ಲೇಡಿಗೋಶನ್‌ ಆಸ್ಪತ್ರೆ: ಬಾಣಂತಿ- ಶಿಶುಗಳಿಗೆ ವರಾಂಡವೇ ಆಶ್ರಯ !


Team Udayavani, Jul 14, 2017, 2:40 AM IST

Lady-Hospital-13-7.jpg

ಮಹಾನಗರ: ಮಗು ಹುಟ್ಟಿದ ತತ್‌ಕ್ಷಣ ಅದಕ್ಕೊಂದು ಬೆಚ್ಚನೆಯ ಸೂರು ಕಲ್ಪಿಸಿಕೊಡುವುದೇ ಎಲ್ಲರ ಪ್ರಥಮ ಆದ್ಯತೆ. ಆದರೆ ಜಿಲ್ಲಾ ಸರಕಾರಿ ಲೇಡಿಗೋಶನ್‌ ಆಸ್ಪತ್ರೆಯಲ್ಲಿ ಮಾತ್ರ ಹೀಗಿಲ್ಲ. ಇಲ್ಲಿ ಆಸ್ಪತ್ರೆಯ ಒಳಭಾಗದ ಕಾಲು ದಾರಿಯಲ್ಲೇ ಮಂಚ- ಹಾಸಿಗೆ ಹಾಕಿ ಬಾಣಂತಿಯರು ಮತ್ತು ಹಸುಗೂಸುಗಳನ್ನು ಮಲಗಿಸಲಾಗುತ್ತಿದೆ! ಜಿಟಿಗುಡುವ ಮಳೆಯಿಂದಾಗಿ ನಡುಗುವ ಚಳಿಯಲ್ಲಿ ತಾಯಿ – ಮಗು ಇಲ್ಲಿ ದಿನ ಕಳೆಯಬೇಕು. ಜತೆಗೆ ಸೊಳ್ಳೆ ಕಾಟ ಬೇರೆ ಎನ್ನುತ್ತಾ ಇಲ್ಲಿ ಹೆರಿಗೆಗಾಗಿ ಬಂದಿರುವ ತಾಯಂದಿರು ಉದಯವಾಣಿ ಸುದಿನದ ಜತೆಗೆ ನೋವು ತೋಡಿಕೊಂಡರು.

ಬಾಣಂತಿಯರು ಮತ್ತು ಶಿಶುಗಳ ಆರೋಗ್ಯಕ್ಕಾಗಿ ಸರಕಾರವು ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೂ ಬಡವರಿಗೆಂದೇ ಇರುವ ಜಿಲ್ಲಾ ಸರಕಾರಿ ಲೇಡಿಗೋಶನ್‌ ಆಸ್ಪತ್ರೆಯಲ್ಲಿ ಮಾತ್ರ ಬಾಣಂತಿಯರು ಮತ್ತು ಶಿಶುಗಳು ವರಾಂಡದಲ್ಲೇ ಮಲಗಬೇಕಿದೆ. ಸುಮಾರು 5 ವರ್ಷಗಳಿಂದಲೂ ಇದೇ ಸ್ಥಿತಿಯಿದ್ದು, ಹೊಸ ಕಟ್ಟಡದ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಈ ಕಷ್ಟ ಮುಗಿಯುವಂತೆ ತೋರುತ್ತಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ. ಹೊರಗಿನಿಂದ ಮಳೆ ನೀರು ಒಳ ಸೋಕದಂತೆ ತಡೆಯಲು ಕಿಟಕಿಗೆ ಪ್ಲಾಸ್ಟಿಕ್‌ ಕವರ್‌ ಅಳವಡಿಸಲಾಗಿದೆ. ಈ ಕವರ್‌ ಸಹ ಅಲ್ಲಲ್ಲಿ ಕಿತ್ತು ಹೋಗಿದ್ದು, ಹೊರಗಿನ ಗಾಳಿಯಿಂದಲೂ ಸಮಸ್ಯೆಯಾಗುತ್ತಿದೆ. ಕಿಟಕಿಯೂ ಬಂದ್‌ ಇಲ್ಲದಿರುವುದರಿಂದ ಈ ಗಾಳಿ ಚಳಿಯ ತೀವ್ರತೆಯನ್ನು ಹೆಚ್ಚಿಸುತ್ತಿದೆ. ಸೊಳ್ಳೆ ಕಾಟವೂ ಹೆಚ್ಚಿದ್ದು, ಶಿಶುಗಳಿಗೆ ತೊಂದರೆಯಾಗುತ್ತಿದೆ. ಪ್ರಸ್ತುತ ಮಲೇರಿಯಾದಂಥ ಸಾಂಕ್ರಾಮಿಕ ರೋಗದ ಭೀತಿ ಇದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ತಾಯಂದಿರು.

ಶಿಶುಗಳಿಗಿಲ್ಲ ನೆಮ್ಮದಿಯ ನಿದ್ದೆ!
ಇಲ್ಲಿ ದಾಖಲಾದ ಮಹಿಳೆಯೋರ್ವರು ಹೇಳುವ ಪ್ರಕಾರ, ‘ಸಿಸೇರಿಯನ್‌ ಹೆರಿಗೆಯಾದವರನ್ನು ಮಾತ್ರ ಹೆರಿಗೆಯಾದ ಒಂದೆರಡು ದಿನಗಳಲ್ಲಿ ವರಾಂಡದಲ್ಲಿರುವ ಹಾಸಿಗೆಗಳಿಗೆ ಸ್ಥಳಾಂತರಿಸಲಾಗುತ್ತದೆ. ಮಳೆ ನೀರು ಕೆಲವೆಡೆ ಒಳಗೆ ಸೋಕಿದರೂ, ಅದರಿಂದ ಅಷ್ಟೇನೂ ಸಮಸ್ಯೆಯಾಗುತ್ತಿಲ್ಲ. ಆದರೆ ಸೊಳ್ಳೆ ಕಾಟ ವಿಪರೀತವಾಗಿದೆ. ಹುಟ್ಟಿದ ಎರಡು ದಿನಗಳಲ್ಲಿ ವರಾಂಡದಲ್ಲಿ ಮಲಗಬೇಕಾದ ಸ್ಥಿತಿ ಈ ಶಿಶುಗಳದ್ದು. ಇದರಿಂದ ಅವುಗಳು ಹೆಚ್ಚು ಅಳುತ್ತಿದ್ದು, ತಾಯಂದಿರಿಗೂ ನೆಮ್ಮದಿಯ ನಿದ್ದೆ ಇಲ್ಲದಂತಾಗಿದೆ. ಇಲ್ಲಿ ಇತರ ರೋಗಿಗಳನ್ನು ನೋಡಲು ಬಂದವರು ಆಚೀಚೆ ಓಡಾಡುತ್ತಿರುವುದರಿಂದ ಮಕ್ಕಳಿಗೆ ಹಾಲುಣಿಸಲೂ ಕಷ್ಟವಾಗುತ್ತಿದೆ’ ಎನ್ನುತ್ತಾರೆ.

ಲೇಡಿಗೋಶನ್‌ ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಾಣ ಹಿನ್ನೆಲೆಯಲ್ಲಿ ಐದು ವರ್ಷಗಳ ಹಿಂದೆ ಎಸ್‌ಎಲ್‌ಟಿ, ಎಂಎಲ್‌ಟಿ, ಹೆರಿಗೆ ಕೋಣೆ, ಗರ್ಭಿಣಿ ಯರಿಗೆಂದೇ ಇದ್ದ ಎಎಂಸಿ ವಾರ್ಡ್‌, ನವಜಾತ ಶಿಶುಗಳಿಗಾಗಿ ಇದ್ದ ಒಂದಿಡೀ ಬ್ಲಾಕ್‌ನ್ನೇ ಕೆಡವಲಾಗಿದೆ. ಇದರಿಂದ ಜಾಗದ ಕೊರತೆ ಉದ್ಭವಿಸಿದೆ. ಆಸ್ಪತ್ರೆಯಲ್ಲಿ ಹೆರಿಗೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ನಿಗದಿತ ಹಾಸಿಗೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆಗೆ ಬರುವ ಕಾರಣ ಅವರನ್ನು ಹೊರ ಕಳುಹಿಸಲೂ ಸಾಧ್ಯವಾಗುತ್ತಿಲ್ಲ. ಹಾಗಾಗಿ ಅನಿವಾರ್ಯವಾಗಿ ವರಾಂಡದಲ್ಲೇ ಮಂಚ – ಹಾಸಿಗೆ ಹಾಕಿ ಮಲಗಿಸಲಾಗುತ್ತಿದೆ. ಒಟ್ಟು ಸುಮಾರು 12 ಹಾಸಿಗೆಗಳು ವರಾಂಡದಲ್ಲಿವೆ. ಪ್ರಸ್ತುತ ಆಸ್ಪತ್ರೆಯಲ್ಲಿ 250 ಹಾಸಿಗೆ ಸಾಮರ್ಥ್ಯವಿದ್ದು, 12 ನವಜಾತ ಶಿಶುಗಳ ತೀವ್ರ ನಿಗಾ ಘಟಕ ಇದೆ. ಹೊಸ ಕಟ್ಟಡ ಆದ ನಂತರ ಸಮಸ್ಯೆ ನಿವಾರಣೆಯಾಗಲಿದೆ ಎನ್ನುತ್ತಾರೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ | ಸವಿತಾ.

ಹೊಸ ಕಟ್ಟಡ: ಜುಲೈನಲ್ಲೂ ಲೋಕಾರ್ಪಣೆಯಿಲ್ಲ?
ಐದು ವರ್ಷಗಳಿಂದ ಕುಂಟುತ್ತಲೇ ಸಾಗಿದ್ದ ಹೊಸ ಕಟ್ಟಡ ಕಾಮಗಾರಿ ಮುಗಿದು ಜುಲೈ ತಿಂಗಳಾಂತ್ಯಕ್ಕೆ ಲೋಕಾರ್ಪಣೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಅದು ಅನುಮಾನ. ಆಗಸ್ಟ್‌ ತಿಂಗಳಲ್ಲಿ ಉದ್ಘಾಟನೆಗೊಳ್ಳುವ ಸಾಧ್ಯತೆಯಿದೆ ಎನ್ನುತ್ತಾರೆ ಆಸ್ಪತ್ರೆ ಸಿಬಂದಿ. ಹೊಸ ಕಟ್ಟಡದ ಕಾಮಗಾರಿ 2013ರ ಆಗಸ್ಟ್‌ 13ರಂದು ಆರಂಭವಾಗಿತ್ತು. ಈ ಹಿಂದೆ ಸಂಸದ ನಳಿನ್‌ಕುಮಾರ್‌ ಕಟೀಲು ಅವರು ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸಿ ಜುಲೈ ತಿಂಗಳಿನಿಂದ ಸಾರ್ವಜನಿಕರ ಸೇವೆಗೆ ಲಭ್ಯ ಎಂದಿದ್ದರು.

ಅಯ್ಯೋ ಎನಿಸುತ್ತದೆ
ಧಾರಾಕಾರ ಮಳೆ ಬಂದಾಗ ಇಲ್ಲಿ ಮಲಗಿರುವ ಬಾಣಂತಿಯರು ಮತ್ತು ಶಿಶುಗಳ ಪರಿಸ್ಥಿತಿ ನೋಡಿ ಅಯ್ಯೋ ಎನಿಸುತ್ತದೆ. ಸೊಳ್ಳೆ ಕಡಿತದಿಂದಾಗಿ ಮಕ್ಕಳು ಅಳುತ್ತಿರುತ್ತಾರೆ. ಮಳೆಯಲ್ಲಿ ಒದ್ದೆಯಾಗಿ ಬಂದು ಆಚೀಚೆ ನಡೆದಾಡುವುದರಿಂದ ಈ ಕಾಲುದಾರಿಯಲ್ಲಿ ನೀರಿರುತ್ತದೆ. ಅದು ಮತ್ತೂಂದು ಸಮಸ್ಯೆ.
– ವಾರಿಜಾ, ರೋಗಿಯೋರ್ವರನ್ನು ನೋಡಿಕೊಳ್ಳಲು ಆಸ್ಪತ್ರೆಗೆ ಬಂದವರು

ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ
ಜಾಗದ ಸಮಸ್ಯೆಯಿಂದಾಗಿ ಮತ್ತು ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯ ಒಳಗಿನ ಕಾಲುದಾರಿಯಲ್ಲಿ ಹಾಸಿಗೆ ಹಾಕಿ ಬಾಣಂತಿಯರು ಮತ್ತು ಶಿಶುಗಳನ್ನು ಮಲಗಿಸಲಾಗಿದೆ. ಅವರಿಗೆ ತೊಂದರೆಯಾಗದಂತೆ ವೆರಾಂಡದ ಕಿಟಕಿಗಳಿಗೆ ಪ್ಲಾಸ್ಟಿಕ್‌ ಹೊದಿಕೆಗಳನ್ನು ಹಾಸಲಾಗಿದೆ. ಪಕ್ಕದಲ್ಲೇ ನಿರ್ಮಾಣವಾಗುತ್ತಿರುವ ಆಸ್ಪತ್ರೆಯ ಹೊಸ ಕಟ್ಟಡ ಜುಲೈ ಅಂತ್ಯಕ್ಕೆ ಉದ್ಘಾಟನೆಯಾಗಬೇಕಿತ್ತು. ಆದರೆ ಕಾಮಗಾರಿ ಇನ್ನೂ ಪೂರ್ಣಗೊಳ್ಳದೇ ಇರುವುದರಿಂದ ಉದ್ಘಾಟನೆ ವಿಳಂಬವಾಗುತ್ತಿದೆ. ಬಹುಶಃ ಆಗಸ್ಟ್‌ನಲ್ಲಿ ಹೊಸ ಕಟ್ಟಡ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ. ಆನಂತರ ಈಗ ಉಂಟಾಗಿರುವ ಬಹುತೇಕ ಸಮಸ್ಯೆ ನಿವಾರಣೆಯಾಗಲಿದೆ.
– ಡಾ|  ಸವಿತಾ, ವೈದ್ಯಕೀಯ ಅಧೀಕ್ಷಕಿ, ಲೇಡಿಗೋಶನ್‌ ಆಸ್ಪತ್ರೆ

– ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

POLICE-5

Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

15

Mangaluru: ಚಿನ್ನದ ಬಿಸ್ಕೆಟ್‌ ಇದೆ ಎಂದು ನಂಬಿಸಿ 4 ಲಕ್ಷ ರೂ. ವಂಚನೆ

ssa

Mangaluru: ಮಾದಕ ವಸ್ತು ಸೇವನೆ; ಯುವಕ ವಶಕ್ಕೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.