ಈ ಬಾರಿಯೂ ಕರಾವಳಿಯಲ್ಲಿ ಮಳೆ ಕೊರತೆ
Team Udayavani, Sep 7, 2017, 9:40 AM IST
ಮಂಗಳೂರು: ಕರಾವಳಿಯಲ್ಲಿ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಹವಾಮಾನ ಇಲಾಖೆಯ ಅಂಕಿ-ಅಂಶ ಪ್ರಕಾರ ವಾಡಿಕೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಶೇ. 25ರಷ್ಟು ಮಳೆ ಕೊರತೆ ಇದೆ. ಉಡುಪಿ ಜಿಲ್ಲೆಯಲ್ಲೂ ಶೇ. 10ರಷ್ಟು ಮಳೆ ಕೊರತೆ ಇದ್ದು, ಒಟ್ಟಾರೆ ಕರಾವಳಿ ಪ್ರದೇಶದಲ್ಲಿ ಶೇ. 19ರಷ್ಟು ಮಳೆ ಕೊರತೆ ಎದ್ದು ಕಾಣುತ್ತಿದೆ.
ಜೂನ್ ತಿಂಗಳಿನಿಂದ ಆಗಸ್ಟ್ ತಿಂಗಳವರೆಗೆ ವಾಡಿಕೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3,116 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಇಲ್ಲಿಯವರೆಗೆ ದಾಖಲಾದದ್ದು ಕೇವಲ 2,387 ಮಿ.ಮೀ. ಮಾತ್ರ. ಕಳೆದ ವರ್ಷ 3,351 ಮಿ.ಮೀ. ಮಳೆ ಬೀಳಬೇಕಿತ್ತು. ಆದರೆ ದಾಖಲಾಗಿರುವುದು 2,550 ಮಿ.ಮೀ. ಮಾತ್ರ. ಇದುವರೆಗಿನ ಅಂಕಿ – ಅಂಶ ಪ್ರಕಾರ ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ ಜೂನ್ ತಿಂಗಳಿನಿಂದ ಆಗಸ್ಟ್ ತಿಂಗಳ ವರೆಗೆ ಕಳೆದ ವರ್ಷಕ್ಕಿಂತ ಈ ವರ್ಷ ಮಳೆ ಕಡಿಮೆಯಾಗಿದೆ. ಕಳೆದ ವರ್ಷ 3,405 ಮಿ.ಮೀ. ಮಳೆಯಾಗಿತ್ತು. ಆದರೆ ಈ ವರ್ಷ ದಾಖಲಾದದ್ದು 2,627 ಮಿ.ಮೀ. ಮಾತ್ರ. ಆದರೆ ವಾಡಿಕೆ ಮಳೆಗಿಂತ ಸ್ವಲ್ಪ ಜಾಸ್ತಿ ಮಳೆಯಾಗಿದೆ. ವಾಡಿಕೆಯಂತೆ 2,401 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 3,405 ಮಿ.ಮೀ. ಮಳೆಯಾಗಿರುವುದು ತುಸು ಸಂತಸ ಮೂಡಿಸಿದೆ.
ಮಳೆ ಕೊರತೆಗೇನು ಕಾರಣ?
ಈ ಬಾರಿ ರಾಜ್ಯದಲ್ಲಿಯೇ ಮಳೆಯ ಪರಿಣಾಮ ಕಡಿಮೆ ಯಾಗಿದೆ. ರಾಜ್ಯದಲ್ಲಿ ಆಗಸ್ಟ್ ತಿಂಗಳಿನಲ್ಲಿ ದಾಖಲಾದ ಮಳೆಯಲ್ಲಿ ಶೇ.40ರಷ್ಟು ಕೊರತೆ ಉಂಟಾಗಿದೆ. ಸಮುದ್ರದಲ್ಲಿನ ಹವಾಮಾನ ಬದಲಾವಣೆಯಾದಾಗ ತೇವಾಂಶದ ಮೋಡ ಹೆಚ್ಚಾಗಿ ಮಳೆಯಾಗುತ್ತದೆ. ಆದರೆ ಈ ಬಾರಿ ಇಂತಹ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಇದರಿಂದಾಗಿ ಮೋಡಗಳು ಉತ್ತರದ ಭಾಗಕ್ಕೆ ಹೋದವು. ಯಾವಾಗಲೂ ಪಶ್ಚಿಮದಿಂದ ಪೂರ್ವಕ್ಕೆ ಮೋಡಗಳು ಹೋದಾಗ ಮಳೆಯ ಪ್ರಮಾಣ ಹೆಚ್ಚಾಗುತ್ತದೆ.
ಇನ್ನು ದೊಡ್ಡ ಮಳೆಯಾಗೋದು ಸಂಶಯ
ಹವಾಮಾನ ಇಲಾಖೆಯೇ ಹೇಳುವ ಪ್ರಕಾರ ಕರಾವಳಿ ಪ್ರದೇಶದಲ್ಲಿನ್ನು ದೊಡ್ಡ ಮಟ್ಟಿನ ಮಳೆಯಾಗುವುದು ಸಂಶಯ. ಸಾಮಾನ್ಯವಾಗಿ ಈ ಭಾಗದಲ್ಲಿ ಬೀಳುವ ಶೇ. 80ರಷ್ಟು ಮಳೆ ಈಗಾಗಲೇ ಬಿದ್ದಿದೆ. ಹೆಚ್ಚಾಗಿ ಜೂನ್, ಜುಲೈ, ಆಗಸ್ಟ್ ತಿಂಗಳಿನಲ್ಲಿ ಮಳೆಯಾಗುತ್ತದೆ. ಮುಂದಿನ ತಿಂಗಳುಗಳಲ್ಲಿ ಮಳೆಯ ಪ್ರಮಾಣ ಇಳಿಮುಖವಾಗುತ್ತದೆ.
ತೋಟಕ್ಕೆ ಸಾಕು; ಭತ್ತಕ್ಕೆ ಸಾಕಾಗದು
ಕರಾವಳಿಯಲ್ಲಿ ಮಳೆಯ ಪರಿಣಾಮ ಕಡಿಮೆಯಾದರೂ ಇಲ್ಲಿ ಬೆಳೆಯುವ ತೋಟಗಾರಿಕಾ ಬೆಳೆಗಳಿಗೆ ಇದು ಪೂರಕವೇ ಆಗಿದೆ. ಆಗಾಗ ಕೆಲವು ದಿನಗಳ ವಿಶ್ರಾಂತಿ ಬಳಿಕ ಮಳೆ ಸುರಿದಿರುವುದರಿಂದ ಕೊಳೆರೋಗದಂತಹ ಸಮಸ್ಯೆ ಕಡಿಮೆಯಾಗಿದೆ. ಇನ್ನು ನವೆಂಬರ್-ಡಿಸೆಂಬರ್ ವೇಳೆ ಒಮ್ಮೆ ಜೋರಾಗಿ ಮಳೆ ಬಂದರೆ ಬೇಸಗೆ ಕಾಲದವರೆಗೂ ನೀರು ಸಾಕಾಗಬಹುದು. ಆದರೆ ಭತ್ತದ ಬೆಳೆಗೆ ಮಾತ್ರ ಇನ್ನೂ ಒಂದು ತಿಂಗಳ ಮಳೆ ಬೇಕು. ಸಾಧಾರಣವಾಗಿ ಸುರಿದರೂ ಭತ್ತ ಕೃಷಿಕರು ನಿಟ್ಟುಸಿರು ಬಿಡಲು ಸಾಧ್ಯ. ಇಲ್ಲವಾದರೆ ಒಣಗಿ ಫಸಲು ಬಾರದಿರುವ ಸಾಧ್ಯತೆ ಇದೆ.
ಕರಾವಳಿ ಪ್ರದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಮಾನ್ಸೂನ್ ದುರ್ಬಲವಾದ ಕಾರಣ ಮಳೆ ಪ್ರಮಾಣದಲ್ಲಿ ಇಳಿಮುಖ ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಮಳೆ ಬರುವುದು ಸಂಶಯ.
ಡಾ| ಜಿ.ಎಸ್. ಶ್ರೀನಿವಾಸ ರೆಡ್ಡಿ, ಕೆಎಸ್‌ಎನ್‌ಡಿಎಂಸಿ ನಿರ್ದೇಶಕ
ಮಳೆ ಪ್ರಮಾಣದಲ್ಲಿ ಕಡಿಮೆ ಇದ್ದರೂ ಕರಾವಳಿಯಲ್ಲಿ ಬೆಳೆಯುವ ಬೆಳೆಗಳಿಗೆ ಯಾವುದೇ ರೀತಿಯ ಹಾನಿಯಾಗದು. ಮಳೆ ಪ್ರಮಾಣ ಕಡಿಮೆ ಇದೆ. ಅಡಿಕೆ ಬೆಳೆಯಲ್ಲಿನ ಕೊಳೆ ರೋಗ ಕಡಿಮೆಯಾಗಿದೆ.
ಎಚ್.ಆರ್. ನಾಯಕ್, ತೋಟಗಾರಿಕಾ ಇಲಾಖೆ ಉಪನಿರ್ದೇಶಕ
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.