ಮಾರುಕಟ್ಟೆಯಲ್ಲಿ ದೊಡ್ಡ ಉತ್ಸಾಹದ ವಾತಾವರಣ ಇಲ್ಲ. ತೆಂಗು ಆವಕ ಕಡಿಮೆಯೇ ಇದೆ. ಮಂಗಗಳ ಕಾಟಕ್ಕೆ ತೆಂಗು ತೋಟ ಬಲಿಯಾಗುತ್ತಿದ್ದು, ಫಸಲು ನೆಲಕಚ್ಚುತ್ತಿವೆ. ಧಾರಣೆ ದೃಷ್ಟಿಯಿಂದ ಹೇಳುವುದಾದರೆ, ಹಿಂದಿನ ವರ್ಷಕ್ಕಿಂತ ಉತ್ತಮ ಬೆಲೆ ಈ ವರ್ಷ ಚಾಲ್ತಿಯಲ್ಲಿದೆ.
ರಬ್ಬರ್: ಸಣ್ಣ ಪ್ರಮಾಣದ ಏರಿಕೆ
ಐವತ್ತು ಪೈಸೆ ಕುಸಿತ ಕಂಡಿರುವ ರಬ್ಬರ್ ಆರ್‌ಎಸ್‌ಎಸ್4 ಧಾರಣೆ ಶನಿವಾರ 116.5 ರೂ.ಗೆ ಕುಸಿತವಾಗಿದೆ. 108 ರೂ.ನಲ್ಲಿದ್ದ ಲಾಟ್ ಶ್ರೇಣಿ, ಈ ವಾರ 108.5 ರೂ.ಗೆ ಏರಿಕೆಯಾಗಿದೆ. 1 ರೂ. ಕುಸಿತ ಕಂಡಿರುವ ಸ್ಕ್ರ್ಯಾಪ್2 ದರ 66 ರೂ.ಗೆ ಖರೀದಿ ನಡೆಸಿದೆ. ಆರ್‌ಎಸ್‌ಎಸ್ 5 ದರ 112 ರೂ., ಸ್ಕ್ರ್ಯಾಪ್1 ಧಾರಣೆ 75 ರೂ.ನಲ್ಲಿ ಸ್ಥಿರವಾಗಿದೆ. ರಬ್ಬರ್ ಧಾರಣೆ ಏರಿಕೆ ಹಾದಿ ಹಿಡಿಯುವುದು ಕಷ್ಟವೇ ಸರಿ. ಆದರೂ ಇರುವ ಧಾರಣೆಯಲ್ಲಿ ಸಣ್ಣ ಪ್ರಮಾಣದ ಏರಿಳಿಕೆ ದಾಖಲಾಗುತ್ತಿವೆ.
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.