ಪ್ರಯಾಣದರ ಹೆಚ್ಚಳ: ಸಂಚಾರ ನಿಯಂತ್ರಕ ತರಾಟೆಗೆ


Team Udayavani, Jun 2, 2018, 4:20 AM IST

xpress-bus-1-6.jpg

ಉಪ್ಪಿನಂಗಡಿ: ಮಂಗಳೂರು – ಸುಬ್ರಹ್ಮಣ್ಯ ನಡುವೆ ಸಂಚರಿಸುವ ಸಾರಿಗೆ ಸಂಸ್ಥೆಯ ಸಾಮಾನ್ಯ ಬಸ್‌ ಗಳನ್ನೇ ವೇಗದೂತ ಬಸ್‌ಗಳನ್ನಾಗಿ ಪರಿವರ್ತಿಸಿದ್ದು, ಪ್ರಯಾಣ ದರ ಹೆಚ್ಚಿಸಿರುವ ಕುರಿತು  ಆಕ್ರೋಶ ವ್ಯಕ್ತಪಡಿಸಿರುವ ಪ್ರಯಾಣಿಕರು ಶುಕ್ರವಾರ ಇಲ್ಲಿನ ಕೆ.ಎಸ್‌.ಆರ್‌.ಟಿ.ಸಿ. ಸಂಚಾರ ನಿಯಂತ್ರಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಈ ಮೊದಲು ಸಾಮಾನ್ಯ ಬಸ್‌ಗಳಲ್ಲಿ 51 ರೂ. ಟಿಕೆಟ್‌ ಇರುತ್ತಿತ್ತು. ಈಗ ಅಷ್ಟೇ ಸಂಖ್ಯೆಯ ನಿಲುಗಡೆಗಳನ್ನು ನೀಡಿ, 106 ರೂ. ಸ್ವೀಕರಿಸಲಾಗುತ್ತಿದೆ. ಉಪ್ಪಿನಂಗಡಿಯಿಂದ ಕಡಬಕ್ಕೆ 33 ರೂ. ಇದ್ದ ಟಿಕೆಟ್‌ ದರ ವೇಗದೂತ ಎಂಬ ಕಾರಣಕ್ಕೆ 6 ರೂ. ಹೆಚ್ಚಳವಾಗಿದೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಡಬದಿಂದ ಶುಕ್ರವಾರ ಸುಬ್ರಹ್ಮಣ್ಯ- ಮಂಗಳೂರು ವೇಗದೂತ ಬಸ್‌ ನಲ್ಲಿ ಬಂದ ಕೆಲ ಪ್ರಯಾಣಿಕರು ಏಕಾಏಕಿ ಟಿಕೆಟ್‌ ದರ ಹೆಚ್ಚಿಸಿದ ಕುರಿತು ಸಂಚಾರ ನಿಯಂತ್ರಕರನ್ನು ತರಾಟೆಗೆ ತೆಗೆದುಕೊಂಡರು. ಸಾಮಾನ್ಯ ಬಸ್‌ ಗಳಂತೆ ಸಿಕ್ಕಸಿಕ್ಕಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು, ಇಳಿಸುವುದು ಮಾಡುತ್ತಿವೆ. ಅವಧಿಯೇನೂ ಕಡಿಮೆಯಾಗಿಲ್ಲ. ದರ ಮಾತ್ರ ಏಕೆ ಹೆಚ್ಚು ಎಂದು ಪ್ರಶ್ನಿಸಿದರು.

ಕೆ.ಎಸ್‌.ಆರ್‌.ಟಿ.ಸಿ. ಡಿಸಿ ದೀಪಕ್‌ ಮಾತನಾಡಿ, ಮೊದಲು ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಸಾಮಾನ್ಯ ಬಸ್‌ ಗಳು ಮಾತ್ರ ಪ್ರಯಾಣಿಸುತ್ತಿದ್ದವು. ಪ್ರಯಾಣದ ಅವಧಿ ಹೆಚ್ಚುವುದರಿಂದ 106 ಕಿ.ಮೀ.ನಷ್ಟು ದೂರ ಸಾಮಾನ್ಯ ಬಸ್‌ ನಲ್ಲಿ ಪ್ರಯಾಣಿಸಲು ಜನ ಇಷ್ಟಪಡುತ್ತಿಲ್ಲ. ಈಗ ಎಲ್ಲ ಬಸ್‌ ಗಳನ್ನು ವೇಗದೂತ ಬಸ್‌ ಗಳಾಗಿ ಬದಲಿಸಿ, ಟಿಕೆಟ್‌ ದರ ಹೆಚ್ಚಿಸಲಾಗಿದೆ. ಸ್ಥಳೀಯರಿಗೆ ತೊಂದರೆಯಾಗದಂತೆ ಎರಡು ಸಾಮಾನ್ಯ ಬಸ್‌ಗಳನ್ನು ಉಪ್ಪಿನಂಗಡಿಯಿಂದ ಸುಬ್ರಹ್ಮಣ್ಯಕ್ಕೆ ಪುತ್ತೂರು ಡಿಪೋದವರು ಹಾಕಬೇಕಿತ್ತು. ಅವರು ಸ್ಪಂದಿಸಿಲ್ಲ. ಹೀಗಾಗಿ, ಮಂಗಳೂರು ಡಿಪೋದಿಂದಲೇ ಎರಡು ಸಾಮಾನ್ಯ ಬಸ್‌ ಓಡಿಸಲಾಗುವುದು. ವೇಗದೂತ ಬಸ್‌ ಗಳು ಇತರೆ ಸಾಮಾನ್ಯ ಬಸ್‌ ಗಳಂತೆ ಎಲ್ಲ ಕಡೆ ನಿಲ್ಲುತ್ತವೆ ಎಂಬ ದೂರಿನ ಕುರಿತು ಪರಿಶೀಲಿಸಿ, ನಿಗದಿತ ಸ್ಥಳದಲ್ಲಿ ಮಾತ್ರ ನಿಲುಗಡೆಗೊಳಿಸಲು ಸೂಚಿಸಲಾಗುವುದು ಎಂದು ತಿಳಿಸಿದರು.


ಹೆಸರಿಗೆ ಮಾತ್ರ ವೇಗದೂತ!

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಪುತ್ತೂರು ತಾಲೂಕು ದಲಿತ್‌ ಸೇವಾ ಸಮಿತಿಯ ಅಧ್ಯಕ್ಷ ರಾಜು ಹೊಸ್ಮಠ, ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಬರುವ ಬಸ್‌ಗಳು ಹೆಸರಿಗೆ ಮಾತ್ರ ವೇಗದೂತ ಬಸ್‌ಗಳಾಗಿ ಬದಲಾಗಿವೆ. ಕಡಬದಿಂದ ಉಪ್ಪಿನಂಗಡಿಗೆ ಸಂಚರಿಸಲು ಸಾಮಾನ್ಯ ಬಸ್‌ಗಳು ಒಂದು ಗಂಟೆ ತೆಗೆದುಕೊಳ್ಳುತ್ತವೆ. ಈಗಲೂ ಅಷ್ಟೇ ಅವಧಿ, ನಿಲುಗಡೆಗಳಿವೆ. ದರ ಹೆಚ್ಚಳ ಮಾಡಿರುವ ಉದ್ದೇಶವೇನು ಎಂದು ಪ್ರಶ್ನಿಸಿದರು. ಪ್ರಯಾಣದರ ಇಳಿಸಲು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ದಲಿತ್‌ ಸೇವಾ ಸಮಿತಿಯಿಂದ ಮನವಿ ಸಲ್ಲಿಸಲಾಗುವುದು ಎಂದರು.

ಟಾಪ್ ನ್ಯೂಸ್

cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

Cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

siddanna-2

Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ

ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Tennis: ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

11-bantwala

Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು

1

Sullia: ಬಿಎಸ್ಸೆನ್ನೆಲ್‌ ಟವರ್‌ಗೆ ಸೋಲಾರ್‌ ಪವರ್‌!

5-subrahmanya

Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

Cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

siddanna-2

Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ

ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Tennis: ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.