Mangaluru ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ತಡವಾಗಿ ಬೆಳಕಿಗೆ
Team Udayavani, Dec 29, 2023, 12:22 AM IST
ಮಂಗಳೂರು: ಬಜಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಡಿ. 26ರಂದು ಬಾಂಬ್ ಬೆದರಿಕೆಯ ಈ ಮೇಲ್ ಬಂದಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಬಜಪೆ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ. ನಿಲ್ದಾಣದ ಸುತ್ತ ಭದ್ರತೆ ಬಿಗುಗೊಳಿಸಲಾಗಿದೆ. ಮಂಗಳೂರು ಸಹಿತ ದೇಶದ ಹಲವು ವಿಮಾನ ನಿಲ್ದಾಣಗಳಿಗೆ ಈ ರೀತಿಯ ಈ ಮೇಲ್ ಸಂದೇಶ ರವಾನೆಯಾಗಿದೆ.
[email protected] ಹೆಸರಿನ ಈ ಮೇಲ್ ನಿಂದ ಡಿ. 26ರ ರಾತ್ರಿ 11.59ಕ್ಕೆ ಮೇಲ್ ಬಂದಿದೆ. ಸಂದೇಶದಲ್ಲಿ ಒಂದು ವಿಮಾನದಲ್ಲಿ ಸ್ಫೋಟಕಗಳಿವೆ. ಮಾತ್ರವಲ್ಲದೆ ನಿಲ್ದಾಣದ ಒಳಗೂ ಗುಪ್ತ ಸ್ಥಳದಲ್ಲಿ ಸ್ಫೋಟಕ ಇರಿಸ ಲಾಗಿದೆ. ಕೆಲವೇ ಗಂಟೆಗಳಲ್ಲಿ ಅದು ಸ್ಫೋಟಿಸಲಿದೆ. ನಾನು ನಿಮ್ಮೆಲ್ಲರನ್ನೂ ಕೊಲ್ಲುತ್ತೇನೆ. ನಾವು ‘ಫ್ಯೂನಿಂಗ್’ ಹೆಸರಿನ ಉಗ್ರಗಾಮಿ ತಂಡದವರು ಎಂದು ಮೇಲ್ ತಿಳಿಸಲಾಗಿದೆ.
ಈ ಸಂದೇಶವನ್ನು ಡಿ. 27ರ ಮಧ್ಯಾಹ್ನ 11.20ರ ವೇಳೆಗೆ ವಿಮಾನ ನಿಲ್ದಾಣ ಪ್ರಾಧಿಕಾರದವರು ಗಮನಿಸಿದ್ದಾರೆ. ಮೇಲ್ ಗಮನಿಸುತ್ತಿದ್ದಂತೆ ನಿಲ್ದಾಣದ ಭದ್ರತೆಯನ್ನು ಬಲಪಡಿಸಲಾಗಿದೆ. ಜತೆಗೆ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದಿಂದ ತಪಾಸಣೆಯನ್ನೂ ನಡೆಸಲಾಗಿದೆ. ಆದರೆ ಯಾವುದೇ ಅನುಮಾ ನಾಸ್ಪದ ವಸ್ತುಗಳು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿಲ್ಲ. ಬಜಪೆ ಠಾಣೆ ಪೊಲೀಸರು ನಿಲ್ದಾಣದ ಅಧಿಕಾರಿ ಗಳೊಂದಿಗೆ ಸಭೆ ನಡೆಸಿದ್ದಾರೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.