ಬಾವಿಯಲ್ಲಿ ವಿಷಾನಿಲ ಇರಬಹುದು…ಎಚ್ಚರ!

ನೀರು ಬತ್ತಿ ಹೋಗುವ; ಕೆಸರು ತೆಗೆದು ಸ್ವಚ್ಛಗೊಳಿಸುವ ಸಮಯ

Team Udayavani, Mar 7, 2020, 5:33 AM IST

ಬಾವಿಯಲ್ಲಿ ವಿಷಾನಿಲ ಇರಬಹುದು…ಎಚ್ಚರ!

ಮಹಾನಗರ: ಬೇಸಗೆ ಆರಂಭವಾಗಿದೆ. ಬಾವಿಗಳಲ್ಲಿ ನೀರು ತಳಮಟ್ಟ ಸೇರುವ ಇಲ್ಲವೆ ಬತ್ತಿ ಹೋಗುವ ಸಮಯ. ಕೆಸರು ಅಥವಾ ಕಸಕಡ್ಡಿ ತುಂಬಿ ಒರತೆ ಕ್ಷೀಣಿಸುತ್ತದೆ ಇಲ್ಲವೆ ಒರತೆ ಮಾರ್ಗ ಮುಚ್ಚಿರುತ್ತದೆ. ಸ್ವತ್ಛಗೊಳಿಸಿದರೆ ನೀರಿನ ಒರತೆ ಹೆಚ್ಚುವ ಸಾಧ್ಯತೆಗಳಿರುತ್ತವೆ. ಆದರೆ ಆಳದ ಬಹಳಷ್ಟು ವರ್ಷಗಳಿಂದ ಕಸಕಡ್ಡಿ, ಕೆಸರು ತೆಗೆಯದೆ ಇರುವ ಬಾವಿಗಳಲ್ಲಿ ವಿಷಾನಿಲ ತುಂಬಿರುವ ಸಾಧ್ಯತೆಗಳಿವೆ. ವರ್ಷಂಪ್ರತಿ ಈ ಕಾರಣದಿಂದ ಜೀವಹಾನಿ ಪ್ರಕರಣಗಳು ವರದಿಯಾಗುತ್ತಿವೆ. ಆದ್ದರಿಂದ ಎಚ್ಚರ ವಹಿಸುವುದು ಅಗತ್ಯ.

ಅಳ ಜಾಸ್ತಿ ಇರುವ ಬಾವಿಗಳಲ್ಲಿ ಅಪಾಯಗಳು ಅಧಿಕ. ಕರಾವಳಿ ಜಿಲ್ಲೆಗಳ ಒಳಪ್ರದೇಶಗಳಲ್ಲಿ ಸಾಮಾನ್ಯವಾಗಿ ಬಾವಿಗಳು ಸುಮಾರು 100 ಅಡಿಗಿಂತಲೂ ಅಳವಿರುತ್ತವೆ. ಎಪ್ರಿಲ್‌, ಮೇ ತಿಂಗಳಿನಲ್ಲಿ ಬಾವಿಗಳ ಕೆಸರು ತೆಗೆಯುವ, ಸ್ವತ್ಛಗೊಳಿಸುವ ಕಾರ್ಯ ನಡೆಯುತ್ತದೆ. ಒಂದೋ ಮನೆಯವರು ತಾವೇ ಸ್ವತಃ ಇಳಿದು ಸ್ವತ್ಛಗೊಳಿಸುತ್ತಾರೆ ಅಥವಾ ಕೂಲಿಯಾಳುಗಳ ಮೂಲಕ ಮಾಡಿಸುತ್ತಾರೆ.

ಅರಿವು ಇಲ್ಲದಿದ್ದರೆ ಅನಾಹುತ
ಹೆಚ್ಚು ಆಳದ ಬಾವಿಗಳಲ್ಲಿ ತಳದಲ್ಲಿ ವಿಷಾನಿಲ ಒಂದೆಯಾಡೆಯಾದರೆ ಇನ್ನೊಂಡೆಡೆ ಆಮ್ಲಜನಕದ ಕೊರತೆ ಇರುತ್ತದೆ. ಬಾವಿಗೆ ಇಳಿದ ಕೂಡಲೇ ಇದರಿಂದ ವ್ಯಕ್ತಿಗೆ ಉಸಿರಾಟದ ತೊಂದರೆ ತಲೆದೋರಿ ಪ್ರಜ್ಞೆ ತಪ್ಪಿ ಅಸ್ವಸ್ಥಕ್ಕೆ ಒಳಗಾಗುತ್ತಾರೆ. ಈ ಸಂದರ್ಭ ಅವರಿಗೆ ತುರ್ತು ಚಿಕಿತ್ಸೆ ಅವಶ್ಯವಿರುತ್ತದೆ. ಅವರನ್ನು ತತ್‌ಕ್ಷಣ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಇಲ್ಲದಿದ್ದರೆ ಸಾವು ಸಂಭವಿಸುವ ಸಾಧ್ಯತೆಗಳು ಅಧಿಕವಾಗಿರುತ್ತವೆ.

ಬಾವಿ ಒಳಗಿರುವ ಮಂದಿ ಅಸ್ವಸ್ಥರಾಗಿ ಪ್ರಜ್ಞಾಹೀನ ಸ್ಥಿತಿಗೆ ಹೋಗುತ್ತಿರುವುದನ್ನು ಕಂಡು ಇವರನ್ನು ರಕ್ಷಿಸಲು ಮೇಲೆ ಇದ್ದವರು ಬಾವಿಗೆ ಇಳಿದು ಬಿಡುತ್ತಾರೆ. ಅವರಿಗೆ ಇದರ ಕಾರಣಗಳು ಗೊತ್ತಿರುವುದಿಲ್ಲ. ಎನೋ ಪ್ರಜ್ಞೆ ತಪ್ಪಿರಬೇಕು ಎಂದು ನೆರವಿಗೆ ಧಾವಿಸುತ್ತಾರೆ. ಪರಿಣಾಮ ಅವರು ಕೂಡ ಅಸ್ವಸ್ಥರಾಗಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತದೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಕೆಸರು ಇದ್ದರೆ ಅದರಲ್ಲಿ ಹೂತುಹೋಗುವ ಸಾಧ್ಯತೆಗಳು ಇದ್ದು ಉಸಿರುಕಟ್ಟಿ ಸಾವು ಸಂಭವಿಸುವ ಪ್ರಮೇಯಗಳೂ ಇವೆ.

ನೆರೆವಿಗೆ ಸಂಪರ್ಕಿಸಿ
ಬಾವಿಗೆ ಇಳಿಯಲು ಮತ್ತು ತುಂಬಿರುವ ಕೆಸರು ತೆಗೆಯಲು ಎಲ್ಲರಿಂದಲೂ ಸಾಧ್ಯವಿಲ್ಲ. ಇದಕ್ಕೆ ಅನುಭವ ಬೇಕು. ಅನುಭವಿಗಳು ಬಾವಿಯ ಸ್ಥಿತಿಗತಿಯನ್ನು ಮೊದಲೇ ಅಂದಾಜಿಸುತ್ತಾರೆ. ಅವರಿಗೆ ಹೆಚ್ಚಿನ ಸಂಬಳವನ್ನು ನೀಡಬೇಕಾಗುತ್ತದೆ. ಪ್ರಸ್ತುತ ಕೂಲಿಯಾಳುಗಳ ಅಭಾವದ ಸಮಯ. ಅನುಭವ ಇಲ್ಲದಿದ್ದರೂ ಹೆಚ್ಚಿನ ಸಂಬಳದ ಆಕರ್ಷಣೆಯಿಂದ ಬಾವಿಗೆ ಇಳಿಯುತ್ತಾರೆ. ಒಂದೊಮ್ಮೆ ಇಂತಹ ಘಟನೆಗಳು ಬಾವಿಯೊಳಗೆ ಅನಾಹುತ ಸಂಭವಿಸಿದರೆ ಮೇಲೆ ಇದ್ದವರು ಕೂಡಲೇ ಬಾವಿಗಿಳಿಯದೆ 101 ನಂಬರ್‌ ಡಯಲ್‌ ಮಾಡಿ ಅಗ್ನಿಶಾಮಕದಳವರಿಗೆ ಮಾಹಿತಿ ಕೊಡಬೇಕು. ಅವರು ಸ್ಥಳಕ್ಕೆ ಧಾವಿಸಿ ರಕ್ಷಣ ಕಾರ್ಯಾಚರಣೆ ನಡೆಸುತ್ತಾರೆ. ಅವರಲ್ಲಿ ಉಸಿರಾಟ ಸಾಧನಗಳಿರುತ್ತವೆ. ಇದಲ್ಲದೆ ಪೈಪ್‌ ಮೂಲಕ ಬಾವಿಯೊಳಗೆ ಆಮ್ಲಜನಕ ಸರಬರಾಜು ಮಾಡುತ್ತಾರೆ. ಜೀವರಕ್ಷಕ ಸಾಧನಗಳ ಮೂಲಕ ಬಾವಿಯೊಳಗೆ ಸಿಲುಕಿದವರನ್ನು ಮೇಲಕ್ಕೆ ತರುತ್ತಾರೆ.

ಬಾವಿಗೆ ಇಳಿಯುವ ಮೊದಲು ಎನು ಮಾಡಬೇಕು
 ಬಾವಿಗೆ ಇಳಿಯುವ ಮೊದಲು ಅದರಲ್ಲಿ ವಿಷಾನಿಲ ಅಥವಾ ಆಮ್ಲಜನಕದ ಕೊರತೆ ಇದೆಯೇ ಎಂಬ ಬಗ್ಗೆ ಪರೀಕ್ಷಿಸಬೇಕು.
 ಬಕೆಟೊಂದರಲ್ಲಿ ದೀಪ ಅಥವಾ ಕ್ಯಾಂಡಲ್‌ ಉರಿಸಿಟ್ಟು ಬಾವಿಗೆ ಇಳಿಸಬೇಕು. ದೀಪ ಆರಿದರೆ ಅಲ್ಲಿ ವಿಷಾನಿಲ ಅಥವಾ ಆಮ್ಲಜನಕದ ಕೊರತೆ ಇದೆ ಎಂದರ್ಥ.
 ವಿಷಾನಿಲ ಅಥವಾ ಆಮ್ಲಜನಕದ ಕೊರತೆ ಇದ್ದರೆ ಬಾವಿಗೆ ಇಳಿಯುವಾಗಲೇ ಇದರ ಮುನ್ಸೂಚನೆ ಕಂಡು ಬರುತ್ತದೆ. ಅರ್ಧಕ್ಕೆ ಹೋಗುವಷ್ಟರಲ್ಲಿ ಕಣ್ಣು ಊರಿ ಹಾಗೂ ಕೈಕಾಲು ನಡುಗಲು ಪ್ರಾರಂಭವಾಗುತ್ತದೆ. ಇಂತಹ ಅನುಭವವಾದರೆ ಮುಂದಕ್ಕೆ ಇಳಿಯಬಾರದು.
 ವಿಷಾನಿಲ ಇದ್ದರೆ ಮೇಲಿನಿಂದ ಬಾವಿಗೆ ನೀರು ಹಾಕಬೇಕು. ಆಗ ವಿಷಾನಿಲಗಳು ಮೇಲಕ್ಕೆ ಬರುತ್ತದೆ. ಮೇಲಿನಿಂದ ಹಸುರು ಎಲೆಗಳಿರುವ ಮರದ ಗೆಲ್ಲುಗಳನ್ನು ಹಾಕಿದರೆ ಆಮ್ಲಜನಕದ ಕೊರತೆ ಸ್ವಲ್ಪಮಟ್ಟಿಗೆ ಪರಿಹಾರವಾಗುತ್ತದೆ ಎಂದು ಅಗ್ನಿಶಾಮಕ ದಳದ ತಜ್ಞರು ತಿಳಿಸುತ್ತಾರೆ.
 ಅಪಾಯಕಾರಿ ಪರಿಸ್ಥಿತಿಯಲ್ಲಿ ಅಗ್ನಿಶಾಮಕ ದಳದ 101 ನಂಬರ್‌ಗೆ ಡಯಲ್‌ ಮಾಡಿ ಮಾಹಿತಿ ನೀಡಬೇಕು.

ಮುಂಜಾಗರೂಕತೆ ವಹಿಸಿ
ಆಳದ ಅಥವಾ ಉಪಯೋ ಗಿಸದ, ಬಹಳಷ್ಟು ವರ್ಷಗಳಿಂದ ಸ್ವತ್ಛಗೊಳಿಸದ ಬಾವಿಗಳಲ್ಲಿ ಆಮ್ಲಜನಕದ ಕೊರತೆ ಅಥವಾ ತ್ಯಾಜ್ಯಗಳು ಕೊಳೆತು ಮಿಥೆನ್‌ ಅನಿಲ ಸಮಸ್ಯೆ ಇರುತ್ತದೆ. ಇವುಗಳಿಗೆ ಇಳಿಯುವಾಗ ಮುಂಜಾಗರೂಕತೆ ವಹಿಸ ಬೇಕು. ಅಮ್ಲಜನಕ ಕೊರತೆ ಅಥವಾ ಮಿಥೆನ್‌ ಅನಿಲ ಇಲ್ಲವೆಂಬುದನ್ನು ಖಾತ್ರಿ ಪಡಿಸಿ ಕೊಂಡು ಅನಂತರ ಬಾವಿಗೆ ಇಳಿಯಬೇಕು. ಇಳಿಯುವಾಗ ಸೊಂಟಕ್ಕೆ ಹಗ್ಗ ಕಟ್ಟಿ ಅದರ ತುದಿಯನ್ನು ಮೇಲೆ ಇರುವವರ ಕೈಯಲ್ಲಿ ಕೊಡಬೇಕು. ಅರ್ಧಕ್ಕೆ ಹೋಗುವಾಗ ಉಸಿರುಕಟ್ಟಿದ ಅನುಭವ ಆದರೆ ಮುಂದಕ್ಕೆ ಹೋಗಬಾರದು.
 - ತಿಪ್ಪೆಸ್ವಾಮಿ, ಮುಖ್ಯ ಅಗ್ನಿಶಾಮಕ ಅಧಿಕಾರಿ ಮಂಗಳೂರು

 ಕೇಶವ ಕುಂದರ್‌

ಟಾಪ್ ನ್ಯೂಸ್

Ambedkar row: Amit Shah gone mad, he should leave politics says Lalu Prasad Yadav

Ambedkar row: ಅಮಿತ್‌ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

INDvAUS: Is captain Rohit Sharma standing against to Shami?; Aussie tour difficult for pacer!

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?;‌ ವೇಗಿಗೆ ಆಸೀಸ್‌ ಪ್ರವಾಸ ಕಷ್ಟ!

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ

Surthkal-Spota

Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ

Traffic-UPI

Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್‌ ದಂಡ ಪಾವತಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Ambedkar row: Amit Shah gone mad, he should leave politics says Lalu Prasad Yadav

Ambedkar row: ಅಮಿತ್‌ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

5

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.