ತೊಡಿಕಾನ: ಅಂಗನವಾಡಿ ಕಟ್ಟಡ ಕಾಮಗಾರಿ ಸ್ಥಗಿತ
Team Udayavani, Dec 30, 2018, 4:31 AM IST
ಅರಂತೋಡು: ತೊಡಿಕಾನ ಗ್ರಾಮದ ಶಾಲಾ ಬಳಿಯ ಅಂಗನವಾಡಿ ಕಟ್ಟಡ ಕಾಮಗಾರಿ ಸ್ಥಗಿತಗೊಂಡು ಎರಡು ವರ್ಷ ಗಳೇ ಕಳೆದಿದ್ದು, ಮಕ್ಕಳು ಇನ್ನೂ ಶಿಥಿಲ ಗೊಂಡಿರುವ ಹಳೆಯ ಕಟ್ಟಡದಲ್ಲೇ ಕಾಲ ಕಳೆಯುವಂತಾಗಿದೆ.
2015ನೇ ಇಸವಿಯ ಜನವರಿ ತಿಂಗಳಿನಲ್ಲಿ ನೂತನ ಅಂಗವಾಡಿ ಕಟ್ಟಡಕ್ಕೆ ಹಳೆಯ ಅಂಗವಾಡಿ ಕಟ್ಟಡದ ಪಕ್ಕದಲ್ಲಿಯೇ ಗುದ್ದಲಿ ಪೂಜೆ ನೆರವೇರಿಸಿ ಇಲಾಖೆಯ 4.18 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.
ಸ್ಲ್ಯಾಬ್ ಕೆಲಸ ಪೂರ್ಣಗೊಂಡು ಗೋಡೆಯ ಗಾರೆ ಕೆಲಸವನ್ನೂ ಮುಗಿಸಲಾಗಿದೆ. ಶೌಚಾಲಯ, ಅಡುಗೆ ಕೊಠಡಿ, ಕಿಟಕಿ, ಬಾಗಿಲು, ವಿದ್ಯುತ್ ಸಂಪರ್ಕಕ್ಕೆ ವೈರಿಂಗ್, ಆರ್‌ಸಿಸಿ ಮೇಲ್ಭಾಗ ಅಂಚುಗಳಲ್ಲಿ ಮಳೆ ನೀರು ಹರಿದು ಹೋಗಲು ಪೈಪ್‌ಗ್ಳ ವ್ಯವಸ್ಥೆ ಮಾಡಿಲ್ಲ. ಮಳೆ ಬರುವಾಗ ನೀರು ಚೆಲ್ಲಾಪಿಲ್ಲಿಯಾಗಿ ಬೀಳುತ್ತದೆ. ಒಳಗಿನ ಕೋಣೆಗಳಲ್ಲಿ ಕೆಲವು ಕಡೆಗಳಲ್ಲಿ ಟೈಲ್ಸ್ ಅಳವಡಿಸಲು ಬಾಕಿ ಉಳಿದಿದೆ. ಇತರ ಕೆಲಸಗಳೂ ಬಾಕಿ ಇವೆ.
ಶಿಥಿಲಗೊಂಡ ಕಟ್ಟಡ
ತೊಡಿಕಾನ ಅಂಗವಾಡಿ ಹಳೆಯ ಕಟ್ಟಡ ಶಿಥಿಲಗೊಂಡಿದ್ದು, ಅಂಗನವಾಡಿಗೆ ಬರುವ 23 ಮಕ್ಕಳು ಇದರಲ್ಲಿಯೇ ಕಾಲ ಕಳೆಯುವಂತಾಗಿದೆ. ಅಂಗವಾಡಿಗೆ ಸ್ವಂತ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪಕ್ಕದ ಪ್ರಾಥಮಿಕ ಶಾಲೆಯ ನೀರನ್ನು ಉಪಯೋಗಿಸುತ್ತಿದ್ದು, ಪ್ರಾಥಮಿಕ ಶಾಲೆಗೆ ಪ್ರತಿ ತಿಂಗಳು ಬರುವ ವಿದ್ಯುತ್ ಬಿಲ್‌ನ ಮೂರನೇ ಒಂದು ಭಾಗವನ್ನು ಮಕ್ಕಳ ಹೆತ್ತವರಿಂದಲೇ ಸಂಗ್ರಹಿಸಿ ಪಾವತಿಸಲಾಗುತ್ತಿದೆ. ಹೊಸ ಕಟ್ಟಡದ ನಿರ್ಮಾಣ ಸ್ಥಗಿತಗೊಂಡಿದೆ, ಹಳೆಯ ಕಟ್ಟಡವನ್ನಾದರೂ ದುರಸ್ತಿ ಮಾಡಲು ಅನುದಾನ ಕೊಡಿ ಎಂದು ಗ್ರಾ.ಪಂ.ಗೆ ಬೇಡಿಕೆ ಸಲ್ಲಿಸಲಾಗಿದೆ. ಆದರೆ, ದುರಸ್ತಿಗೂ ಅನುದಾನ ಬಂದಿಲ್ಲ, ಹೊಸ ಕಟ್ಟಡವೂ ಪೂರ್ಣಗೊಳ್ಳದೆ ಮಕ್ಕಳು ಶಿಥಿಲ ಕಟ್ಟಡದಲ್ಲೇ ಅಭದ್ರತೆಯಲ್ಲಿ ಕಾಲ ನೂಕಬೇಕಾಗಿದೆ.
ಅನುದಾನದ ಕೊರತೆ
ತೊಡಿಕಾನ ಅಂಗವಾಡಿ ಕಾಮಗಾರಿ ಸ್ಥಗಿತಗೊಂಡಿರುವುದು ನಿಜ. ಇದಕ್ಕೆ ಅನುದಾನದ ಕೊರತೆ ಎದುರಾಗಿದೆ. ಅನುದಾನ ಒದಗಿಸಿ ಕೊಡಬೇಕೆಂದು ಶಾಸಕರಿಗೆ ನಾವು ಲಿಖಿತವಾಗಿ ಮನವಿ ಮಾಡಿಕೊಂಡಿದ್ದೇವೆ. ಶಾಸಕರು ಅನುದಾನ ಒದಗಿಸುವ ನಿರೀಕ್ಷೆಯಿದೆ.
– ಸರಸ್ವತಿ,
ಸಿಡಿಪಿಒ, ಸುಳ್ಯ
50 ಸಾವಿರ ರೂ. ಅನುದಾನ
ಅರಂತೋಡು ಗ್ರಾ.ಪಂ. ವತಿಯಿಂದ ಅಂಗವಾಡಿ ನೂತನ ಕಟ್ಟಡಕ್ಕೆ 50 ಸಾವಿರ ರೂ. ಅನುದಾನ ಇರಿಸಲಾಗಿದೆ. ಅಂಗನವಾಡಿಯಲ್ಲಿ ಮುಖ್ಯವಾಗಿ ಬಾಕಿ ಉಳಿದಿರುವ ಕೆಲಸ ಕಿಟಕಿ ಬಾಗಿಲುಗಳದ್ದು ಮಾತ್ರ. ಪಂಚಾಯತ್ ವತಿಯಿಂದ ಇದಕ್ಕಿಂತ ಹೆಚ್ಚು ಅನುದಾನ ನೀಡಲು ಅಸಾಧ್ಯ.
– ಜಯಪ್ರಕಾಶ್ ಪಿ.ಡಿ.ಒ.
ಅರಂತೋಡು ಗ್ರಾ.ಪಂ.
ತೇಜೇಶ್ವರ್ ಕುಂದಲ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.