![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, May 22, 2024, 6:15 AM IST
ಮಂಗಳೂರು: ಮಂಗಳೂರಿಗೆ ನೀರುಣಿಸುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ಮಂಗಳವಾರ ನೀರಿನ ಮಟ್ಟ 5.5 ಮೀಟರ್‌ಗೆ ಏರಿಕೆ ಕಂಡಿದೆ. ನೀರು ತುಂಬಿರುವುದರಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಯಿತು.
ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಏರಿಕೆಯಾದ ಕಾರಣ ಬಂಟ್ವಾಳದ ಶಂಭೂರಿನಲ್ಲಿರುವ ಎಎಂಆರ್ ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ತುಂಬೆ ಅಣೆಕಟ್ಟಿಗೆ ಸೋಮವಾರ ಹರಿಸಲಾಗಿದೆ. ತುಂಬೆ ಅಣೆಕಟ್ಟಿನಲ್ಲಿ (ಗರಿಷ್ಠ ಎತ್ತರ 6 ಮೀ.) ಸೋಮವಾರ 3.42 ಮೀ. ಮತ್ತು ಮಂಗಳವಾರ ಬೆಳಗ್ಗೆವರೆಗೆ 3.68 ಮೀ. ಮಾತ್ರ ನೀರು ಲಭ್ಯವಿತ್ತು. ಬಳಿಕ ದಿಢೀರ್ ಏರಿಕೆ ಕಂಡಿದ್ದು, ಸಂಜೆ ವೇಳೆಗೆ 5.5 ಮೀ. ನೀರು ನಿಲ್ಲಿಸಲಾಗಿತ್ತು.
ಅಣೆಕಟ್ಟಿನಲ್ಲಿ ಸಾಮಾನ್ಯವಾಗಿ ಜೂನ್‌ನಲ್ಲಿ ನೀರು ತುಂಬಿದ ಬಳಿಕ ಗೇಟ್ ತೆರೆಯಲಾಗುತ್ತದೆ. ಆದರೆ ಕಳೆದ 2 ದಿನಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅಣೆಕಟ್ಟು ತುಂಬಿದೆ. ಕಳೆದ ವರ್ಷ ಮೇ 21ಕ್ಕೆ ನೀರಿನ ಮಟ್ಟ ಗಣ ನೀಯ ಇಳಿಕೆ ಕಂಡು 3.20 ಮೀ. ಇತ್ತು.
ರೇಶನಿಂಗ್ ಸ್ಥಗಿತ: ತುಂಬೆಯಲ್ಲಿ ನೀರಿನ ಮಟ್ಟ ಏರಿಕೆಯಾದ ಪರಿಣಾಮ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಲ್ಲಿದ್ದ ನೀರಿನ ರೇಶನಿಂಗ್ ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ. ಕುಡಿಯುವ ನೀರಿನ ಹಾಹಾಕಾರ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಎ. 4ರಿಂದ ನೀರಿನ ರೇಶನಿಂಗ್ ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿತ್ತು. ಇದರಿಂದಾಗಿ ನಗರಕ್ಕೆ ದಿನ ಬಿಟ್ಟು ದಿನ ನೀರು ಪೂರೈಕೆಯಾಗುತ್ತಿತ್ತು.
ಸ್ವರ್ಣೆಗೆ ಒಳಹರಿವು: 3 ದಿನಗಳಿಂದ ಉತ್ತಮ ಮಳೆಯಾಗು ತ್ತಿರುವುದರಿಂದ ಇನ್ನೆರಡು ದಿನಗಳಲ್ಲಿ ಉಡುಪಿಯ ಸ್ವರ್ಣಾ ನದಿಯಲ್ಲಿ ಒಳ ಹರಿವು ಆರಂಭಗೊಳ್ಳುವ ನಿರೀಕ್ಷೆ ಇದೆ. ಬಳಿಕ ಇಲ್ಲೂ ರೇಶನಿಂಗ್ ಸ್ಥಗಿತವಾಗುವ ನಿರೀಕ್ಷೆ ಹೊಂದಲಾಗಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.