ತೊಕ್ಕೊಟ್ಟು : ವಾಹನ ಸೀಝ್ ಪೊಲೀಸ್ – ಸವಾರರ ಮಧ್ಯೆ ವಾಗ್ವಾದ
Team Udayavani, Apr 13, 2020, 2:42 PM IST
ಉಳ್ಳಾಲ : ತೊಕ್ಕೊಟ್ಟುವಿನಿಂದ ಉಳ್ಳಾಲದತ್ತ ಅನಾವಶ್ಯಕವಾಗಿ ತಿರುಗಾಡುತ್ತಿದ್ದ ವಾಹನಗಳನ್ನು ಸೀಝ್ ಮಾಡುತ್ತಿದ್ದ ಉಳ್ಳಾಲ ಪೊಲೀಸರ ಮತ್ತು ಸಾರ್ವಜನಿಕರ ನಡುವೆ ತೀವ್ರ ವಾಗ್ವಾದ ನಡೆದ ಪ್ರಸಂಗ ಇಂದು ನಡೆದಿದೆ.
ದಿನಬಳಕೆ ವಸ್ತುಗಳ ಖರೀದಿಗಾಗಿ ಲಾಕ್‍ಡೌನ್ ಸಡಿಲಿಕೆ ಮಾಡಿರುವುದನ್ನೇ ದುರುಪಯೋಗಪಡಿಸಿಕೊಂಡವರು ಯಥೇಚ್ಛವಾಗಿ ವಾಹನಗಳಲ್ಲಿ ಸುತ್ತಾಡುತ್ತಿದ್ದರು. ಅದಕ್ಕಾಗಿ ತೊಕ್ಕೊಟ್ಟುವಿನಿಂದ ಉಳ್ಳಾಲಕ್ಕೆ ತೆರಳುವ ರಸ್ತೆಗೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿ , ಪರಿಶೀಲನೆ ನಡೆಸಿಯೇ ವಾಹನಗಳನ್ನು ಬಿಡುತ್ತಿದ್ದರು. ಇಂದು ಬೆಳಿಗ್ಗೆ ಕೆಲ ವಾಹನಗಳು ಅನಾವಶ್ಯವಾಗಿ ತಿರುಗಾಡುತ್ತಿತ್ತು. ಇದೇ ವೇಳೆ ಮಹಿಳೆಯೊಬ್ಬರೂ ಸಂಚರಿಸುತ್ತಿದ್ದರು. ಉಳ್ಳಾಲ ಪೊಲೀಸರು ತಡೆದು ಪ್ರಶ್ನಿಸಿ ಕೆಲ ವಾಹನಗಳನ್ನು ಸೀಝ್ ನಡೆಸಲು ಆರಂಭಿಸಿದ್ದರು. ಇದರಿಂದ ಸ್ಥಳದಲ್ಲಿ ಅಧಿಕ ಜನಜಂಗುಳಿ ಜಮಾಯಿಸಿ, ಸಾಮಾಜಿಕ ಅಂತರವನ್ನು ಕಾಪಾಡದೆ ಪೊಲೀಸರ ಮಧ್ಯೆ ವಾಗ್ವಾದಕ್ಕೆ ಇಳಿದಿದ್ದಾರೆ. ದಿನಬಳಕೆ ವಸ್ತುಗಳ ಖರೀದಿಗಾಗಿ ತೆರಳುವವರ ವಿರುದ್ಧ ಪೊಲೀಸರ ಕ್ರಮದ ವಿರುದ್ಧ ಸಾರ್ವಜನಿಕರು ವಾಗ್ವಾದ ನಡೆಸಿದರೆ, ಪೊಲೀಸರು ತಮ್ಮ ಕ್ರಮವನ್ನು ಸಮರ್ಥಿಸಿದ ಹಿನ್ನೆಲೆಯಲ್ಲಿ 15 ನಿಮಿಷಗಳ ಕಾಲ ವಾಗ್ವಾದ ಮುಂದುವರಿಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಶಾಲಾ ವಾಹನ ಸುರಕ್ಷತೆ; ಪಾಲಕರಿಗೆ ಚಿಂತೆ
ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ
Pakshikere Case: ಚಿನ್ನಾಭರಣ ಕಳೆದುಕೊಂಡವರಿಂದ ಪೊಲೀಸರಿಗೆ ದೂರು
Mangaluru: ಕಾಲೇಜಿನಲ್ಲಿ ಕುಸಿದು ಬಿದ್ದಿದ್ದ ಉಪನ್ಯಾಸಕಿ ಸಾ*ವು
Mangaluru: ಯಾವುದೇ ರಾಜ್ಯಕ್ಕೂ ಕೇಂದ್ರ ಮಲತಾಯಿ ಧೋರಣೆ ಮಾಡಿಲ್ಲ: ನಿರ್ಮಲಾ ಸೀತಾರಾಮನ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.