ಎಸೆಸೆಲ್ಸಿ-ಪಿಯುಸಿ ಪರೀಕ್ಷಾ ಮಂಡಳಿ ವಿಲೀನ ಇಲ್ಲ
ವಿದ್ಯಾರ್ಥಿ- ಉಪನ್ಯಾಸಕರು ನಿರಾಳ
Team Udayavani, Sep 28, 2019, 5:30 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷಾ ಮಂಡಳಿಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ವಿಲೀನ ಗೊಳಿಸುವ ಚಿಂತನೆ ಯಿಂದ ರಾಜ್ಯ ಸರಕಾರ ಸದ್ಯ ಹಿಂದೆ ಸರಿದಿದೆ. ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ ಮಾಹಿತಿ ನೀಡಿದ್ದಾರೆ. ಹಾಲಿ ಇರುವ ರೀತಿ ಯಂತೆಯೇ ಪ್ರತ್ಯೇಕ ಮಂಡಳಿಗಳ ಮೂಲಕವೇ ಪರೀಕ್ಷೆ ನಡೆಸಲಾಗು ವುದು ಎಂದು ತಿಳಿಸಿದ್ದಾರೆ.
ಎಸೆಸೆಲ್ಸಿ, ಪಿಯುಸಿಗೆ ಒಂದೇ ಮಂಡಳಿಯಡಿ ಪರೀಕ್ಷೆ ನಡೆಸುವ ಬಗ್ಗೆ ಹಲವು ವರ್ಷಗಳ ಹಿಂದೆಯೇ ಕೇಂದ್ರ ಸರಕಾರ ಪ್ರಸ್ತಾವಿಸಿತ್ತು. ಕರ್ನಾಟಕ ಮತ್ತು ರಾಜಸ್ಥಾನ ಬಿಟ್ಟು ಉಳಿದೆಲ್ಲ ಕಡೆಗಳಲ್ಲಿ ಇದು ಕಾರ್ಯರೂಪದಲ್ಲಿದೆ. ಸಿದ್ದರಾಮಯ್ಯ ಸರಕಾರವಿದ್ದಾಗ ಈ ಬಗ್ಗೆ ಚರ್ಚೆಯಾಗಿ ಅನುದಾನ ತೆಗೆದಿಡಲಾಗಿತ್ತು. ಈಗ ಅಂಥ ಪ್ರಸ್ತಾವವಿಲ್ಲ ಎಂದಿದ್ದಾರೆ.
ಏಕ ಮಂಡಳಿಯಡಿ ಪರೀಕ್ಷೆ?
ಕೇಂದ್ರೀಯ ಪಠ್ಯಕ್ರಮ ಮಾದರಿಯಡಿ 9, 10, 11 ಮತ್ತು 12ನೇ ತರಗತಿಗಳನ್ನು ಒಟ್ಟಿಗೆ ನಡೆಸುವುದು ಇದರ ಉದ್ದೇಶವಾಗಿದ್ದು, ಸೀನಿಯರ್ ಸೆಕೆಂಡರಿ ಶಿಕ್ಷಣ ಎಂದು ಹೆಸರಿಸಲಾಗುತ್ತದೆ. ಈ ಮಾದರಿ ಅನುಷ್ಠಾನಗೊಂಡರೆ ಎಸೆಸೆಲ್ಸಿ, ಪಿಯುಸಿ ಪ್ರತ್ಯೇಕ ಪರೀಕ್ಷಾ ಮಂಡಳಿಗಳಡಿ ಪರೀಕ್ಷೆ ನಡೆಯುವುದಿಲ್ಲ. ಎರಡೂ ಮಂಡಳಿಗಳನ್ನು ವಿಲೀನಗೊಳಿಸಿ ಒಂದೇ ಮಂಡಳಿ ರಚಿಸಿ 10ನೇ, 12ನೇ ತರಗತಿ ಪರೀಕ್ಷೆ ಎಂಬುದಾಗಿ ನಡೆಸಲಾಗುತ್ತದೆ. ಈಗ ಪ್ರೌಢ ಶಿಕ್ಷಣ ವ್ಯಾಪ್ತಿಯಲ್ಲಿರುವ 8ನೇ ತರಗತಿ ಪ್ರಾಥಮಿಕ ಶಿಕ್ಷಣಕ್ಕೆ ಸೇರುತ್ತದೆ.
ಎಸೆಸೆಲ್ಸಿ ಮತ್ತು ಪಿಯು ಪರೀಕ್ಷಾ ಮಂಡಳಿಗಳನ್ನು ವಿಲೀನಗೊಳಿಸುವ ಪ್ರಸ್ತಾವನೆ ಇದೆಯೇ ವಿನಾ ಈವರೆಗೆ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ.
-ಎಸ್. ಸುರೇಶ್‌ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.