![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 5, 2018, 3:36 PM IST
ಕ್ರಿಕೆಟ್ ಜಗತ್ತಿನಲ್ಲಿ ಬಲಿಷ್ಠ ತಂಡಗಳಿಗೆ ಸಡ್ಡು ಹೊಡೆದು ಪ್ರಬಲ ತಂಡವಾಗಿ ರೂಪುಗೊಳ್ಳುತ್ತಿದ್ದ ಭಾರತದ ಮಹಿಳೆಯರು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೋದಾಗ ಸರಣಿಯನ್ನು 3- 1ರಿಂದ ಕೈ ವಶ ಮಾಡಿಕೊಂಡಿದ್ದರು. ಆದರೆ, ಅನಂತರ ಆರಂಭವಾಗಿರುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಜತೆಗಿನ ತ್ರಿಕೋನ ಟಿ20 ಸರಣಿಯಲ್ಲಿ ಸತತ ಸೋಲುಗಳಿಂದ ಕಂಗಾಲಾಗಿದ್ದಾರೆ.
ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ತಂಡಗಳನ್ನು ಇತ್ತೀಚಿನ ವರ್ಷಗಳಲ್ಲಿ ತನ್ನ ಮುಂದೆ ಮಂಡಿಯೂರುವಂತೆ ಮಾಡಿದ ಭಾರತದ ನಾರಿಯರು ಸ್ಥಿರ ಪ್ರದರ್ಶನ ನೀಡುವಲ್ಲಿ ಮತ್ತೆ ಮತ್ತೆ ಎಡವುತ್ತಿದ್ದಾರೆ.
ನಿರೀಕ್ಷೆಯಂತೆ ಮೂಡಿ ಬರದ ಸಂಘಟಿತ ಆಟ. ಅಗ್ರ ಪಂಕ್ತಿಯ ಆಟಗಾರ್ತಿಯರಿಂದ ಉತ್ತಮ ಪ್ರದರ್ಶನ ಬಂದರೂ ಅದನ್ನು ಗೆಲುವಾಗಿ ಪರಿವರ್ತಿಸುವಲ್ಲಿ ಉಳಿದವರು ಯಶಸ್ಸು ಪಡೆಯದೇ ಇರುವುದು ತಲೆ ನೋವಾಗಿ ಪರಿಣಮಿಸಿದೆ.
ಮೂಡದ ಉತ್ತಮ ಜತೆಯಾಟ
ಭಾರೀ ನಿರೀಕ್ಷೆಯೊಂದಿಗೆ ತ್ರಿಕೋನ ಟೂರ್ನಿಗೆ ಎಂಟ್ರಿ ಕೊಟ್ಟ ಭಾರತದ ಆಟಗಾರ್ತಿಯರು ಹುಮ್ಮಸ್ಸಿನಿಂದಲೇ ಅಖಾಡಕ್ಕೆ ಧುಮುಕಿದರು. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನವನ್ನೇ ನೀಡಿದ ಭಾರತ ತಂಡಕ್ಕೆ ಹೇಳಿಕೊಳ್ಳುವಂಥ ಜತೆಯಾಟಗಳು ಮೂಡಿ ಬರಲೇ ಇಲ್ಲ. ಪ್ರಮುಖ ಆಟಗಾರ್ತಿಯರಾದ ಮಿಥಾಲಿ ರಾಜ್, ಸ್ಮತಿ ಮಂದನಾ, ರೋಡಿಗ್ರಸ್, ಅನುಜಾ ಪಟೇಲ್ ಮಾತ್ರ ಸಿಡಿದರು. ಆದರೆ ಒಂದು ಪಂದ್ಯದಲ್ಲಿ ಒಬ್ಬರು ಹೋರಾಟ ನಡೆಸಿದರೆ ಇವರಿಗೆ ಸಾಥ್ ನೀಡಬೇಕಿದ್ದವರೇ ಕೈಕೊಡುತ್ತಿದ್ದರು. ಪರಿಣಾಮ, ಹೆಚ್ಚಿನ ಪಂದ್ಯಗಳನ್ನು ಸೋಲುವುದು ಸಾಮಾನ್ಯವಾಯಿತು!
ಮೊನಚು ಕಳೆದುಕೊಂಡ ಬೌಲರ್‌ಗಳು
ಭಾರತ ಮಹಿಳಾ ತಂಡ ಪ್ರಬಲ ಬೌಲಿಂಗ್ ವಿಭಾಗವನ್ನು ಹೊಂದಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಅನಂತರ ಭಾರತೀಯ ತಂಡ ಬೌಲರ್‌ಗಳದ್ದೇ ವಿಶ್ವ ಕ್ರಿಕೆಟ್ ನಲ್ಲಿ ಪಾರುಪತ್ಯ. ಹಿರಿಯ ಆಟಗಾರ್ತಿ ಜೂಲನ್ ಗೋಸ್ವಾಮಿ ಭಾರತ ತಂಡದ ಅವಿಭಾಜ್ಯ ಅಂಗ. ಆದರೆ, ಈ ಟೂರ್ನಿಯಲ್ಲಿ ಜೂಲನ್ ಸಹಿತ ವಸ್ತ್ರಾಕರ್, ಅನುಜಾ ಪಟೇಲ್, ದೀಪ್ತಿ ಶರ್ಮಾ, ಪೂನಮ್ , ರಾಧಾ ಪ್ರಬಲ ದಾಳಿ ಸಂಘಟಿಸುವಲ್ಲಿ, ವಿಕೆಟ್ ಪಡೆಯುವಲ್ಲಿ ವಿಫಲವಾದರು. ಬೌಲಿಂಗ್ ಮೊನಚು ಕಳೆದುಕೊಂಡ ಭಾರತೀಯ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಆಟಗಾರ್ತಿಯರು ಭರ್ಜರಿ ಬ್ಯಾಟಿಂಗ್‌ನಿಂದ ಒತ್ತಡ ಹೇರುವಲ್ಲಿ ಯಶಸ್ವಿಯಾದರು.
ಸರಣಿ ಸೋಲಿನ ಸುರುಳಿಯಲ್ಲಿ ಸಿಲುಕಿಕೊಂಡಿರುವ ಮಹಿಳಾ ತಂಡಕ್ಕೀಗ ಆತ್ಮವಿಶ್ವಾಸದ ಆವಶ್ಯಕತೆ ಇದೆ. ಮುಂದೆ ನಡೆಯುವ ಮಹಿಳಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಇದೇ ರೀತಿ ಸಂಘಟಿತ ಪ್ರದರ್ಶನದ ಕೊರತೆ ಎದುರಾದರೆ ಭಾರೀ ಬೆಲೆ ತೆರಬೇಕಾಗುತ್ತದೆ. ಆಗಿರುವ ತಪ್ಪುಗಳನ್ನು ತಿದ್ದಿಕೊಂಡು ಪುಟಿದೇಳುವ ಮೂಲಕ ಮುಂಬರುವ ಪಂದ್ಯಗಳಲ್ಲಿ ಉತ್ತಮ ಸಂಘಟಿತ ಪ್ರದರ್ಶನ ನೀಡುವಂತಾಗಲಿ ಎಂಬುದೇ ಹಾರೈಕೆ.
ದೇವಲಾಪುರ
ಮಹದೇವಸ್ವಾಮಿ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.