ವಿಶ್ವ ಜಿಗೀಷದ್‌ ಯಾಗದ ಚಿಂತನ ಮಂಥನ

Team Udayavani, Apr 12, 2018, 10:14 AM IST

12-April-2.jpg

ಪಾವಂಜೆ: ಯಾಗ ಹೊಸತೇನಲ್ಲ, ಕಲ್ಪನೆಯಿಂದ ಮೂಡಿ ಬಂದದ್ದೂ ಅಲ್ಲ, ಯುಗ ಯುಗಾಂತರದ ಐತಿಹ್ಯವಿದೆ, ಯುಗ ಯುಗಗಳ ಸಂಬಂಧವಿದೆ. ಕೃತಯುಗದಲ್ಲಿ ಮರೀಚ ಮಹರ್ಷಿಗಳು ಇದನ್ನು ಅನ್ವೇಷಿಸಿ, ಪರಿಷ್ಕರಿಸಿ ಲೋಕಮುಖಕ್ಕೆ ನೀಡಿದರು ಎಂದು ಚಿಕ್ಕಮಗಳೂರಿನ ವೇದ ಕೃಷಿಕ ಕೆ.ಎಸ್‌. ನಿತ್ಯಾನಂದ ಹೇಳಿದರು.

ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ವಿಶ್ವ ಜಿಗೀಷದ್‌ ಯಾಗದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಯಾಗದ ಬಗ್ಗೆ ಅವರು ವಿಶೇಷ ಮಾಹಿತಿ ನೀಡಿದರು. ಯಾಗವನ್ನು ಹೈಹಯ ಮಹಾರಾಜ ಮೊದಲು ಮಾಡಿದನು. ಯಾಗ ಪ್ರಕ್ರಿಯೆಯಲ್ಲಿ ಹಲವಾರು ದೋಷಗಳು ನುಸುಳಿದ ಕಾರಣ ಸಂಕಲ್ಪ ಸಿದ್ಧಿಸಲಿಲ್ಲ, ಯಾಗಾನುಷ್ಠಾನದ ಫಲ ಅವನಿಗೆ ಪ್ರಾಪ್ತವಾಗದೇ ಅವನ ಮಗನಾದ ಕೃತವೀರ್ಯನಿಗೆ ಪ್ರಾಪ್ತವಾಯಿತು. ಅವನ ಮಗನೇ ಲೋಕ ಪ್ರಸಿದ್ಧನಾದ ಕಾರ್ತವೀರ್ಯ, ತ್ರೇತೆಯಲ್ಲಿ ವಿಜಿಗೀಷು ಚಕ್ರವರ್ತಿಯು ಈ ಯಾಗವನ್ನು ಕೈಗೊಂಡರು. ಅವನ ಮೊಮ್ಮಗ ಅಜ, ಅಜನ ಮಗ ದಶರಥ, ದಶರಥನ ಮಗನೇ ಶ್ರೀರಾಮನಿಂದ ಯಾಗ ಪ್ರಕ್ರಿಯೆ ಮುಂದುವರಿಯಿತು ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಯಾಗದ ಬಗ್ಗೆ ಭಕ್ತರೊಂದಿಗೆ ವಿಶೇಷ ಸಂವಾದ ನಡೆಸಿದರು. ದೇಗುಲದ ಧರ್ಮದರ್ಶಿ ಡಾ| ಯಾಜಿ ನಿರಂಜನ್‌ ಭಟ್‌, ಮೊಕ್ತೇಸರ ಎಂ. ಶಶೀಂದ್ರಕುಮಾರ್‌, ಸೀತಾರಾಮ ಕೆದಿಲಾಯ ಯಾಗದ ಉಪ ಸಮಿತಿಯ ಪದಾಧಿಕಾರಿಗಳು ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಜನಪ್ರತಿನಿಧಿಗಳಿಂದ ಪೂರ್ಣಾಹುತಿ
ವಿಶ್ವ ಜಿಗೀಷದ್‌ ಯಾಗದಲ್ಲಿ ಪೂರ್ಣಾಹುತಿಯನ್ನು ನೀಡಲು ಜನಪ್ರತಿನಿಧಿಗಳು ಭಾಗವಹಿಸಿದ್ದರು. ಜಿಲ್ಲಾ ಪಂಚಾಯತ್‌ ಸದಸ್ಯರಾದ ಗೀತಾಂಜಲಿ ಸುವರ್ಣ, ವಿನೋದ್‌ ಕುಮಾರ್‌ ಬೊಳ್ಳೂರು, ಮನಪಾ ಸದಸ್ಯ ಗಣೇಶ್‌ ಹೊಸಬೆಟ್ಟು, ಮಾಜಿ ಮೇಯರ್‌ ರಜನಿ ದುಗ್ಗಣ್ಣ, ಗ್ರಾಮ ಪಂಚಾಯತ್‌ ಸದಸ್ಯರಾದ ವಿನೋದ್‌ ಸಾಲ್ಯಾನ್‌ ಬೆಳ್ಳಾಯರು, ಉಮೇಶ್‌ ಪೂಜಾರಿ ಪಡುಪಣಂಬೂರು, ಕುಸುಮಾ ಚಂದ್ರಶೇಖರ್‌, ಪುಷ್ಪಾ, ಹೇಮಂತ್‌ ಅಮೀನ್‌, ದಿನೇಶ್‌ ಕುಲಾಲ್‌, ಇತರರಾದ ಉಮಾನಾಥ ಕೋಟ್ಯಾನ್‌, ಮೀರಾ ಬಾೖ ಮೊದಲಾದವರು ಪ್ರಥಮ ದಿನದ ಯಾಗದಲ್ಲಿ ಪಾಲ್ಗೊಂಡರು.

ಟಾಪ್ ನ್ಯೂಸ್

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.