ತೋಕೂರು: ಕುಡಿಯುವ ನೀರು ನಿರ್ವಹಣೆಗೆ ಹೊಸ ಹೆಸರು


Team Udayavani, Apr 5, 2018, 6:00 AM IST

27.jpg

ತೋಕೂರು: ನಗರ ಬದಿಗಿಡಿ; ಇಂದು ಕರಾವಳಿಯ ಗ್ರಾಮೀಣ ಭಾಗಗಳಲ್ಲಿ ಕೂಡ ಶುದ್ಧ ಕುಡಿಯುವ ನೀರಿನ ಸಮಸ್ಯೆ ಫೆಬ್ರವರಿ ಹೊತ್ತಿಗೆ ಕಂಡುಬರುತ್ತದೆ. ಆದರೆ ಪಡು ಪಣಂಬೂರು ಗ್ರಾ. ಪಂ. ವ್ಯಾಪ್ತಿಯ ತೋಕೂರು ಗ್ರಾಮದಲ್ಲಿ ವಿಶ್ವಬ್ಯಾಂಕ್‌ ಯೋಜನೆಯೊಂದು ಕಳೆದ 20 ವರ್ಷಗಳಿಂದ ಕುಡಿಯುವ ನೀರು ಸರಬರಾಜನ್ನು ಯಾವುದೇ ಸರಕಾರಿ ಸಂಸ್ಥೆಗಳ ನೆರವು ಇಲ್ಲದೆ ಸಮರ್ಥ ಮತ್ತು ಸ್ವತಂತ್ರವಾಗಿ ನಿರ್ವಹಿಸುತ್ತಿರುವುದು ಎದ್ದು ಕಾಣುತ್ತಿದೆ.

ತೋಕೂರು ವಿಶ್ವಬ್ಯಾಂಕ್‌ ಯೋಜನೆ: 1996-97ರಲ್ಲಿ ರಾಷ್ಟ್ರೀಯ ಕೈಗಾರಿಕಾ ವಿಶ್ಲೇಷಣೆಯ ಅನ್ವಯ ಸರ್ವೆ ನಡೆಸಿ ಮುಂದಿನ 20 ವರ್ಷಗಳಿಗೆ ಕುಡಿಯುವ ನೀರು ಪೂರೈಕೆಯ ದೃಷ್ಟಿಯಿಂದ ವಿಶೇಷ ಯೋಜನೆ ರೂಪಿಸಲಾಗಿತ್ತು. ಗ್ರಾಮೀಣ ಭಾಗದಲ್ಲಿ ವಿಶ್ವ ಬ್ಯಾಂಕ್‌ ನೆರವಿನ ಸಮಗ್ರ ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ಪರಿಸರ ನೈರ್ಮಲ್ಯ ಯೋಜನೆ ಜಾರಿಯಾಗಿತ್ತು. ಇದ ಕ್ಕಾಗಿ ಗ್ರಾಮಸ್ಥರ ಪಾಲು ಬಂಡವಾಳದಿಂದ ಮನೆ ಮನೆಗೆ ನೀರು ಸರಬರಾಜು ಎಂಬ ಹೊಸ ಪರಿಕಲ್ಪನೆ ಹುಟ್ಟಿಕೊಂಡಿತ್ತು.

ಇದರ ಆಧಾರದಲ್ಲಿ ಪಡುಪಣಂಬೂರು ಗ್ರಾ.ಪಂ.ನ ತೋಕೂರಿನಲ್ಲಿ ಕ್ಲಸ್ಟರ್‌ 1 ಮತ್ತು ಕ್ಲಸ್ಟರ್‌ 2 ಎಂಬ ಎರಡು ವಿಭಾಗಗಳುಳ್ಳ ತೋಕೂರು ಸಮಿತಿ ರಚಿಸಿ ಗ್ರಾಮಸ್ಥರ 25,000 ರೂ. ಪಾಲು ಬಂಡವಾಳ ಸಹಿತವಾದ 17 ಲಕ್ಷ ರೂ. ವೆಚ್ಚದ ಯೋಜನೆ ರೂಪುಗೊಂಡಿತು. ಎರಡು ಟ್ಯಾಂಕ್‌ಗಳು, ಪೈಪ್‌ಲೈನ್‌, ಪಂಪ್‌ಹೌಸ್‌, ಸರಬರಾಜು ಕೊಳವೆ ಗಳು, ಕೊಳವೆ ಬಾವಿಗಳು ಯೋಜನೆ ಯಲ್ಲಿ ಸೇರಿದ್ದು, ಇದನ್ನು ಸಂಪೂರ್ಣ ವಾಗಿ ಮಣಿಪಾಲ ಎಂಐಟಿಯ ತಾಂತ್ರಿಕ
ಸಲಹೆ ಅನುಸಾರ ಜಾರಿಗೊಳಿಸಲಾ ಯಿತು. ಯೋಜನೆ ನಿರ್ವಹಣೆ, ಲಾಭ, ನಷ್ಟ ಎಲ್ಲವೂ ಸಮಿತಿಯ ಹೊಣೆಗಾರಿಕೆ ಎಂಬ ಶರತ್ತು ವಿಧಿಸಲಾಗಿತ್ತು.

ಪಾರದರ್ಶಕ ನಿರ್ವಹಣೆ
ಯೋಜನೆ ಜಾರಿ ಬಳಿಕ ತೋಕೂರು 1ನೇ ಕ್ಲಸ್ಟರ್‌ ಸಮಿತಿಯು ವ್ಯವಸ್ಥಿತವಾಗಿ ಕಾರ್ಯೋನ್ಮುಖವಾಗಿದೆ. ಪ್ರತೀ ವರ್ಷ ಲೆಕ್ಕ ಪರಿಶೋಧಕರ ಮೂಲಕ ಲೆಕ್ಕ ಪರಿಶೋಧನೆ ನಡೆಸಲಾಗುತ್ತದೆ, ಗ್ರಾಹಕರ ಸಮ್ಮುಖದಲ್ಲಿ ವಾರ್ಷಿಕ ಮಹಾಸಭೆ ನಡೆಸಿ ಸಂಪೂರ್ಣ ವಿಚಾರ ವಿನಿಮಯ ಮಾಡಲಾಗುತ್ತದೆ. ಸಮಿತಿಯನ್ನು ಪುನಾರಚಿಸಿಕೊಂಡು ಎಲ್ಲರಿಗೂ ಸಮಾನವಾಗಿ ಅವಕಾಶ ನೀಡಲಾಗುತ್ತಿದೆ. ಎರಡು ವರ್ಷಗಳಿ ಗೊಮ್ಮೆ ತಪ್ಪದೆ ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ನೀರಿನ ಗುಣಮಟ್ಟದ ಪರೀಕ್ಷೆ ನಡೆಸುತ್ತಿದೆ. ತಿಂಗಳಿಗೆ ಅಂದಾಜು 19 ಲಕ್ಷ ಲೀ. ನೀರು ಸರಬರಾಜು ನಡೆಯುತ್ತಿದ್ದು, ಸಮಸ್ಯೆ ಬಂದ ತತ್‌ಕ್ಷಣ ಪರಿಹಾರ ಕಂಡು ಕೊಳ್ಳುವ ಸಾಮರ್ಥ್ಯ ಸಮಿತಿಗೆ ಇದೆ.

ರಾಷ್ಟ್ರ ಮಟ್ಟದಲ್ಲಿ ಮನ್ನಣೆ
ಗ್ರಾಮದ ಯೋಜನಾ ನಿರ್ವಹಣೆ ಇಂದು ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಕೊಂಡಿದೆ. ಶಿವಮೊಗ್ಗದ ಹೊಂಬುಜ ಮಠದಲ್ಲಿ ನಡೆದ ರಾಜ್ಯ ಮಟ್ಟದ ನೀರು ನಿರ್ವಹಣೆ ಹಾಗೂ ಭವಿಷ್ಯ ತ್ತಿನ ಯೋಚನೆ ಎಂಬ ವಿಚಾರ ಸಂಕಿರಣದಲ್ಲಿ ಗ್ರಾಮದ ಯೋಜನಾನುಷ್ಠಾನ ಗಮನ ಸೆಳೆದಿತ್ತು. ಅನಂತರ ಬೆಂಗಳೂರಿನಲ್ಲಿ 2011ರಲ್ಲಿ ನಡೆದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಈ ಬಗ್ಗೆ ವಿಸ್ತಾರವಾಗಿ ತಿಳಿಸಲು ಅವಕಾಶ ನೀಡಲಾಗಿತ್ತು. ಇದರಿಂದ ಆಕರ್ಷಿತರಾದ ವಿಶ್ವಬ್ಯಾಂಕ್‌ ನೆರವಿನ ಏಷ್ಯಾ ಪ್ರಮುಖರಾದ ಕ್ರಿಸ್ಟ್‌ ಅವರು ತೋಕೂರಿಗೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದರು. 

ನೀರಿನ ಒಳ ಹರಿವಿನ ಚಿಂತನೆ
ಯೋಜನೆಯನ್ನು ಭವಿಷ್ಯದಲ್ಲೂ ಭದ್ರವಾಗಿರಿಸಬೇಕು ಎಂಬ ದೂರ ದೃಷ್ಟಿಯಿಂದ ಈಗ ನೀರು ಒದಗಿಸು ತ್ತಿರುವ ಕೊಳವೆ ಬಾವಿಗಳಿಗೆ ಜಲ ಮರುಪೂರಣಗೊಳಿಸಲು ಎರಡು ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಒಂದು ಅಣೆಕಟ್ಟು ಸುಮಾರು 4.5 ಲಕ್ಷ ರೂ. ವೆಚ್ಚದಲ್ಲಿ ನರೇಗಾ ಮೂಲಕ ನಿರ್ಮಾಣವಾದರೆ, ಇನ್ನೊಂದನ್ನು ಸ್ಥಳೀಯವಾಗಿ ಸಮಿತಿಗೆ ಆಸರೆಯಾಗಿರುವ ತೋಕೂರು ಯುವಕ ಸಂಘದ ಸುವರ್ಣ ಮಹೋ ತ್ಸವ ನೆನಪಿಗಾಗಿ ನಿರ್ಮಿಸಲಾಗಿದೆ.

ಪ್ರತೀ ತಿಂಗಳ ನಿರ್ವಹಣೆ
ಗ್ರಾಮದಲ್ಲಿ ನೀರಿನ ಸಂಪರ್ಕ ಬೇಕಾದವರು 2 ಸಾವಿರ ರೂ. ಠೇವಣಿ ಇರಿಸಬೇಕು, ಪ್ರತೀ ತಿಂಗಳು 75 ರೂ. ಶುಲ್ಕ ವಿಧಿಸಿ 15 ಸಾವಿರ ಲೀ. ನೀರು ಒದಗಿಸಲಾಗುತ್ತದೆ. ಹೆಚ್ಚುವರಿ ನೀರು ಬೇಕಾದರೆ ಪ್ರತ್ಯೇಕ ದರವಿದೆ. ನೀರು ಟ್ಯಾಂಕಿಗೆ ತುಂಬಿಸಲು 7.5 ಎಚ್‌.ಪಿ. ಪಂಪ್‌ ಇದೆ. ಸಮಿತಿಗೆ 12 ಸಾವಿರ ರೂ. ಮೆಸ್ಕಾಂ ಬಿಲ್‌, ನಿರ್ವಹಣೆ, ಪಂಪ್‌ ಆಪರೇಟರ್‌ ವೇತನ, ಬಿಲ್‌ ಕಲೆಕ್ಟರ್‌ ವೇತನ ಮತ್ತು ಇತರ ವೆಚ್ಚಗಳು ಸೇರಿ ಪ್ರತೀ ತಿಂಗಳು 18 ಸಾವಿರ ರೂ. ಖರ್ಚಾಗುತ್ತದೆ. ಈಗಿರುವ 175 ಮನೆಗಳ ಸಂಪರ್ಕದಿಂದ ಪ್ರತೀ ತಿಂಗಳು ಸುಮಾರು 23 ಸಾವಿರ ರೂ. ಸಂಗ್ರಹವಾಗುತ್ತಿದೆ. ಸಮಗ್ರ ನಿರ್ವಹಣೆಯನ್ನು ಸಂಪೂರ್ಣವಾಗಿ ಕಂಪ್ಯೂಟರೀಕರಣಗೊಳಿಸಲಾಗಿದೆ.

ಪ್ರತಿ ತಿಂಗಳ ನಿರ್ವಹಣೆ
ಗ್ರಾಮದಲ್ಲಿ  ನೀರಿನ ಸಂಪರ್ಕ ಬೇಕಾದವರು 2 ಸಾವಿರ ರೂ. ಠೇವಣಿ ಇರಿಸಬೇಕು. ಪ್ರತಿ ತಿಂಗಳು 75 ರೂ. ಶುಲ್ಕ ವಿಧಿಸಿ 15 ಸಾವಿರ ಲೀ. ನೀರು ಒದಗಿಸಲಾಗುತ್ತದೆ. ಹೆಚ್ಚುವರಿ ನೀರು ಬೇಕಾದರೆ ಪ್ರತ್ಯೇಕ ದರವಿದೆ. ನೀರು ಟ್ಯಾಂಕಿಗೆ ತುಂಬಿಸಲು 7.5 ಎಚ್‌.ಪಿ. ಸಾಮರ್ಥ್ಯದ ಪಂಪ್‌ ಇದೆ. ಸಮಿತಿಗೆ 12 ಸಾವಿರ ರೂ. ಮೆಸ್ಕಾಂ ಬಿಲ್‌, ಪಂಪ್‌ ಆಪರೇಟರ್‌ ವೇತನ, ಇತರ ವೆಚ್ಚಗಳ  ಸಹಿತ ತಿಂಗಳಿಗೆ 18 ಸಾವಿರ ಖರ್ಚಾಗುತ್ತದೆ. ಈಗಿರುವ 175 ಮನೆಗಳ ಸಂಪರ್ಕದಿಂದ ಪ್ರತಿ ತಿಂಗಳು ಸುಮಾರು 23 ಸಾವಿರ ರೂ. ಸಂಗ್ರಹ ವಾಗುತ್ತಿದೆ. ಎಲ್ಲವನ್ನೂ ಕಂಪ್ಯೂಟರೀಕರ ಣಗೊಳಿಸಲಾಗಿದೆ.

ಪಾರದರ್ಶಕತೆಯೇ ನಮ್ಮ ವಿಶ್ವಾಸ
ನೀರು ಪಡೆಯುವ ಗ್ರಾಹಕರ ಬೇಡಿಕೆಗೆ ಸ್ಪಂದಿಸುವುದರಿಂದ ನಮ್ಮ ಸಮಿತಿ ಪಾರದರ್ಶಕತೆಯ ವಿಶ್ವಾಸ ಹೊಂದಿದೆ. ಯೋಜನೆ ಗಳು ಭವಿಷ್ಯದಲ್ಲಿಯೂ ಭದ್ರವಾಗಿ ರಬೇಕಾದರೆ ಪ್ರತಿಯೊಬ್ಬನ ಇಚ್ಛಾ ಶಕ್ತಿ ಮುಖ್ಯ. ಬೇರೆ ಬೇರೆ ಕಡೆಗಳಲ್ಲಿ ಕಾಣುತ್ತಿರುವ ನೀರಿನ ಅಭಾವಕ್ಕೆ ನಾವೇ ಹೊಣೆಗಾರರಾಗಿದ್ದೇವೆ. ಈ ಬಗ್ಗೆ ಸಮಗ್ರ ಚಿಂತನೆ ನಡೆಸುವ ಅಗತ್ಯವಿದೆ.
ಟಿ.ಜಿ. ಭಂಡಾರಿ ಸಮಿತಿಯ ಕೋಶಾಧಿಕಾರಿ

ನರೇಂದ್ರ ಕೆರೆಕಾಡು

ಟಾಪ್ ನ್ಯೂಸ್

Kottigehara: ಮೇಯಲು ಬಿಟ್ಟ ಹಸುವಿನ ಮೇಲೆ ಹುಲಿ ದಾಳಿ… ಅನಾಥವಾದ ಕರು

Kottigehara: ಮೇಯಲು ಬಿಟ್ಟ ಹಸುವಿನ ಮೇಲೆ ಹುಲಿ ದಾಳಿ… ಅನಾಥವಾದ ಕರು

ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್..‌ ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ

ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್..‌ ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ

ಮುಂದಿನ ಅವಧಿಗೆ ನಾನೇ ಸಿಎಂ ಅಭ್ಯರ್ಥಿ: ಸತೀಶ್ ಜಾರಕಿಹೊಳಿ

Karnataka Politics: ಮುಂದಿನ ಅವಧಿಗೆ ‘ನಾನೇ ಸಿಎಂ ಅಭ್ಯರ್ಥಿ’: ಸತೀಶ್ ಜಾರಕಿಹೊಳಿ

Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್‌; ದಶಕದ ಬಳಿಕ ಕನ್ನಡಕ್ಕೆ

Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್‌; ದಶಕದ ಬಳಿಕ ಕನ್ನಡಕ್ಕೆ

Auction: ಬರೋಬ್ಬರಿ 11 ಕೋಟಿ ರೂ.ಗೆ ಹರಾಜಾದ 276 ಕೆಜಿ ತೂಕದ ಮೀನು…

Auction: ಬರೋಬ್ಬರಿ 11 ಕೋಟಿ ರೂ.ಗೆ ಹರಾಜಾದ 276 ಕೆಜಿ ತೂಕದ ಮೀನು…

1

Yakshagana:ಆಗ ರಂಗದಲ್ಲಿ ಸ್ತ್ರೀಯಾಗುತ್ತಿದ್ದ ಬೆರಳೆಣಿಕೆ ಕಲಾವಿದರಿಗೆ ಸುಗ್ಗಿ..ಈಗ ಹಾಗಲ್ಲ

Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್‌ ಪ್ರಸಾದ್‌ ಸಿನಿಮಾ

Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್‌ ಪ್ರಸಾದ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Bajpe: ಗುರುಪುರ ಪೇಟೆಯ ಹಲವೆಡೆ ಕಳವು

police crime

Crime-follow up;ಇ.ಡಿ. ಅಧಿಕಾರಿಗಳಂತೆ ನಟಿಸಿ 30 ಲ.ರೂ. ದರೋಡೆ: 4 ತಂಡಗಳಿಂದ ತನಿಖೆ

1-yash

Mangaluru: ದಿಢೀರ್‌ ಆಗಿ ಕಾಣಿಸಿಕೊಂಡ ನಟ ಯಶ್‌

1-aaaa

ಬಡ ದಂಪತಿಗೆ ಮಾಜಿ ಮೇಯರ್‌ ಸುಧೀರ್‌ ಶೆಟ್ಟಿ ನಿರ್ಮಿಸಿಕೊಟ್ಟ 12 ಲ.ರೂ. ಮನೆಯ ಗೃಹ ಪ್ರವೇಶ

arrested

Mangaluru; ನಕಲಿ ಆಧಾರ್, ದಾಖಲೆ ಸೃಷ್ಟಿಸಿಕೊಡುತ್ತಿದ್ದ ಆರೋಪಿ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kottigehara: ಮೇಯಲು ಬಿಟ್ಟ ಹಸುವಿನ ಮೇಲೆ ಹುಲಿ ದಾಳಿ… ಅನಾಥವಾದ ಕರು

Kottigehara: ಮೇಯಲು ಬಿಟ್ಟ ಹಸುವಿನ ಮೇಲೆ ಹುಲಿ ದಾಳಿ… ಅನಾಥವಾದ ಕರು

4

Uppinangady: ಪ್ರವಾಸಿ ಮಂದಿರ ಜಾಗದಲ್ಲಿ ಬಸ್‌ ನಿಲ್ದಾಣ?

3

Kadaba: ಮರ್ದಾಳ ಜಂಕ್ಷನ್‌; ಸ್ಪೀಡ್‌ ಬ್ರೇಕರ್‌ ಅಳವಡಿಕೆ

ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್..‌ ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ

ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್..‌ ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ

2

Bantwal: ಬಿ.ಸಿ.ರೋಡ್‌ ಸರ್ಕಲ್‌ ಅಡ್ಡಾದಿಡ್ಡಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.