ಮನೆಗಳಿಗೆ ರಸ್ತೆಯಿಲ್ಲ, ಇರುವ ಕಾಲುದಾರಿಯೂ ಸರಿಯಿಲ್ಲ 


Team Udayavani, Jul 16, 2018, 10:02 AM IST

16-july-1.jpg

ವಿಟ್ಲ : ಇಲ್ಲಿ ಮೊಬೈಲ್‌ ಸಿಗ್ನಲ್‌ ಇದೆ. ಡಾಟಾ ಸಿಗುತ್ತದೆ. ಆಧುನಿಕ ತಂತ್ರಜ್ಞಾನ ತಲುಪಿದೆ. ಆದರೆ ಮೂಲ ಆವಶ್ಯಕತೆ ಇನ್ನೂ ತಲುಪಿಲ್ಲ. ರಸ್ತೆಯೂ ಇಲ್ಲದೆ, ಕಾಲುದಾರಿಯೂ ಸಮರ್ಪಕವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳ ಪಾಡು ಹೇಳತೀರದು. ನಡೆದಾಡಲಾಗದ ಅಥವಾ ಅನಾರೋಗ್ಯ ಪೀಡಿತ ವೃದ್ಧರನ್ನು ಹೊತ್ತು ಕೊಂಡೇ ಸಾಗುವ ಇಲ್ಲಿನ ಮಂದಿ, ಆವಶ್ಯಕ ಸಾಮಗ್ರಿಗಳನ್ನೂ ಹೊತ್ತು ಸರ್ಕಸ್‌ ಮಾಡುತ್ತಲೇ ಸಾಗಬೇಕಾಗಿದೆ. ಈ ಅಪಾಯಕಾರಿ ಕಾಲು ದಾರಿಯಲ್ಲಿ ಸ್ಥಳೀಯರು ಜೀವ ಭಯದಿಂದಲೇ ನಡೆದಾಡುತ್ತಿದ್ದಾರೆ.

ಪಡ್ಪು ಕಾಲು ದಾರಿ
ಇದು ಕರೋಪಾಡಿ ಗ್ರಾಮದ ಆನೆಕಲ್ಲು ಎಂಬಲ್ಲಿಂದ ಪಡ್ಪು ಮೂಲಕ ಸಾಲೆತ್ತೂರು ಗ್ರಾಮದ ಮಲಾರು ಎಂಬಲ್ಲಿಗೆ ತೆರಳುವ ಕಾಲುದಾರಿಯ ಕಥೆ. ಸುಮಾರು ಒಂದೂವರೆ ಕಿ.ಮೀ. ದೂರದ ಪಂ. ದಾರಿ. ಮಳೆಗಾಲದಲ್ಲಿ ಈ ಕಾಲುದಾರಿ ಬಳಕೆ ಭಾರೀ ಕಷ್ಟ. ಪಕ್ಕದ ಭೂಮಿಯೂ ಕುಸಿಯುತ್ತಿದೆ. ಅದಕ್ಕಾಗಿ ಅಡಿಕೆ ಮರ ಹಾಕಿ ಕುಸಿಯದಂತೆ ತಡೆ ಒಡ್ಡಲಾಗಿದೆ. ಇದೇ ಕಾಲುದಾರಿಯಲ್ಲಿ ಚಿಕ್ಕ ತೋಡಿದೆ. ಅದಕ್ಕೆ 10 ವರ್ಷಗಳ ಹಿಂದೆ ಕಾಲುಸಂಕ ಹಾಕಲಾ ಗಿದೆ. ಆನೆಕಲ್ಲು ನದಿಯಲ್ಲಿ ನೀರು ತುಂಬಿದರೆ ತೋಡು ತುಂಬಿ ಕಾಲು ಸಂಕ ನಿಷ್ಪ್ರ ಯೋಜಕವಾಗುತ್ತದೆ.

ಅಣೆಕಟ್ಟೆ ಸಮಸ್ಯೆ
ಕೇರಳ ಸರಕಾರ ಕೇರಳದ ಭಾಗದಲ್ಲಿ ಈ ನದಿಗೆ ಬೃಹತ್‌ ಅಣೆಕಟ್ಟೆ ನಿರ್ಮಿಸಿದೆ. ಮಳೆಗಾಲದಲ್ಲಿ ನೀರಿನೊಂದಿಗೆ ತೇಲಿ ಬರುವ ಕಸ, ಗಿಡ, ಮರಗಳು ಈ ಅಣೆಕಟ್ಟೆಯಲ್ಲಿ ಸಿಲುಕಿ ನೀರಿನ ಮಟ್ಟ ಏರುತ್ತದೆ. ಹತ್ತಿರದ ಕೃಷಿಭೂಮಿಯೂ ಕೊಚ್ಚಿಕೊಂಡು ಹೋಗುತ್ತಿದೆ. ಜತೆಗೆ ಈ ಕಾಲುದಾರಿಯಲ್ಲಿ ನೀರು ಮೇಲೇರುತ್ತದೆ. ಆಗ ಪಾದಚಾರಿಗಳು ಸಂಕಷ್ಟ ಅನುಭವಿಸುತ್ತಾರೆ.

ವಿದ್ಯುತ್‌ ತಂತಿ ಜೋತಾಡುತ್ತಿದೆ
ಇವರಿಗೆ ವಿದ್ಯುತ್‌ ಇರುವುದೇ ಇಲ್ಲ. ವಿದ್ಯುತ್‌ ತಂತಿ ಜೋತಾಡುತ್ತಿದೆ. ಆ ಬಗ್ಗೆ ಇಲಾಖೆಗೆ ದೂರನ್ನು ನೀಡಿದರೂ ಪ್ರಯೋಜನವಿಲ್ಲ. 

ಸಮಸ್ಯೆ ಪರಿಹರಿಸಬೇಕು
ಈ ಹತ್ತು ಕುಟುಂಬಗಳ ಗೋಳು ಇಂದು ನಿನ್ನೆಯದಲ್ಲ. ಚುನಾವಣೆ ಸಂದರ್ಭ ಇವರಿಗೆ ಭರವಸೆ, ಆಶ್ವಾಸನೆ ಸಿಕ್ಕಿದೆ. ಗೆದ್ದ ಬಳಿಕ ನಿಮ್ಮ ಸಮಸ್ಯೆಯನ್ನು ನಿವಾರಿಸುತ್ತೇವೆ ಎನ್ನುತ್ತಿದ್ದಾರೆ. ಆದರೆ ಆಮೇಲೆ ಮರೆತುಬಿಡುತ್ತಾರೆ. ನಾವು ಬಡವರು. ನಮಗೆ ಕೂಲಿ ಮಾಡಿ ಬದುಕು ಸಾಗಿಸಬೇಕು. ಜನಪ್ರತಿನಿಧಿಗಳ ಹಿಂದೆ ಓಡಾಡಿದರೆ ನಮ್ಮ ಸಂಸಾರದ ಹೊಟ್ಟೆ ತುಂಬುವುದಿಲ್ಲ. ಹಲವು ಬಾರಿ ಸಮಸ್ಯೆಯನ್ನು ಗಮನಕ್ಕೆ ತಂದಿದ್ದೇವೆ. ಆದರೆ ಪರಿಹಾರವಾಗಿಲ್ಲ. ಶೀಘ್ರ ನಮ್ಮ ಸಂಕಷ್ಟ ಪರಿಹರಿಸಬೇಕು ಎಂದು ಈ ಕಾಲುದಾರಿ ಫಲಾನುಭವಿಗಳು ಆಗ್ರಹಿಸಿದ್ದಾರೆ.

ಹತ್ತು ಕುಟುಂಬಗಳಿಗೆ ಅನ್ಯ ಮಾರ್ಗವಿಲ್ಲ
ಈ ಕಾಲುದಾರಿಯನ್ನು ಹಿಂದೆ ಹಲವರು ಅವಲಂಬಿಸಿದ್ದರು. ಸುತ್ತಲೂ ರಸ್ತೆ ನಿರ್ಮಾಣವಾಗಿರುವುದರಿಂದ ಈಗ ಬೇರೆ ಮಾರ್ಗವಿಲ್ಲದೇ ಸಿಕ್ಕಿಬೀಳುವ ಕುಟುಂಬಗಳು 10. ಇವರಿಗೆ ರಸ್ತೆಯೂ ಇಲ್ಲ. ಇರುವ ಕಾಲುದಾರಿ ನಡೆದಾಡಲು ಅಯೋಗ್ಯವಾಗಿದೆ. ವೃದ್ಧರ ಆರೋಗ್ಯ ಕೆಟ್ಟರೆ ಯುವಕರು ಹೊತ್ತುಕೊಂಡು ರಸ್ತೆ ಬದಿಗೆ ಆಗಮಿಸುತ್ತಾರೆ. ಈ ಹತ್ತು ಕುಟುಂಬಗಳಿಗೆ ಅನ್ಯ ಮಾರ್ಗವಿಲ್ಲದೆ ತೀರಾ ಸಂಕಷ್ಟ ಅನುಭವಿಸುತ್ತಿದ್ದಾರೆ. 

ಅನುದಾನ ಬೇಕು
ಹಲವು ಬಾರಿ ಸ್ಥಳಕ್ಕೆ ತೆರಳಿ ಚರ್ಚಿಸಿದ್ದೇವೆ. ಆನೆಕಲ್ಲು ನದಿಗೆ ಕೇರಳ ಸರಕಾರ ನಿರ್ಮಿಸಿದ ಅಣೆಕಟ್ಟೆಯಲ್ಲಿ ಕಸ ಸಿಕ್ಕಿ, ಸುತ್ತಮುತ್ತ ನೀರು ತುಂಬಿಕೊಳ್ಳುತ್ತದೆ. ಆಗ ಕಾಲುದಾರಿ ಬಳಕೆ ಕಷ್ಟ. ಕಾಲುದಾರಿಯ ಎರಡೂ ಬದಿಯಲ್ಲಿ ಅಡಿಕೆ ತೋಟಗಳಿವೆ. ಅಲ್ಲಿ ಕಾಲುದಾರಿಗೆ 3 ಅಡಿ ಜಾಗವೂ ಸಿಗುತ್ತಿಲ್ಲ. ಸಾಕಷ್ಟು ಜಾಗ ಸಿಕ್ಕಿದಲ್ಲಿ ಕಾಲುದಾರಿಗೆ ಕಾಂಕ್ರೀಟ್‌ ಹಾಕಿಸಿಕೊಡಬಹುದಿತ್ತು. ಆದರೆ ಪಂ. ವತಿಯಿಂದ 50ರಿಂದ 60 ಸಾವಿರ ರೂ. ಅನುದಾನ ಬಿಡುಗಡೆ ಮಾಡಿ, ಆ ಕಾಲುದಾರಿಯನ್ನು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ.
 - ಬೇಬಿ ಆರ್‌. ಶೆಟ್ಟಿ ಅಧ್ಯಕ್ಷರು, ಕರೋಪಾಡಿ ಗ್ರಾ.ಪಂ.

ಉದಯಶಂಕರ್‌ ನೀರ್ಪಾಜೆ

ಟಾಪ್ ನ್ಯೂಸ್

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

Udupi: ಗೀತಾರ್ಥ ಚಿಂತನೆ-141: “ಇಗೋ’ ಬೂಸ್ಟ್‌ ಮಾಡುವ ಆಧುನಿಕ ಶಿಕ್ಷಣ ಕ್ರಮ

Udupi: ಗೀತಾರ್ಥ ಚಿಂತನೆ-141: “ಇಗೋ’ ಬೂಸ್ಟ್‌ ಮಾಡುವ ಆಧುನಿಕ ಶಿಕ್ಷಣ ಕ್ರಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

court

Mangaluru; ಪ್ರತ್ಯೇಕ ಚೆಕ್‌ಬೌನ್ಸ್‌ ಪ್ರಕರಣ: ಇಬ್ಬರು ಖುಲಾಸೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

death

Mangaluru: ದ್ವಿಚಕ್ರ ವಾಹನ ಢಿಕ್ಕಿ: ಟೆಂಪೋ ಚಾಲಕ ಸಾ*ವು

arrested

Kasaragod: ಪತ್ನಿಯ ಹಂತಕನಿಗೆ 10 ವರ್ಷ ಕಠಿನ ಸಜೆ

saavu

Puttur: ಎಸೆಸೆಲ್ಸಿ ವಿದ್ಯಾರ್ಥಿನಿ ಆತ್ಮಹ*ತ್ಯೆ ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.