ಟೆಂಡರ್‌ ಕರೆದರೂ ಇಲ್ಲ ಪ್ರತಿಕ್ರಿಯೆ


Team Udayavani, Nov 27, 2017, 12:29 PM IST

27-Nov-8.jpg

ಮಹಾನಗರ: ನಗರದ ಯಾವುದೇ ಭಾಗದಲ್ಲಿ ಸಂಚಾರಕ್ಕೆ ತಡೆಯಾಗುವ ರೀತಿಯಲ್ಲಿ ವಾಹನ ನಿಲ್ಲಿಸಿದರೂ ಪೊಲೀಸರು ಬಂದು ಅದಕ್ಕೆ ಲಾಕ್‌ ಹಾಕಿ, ದಂಡದ ಚೀಟಿ ಅಂಟಿಸಿ ಹೋಗಬಹುದೇ ವಿನಾ ವಾಹನವನ್ನು ಅಲ್ಲಿಂದ ಸ್ಥಳಾಂತರ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಲು ಸಾಧ್ಯವಿಲ್ಲ. ಏಕೆಂದರೆ, ನಗರ ವ್ಯಾಪ್ತಿಯಲ್ಲಿ ಟೋಯಿಂಗ್‌ ವಾಹನವೇ ಇಲ್ಲ!

ನಗರ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಸಣ್ಣಪುಟ್ಟ ಕಾರ್ಯಕ್ರಮ ಇದ್ದಾಗಲೂ ನಗರದಲ್ಲಿ ಟ್ರಾಫಿಕ್‌ ಸಮಸ್ಯೆ ಹೆಚ್ಚುತ್ತದೆ. ವಾಹನಗಳನ್ನು ಅಸಮರ್ಪಕವಾಗಿ ನಿಲ್ಲಿಸಿದರೆ, ಅವುಗಳು ಸಂಚಾರಕ್ಕೆ ತೊಡಕಾಗುತ್ತವೆ. ಇಂತಹ ವಾಹನಗಳನ್ನು ಆ ಸ್ಥಳದಿಂದ ತೆರವು ಮಾಡಿದರೆ ಮಾತ್ರ ಸಂಚಾರ ವ್ಯವಸ್ಥೆ ಸುಗಮವಾಗಲು ಸಾಧ್ಯ. ಇದಕ್ಕಾಗಿ ಟೋಯಿಂಗ್‌ ವಾಹನದ ಅಗತ್ಯವಿದೆ.

ಸಂಚಾರ ವ್ಯವಸ್ಥೆಯನ್ನು ಅತ್ಯಂತ ಸಲೀಸಾಗಿ ನಿರ್ವಹಿಸುವ ನೆಲೆಯಲ್ಲಿ ಟೋಯಿಂಗ್‌ ವಾಹನ ಅಗತ್ಯವಾಗಿ ಬೇಕು ಎಂಬ ಆಗ್ರಹ ಸಂಚಾರ ಪೊಲೀಸರಿಂದ ವ್ಯಕ್ತವಾಗುತ್ತಲೇ ಇದೆ. ಇಂತಹ ವಾಹನವನ್ನು ಒದಗಿಸುವ ಬಗ್ಗೆ ಪಾಲಿಕೆ ಭರವಸೆ ನೀಡಿದೆ. ಆದರೆ, ಅದಿನ್ನೂ ಈಡೇರಿಲ್ಲ.

ಹಲವು ತಿಂಗಳ ಹಿಂದೆ ಟೈಗರ್‌ ಎಂಬ ಟೋಯಿಂಗ್‌ ವಾಹನವನ್ನು ಖಾಸಗಿಯಾಗಿ ಬಾಡಿಗೆಗೆ ಪಡೆದು ನಗರ ಸಂಚಾರ ಸುವ್ಯವಸ್ಥೆಗೆ ಬಳಕೆ ಮಾಡಲಾಗುತ್ತಿತ್ತು. ಆದರೆ, ಟೋ ಮಾಡುವಾಗ ವಾಹನಗಳಿಗೆ ಹಾನಿ ಆಗುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ದೂರು ಸಲ್ಲಿಕೆಯಾದ್ದರಿಂದ ಅದರ ಬಳಕೆ ಕಡಿಮೆಯಾಗಿದೆ.

ಟೋಯಿಂಗ್‌ ವಾಹನ; ಶುಲ್ಕ ಪರಿಷ್ಕರಣೆ
ಸುಗಮ ಸಂಚಾರ ವ್ಯವಸ್ಥೆಗೆ ಅಡಚಣೆ ಉಂಟುಮಾಡುವ, ರಸ್ತೆಗಳಲ್ಲಿ ಅಸ್ತವ್ಯಸ್ತವಾಗಿ ಅಸಮರ್ಪಕವಾಗಿ ನಿಲ್ಲಿಸುವ ವಾಹನಗಳನ್ನು ಟೋ ಮಾಡಲು ವಾಹನ ಮಾಲಕರು ಅಥವಾ ಚಾಲಕರಿಂದ ಟೋಯಿಂಗ್‌ ಶುಲ್ಕ ಸೇರಿ ದಂಡ ವಸೂಲಿ ಮಾಡಲಾಗುತ್ತದೆ. ಖಾಸಗಿ ಟೋಯಿಂಗ್‌ ವಾಹನಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯಲಾಗುತ್ತದೆ. ಕಳೆದ ವರ್ಷ ಸೆಪ್ಟಂಬರ್‌ 22ರಂದು ಈ ದರಗಳನ್ನು ಪರಿಷ್ಕರಿಸಲಾಗಿದೆ.

ಬೆಂಗಳೂರಿನಲ್ಲಿ ಟೋ ಮಾಡಲಾದ ಲಘು ವಾಹನಗಳ ಮಾಲಕರಿಂದ 1000 ರೂ.ದಂಡ (ಹಿಂದೆ 300 ರೂ. ಇತ್ತು) ವಸೂಲಿ ಮಾಡಲಾಗುತ್ತದೆ. ಇದರಲ್ಲಿ ಖಾಸಗಿ ಟೋ ವಾಹನಗಳ ಮಾಲಕರಿಗೆ 500 ರೂ. (ಹಿಂದೆ 150 ರೂ.) ಪಾವತಿಸಲಾಗುತ್ತದೆ. ಟೋ ಮಾಡಲಾದ ಭಾರೀ ಸರಕು ವಾಹನಗಳ ಮಾಲಕರಿಂದ 1,250 ರೂ. (ಹಿಂದೆ 400 ರೂ.) ವಸೂಲಿ ಮಾಡಿ, ಖಾಸಗಿ ಟೋ ವಾಹನ ಮಾಲಕರಿಗೆ 625 ರೂ. ಪಾವತಿಸಲಾಗುತ್ತದೆ.

ಟೋ ಮಾಡಲಾದ ದ್ವಿಚಕ್ರ ವಾಹನಗಳಿಗೆ 650 ರೂ. ವಸೂಲಿ ಮಾಡಿ, ಖಾಸಗಿ ಟೋ ವಾಹನ ಮಾಲಕರಿಗೆ 325 ರೂ. ಪಾವತಿಸಲಾಗುತ್ತದೆ. ಟೋ ಮಾಡಲಾದ ಭಾರೀ ಗಾತ್ರದ ಸಾಗಾಟ ವಾಹನಗಳ ಮಾಲಕರಿಂದ 1500 ರೂ. ವಸೂಲಿ ಮಾಡಲಾಗುತ್ತಿದ್ದು, ಖಾಸಗಿ ಟೋ ವಾಹನಗಳ ಮಾಲಕರಿಗೆ 750 ರೂ. ಪಾವತಿಸಲಾಗುತ್ತದೆ

ಮೂಲೆ ಸೇರಿದ ಪ್ರಸ್ತಾವ 
ಮಂಗಳೂರಿನಲ್ಲಿ ಅಸಮರ್ಪಕ ಪಾರ್ಕಿಂಗ್‌ ವ್ಯವಸ್ಥೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಟೋಯಿಂಗ್‌ ವಾಹನವನ್ನು ಸಂಚಾರಿ ವಿಭಾಗಕ್ಕೆ ಒದಗಿಸಿಕೊಡುವಂತೆ ಈ ಹಿಂದೆ ಡಿಸಿಪಿಯಾಗಿದ್ದ ಡಾ| ಸಂಜೀವ ಪಾಟೀಲ್‌ ಅವರು ಪಾಲಿಕೆಗೆ ಮನವಿ ಮಾಡಿದ್ದರು. ಟೋಯಿಂಗ್‌ ವಾಹನ ಖರೀದಿಗೆ ಟೆಂಡರ್‌ ಆಹ್ವಾನಿಸಲಾಗಿತ್ತು. ಆದರೆ, ಟೆಂಡರ್‌ ನಲ್ಲಿ ಯಾರೂ ಭಾಗವಹಿಸದ ಕಾರಣ ಪ್ರಸ್ತಾವ ಮೂಲೆ ಸೇರಿತು. ವಾರದ ಹಿಂದೆ ಪಾಲಿಕೆಯಲ್ಲಿ ನಡೆದ ಸಂಚಾರ ವಿಭಾಗದ ಸಭೆಯಲ್ಲೂ ಇದೇ ವಿಚಾರ ಪ್ರಸ್ತಾವಕ್ಕೆ ಬಂದಿದೆ. ಪ್ರಸ್ತುತ ಸಂಚಾರಿ ಡಿಸಿಪಿ ಉಮಾಪ್ರಶಾಂತ್‌ ಅವರು ಮತ್ತೂಮ್ಮೆ ಸಭೆಯಲ್ಲಿ ಉಲ್ಲೇಖೀಸಿದ್ದಾರೆ. ಟೋಯಿಂಗ್‌ ವಾಹನಕ್ಕೆ ಬೇಕಾಗುವ ವೆಚ್ಚದ ಕುರಿತ ವಿವರಗಳನ್ನು ಸಂಚಾರಿ ವಿಭಾಗದಿಂದ ಪಾಲಿಕೆಗೆ ನೀಡಿದರೆ, ಸರಕಾರಕ್ಕೆ ಬರೆದು ವಾಹನ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಮನಪಾ ಆಯುಕ್ತ ಮಹಮ್ಮದ್‌ ನಝೀರ್‌ ತಿಳಿಸಿದ್ದರು.

ಟೋಯಿಂಗ್‌ ವಾಹನ ಅಗತ್ಯ
ಮಂಗಳೂರು ನಗರ ವ್ಯಾಪ್ತಿಯಲ್ಲಿ ಅಸಮರ್ಪಕ ಪಾರ್ಕಿಂಗ್‌ ವ್ಯವಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಲು ಟೋಯಿಂಗ್‌ ವಾಹನದ ಅಗತ್ಯವಿದೆ. ಬೆಂಗಳೂರಿನಲ್ಲಿ ಖಾಸಗಿ ಟೋಯಿಂಗ್‌ ವಾಹನಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು ನಿರ್ವಹಿಸಲಾಗುತ್ತಿದೆ. ಮಂಗಳೂರಿನಲ್ಲೂ ಟೋಯಿಂಗ್‌ ವಾಹನ ಲಭ್ಯವಾದರೆ, ಸಂಚಾರ ದಟ್ಟಣೆ ಸುಧಾರಿಸುವಲ್ಲಿ ವಿಶೇಷ ಫಲಿತಾಂಶ ದೊರೆಯಬಹುದು.
ಮಂಜುನಾಥ್‌ ಶೆಟ್ಟಿ , ಸಂಚಾರ
  ವಿಭಾಗದ ಎಸಿಪಿ, ಮಂಗಳೂರು

  ದಿನೇಶ್‌ ಇರಾ

ಟಾಪ್ ನ್ಯೂಸ್

Valmiki Jayanti: ಕಾರ್ಯಕ್ರಮ ವೇದಿಕೆಯಲ್ಲಿ ಅತ್ತ ಶಾಸಕ ನಾಗೇಂದ್ರ

Valmiki Jayanti: ಕಾರ್ಯಕ್ರಮ ವೇದಿಕೆಯಲ್ಲಿ ಅತ್ತ ಶಾಸಕ ನಾಗೇಂದ್ರ

HMT, KIOCL: ಚರ್ಚೆಗೆ ಬನ್ನಿ: ಸಚಿವ ಎಚ್‌.ಡಿ. ಕುಮಾರಸ್ವಾಮಿ

HMT, KIOCL: ಚರ್ಚೆಗೆ ಬನ್ನಿ: ಸಚಿವ ಎಚ್‌.ಡಿ. ಕುಮಾರಸ್ವಾಮಿ

Harman-Kuar

Womens Cricket: ನ್ಯೂಜಿಲ್ಯಾಂಡ್‌ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್‌

BY Election: ಶಿಗ್ಗಾವಿ ಕ್ಷೇತ್ರ ಗೆಲುವಿಗೆ ಪ್ರಯತ್ನ: ಬಸವರಾಜ ಬೊಮ್ಮಾಯಿ

BY Election: ಶಿಗ್ಗಾವಿ ಕ್ಷೇತ್ರ ಗೆಲುವಿಗೆ ಪ್ರಯತ್ನ: ಬಸವರಾಜ ಬೊಮ್ಮಾಯಿ

Pro-kabbaddi

Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಹವಾ

Mandya: 3ನೇ ಬಾರಿಗೆ ಗರಿಷ್ಠ ಮಟ್ಟ ತಲುಪಿದ ಕೆಆರ್‌ಎಸ್‌

Mandya: 3ನೇ ಬಾರಿಗೆ ಗರಿಷ್ಠ ಮಟ್ಟ ತಲುಪಿದ ಕೆಆರ್‌ಎಸ್‌

Rain: ಹಿಂಗಾರು ಮಳೆಯಬ್ಬರಕ್ಕೆ ಇಬ್ಬರು ಸಾವು, ಬೆಳೆ ಹಾನಿ

Rain: ಹಿಂಗಾರು ಮಳೆಯಬ್ಬರಕ್ಕೆ ಇಬ್ಬರು ಸಾವು, ಬೆಳೆ ಹಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Kulai: ಬೃಹತ್‌ ಟ್ರಕ್‌ ಓಡಾಟದಿಂದ ರಸ್ತೆಗೆ ಹಾನಿ

10

Lalbagh: ಪಾಲಿಕೆ ಚುನಾವಣೆ ಸನ್ನಿಹಿತ; ಮೀಸಲಾತಿಯದೇ ಆತಂಕ!

7–ullala

Ullala: ಇನ್ಸ್‌ಪೆಕ್ಟರ್ ಕೊಠಡಿಯೊಳಗೆಯೇ ಹಿಂದೂ ಸಂಘಟನೆ ಮುಖಂಡನಿಗೆ ಮುಸ್ಲಿಂ ಯುವಕ ಹಲ್ಲೆ

7

Mangaluru: ನಿತ್ಯ ಟ್ರಾಫಿಕ್‌ ಜಾಮ್‌ ಗೋಳು; ವಾಹನ ಸವಾರರ ಪರದಾಟ

Crime

Mangaluru: ಬಸ್‌ ನಿರ್ವಾಹಕನ ಕೊಲೆ; ಆರೋಪಿಗಳ ಸುಳಿವು ಲಭ್ಯ?

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Valmiki Jayanti: ಕಾರ್ಯಕ್ರಮ ವೇದಿಕೆಯಲ್ಲಿ ಅತ್ತ ಶಾಸಕ ನಾಗೇಂದ್ರ

Valmiki Jayanti: ಕಾರ್ಯಕ್ರಮ ವೇದಿಕೆಯಲ್ಲಿ ಅತ್ತ ಶಾಸಕ ನಾಗೇಂದ್ರ

HMT, KIOCL: ಚರ್ಚೆಗೆ ಬನ್ನಿ: ಸಚಿವ ಎಚ್‌.ಡಿ. ಕುಮಾರಸ್ವಾಮಿ

HMT, KIOCL: ಚರ್ಚೆಗೆ ಬನ್ನಿ: ಸಚಿವ ಎಚ್‌.ಡಿ. ಕುಮಾರಸ್ವಾಮಿ

Harman-Kuar

Womens Cricket: ನ್ಯೂಜಿಲ್ಯಾಂಡ್‌ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್‌

robbers

Kota; ಪಾರಂಪಳ್ಳಿ ದೇವಸ್ಥಾನದ ಆಸುಪಾಸಿನಲ್ಲಿ ಕಳ್ಳನ ಓಡಾಟದ ಸುದ್ದಿ

BY Election: ಶಿಗ್ಗಾವಿ ಕ್ಷೇತ್ರ ಗೆಲುವಿಗೆ ಪ್ರಯತ್ನ: ಬಸವರಾಜ ಬೊಮ್ಮಾಯಿ

BY Election: ಶಿಗ್ಗಾವಿ ಕ್ಷೇತ್ರ ಗೆಲುವಿಗೆ ಪ್ರಯತ್ನ: ಬಸವರಾಜ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.