Delhi Tulusiri; ಸ್ವಂತಿಕೆಯನ್ನು ಉಳಿಸಿಕೊಂಡು ಬದುಕುವವರು ತುಳುವರು: ಸದಾನಂದ ಗೌಡ
Team Udayavani, Aug 22, 2023, 9:35 PM IST
ಮಹಾನಗರ: ಎಲ್ಲಿ ಹೋದರೂ ಸ್ವಂತಿಕೆಯನ್ನು ಉಳಿಸಿಕೊಂಡು ಬದುಕುವವರು ತುಳುವರು. ಹಾಗಾಗಿಯೇ ನಮ್ಮ ಭಾಷೆ, ಆಚಾರ -ವಿಚಾರಗಳು ಬದಲಾಗದೇ ಮೂಲ ಸಂಸ್ಕೃತಿಯಲ್ಲಿಯೇ ಸಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ಅವರು ಲೋಧಿ ಎಸ್ಟೇಟ್, ಹೊಸದಿಲ್ಲಿಯ ದಿಲ್ಲಿ ಕನ್ನಡ ಶಾಲೆಯ ಹೊರಾಂಗಣದಲ್ಲಿ ಇತ್ತೀಚೆಗೆ ದಿಲ್ಲಿ ತುಳುಸಿರಿ ಅದ್ದೂರಿಯಾಗಿ ಆಯೋಜಿಸಿದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ತುಳುನಾಡು ಇಡೀ ದೇಶದಲ್ಲಿ ವಿಶಿಷ್ಟ ಸಂಸ್ಕೃತಿ, ಸಂಸ್ಕಾರ ಹೊಂದಿರುವಂತಹ ಪ್ರದೇಶ. ಕಷ್ಟದ ತಿಂಗಳಾಗಿದ್ದ ಆಟಿಯಲ್ಲಿ ಕೆಲಸಕ್ಕೆ ಹೋಗಲಾರದೆ ಸಿಗುವಂತಹ ಹಲಸಿನ ಬೀಜ, ಹುಣಸೆ ಬೀಜ, ಗೇರು ಬೀಜ ಮುಂತಾದವುಗಳನ್ನು ಒಟ್ಟು ಮಾಡಿ ಹಸಿvಜಿಗಾಗಿ ತಿನ್ನುತ್ತಿದ್ದೆವು ಎಂದು ತಮ್ಮ ಬಾಲ್ಯದ ದಿನದ ನೆನಪುಗಳನ್ನು ಹಂಚಿಕೊಂಡರು.
ಕೇಂದ್ರ ಸರಕಾರದ ನೀರಾವರಿ ಆಯೋಗದ ಹಿರಿಯ ಅಧಿಕಾರಿ ಮೂಲತಃ ಮಂಗಳೂರಿನ ಕುಳಾಯಿಯವರಾದ ಭಾಗೀರಥಿ ಅವರು ಹೊರಾಂಗಣದಲ್ಲಿ ಸಿದ್ಧವಾದ ಒಲೆಯ ಮೇಲಿದ್ದ ಕುದಿಯುವ ನೀರಿಗೆ ಕುಚ್ಚಲಕ್ಕಿಯನ್ನು ಹಾಕುವ ಮೂಲಕ ಸಾಂಪ್ರಾದಾಯಿಕ ಶೈಲಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ತುಳುವರ ಬದುಕಿನಲ್ಲಿ ಹಿಂದೆ ಆಟಿ ತಿಂಗಳು ಬಹಳ ಕಷ್ಟದ ದಿನಗಳಾಗಿದ್ದವು. ಕೃಷಿಯ ಚಟುವಟಿಕೆಗಳಿಲ್ಲದೆ ಮನೆಯ ಅಡುಗೆ ಕೋಣೆಯಲ್ಲಿ ಒಲೆಯನ್ನು ಉರಿಸುವುದು ಕಷ್ಟವಾಗಿತ್ತು. ಇಂದು ನಾವು ನಮ್ಮ ಹಿರಿಯರ ದುಡಿಮೆಯಿಂದ ಸಮೃದ್ಧಿಯ ಜೀವನವನ್ನು ನಡೆಸುತ್ತಿದ್ದೇವೆ ಎಂದರು.
ಮಖ್ಯ ಅತಿಥಿ ಜೆಎನ್‌ಯುವಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ| ರಮೇಶ್ ಸಾಲ್ಯಾನ್ ಮಾತನಾಡಿ, ತುಳುನಾಡಿನ ಪ್ರತಿಯೊಂದು ಆಚರಣೆಗಳಲ್ಲಿ ವೈಜ್ಞಾನಿಕ ಕಾರಣವಿದ್ದು, ಆಹಾರ – ತಿನಿಸುಗಳಲ್ಲಿ ಆರೋಗ್ಯ ಗುಟ್ಟು ಅಡಗಿದೆ ಎಂದರು.
ದಿಲ್ಲಿ ತುಳುಸಿರಿಯ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಮಾತನಾಡಿ, ತುಳುನಾಡಿನ ಕಲೆ, ಜಾನಪದ, ಆಹಾರ ಪದ್ದತಿ ವಿಶಿಷ್ಟವಾದುದು. ದಿಲ್ಲಿಯಲ್ಲಿದ್ದರೂ ನಮ್ಮ ಮಣ್ಣಿನ ಗುಣ, ಋಣವನ್ನು ಮರೆಯುವಂತಿಲ್ಲ. ದಿಲ್ಲಿ ತುಳುಸಿರಿಯು ತುಳು ಭಾಷೆ, ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಸತತವಾಗಿ ಆಯೋಜಿಸುತ್ತಾ ಬರುತ್ತಿದೆ ಎಂದರು.
ಕಾರ್ಯಕ್ರಮದ ಅನಂತರ ಮನೆಯಲ್ಲಿ ತಯಾರಿಸಿದ ಆಟಿ ಮಾಸದ 36 ಬಗೆಯ ವಿಶೇಷ ಖಾದ್ಯಗಳನ್ನು ಸುಮಾರು ಇನ್ನೂರಕ್ಕು ಹೆಚ್ಚು ತುಳು ಬಾಂಧವರು ಸವಿದರು. ಡಾ| ಸಾಯಿ ಪ್ರಶಾಂತಿ ಶೆಟ್ಟಿ, ಪ್ರಶಾಂತ ಶೆಟ್ಟಿ ಅವರು ಕಿರಿಯ – ಹಿರಿಯ ವಿಭಾಗದ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ತುಳು ಜನಪದ ಪಂದ್ಯಾಟಗಳನ್ನು ನಡೆಸಿಕೊಟ್ಟರು.
ಶುಭಾ ದೇವಿಪ್ರಸಾದ್, ಪೂಜಾ ರಾವ್, ಸವಿತಾ, ಸವಿತಾ ನೆಲ್ಲಿ, ಮಾಲಿ ಪ್ರಹ್ಲಾದ್, ಅರವಿಂದ ಬಿಜೈ, ಸುನೀತಾ ಬಿಜೈ ತುಳು ಜನಪದ ಹಾಡುಗಳನ್ನು, ನಾಗರಾಜ ಎಂ. ತುಳು ಗಾದೆಗಳನ್ನು ಪ್ರಸ್ತುತ ಪಡಿಸಿದರು. ಪ್ರಕಾಶ್ ಶೆಟ್ಟಿ ಉಳ್ಳೆಪಾಡಿ ಸ್ವಾಗತಿಸಿ, ಆಟಿ ತಿಂಗಳ ಮಹತ್ವದ ಬಗ್ಗೆ ವಿವರಿಸಿದರು. ದಿಲ್ಲಿ ತುಳುಸಿರಿ ಕಾರ್ಯದರ್ಶಿ ಶ್ರೀಹರಿ ವಂದಿಸಿದರು. ಜತೆ ಕಾರ್ಯದರ್ಶಿ ಅರವಿಂದ ಬಿಜೈ ನಿರೂಪಿಸಿದರು. ದಿಲ್ಲಿ ತುಳುಸಿರಿಯ ಪದಾಧಿಕಾರಿಗಳಾದ ಪ್ರದೀಪ್ ರಾವ್, ಮೆಲ್ವಿನ್, ಕಾರ್ತಿಕ್ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Assam; ಚಹಾರ್ ಜಿಲ್ಲೆ 4 ಗ್ರಾಮ ಬಾಲ್ಯ ವಿವಾಹ ಮುಕ್ತ: ಸಿಎಂ ಹಿಮಾಂತ್
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
Mumbai-Nagpur ಹೆದ್ದಾರಿಯಲ್ಲಿ ಏಕಕಾಲದಲ್ಲಿ 50 ವಾಹನಗಳ ಟಯರ್ ಪಂಕ್ಚರ್
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.