ರಸ್ತೆಗೆ ಉರುಳಿದ ಮರ ಮೂರು ತಾಸು ಹೆದ್ದಾರಿ ಸಂಚಾರ ಸ್ಥಗಿತ
Team Udayavani, Aug 7, 2017, 8:25 AM IST
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಪೆರಿಯಡ್ಕದಲ್ಲಿ ಅಪಾಯಕಾರಿಯಾಗಿ ವಾಲಿಕೊಂಡು ನಿಂತಿದ್ದ ಬೃಹತ್ ಮರ ರವಿವಾರ ಬೆಳಗ್ಗೆ ಬುಡ ಸಮೇತ ಉರುಳಿ ರಸ್ತೆಗೆ ಬಿದ್ದ ಪರಿಣಾಮ ಮೂರು ತಾಸು ಕಾಲ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತಡೆ ಉಂಟಾಯಿತು.
ಪೆರಿಯಡ್ಕದಲ್ಲಿ ರಸ್ತೆ ಬದಿಯಲ್ಲಿ ಇದ್ದ ಬೃಹತ್ ದೇವದಾರು ಮರ ಹಲವು ಸಮಯದಿಂದ ವಾಲಿಕೊಂಡು ನಿಂತಿದ್ದು, ರವಿವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಮಳೆಯೊಂದಿಗೆ ಬೀಸಿದ ಭಾರೀ ಗಾಳಿಗೆ ಬುಡ ಸಮೇತ ಉರುಳಿ ಬಿದ್ದಿತು. ತತ್‌ಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದರೂ ಮೂರು ತಾಸಿನ ಬಳಿಕವೂ ಅವರ ಆಗಮನ ವಾಗಲಿಲ್ಲ. ಬಳಿಕ ಸ್ಥಳೀಯ ಗ್ರಾಮ ಪಂಚಾ ಯತ್ ಸದಸ್ಯರು ಊರವರ ಸಹಕಾರದೊಂದಿಗೆ ರೆಂಬೆ, ಕೊಂಬೆಗಳನ್ನು ಕಡಿದು ಮರವನ್ನು ಬದಿಗೆ ಸರಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕಾರು ಪಾರು
ಮರ ಉರುಳುವ ಕೆಲವೇ ಕ್ಷಣಗಳಿಗೆ ಮುನ್ನ ಬೆಂಗ ಳೂರಿ ನಿಂದ ಬಸ್‌ನಲ್ಲಿ ಉಪ್ಪಿನಂಗಡಿಗೆ ಬಂದು ಬಳಿಕ ಕಾರಿ ನಲ್ಲಿ ಕೊçಲಕ್ಕೆ ತೆರಳುತ್ತಿದ್ದ ನಾಲ್ವರಿದ್ದ ಕಾರೊಂದು ಇದೇ ದಾರಿಯಿಂದ ಹಾದುಹೋಗಿತ್ತು. ಕಾರು ಸಾಗು ತ್ತಿದ್ದಂತೆಯೇ ಮರ ಉರುಳಿತು ಎಂದು ಪ್ರತ್ಯಕ್ಷದರ್ಶಿ ಸ್ಥಳೀಯರು ಘಟನೆ ಬಗ್ಗೆ ವಿವರಿಸಿದರು.
ಮರ ಬಿದ್ದ ತತ್‌ಕ್ಷಣ ಅರಣ್ಯ ಇಲಾಖೆಗೆ ಮತ್ತು ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಲಾಯಿತು ಪೊಲೀಸ್ ಠಾಣೆಯ ಹೈವೇ ಪಟ್ರೋಲ್ ವಾಹನ ಕೂಡಲೇ ಸ್ಥಳಕ್ಕೆ ಬಂದರೂ ಅರಣ್ಯ ಇಲಾಖೆಯವರು ಬರಲೇ ಇಲ್ಲ. ಬಳಿಕ ಗ್ರಾ.ಪಂ. ಸದಸ್ಯ ಯು.ಕೆ. ಇಬ್ರಾಹಿಂ ಮತ್ತು ಸ್ಥಳೀಯ ಪ್ರತಾಪ್ ಅವರು ಮರ ಕೊಯ್ಯುವ ಯಂತ್ರ ವೊಂದನ್ನು ತರಿಸಿ ಗೆಲ್ಲು , ರೆಂಬೆಗಳನ್ನು ತುಂಡರಿಸಿದರು.
ಅರಣ್ಯ ಇಲಾಖೆ ನಿರ್ಲಕ್ಷ
ಅಪಾಯಕಾರಿ ಮರ ತೆರವು ಮಾಡುವ ಬಗ್ಗೆ ಜನ ಸಂಪರ್ಕ ಸಭೆ, ಗ್ರಾಮ ಸಭೆ, ಪಂಚಾಯತ್ ಸಭೆಗಳ ಮೂಲಕ ಅರಣ್ಯ ಇಲಾಖೆಗೆ ತಿಳಿಸಲಾಗುತ್ತದೆ. ಆದರೆ ಇಲಾಖೆಯವರು ನಿರ್ಲಕ್ಷ é ತೋರುತ್ತ ಜನರ ಪ್ರಾಣದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಇದೀಗ ಬಹಳ ಅಗತ್ಯದ ಕೆಲಸಕ್ಕೆ ಜರೂರಾಗಿ ಮಂಗಳೂರಿಗೆ ಹೋಗಬೇಕಾಗಿತ್ತು. ಅಮೂಲ್ಯವಾದ ಎರಡು ತಾಸು ಇಲ್ಲೇ ಕಳೆದು ಹೋಯಿತು. ನಮ್ಮ ಸಂಕಷ್ಟಗಳೂ ಅರಣ್ಯ ಇಲಾಖೆಯವರಿಗೆ ಅರ್ಥ ಆಗುವು ದಿಲ್ಲ ಎಂದು ಬಸ್ ಮತ್ತು ಇತರ ವಾಹನಗಳಲ್ಲಿ ಇದ್ದ ಪ್ರಯಾಣಿಕರು ಹಿಡಿಶಾಪ ಹಾಕುತ್ತಿರುವುದು ಕಂಡುಬಂತು.
ಕೆಲವು ವಾಹನಗಳವರು ಕೊçಲದಿಂದ ಗಂಡಿಬಾಗಿಲು ರಸ್ತೆಯಾಗಿ ಉಪ್ಪಿನಂಗಡಿಗೆ ಯಾನ ಮುಂದುವರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.