ಪ್ರಜಾಪ್ರಭುತ್ವ ಉಳಿವಿಗಾಗಿ ಈ ಚುನಾವಣೆ
ಎಸ್‌ಡಿಪಿಐ ಪ್ರಚಾರ ಸಭೆಯಲ್ಲಿ ಶಾಫಿ ಬೆಳ್ಳಾರೆ
Team Udayavani, Apr 13, 2019, 6:00 AM IST
ಶಾಫಿ ಬೆಳ್ಳಾರೆ ಮಾತನಾಡಿದರು.
ಸುಳ್ಯ: ಎಸ್‌ಡಿಪಿಐ ದ.ಕ. ಲೋಕಸಭಾ ಅಭ್ಯರ್ಥಿ ಇಲ್ಯಾಸ್ ಮೊಹಮ್ಮದ್ ತುಂಬೆ ಅವರ ಚುನಾವಣಾ ಪ್ರಚಾರ ಸಭೆ, ಮೆರವಣಿಗೆ ಶುಕ್ರವಾರ ನಡೆಯಿತು. ಜ್ಯೋತಿ ಸರ್ಕಲ್‌ನಿಂದ ಗಾಂಧಿನಗರದ ತನಕ ಮೆರವಣಿಗೆ ನಡೆದು ಖಾಸಗಿ ಬಸ್ ನಿಲ್ದಾಣದ ಬಳಿ ಪ್ರಚಾರ ಸಭೆ ನಡೆಯಿತು.
ಎಸ್‌ಡಿಪಿಐ ರಾಜ್ಯ ಮುಖಂಡ ಶಾಫಿ ಬೆಳ್ಳಾರೆ ಮಾತನಾಡಿ, ಈ ಚುನಾವಣೆ ಸಂವಿಧಾನ, ಪ್ರಜಾಪ್ರಭುತ್ವ ಉಳಿವಿನ ಚುನಾವಣೆ. ಜನವಿರೋಧಿ, ಕೋಮುವಾದಿ ಬಿಜೆಪಿ ಪಕ್ಷವನ್ನು ತೊಲಗಿಸಿ ಜನಪರ ಸರಕಾರದ ಸ್ಥಾಪನೆಗಾಗಿ ಎಸ್‌ಡಿಪಿಐ ಅಭ್ಯರ್ಥಿಯ ಗೆಲುವು ಅನಿವಾರ್ಯ ಎಂದರು.
ಜಾತ್ಯತೀತ ಮುಖವಾಡ
ಅಯೋಧ್ಯೆ ಸ್ಥಳದ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಇರುವ ಹೊತ್ತಿನಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲು ಬಿಜೆಪಿ ಹೊರಟಿತ್ತು. ಆ ವೇಳೆ ಜಾತ್ಯತೀತ ಮುಖವಾಡ ಧರಿಸಿದ್ದ ಕಾಂಗ್ರೆಸ್ ಕೂಡ ಬಿಜೆಪಿ ನಡೆಯನ್ನು ಖಂಡಿಸಲಿಲ್ಲ ಎಂದರು.
ಎಸ್‌ಡಿಪಿಐ ನ್ಯಾಯಾಲಯದ ಕಾನೂನು ರಕ್ಷಣೆಗೆ ಸಿದ್ಧವಿರುವುದಾಗಿ ಘೋಷಿಸಿದ ಕಾರಣ ಬಿಜೆಪಿ ಶಿಲಾನ್ಯಾಸದಿಂದ ಹಿಂದೆ ಸರಿದಿತ್ತು ಎಂದು ಹೇಳಿದರು. ಅಭ್ಯರ್ಥಿ ಇಲ್ಯಾಸ್ ಮೊಹಮ್ಮದ್ ತುಂಬೆ ಮಾತನಾಡಿ, ಜಿಲ್ಲೆ ಸಮಗ್ರ ಅಭಿವೃದ್ಧಿಗೆ, ಶಾಂತಿ, ನೆಮ್ಮದಿಗೆ ತನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಎಸ್‌ಡಿಪಿಐ ರಾಷ್ಟ್ರೀಯ ಮುಖಂಡ ಅಬ್ದುಲ್ ಲತೀಫ್ ಪುತ್ತೂರು, ನ್ಯಾಯವಾದಿ ಮಜೀದ್ ಖಾನ್, ಜಿಲ್ಲಾ ಉಪಾಧ್ಯಕ್ಷ ಆನಂದ ಮಿತ್ತಬೈಲು, ಇಕ್ಬಾಲ್, ಇಕ್ಬಾಲ್ ಬೆಳ್ಳಾರೆ, ಮಮ್ಮಾಲಿ ಹಾಜಿ, ಜಾಬಿರ್ ಅರಿಯಡ್ಕ, ಅಬ್ದುಲ್ ಕಲಾಂ ಮೊದಲಾದವರು ಉಪಸ್ಥಿತರಿದ್ದರು. ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ರಫೀಕ್ ಸ್ವಾಗತಿಸಿದರು. ಫೈಜಲ್ ಬೆಳ್ಳಾರೆ ನಿರೂಪಿಸಿದರು.
ಗೆಲ್ಲುವುದಿಲ್ಲವೆಂದು ವಿದೇಶ ಪ್ರವಾಸ!
ಐದು ವರ್ಷ ಕಳೆದರೆ ಮತ್ತೆ ತಾನು ಗೆಲ್ಲುವುದಿಲ್ಲ ಎನ್ನುವುದು ಮೋದಿಗೆ ಖಚಿತವಾದ ಕಾರಣ ವಿದೇಶಗಳಿಗೆ ಸುತ್ತಾಡಿದ್ದಾರೆ ಎಂದು ಟೀಕಿಸಿದ ಶಾಫಿ ಬೆಳ್ಳಾರೆ, ಅಲ್ಪಸಂಖ್ಯಾಕರ, ದಲಿತರನ್ನು ಮೇಲೆ ಹಲ್ಲೆ, ದೌರ್ಜನ್ಯ ನಡೆಸಿದ ಮೋದಿ ಸರಕಾರ ಸಂವಿಧಾನ ವಿರೋಧಿ. ನೀರವ್ ಮೋದಿ, ಮಲ್ಯ ಅವರು ಕೋಟ್ಯಂತರ ರೂ. ವಂಚಿಸಿ ಪರಾರಿಯಾಗಲು ರಕ್ಷಣೆ ನೀಡಿದ್ದೇ ಮೋದಿ ಅವರು ಕಾವಲುದಾರಿಕೆ ಎಂದು ಶಾಫಿ ಬೆಳ್ಳಾರೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.