ಎಲ್ಲಿಗೋ ಪಯಣ.. ಯಾವುದೋ ಈ ದಾರಿ..!
Team Udayavani, Apr 25, 2017, 1:20 PM IST
ಮಹಾನಗರ: ಬೆಂಗಳೂರಿನಿಂದ ಪರಿಚಿತವಿಲ್ಲದೆ ನಗರಕ್ಕೆ ಬಂದ ಕುಟುಂಬವೊಂದು ಕರಾವಳಿ ಪ್ರವಾಸಕ್ಕೆಂದು ತಮ್ಮ ಕಾರಲ್ಲಿ ಮೊದಲ ಬಾರಿಗೆ ಮಂಗಳೂರಿಗೆ ಬಂದಿದ್ದರು. ಬಿ.ಸಿ ರೋಡ್‌ನಿಂದ ರಾ.ಹೆ. 75ರಲ್ಲಿ ಪಡೀಲ್ ಮೂಲಕ ಪಂಪ್‌ವೆಲ್‌ಗೆ ಬಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಹೋಗಬೇಕಿತ್ತು. ಆದರೆ ಪಂಪ್‌ವೆಲ್‌ಗೆ ಬಂದರೆ 4 ಕಡೆಗೆ ಹೋಗುವ ರಸ್ತೆಗಳು. ಎತ್ತ ನೋಡಿದರೂ ನಗರದೊಳಗೆ ಅಥವಾ ಈ ಪ್ರಸಿದ್ಧ ದೇವಸ್ಥಾನಕ್ಕೆ ದಾರಿ ತೋರಿಸುವ ನಾಮಫಲಕಗಳೇ ಇಲ್ಲ. ಕೊನೆಗೆ ರಸ್ತೆಯಲ್ಲೇ ಕಾರು ನಿಲ್ಲಿಸಿ ಅಕ್ಕ-ಪಕ್ಕದವರನ್ನು ಕೇಳಬೇಕಾಯಿತು.
ಮುಂದೆ ಕಂಕನಾಡಿ ದಾರಿಯಿಂದ ಹೋದರೆ, ಮತ್ತೆ ಅದೇ ಗೊಂದಲ. ಜ್ಯೋತಿ ಅಂಬೇಡ್ಕರ್ ಸರ್ಕಲ್‌ನಿಂದ ಮುಂದೆ ಹೇಗೆ ಹೋಗಬೇಕು ಎನ್ನುವುದು ಗೊತ್ತಾಗದೆ ಸಿಗ್ನಲ್‌ನಲ್ಲೇ ಪರದಾಟ, ಹಿಂಬದಿಯಿಂದ ಬರುವ ವಾಹನ ಸವಾರರ ಕರ್ಕಶ ಹಾರನ್, ಬೈಗಳು..! ಅಂತು-ಇಂತು ನಗರವೆಲ್ಲ ಪ್ರದಕ್ಷಿಣೆ ಹಾಕಿ ಕುದ್ರೋಳಿ ದೇವಸ್ಥಾನ ತಲುಪುವಷ್ಟರಲ್ಲಿ ಸಾಕು ಸಾಕಾಗಿತ್ತು . ಇದು ಒಂದು ಕುಟುಂಬದ ಕತೆಯಲ್ಲ; ಮಂಗಳೂರು ನಗರಕ್ಕೆ ಹೊರಗಿನಿಂದ ಬರುವ ಬಹುತೇಕ ಪ್ರವಾಸಿಗರು ಎದುರಿಸುತ್ತಿರುವ ಸಮಸ್ಯೆ. ಬೆಂಗಳೂರು ಹೊರತುಪಡಿಸಿದರೆ, ಕರ್ನಾಟಕದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಂಗಳೂರು ಪ್ರವಾಸೋದ್ಯಮ ತಾಣವೂ ಹೌದು. ಹತ್ತಾರು ಧಾರ್ಮಿಕ ಸ್ಥಳಗಳು, ಬೀಚ್‌ಗಳು-ಹೀಗೆ ಪ್ರತಿ ವರ್ಷವೂ ಸಾವಿರಾರು ಮಂದಿ ಭೇಟಿ ಕೊಡುತ್ತಾರೆ.
ಎಲ್ಲಾ ಕಡೆ ಶೀಘ್ರ ನಾಮಫಲಕ
ಮಂಗಳೂರಿನ ರಸ್ತೆಗಳಲ್ಲಿ ಮಾರ್ಗ ಸೂಚಿ ಫಲಕ ಅಳವಡಿಸ ದಿರುವುದು ನನ್ನ ಗಮನಕ್ಕೂ ಬಂದಿದೆ. ಪ್ರವಾಸಿಗರಿಗೆ, ವಾಹನ ಸವಾರರಿಗೆ ಇದೊಂದು ದೊಡ್ಡ ಸಮಸ್ಯೆ.ನಗರದ ಎಲ್ಲ 60 ವಾರ್ಡ್‌ಗಳ ಎಲ್ಲಾ ಒಳ ರಸ್ತೆಗಳಿಗೆ ಸಣ್ಣ ಸಣ್ಣ ನಾಮಫಲಕ ಅಳವಡಿಸಲು ಆಗುವ ಅಂದಾಜು ವೆಚ್ಚದ ಬಗ್ಗೆ ಆಯುಕ್ತರಿಂದ ವಿವರ ಕೇಳಲಾಗಿದೆ. ನಗರದ ಮುಖ್ಯ ಭಾಗದಲ್ಲಿ ಅಗತ್ಯವಿರುವ ಸೂಚನಾ ಫಲಕದ ಕುರಿತಂತೆ ಮುಂದಿನ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವ ಮಂಡಿಸಿ ಕ್ರಮ ಕೈಗೊಳ್ಳಲಾಗುವುದು.
-ಕವಿತಾ ಸನಿಲ್, ಮೇಯರ್ ಮಂಗಳೂರು
ರೋಡ್ ಮ್ಯಾಪ್ ಕಡ್ಡಾಯ ವಾಗಿ ಬೇಕು
ಹಿಂದೆ ಮಂಗಳೂರಿನ ಕೆಲವು ಸ್ಥಳಗಳನ್ನು ಉಲ್ಲೇಖೀಸುವ ಫಲಕಗಳು ಅಲ್ಲಲ್ಲಿ ಸಿಮೆಂಟ್‌ನಿಂದ ಬರೆಸಲಾಗಿತ್ತು. ಬಳಿಕ ಅದು ಏನೇನೋ ಆಗಿ ಈಗ ಅದಕ್ಕೆ ಬಣ್ಣವೂ ಇಲ್ಲವಾಗಿದೆ. ವಿಶೇಷವಾಗಿ ಮಂಗಳೂರಿಗೆ ಬರುವ ಪ್ರವಾಸಿಗರಿಗೆ ನಿಗದಿತ ಪ್ರಮುಖ ಸ್ಥಳಗಳಿಗೆ ಹೋಗಬೇಕಾದ ಸ್ಥಳಗಳ ರೋಡ್ ಮ್ಯಾಪ್ ಸುಲಭವಾಗಿ ಸಿಗುವ ಸೂಚನಾ ಫಲಕ ಅಳವಡಿಸಬೇಕು.
-ಹನುಮಂತ ಕಾಮತ್, ಸಾಮಾಜಿಕ ಹೋರಾಟಗಾರರು
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ
Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ಮಂದಿಗೆ ಗಾಯ
ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…
Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್ ಕುಮಾರ್ ರೈ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.