ಗಡಿ ಗ್ರಾಮಗಳಲ್ಲಿ ಇಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ

Team Udayavani, Jul 1, 2019, 5:06 AM IST

jalsooru

ಜಾಲ್ಸೂರು : ಗ್ರಾಮೀಣ ಅಭಿವೃದ್ಧಿ ಸರಕಾರದ ಉದ್ದೇಶವಾಗಿದ್ದರೂ ಗ್ರಾಮಗಳಲ್ಲಿ ವ್ಯವಸ್ಥಿತವಾದ ಚಿಕಿತ್ಸಾ ಸೌಲಭ್ಯ ಇನ್ನೂ ದೊರಕಿಲ್ಲ. ತುರ್ತು ಚಿಕಿತ್ಸೆಗಾಗಿ ಹತ್ತಾರು ಕಿ.ಮೀ. ಅಲೆದಾಡಬೇಕಾಗಿದೆ. ಜಾಲ್ಸೂರು ಗ್ರಾಮದಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರ ತೆರೆಯಬೇಕೆನ್ನುವ ಕೂಗು 15 ವರ್ಷಗಳಿಂದ ಇದ್ದರೂ ಜನರ ಬೇಡಿಕೆ ಇನ್ನೂ ಈಡೇರಿಲ್ಲ.

ಮೈಸೂರು-ಮಾಣಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜಾಲ್ಸೂರು ಗ್ರಾಮದಲ್ಲಿ ಸುಮಾರು 1,352 ಮನೆಗಳಿವೆ. 2011ರ ಜನಗಣತಿ ಪ್ರಕಾರ ಗ್ರಾಮದಲ್ಲಿ ಒಟ್ಟು 6,642 ಜನಸಂಖ್ಯೆ ಇದೆ.

ಬೆಳೆಯುತ್ತಿರುವ ಊರು

ಕೇರಳ- ಕರ್ನಾಟಕ ಗಡಿಭಾಗದ ಊರುಗಳ ಪ್ರಮುಖ ಪೇಟೆ ಜಾಲ್ಸೂರು. ಪಂಜಿಕಲ್ಲು, ಬೆಳ್ಳಿಪ್ಪಾಡಿ, ಬನಾರಿ, ದೇಲಂಪಾಡಿ, ಪರಪ್ಪ ಭಾಗದ ಜನರು ಜಾಲ್ಸೂರನ್ನೇ ಅವಲಂಬಿಸಿದ್ದಾರೆ. ಸರಕಾರಿ ಶಾಲೆ, ಬ್ಯಾಂಕ್‌, ಪೆಟ್ರೋಲ್ ಬಂಕ್‌, ಫ್ಯಾಕ್ಟರಿಗಳು ಎಲ್ಲವೂ ಇಲ್ಲಿವೆ. ಗ್ರಾಮದ ಮುಖ್ಯ ಪೇಟೆಯಾಗಿ ಬೆಳೆಯುತ್ತಿರುವ ಜಾಲ್ಸೂರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವೇ ಇಲ್ಲ. ಗ್ರಾಮಸ್ಥರಿಗೆ ಸರಕಾರಿ ವೈದ್ಯಕೀಯ ಸೌಲಭ್ಯ ಮರೀಚಿಕೆಯಾಗಿದೆ.

ಸುಳ್ಯ ಆಸ್ಪತ್ರೆಯೇ ಗತಿ

ಜಾಲ್ಸೂರು- ಕನಕಮಜಲು ಭಾಗದವರಿಗೆ ತುರ್ತು ಸಂದರ್ಭ ಪ್ರಥಮ ಚಿಕಿತ್ಸೆ ಸಿಗುವುದಿಲ್ಲ. ಕಿರಿಯ ಆರೋಗ್ಯ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮದಲ್ಲಿ ಇದ್ದಾರೆ. ಆದರೆ ತೀವ್ರತರದ ಅನಾರೋಗ್ಯಕ್ಕೆ ತುತ್ತಾದರೆ ಸುಳ್ಯದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಬೇಕಿದೆ. ಜಾಲ್ಸೂರಿಂದ ಸುಳ್ಯಕ್ಕೆ 8 ಕಿ.ಮೀ. ದೂರವಿದೆ. ಅಲ್ಲಿ ಟೋಕನ್‌ ಪಡೆದು ಕಾಯಬೇಕಾಗುತ್ತದೆ. ಅಶಕ್ತ ರೋಗಿಗಳು ಮಕ್ಕಳು, ವೃದ್ಧರು, ಬಾಣಂತಿಯರು, ಅಂಗವಿಕಲರು ಕಷ್ಟಪಡುವಂತಾಗಿದೆ.

ಉಪಕೇಂದ್ರದಲ್ಲಿ ವೈದ್ಯರಿಲ್ಲ

ಗ್ರಾಮೀಣ ಭಾಗದಲ್ಲಿ ಕಿರಿಯ ಆರೋಗ್ಯ ಉಪಕೇಂದ್ರಗಳು ವ್ಯವಹರಿಸುತ್ತಿದ್ದರೂ ಚಿಕಿತ್ಸೆಗೆ ಸೂಕ್ತ ವೈದ್ಯರಿಲ್ಲ. ಕನಕಮಜಲು ಗ್ರಾಮದಲ್ಲಿ 498 ಮನೆಗಳಿವೆ. ಒಟ್ಟು 7,238 ಜನಸಂಖ್ಯೆಯಿದೆ. ಈ ಭಾಗದ ಉಪಕೇಂದ್ರದಲ್ಲಿ ಆರೋಗ್ಯ ಸಹಾಯಕಿಯರು ಮಾತ್ರ ಇರುತ್ತಾರೆ.

ಮಂಡೆಕೋಲು- ಅಜ್ಜಾವರದಲ್ಲೂ ಸಮಸ್ಯೆ

ಗಡಿಗ್ರಾಮಗಳಾದ ಮಂಡೆಕೋಲು- ಅಜ್ಜಾವರ ಭಾಗಗಳ ಕತೆ ಇದಕ್ಕಿಂತ ಭಿನ್ನವಾಗಿಲ್ಲ. ಮಂಡೆಕೋಲು ಗ್ರಾಮದಲ್ಲಿ ಒಟ್ಟು 1,303 ಮನೆಗಳಿದ್ದು, 5,600 ಜನಸಂಖ್ಯೆ ಹೊಂದಿದೆ. ಪೇರಾಲು, ಕನ್ಯಾನ- ಬೊಳುಗಲ್ಲು ಹಾಗೂ ಮಾವಂಜಿ ಪ್ರದೇಶಗಳಿಗೆ ಮೂವರು ಆರೋಗ್ಯ ಸಹಾಯಕಿಯರಿದ್ದಾರೆ. ಕಲ್ಲಡ್ಕದಲ್ಲಿ ಒಂದು ಕಿರಿಯ ಆರೋಗ್ಯ ಉಪಕೇಂದ್ರವಿದ್ದರೂ ಉಪಯೋಗ ಶೂನ್ಯವಾಗಿದೆ. ಪ್ರತಿ ಮಂಗಳವಾರ ಬರುವ ಆರೋಗ್ಯ ವೈದ್ಯಾಧಿಕಾರಿಗಳ ಭೇಟಿ ಹೊರತುಪಡಿಸಿದರೆ, ಈ ಭಾಗದ ಜನರಿಗೆ ಸುಳ್ಯ ಸರಕಾರಿ ಆಸ್ಪತ್ರೆಯೇ ಗತಿ. ಅಜ್ಜಾವರದಲ್ಲಿ 1645 ಮನೆಗಳಿವೆ. 7238 ಜನಸಂಖ್ಯೆವಿದೆ. ಇಲ್ಲಿನ ಗ್ರಾಮಸ್ಥರೂ ಸುಳ್ಯವನ್ನೇ ಅವಲಂಬಿಸಿದ್ದಾರೆ.

ಖಾಸಗಿ ಕ್ಲಿನಿಕ್‌ ಅವಲಂಬನೆ

ಗಡಿಭಾಗದ ಹೆಚ್ಚಿನ ಗ್ರಾಮಸ್ಥರು ಖಾಸಗಿ ವೈದ್ಯರು ಹಾಗೂ ಕ್ಲಿನಿಕ್‌ಗಳನ್ನು ಅವಲಂಬಿಸಿದ್ದಾರೆ. ಸುಳ್ಯಕ್ಕೆ ಹೋಗುವಷ್ಟು ಸಮಯ ಇಲ್ಲದಿದ್ದರೆ ಖಾಸಗಿ ವೈದ್ಯರ ಮೊರೆ ಹೋಗುತ್ತಾರೆ. ಕನಕಮಜಲಿನವರು ಜಾಲ್ಸೂರಿಗೆ, ಮಂಡೆಕೋಲು ಭಾಗದವರು ಅಜ್ಜಾವರಕ್ಕೂ ಹೋಗುತ್ತಾರೆ.

ಗ್ರಾಮಸಭೆಯಲ್ಲಿ ಪ್ರಸ್ತಾವ

ಜಾಲ್ಸೂರು ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಬೇಕು ಎನ್ನುವುದರ ಬಗ್ಗೆ ಜಾಲ್ಸೂರು ಗ್ರಾ.ಪಂ. ಗ್ರಾಮಸಭೆಯಲ್ಲಿ ಪ್ರಸ್ತಾವವಾಗಿತ್ತು. ಕಳೆದ 15 ವರ್ಷಗಳಿಂದ ಬೇಡಿಕೆಯಿಟ್ಟಿದ್ದೇವೆ. ಏನಾಯಿತು ಎಂದು ಗ್ರಾಮಸ್ಥರು ಪ್ರಶ್ನಿಸಿದ್ದರೂ, ಬೇಡಿಕೆ ಈಡೇರಲು ಇನ್ನೂ ಕಾಲ ಕೂಡಿಬಂದಿಲ್ಲ.

ಗ್ರಾಮಗಳಲ್ಲಿ ಆರೋಗ್ಯ ಕೇಂದ್ರಗಳಿರುವುದು ಅತೀ ಅವಶ್ಯ. ಕನಕಮಜಲು ಹಾಗೂ ಜಾಲ್ಸೂರು ಗ್ರಾಮದಲ್ಲಿ ಒಟ್ಟಾಗಿ 9,000 ಜನಸಂಖ್ಯೆಯಿದೆ. ಈ ಭಾಗದಲ್ಲಿ ಎರಡೂ ಗ್ರಾಮಗಳಿಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಮಾಡಬಹುದು. ಮಂಡೆಕೋಲು- ಅಜ್ಜಾವರ ಗ್ರಾಮಗಳಲ್ಲಿ 12,000ಕ್ಕಿಂತ ಮಿಕ್ಕಿ ಜನಸಂಖ್ಯೆ ಇದೆ. ಇಲ್ಲಿನ ಪ್ರದೇಶಗಳು ಕಾಡಿನಿಂದ ಕೂಡಿದ್ದು, ಆನೆ, ಚಿರತೆ ಹಾವಳಿ ಜಾಸ್ತಿ. ಅಜ್ಜಾವರ ಭಾಗದಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಬಹುದು ಎನ್ನುವ ಬೇಡಿಕೆ ವ್ಯಕ್ತವಾಗಿದೆ.

ಆದಷ್ಟು ಬೇಗ ಕೇಂದ್ರ ತೆರೆಯಲಿ

15 ವರ್ಷಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸುವ ಬಗ್ಗೆ ಬೇಡಿಕೆಯಿಟ್ಟಿದ್ದೇವೆ. ಕಾಯಿಲೆಗೆ ತುತ್ತಾದರೆ ಸುಳ್ಯಕ್ಕೆ ತೆರಳಬೇಕು. ತುಂಬಾ ಕಷ್ಟ. ಆಸ್ಪತ್ರೆಯಲ್ಲಿ ಜನಸಂದಣಿ ಹೆಚ್ಚಿರುತ್ತದೆ. ಟೋಕನ್‌ ತೆಗೆದು ಸಾಲಲ್ಲಿ ಕಾಯಬೇಕು. ಖಾಸಗಿ ವೈದ್ಯರ ಅವಲಂಬನೆ ಅನಿವಾರ್ಯವಾಗಿದೆ. ಬಡವರಿಗೆ ಅದು ಅಸಾಧ್ಯ. ಆದಷ್ಟು ಬೇಗ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಿದರೆ ಗ್ರಾಮಸ್ಥರಿಗೆ ಪ್ರಯೋಜನವಾಗುತ್ತದೆ.
– ಹಮೀದ್‌ ಅಡ್ಕಾರು ಸ್ಥಳೀಯರು

– ಶಿವಪ್ರಸಾದ್‌ ಮಣಿಯೂರು

ಟಾಪ್ ನ್ಯೂಸ್

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?

1-russia

Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Court-1

Puttur: ಮಹಿಳೆಗೆ ಬೈಕ್‌ ಢಿಕ್ಕಿ; ಸವಾರನಿಗೆ ಶಿಕ್ಷೆ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Belthangady: ಗೋ ಅಕ್ರಮ ಸಾಗಾಟ ತಡೆದ ಬಜರಂಗ ದಳ ಕಾರ್ಯಕರ್ತರು

Belthangady: ಗೋ ಅಕ್ರಮ ಸಾಗಾಟ ತಡೆದ ಬಜರಂಗ ದಳ ಕಾರ್ಯಕರ್ತರು

Sullia: ಬೈಕ್‌ ಮೇಲೆ ಜಿಗಿದ ಕಡವೆ; ಸವಾರರಿಗೆ ಗಾಯ

Sullia: ಬೈಕ್‌ ಮೇಲೆ ಜಿಗಿದ ಕಡವೆ; ಸವಾರರಿಗೆ ಗಾಯ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.