ತೊಡಿಕಾನ: ಮೀನಿಗೆ ಖುಷಿ ತಂದ ಮಳೆ
Team Udayavani, Apr 19, 2018, 6:20 AM IST
ಬೆಳ್ಳಾರೆ: ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದಲ್ಲಿ ನಾಲ್ಕೈದು ದಿನಗಳಿಂದ ಮಳೆ ಸುರಿದಿದ್ದು, ಈ ಬಾರಿ ತೊಡಿಕಾನ ಜಾತ್ರೆ ಸಂಭ್ರಮದಲ್ಲಿ ಭಕ್ತರಿಗೆ ದೇವರ ಮೀನುಗಳನ್ನು ನೋಡಿ, ಅವುಗಳಿಗೆ ಅಹಾರ ಹಾಕುವ ಅವಕಾಶ ಲಭ್ಯವಾಗಲಿದೆ.
ಸುಳ್ಯದ ಸೀಮೆ ದೇವಾಲಯವಾದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲ ಯಕ್ಕೆ ಒಳಪಟ್ಟ ಮತ್ಸ್ಯತೀರ್ಥ ಹೊಳೆಯಲ್ಲಿ ಸಾವಿರಾರು ದೇವರ ಮೀನುಗಳಿವೆ. ಮಹಾವಿಷ್ಣು ಮತ್ಸ್ಯರೂಪ ತಾಳಿದ ಸ್ಥಳ ಇದಾಗಿದ್ದು, ಹರಕೆ ಹೇಳಿಕೊಂಡು ಮೀನುಗಳಿಗೆ ಆಹಾರ ಹಾಕಿದರೆ ಚರ್ಮ ರೋಗ ವಾಸಿಯಾಗುತ್ತದೆ ಎಂದು ನಂಬಿಕೆ ಸೀಮೆಯ ಭಕ್ತರ ಲ್ಲಿದೆ. ಇದರಿಂದ ನೂರಾರು ಭಕ್ತರು ಹರಕೆ ಹೊತ್ತು ಮೀನು ಗಳಿಗೆ ಆಹಾರ ಹಾಕುತ್ತಾರೆ.
ತೊಡಿಕಾನ ಮಲ್ಲಿಕಾರ್ಜುನ ದೇವರ ಜಾತ್ರೆ ಎ. 13ರಿಂದ ಆರಂಭಗೊಂಡಿದ್ದು, ಎ. 20ರ ತನಕ ವಿವಿಧ ಸಾಂಸ್ಕೃತಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಜಾತ್ರೆ ಸಮಯದಲ್ಲಿ ಮತ್ಸ್ಯತೀರ್ಥ ಹೊಳೆಯಲ್ಲಿ ನೀರಿನ ಕೊರತೆಯಾಗಿ ದೇವರ ಮೀನುಗಳು ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದವು. ಮೀನುಗಳಿಗೆ ಆಹಾರ ಹಾಕಲು ಭಕ್ತರಿಗೂ ಅವಕಾಶ ನೀಡುತ್ತಿರಲಿಲ್ಲ. ಹರಕೆ ರೂಪದಲ್ಲಿ ಬಂದ ಆಹಾರವನ್ನು ದೇವಸ್ಥಾನದಲ್ಲೇ ಸಂಗ್ರಹ ಮಾಡಿಕೊಂಡು, ಹೊಳೆಯಲ್ಲಿ ನೀರಿನ ಪ್ರಮಾಣ ಜಾಸ್ತಿಯಾದ ಮೇಲೆ ಸಿಬಂದಿಯೇ ನಿಗದಿತ ಪ್ರಮಾಣದಲ್ಲಿ ನೀಡುತ್ತಿದ್ದರು. ಈ ಬಾರಿ ಜಾತ್ರೆ ಸಂದರ್ಭ ಭಕ್ತರೇ ಮೀನುಗಳಿಗೆ ಆಹಾರ ಹಾಕುವ ಅವಕಾಶ ಸಿಗಲಿದೆ.
ಮೀನುಗಳಿಗೆ ನೀರಿನ ಕೊರತೆಯಾದಾಗ ಸುಮಾರು ಎರಡು ಕಿ.ಮೀ.ಗೂ ದೂರದಿಂದ ಪೈಪ್ ಅಳವಡಿಸಿ ನೀರು ಸಂಗ್ರಹ ಮಾಡಿ ದೇವರ ಮೀನಿನ ಹೊಳೆಗೆ ಹಾಯಿಸಲಾಗುತ್ತಿದೆ. ಇದರಿಂದ ಮೀನುಗಳು ಒಂದಷ್ಟು ಖುಷಿಯಿಂದ ನೀರಿನ ಮೇಲೆ ಚೆಲ್ಲಾಟವಾಡುತ್ತ ಇರುತ್ತವೆ. ತಾಪ ಮಾನ ಜಾಸ್ತಿಯಿದ್ದಾಗ ಈ ನೀರಿನ ಪ್ರಮಾಣ ಸಾಕಾವುದಿಲ್ಲ. ಇಂತಹ ಸಂದರ್ಭದಲ್ಲಿ ಮೀನುಗಳಿಗೆ ಅಪಾಯ ಎದುರಾಗುತ್ತದೆ. ಈ ಬಾರೀ ಹಾಗಿಲ್ಲ. ನಾಲ್ಕೆçದು ಮಳೆ ಬಂದ ಹಿನ್ನೆಲೆಯಲ್ಲಿ ಮೀನುಗಳು ಹಾಯಾಗಿ ಅತ್ತಿತ್ತ ಓಡಾಡುತ್ತಿವೆ.
ಸಾಕಷ್ಟು ನೀರಿದೆ
ಮೀನುಗಳಿಗೆ ಈ ಬಾರಿ ನೀರಿನ ಕೊರತೆಯಾಗಿಲ್ಲ. ನಾಲ್ಕು ಇಂಚು ನೀರನ್ನು ದೂರದ ದೇವರ ಗುಂಡಿ ಸಮೀಪದಿಂದ ಪೈಪ್ ಮೂಲಕ ತಂದು ಮೀನ ಗುಂಡಿಗೆ ಬಿಡಲಾಗುತ್ತಿದೆ. ಮಳೆ ಸುರಿದ ಹಿನ್ನೆಲೆಯಲ್ಲಿ ಮೀನಗುಂಡಿಯಲ್ಲಿ ಸಾಕಷ್ಟು ನೀರು ತುಂಬಿ ಹರಿದು ಹೋಗುತ್ತಿದೆ.
- ಆನಂದ ಕಲ್ಲಗದ್ದೆ,
ದೇವಸ್ಥಾನದ ವ್ಯವಸ್ಥಾಪಕರು
ಮೀನು ನೋಡುವುದೇ ಖುಷಿ
ತೊಡಿಕಾನ ದೇವರ ಮೀನುಗಳನ್ನು ನೋಡುವಾಗ ತುಂಬಾ ಖುಷಿಯಾಗುತ್ತದೆ.ಇವುಗಳು ತುಂಬಾ ಸುಂದರವಾಗಿವೆ.
ಮೀನುಗಳಿಗೆ ನೀರಿನ ಕೊರತೆಯಾಗದ ಹಾಗೆ ಶಾಶ್ವತ ವ್ಯವಸ್ಥೆ ಮಾಡಬೇಕಾಗಿದೆ.
– ಚರಣ್ ಕ್ಷೇತ್ರದ ಭಕ್ತ
ವಿಶೇಷ ವರದಿ-
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhairathi Ranagal: ಭೈರತಿಗೆ ಸ್ಯಾಂಡಲ್‌ವುಡ್ ಆರತಿ
Bengaluru: ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್ ಬಂಧನ
Theft Case: ಕದ್ದ ಚಿನ್ನ ಜ್ಯುವೆಲ್ಲರಿಗೆ ಮಾರುವಾಗ ಸಿಕ್ಕಿಬಿದ್ದ!
Arrested: ಫಾರೆಸ್ಟ್ ಗಾರ್ಡ್ ಹುದ್ದೆ ತೊರೆದು ಕಳ್ಳತನಕ್ಕಿಳಿದವ ಸೆರೆ
Supreme Court: ಆರೋಪಿ, ಅಪರಾಧಿ ಮನೆಯನ್ನು ಏಕಾಏಕಿ ನೆಲಸಮ ಮಾಡುವಂತಿಲ್ಲ: ಸುಪ್ರೀಂ ತೀರ್ಪು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.