ತಮ್ಮದೇ ಮತ ವಂಚಿತರಿವರು !


Team Udayavani, Mar 30, 2018, 12:48 PM IST

30-March-11.jpg

ಸುಳ್ಯ: ತಿಂಗಳುಗಟ್ಟಲೇ ಹೈಕಮಾಂಡ್‌ ಮನವೊಲಿಸಿ ಟಿಕೆಟೇನೋ ಸಿಕ್ಕಿತ್ತು. ಬಿಸಿಲ ಬೇಗೆಯ ಸಹಿಸುತ್ತ ದಿನಗಟ್ಟಲೆ ಸುತ್ತಾಡಿ ಮತದಾರರ ಮನವೊಲಿಸಿದ್ದೂ ಆಯಿತು. ಆದರೇನಂತೆ ತಾವು ಸ್ಪರ್ಧಿಸುವ ಕ್ಷೇತ್ರದಲ್ಲೇ ಇವರಿಗೆ ಮತ ಚಲಾಯಿಸಲು ಅವಕಾಶವಿಲ್ಲ. ತಮ್ಮದೇ ಮತ ವಂಚಿತರಿವರು !

ಇದು ಒಂದಿಬ್ಬರ ಕಥೆಯಲ್ಲ. ಹಲವು ಅಭ್ಯರ್ಥಿಗಳದು ಇದೇ ಪಾಡು…! ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಶಕುಂತಳಾ ಟಿ. ಶೆಟ್ಟಿ ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಡಾ| ಬಿ. ರಘು ಸ್ಪರ್ಧಿಸಿದ್ದರು. ವಿಶೇಷ ಅಂದರೆ ಆ ಚುನಾವಣೆಯಲ್ಲಿ ಅವರಿಗೆ ತಮ್ಮ ಮತವನ್ನು ತಮಗೇ ಹಾಕಿಕೊಳ್ಳುವ ಭಾಗ್ಯ ಲಭಿಸಿಲ್ಲ. ಕಾರಣ ಅವರು ತಾವು ಸ್ಪರ್ಧಿಸಿದ ಕ್ಷೇತ್ರದಲ್ಲಿ ಮತದಾರರಲ್ಲ.

ಪುತ್ತೂರು ಕ್ಷೇತ್ರದ ಅಭ್ಯರ್ಥಿಯಾಗಿದ್ದ ಶಕುಂತಳಾ ಟಿ. ಶೆಟ್ಟಿ ಅವರು ಸುಳ್ಯ ವಿಧಾನ ಸಭಾ ಕ್ಷೇತ್ರದ ಆಲಂಕಾರಿನ ಕುಂತೂರುಪದವು ಮತಗಟ್ಟೆಯಲ್ಲಿ ಮತದಾನ ಮಾಡುವ ಹಕ್ಕು ಹೊಂದಿದ್ದರೆ, ಸುಳ್ಯ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಡಾ| ರಘು ಅವರು ಪುತ್ತೂರು ವಿಧಾನಸಭಾ ಕ್ಷೇತ್ರದ ನೆಕ್ಕಿಲಾಡಿ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡುವ ಹಕ್ಕು ಹೊಂದಿದ್ದರು. ಹಾಗಾಗಿ ಇವರಿಬ್ಬರೂ ತಾವು ಸ್ಪರ್ಧಿಸಿದ ಕ್ಷೇತ್ರ ಬಿಟ್ಟು, ಮತದಾನದ ಹಕ್ಕು ಇರುವ ವ್ಯಾಪ್ತಿಯ ಕ್ಷೇತ್ರದ ಅಭ್ಯರ್ಥಿಗೆ ಮತ ಚಲಾಯಿಸಿದ್ದರು. ಹಾಗಾಗಿ ಅವರ ಮತ ಅವರಿಗೆ ಹಾಕುವ ಅವಕಾಶ ಸಿಗಲಿಲ್ಲ.

ಶಕುಂತಳಾ ಟಿ. ಶೆಟ್ಟಿ ಅವರು ಮೂರು ಬಾರಿ ಹಾಗೂ ಡಾ| ಬಿ. ರಘು ಅವರು ಮೂರು ಬಾರಿ ಪುತ್ತೂರು, ಸುಳ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಮತ ಹಾಕುವ ಅವಕಾಶ ಮೂರು ಬಾರಿಯೂ ಇರಲಿಲ್ಲ. ನಾಲ್ಕನೇ ಬಾರಿ ಸ್ಪರ್ಧಿಸುವ ಉಮೇದಿನಲ್ಲಿ ಇರುವ ಇವರಿಬ್ಬರಿಗೆ ನಾಲ್ಕನೇ ಬಾರಿಯೂ ಮತ ಹಾಕಿಕೊಳ್ಳುವ ಅವಕಾಶ ದೊರೆಯುವುದಿಲ್ಲ.

ಉಳಿದಂತೆ ಕಳೆದ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ನಿಂದ ಸ್ಪರ್ಧಿಸಿದ ಸುಳ್ಯ ತಾಲೂಕಿನ ದಿನೇಶ್‌ ಬಿ.ಎನ್‌., ಸುಳ್ಯ ಕ್ಷೇತ್ರದಿಂದ ಎಸ್‌ಡಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಪುತ್ತೂರಿನ ಕುರಿಯ ನಿವಾಸಿ ಕೂಸಪ್ಪ ಅವರು ಕೂಡ ಸ್ಪರ್ಧಾ ಕ್ಷೇತ್ರದಲ್ಲಿ ಮತದಾನ ಮಾಡುವ ಅವಕಾಶ ಹೊಂದಿರಲಿಲ್ಲ. ಅವರಿಬ್ಬರು ಹಕ್ಕು ಚಲಾಯಿಸುವ ಮತಗಟ್ಟೆ ಹೊಂದಿರುವ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸದೇ ಇರುವುದು ಇದಕ್ಕೆ ಕಾರಣವಾಗಿತ್ತು.

ಶಕು ಅಕ್ಕ ಮಂಗಳೂರಿನ ಮತದಾರೆ!
2018ರ ಚುನಾವಣಾ ಕದನ ಕಣದಲ್ಲಿ ಶಕುಂತಳಾ ಟಿ. ಶೆಟ್ಟಿ ಅವರು ಪುತ್ತೂರು ಕ್ಷೇತ್ರದಿಂದ ಮತ್ತು ಡಾ| ರಘು ಅವರು ಸುಳ್ಯ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಗಳಾಗಿದ್ದು, ಟಿಕೇಟ್‌ ಸಿಕ್ಕರೆ ಈ ಬಾರಿಯೂ ತಮ್ಮ ಮತವನ್ನು ತಮಗೇ ಹಾಕಿಕೊಳ್ಳುವಂತಿಲ್ಲ. ಶಕುಂತಳಾ ಟಿ. ಶೆಟ್ಟಿ ಅವರು ಸುಳ್ಯ ವಿಧಾನಸಭಾ ಕ್ಷೇತ್ರದ ಕುಂತೂರಿನ ಜಾಗ ಮಾರಾಟ ಮಾಡಿ ಮಂಗಳೂರು ಕ್ಷೇತ್ರ (ಉಳ್ಳಾಲ)ದ ವ್ಯಾಪ್ತಿಯ ನಿವಾಸಿ ಆಗಿದ್ದಾರೆ. ಹಾಗಾಗಿ ಈ ಚುನಾವಣೆಯಲ್ಲಿ ಅವರು ಮಂಗಳೂರು ವಿಧಾನಸಭಾ ಕ್ಷೇತ್ರ (ಉಳ್ಳಾಲ)ದಿಂದ ಸ್ಪರ್ಧಿಸುವ ಅಭ್ಯರ್ಥಿಗೆ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.

ಡಾ| ರಘು ಅವರು ಕಳೆದ ಬಾರಿಯಂತೆ ಈ ಬಾರಿಯೂ ಪುತ್ತೂರು ಕ್ಷೇತ್ರದ ಅಭ್ಯರ್ಥಿಗೆ ಮತ ಚಲಾಯಿಸಲಿದ್ದಾರೆ. ಅವರ ಮತಗಟ್ಟೆ ಕ್ಷೇತ್ರ ಬದಲಾಗಿಲ್ಲ.

ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Horoscope

Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ

GM-Pancha

Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ

KH-Muniyappa

Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ

siddanna-2

Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು

BJP FLAG

BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?

1-USAA

America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Horoscope

Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ

GM-Pancha

Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ

KH-Muniyappa

Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

8

ಗಂಭೀರ್‌ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್‌ ಪೇನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.