ಕುಮಾರಧಾರೆ ತಟದಲ್ಲಿ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್‌


Team Udayavani, Mar 27, 2018, 9:00 PM IST

Timmakka-Park-27-3.jpg

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇಗುಲ ಸಮೀಪ ಕುಮಾರಧಾರೆ ನದಿ ದಂಡೆ ಮೇಲಿನ ಮೀಸಲು ಅರಣ್ಯದಲ್ಲಿ ಸುಸಜ್ಜಿತ ವೃಕ್ಷೋದ್ಯಾನ ದೇಗುಲದ ಸಹಕಾರದಿಂದ ನಿರ್ಮಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ಇದಕ್ಕೆ ಸಾಲು ಮರದ ತಿಮ್ಮಕ್ಕನ ಹೆಸರಿಡಲಾಗುತ್ತಿದೆ. ಆರಂಭಿಕ ಹಂತದ ಕೆಲಸಗಳಿಗೆ ಚಾಲನೆಯೂ ಸಿಕ್ಕಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದಿಂದ 2 ಕಿ.ಮೀ. ದೂರದಲ್ಲಿ ರಾಜ್ಯ ಹೆದ್ದಾರಿ ಪಕ್ಕದಲ್ಲೇ ಇರುವ ಮೀಸಲು ಅರಣ್ಯ ಪ್ರದೇಶದ 25 ಎಕರೆ ಭೂಮಿಯಲ್ಲಿ ವೃಕ್ಷೋದ್ಯಾನವನ ನಿರ್ಮಾಣವಾಗುತ್ತಿದೆ. ಇಲ್ಲಿ ಪಶ್ಚಿಮ ಘಟ್ಟದ ಅಮೂಲ್ಯ ಸಸ್ಯಗಳನ್ನು ಬೆಳೆದು ಅಭಿವೃದ್ಧಿಗೊಳಿಸಲಾಗುತ್ತಿದೆ.

ಸರಕಾರ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಹಸಿರು ಬೆಳೆಯುವ,ಜನರಲ್ಲಿ ಸಸ್ಯ ಸಂಪತ್ತು ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯದ ವಿವಿಧೆಡೆ ಟ್ರೀಪಾರ್ಕ್‌ ನಿರ್ಮಿಸುತ್ತಿದ್ದು, ಅದಕ್ಕಿಂತ ತುಸು ವಿಶಿಷ್ಟವಾಗಿ, ಸುಸಜ್ಜಿತ ರೀತಿಯಲ್ಲಿ ಉದ್ಯಾನವನ ನಿರ್ಮಾಣ ಮಾಡಲಾಗುತ್ತಿದೆ. ಉದ್ಯಾನವನ ಪ್ರವೇಶಕ್ಕೆ ಆಕರ್ಷಕ ಮಹಾದ್ವಾರ ನಿರ್ಮಿಸಲಾಗುತ್ತಿದೆ. ಮಕ್ಕಳಿಗೆ ಆಟಿಕೆಗಳು, ಮರದಿಂದ ಮರಕ್ಕೆ ಜೋಡಿಸಿ ಸಂಚರಿಸಲು ಅನುಕೂಲವಾಗುವಂಥ ಪಥ, ಪಕ್ಷಿ ವೀಕ್ಷಣೆ ಪಥ, ನೈಸರ್ಗಿಕ ಪಥ, ನಕ್ಷತ್ರವನ, ಆಯುರ್ವೇದ ಸಸ್ಯವನ ಹೊಂದಲಾಗುತ್ತಿದೆ.

ಪುರುಷ, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪ್ರವಾಸಿಗರಿಗೆ ಕುಳಿತುಕೊಳ್ಳಲು ಬೆಂಚ್‌ಗಳು, ವಾಯು ವಿಹಾರದ ರಸ್ತೆ ನಿರ್ಮಾಣ ಹಾಗೂ ಅಲ್ಲಲ್ಲಿ ಕುಳಿತು ವಿಶ್ರಾಂತಿ ಪಡೆಯಲು ಅತ್ಯಂತ ಆಕರ್ಷಣೀಯ ಗೋಪುರ ಮಾದರಿಯ ಸಭಾಂಗಣ, ವೀಕ್ಷಣಾ ಗೋಪುರ, ಥಿಯೇಟರ್‌, ಮುಕ್ತ ಸಭಾಂಗಣ ಉದ್ಯಾನವನದ ಒಳಗಿರುತ್ತವೆ.

ಮಲೆನಾಡಿನಲ್ಲಿ ಬೆಳೆಯುವ ಅಪೂರ್ವ ಸಸ್ಯರಾಶಿಗಳನ್ನು ಹಾಗೂ 17 ಜಾತಿಯ ಬಿದಿರನ್ನು ಇಲ್ಲಿ ಬೆಳೆಸಲಾಗುತ್ತಿದೆ. ಬಣ್ಣ ಬಣ್ಣದ ಹೂವು ಹಾಗೂ ಪಶ್ಚಿಮ ಘಟ್ಟದ ಅಮೂಲ್ಯ ಮರಗಳನ್ನು ಬೆಳೆದು ಸುಂದರ ಉದ್ಯಾನವನ ಸ್ಥಾಪಿಸಲಾಗುತ್ತಿದೆ. ಮುಂದಿನ ಐದು ವರ್ಷಗಳ ಒಳಗೆ ಕ್ಷೇತ್ರದಲ್ಲಿ ಒಂದು ಸುಂದರ ವೃಕ್ಷೋದ್ಯಾನ ಸಿದ್ಧವಾಗುವ ನಿರೀಕ್ಷೆ ಇರಿಸಲಾಗಿದೆ.

ಎರಡು ವರ್ಷಗಳ ಹಿಂದೆಯೇ ಮಂಜೂರಾತಿ 
ಸರಕಾರ ಅರಣ್ಯ ಇಲಾಖೆ ಮೂಲಕ ಸಾಲು ಮರದ ತಿಮ್ಮಕ್ಕ ಹೆಸರಿನಲ್ಲಿ ಸಸ್ಯೋದ್ಯಾನ ನಿರ್ಮಿಸಲು ಎಲ್ಲ ತಾಲೂಕುಗಳಲ್ಲಿ ಯೋಜನೆಗಳನ್ನು ರೂಪಿಸಿದೆ. ಸುಳ್ಯ ತಾಲೂಕಿನ ಸೂಕ್ತ ಸ್ಥಳದಲ್ಲಿ ಉದ್ಯಾನವನ ನಿರ್ಮಿಸಲು ಅರಣ್ಯ ಇಲಾಖೆ ಎರಡು ವರ್ಷಗಳ ಹಿಂದೆಯೇ ಮಂಜೂರಾತಿ ನೀಡಿತ್ತು.

5 ಕೋಟಿ ವೆಚ್ಚ
ಮುಂದಿನ ಐದು ವರ್ಷಗಳಲ್ಲಿ ರೂ 5 ಕೋಟಿ ವೆಚ್ಚದಲ್ಲಿ ವೃಕ್ಷೋದ್ಯಾನ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಮೀಸಲು ಅರಣ್ಯದಲ್ಲಿ ಸ್ಥಳ ಗಡಿ ಗುರುತು ನಡೆಸಿದೆ. ಕುಮಾರಧಾರೆ ಸ್ನಾನಘಟ್ಟದ ಮೂರು ಪಾರ್ಶ್ವಕ್ಕೆ ಹೊಂದಿಕೊಂಡು ಉದ್ಯಾನವನ ನಿರ್ಮಿಸಲಾಗುತ್ತಿದೆ. ಆರಂಭಿಕವಾಗಿ 1 ಕೋಟಿ ರೂ. ವೆಚ್ಚದಲ್ಲಿ ಇಲ್ಲಿ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತದೆ. ಉದ್ಯಾನವನ ಪ್ರವೇಶಿಸುವಲ್ಲಿ ಕೌಂಟರ್‌ ತೆರೆಯಲಾಗುತ್ತದೆ. ನಿರ್ವಹಣೆಗಾಗಿ ನಿರ್ವಹಣ ಕಾವಲು ಸಮಿತಿ ರಚಿಸಲಾಗುತ್ತಿದೆ.

ಕುಮಾರಧಾರೆ ಸ್ನಾನ ಘಟ್ಟದಲ್ಲಿ ಪ್ರವಾಸಿಗರಿಗಾಗಿ ಬೋಟಿಂಗ್‌ ವ್ಯವಸ್ಥೆ ಯೂ ಇರುತ್ತದೆ, ವಿಶಾಲವಾದ ನೀರಿನ ಅಶ್ರಯದ ಜಾಗದಲ್ಲಿ ಬೋಟ್‌ ಮೂಲಕ ಯಾತ್ರಾರ್ಥಿಗಳು ಸಂಚರಿಸಿ ಖುಷಿ ಪಡಿಸಲು ವ್ಯವಸ್ಥೆ ಇದಾಗಿರುತ್ತದೆ. ಉದ್ಯಾನದ ಒಳಗೆ ಮಳಿಗೆಯೊಂದನ್ನು ಸ್ಥಾಪಿಸಿ, ಕ್ಷೇತ್ರದ ಮಹಿಮೆ ಹಾಗೂ ಇತಿಹಾಸ ತಿಳಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತದೆ.

ಪರಿಸರ ಪ್ರೇಮಿ ವಿಧಾನ
ಪರಿಸರ ಸ್ನೇಹಿಯಾಗಿ ಟ್ರೀ ಪಾರ್ಕ್‌ ಜಾರಿಗೊಳಿಸಲಾಗುತ್ತಿದೆ. ಮೀಸಲು ಅರಣ್ಯದ ಯಾವುದೇ ಗಿಡ-ಮರಗಳಿಗೆ ಹಾನಿ ಮಾಡದೆ ಸಸ್ಯ ರಾಶಿಗಳ ಮಧ್ಯೆ ಇತರೆ ವ್ಯವಸ್ಥೆಗಳಿರುತ್ತವೆ. ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ. ಯಾವುದೇ ಇತರೆ ಚಟುವಟಿಕೆಗೆ ಅವಕಾಶವಿಲ್ಲ. ನಿರ್ವಹಣೆಗೆ ಸಿಬಂದಿ ನೇಮಿಸಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ಯಾತ್ರಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಬರುವ ಕ್ಷೇತ್ರದಲ್ಲಿ ಬಿಡುವಿನ ವೇಳೆಯನ್ನು ಕಳೆಯಲು ಯಾವುದೇ ಪ್ರೇಕ್ಷಣೀಯ ಸ್ಥಳ ಅಥವಾ ವಿಶ್ರಾಂತಿಧಾಮಗಳಿಲ್ಲ. ಕೊಠಡಿಗಳಲ್ಲಿ ಕಾಲ ಕಳೆಯುವ ಸ್ಥಿತಿ ತಪ್ಪಿಸಲು ಪ್ರವಾಸಿ ಕೇಂದ್ರ ತೆರೆಯುವ ಕನಸಿತ್ತು. ಅದೀಗ ನನಸಾಗುವ ಕಾಲ ಬಂದಿದೆ. ನಾಗರಿಕರೂ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ಆಡಳಿತ ಮಂಡಳಿ ಆಸಕ್ತಿ
ಮಂಜೂರಾತಿ ದೊರಕಿದ್ದರೂ ವೃಕ್ಷೋದ್ಯಾನ ನಿರ್ಮಾಣ ವಿಚಾರ ಅನುಷ್ಠಾನಕ್ಕೆ ಯಾರು ಆಸಕ್ತಿ ವಹಿಸದಿರುವುದನ್ನು ಮನಗಂಡ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಈಗಿನ ಆಡಳಿತ ಮಂಡಳಿ ಕ್ಷೇತ್ರದ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲು ಉತ್ಸುಕತೆ ತೋರಿತ್ತು. ಅಧ್ಯಕ್ಷರು ಪ್ರಯತ್ನಿಸಿದ್ದರ ಫ‌ಲವಾಗಿ ಅರಣ್ಯ ಇಲಾಖೆ ಇಲ್ಲಿ ಉದ್ಯಾನವನ ನಿರ್ಮಾಣಕ್ಕೆ ಚಾಲನೆ ನೀಡಿದೆ.

ಶೀಘ್ರ ಉದ್ಘಾಟನೆ
ಅರಣ್ಯ ಇಲಾಖೆ ನೇತೃತ್ವದಲ್ಲಿ ಇಲ್ಲಿ ಟ್ರೀ ಪಾರ್ಕ್‌ ತೆರೆಯಲು ಕೆಲಸ ಆರಂಭಿಸಿದೆ. ದೇಗುಲದ ಸಂಪೂರ್ಣ ಸಹಕಾರ ದೊರಕಿದೆ. ಇದರ ಕಾರ್ಯಗಳು ವೇಗ ಪಡೆದು ಶೀಘ್ರ ಉದ್ಘಾಟನೆ ನಡೆಯಲಿದೆ. ಮುಂದಿನ ಐದು ವರ್ಷಗಳಲ್ಲಿ ಎಲ್ಲವೂ ಪೂರ್ಣವಾಗುವುದು.
– ತ್ಯಾಗರಾಜ್‌ ಆರ್‌ಎಫ್ಒ, ಸುಬ್ರಹ್ಮಣ್ಯ ವಲಯ

ಯಶಸ್ವಿಯಾಗುತ್ತದೆೆ
ಕ್ಷೇತ್ರಕ್ಕೆ ಆಗಮಿಸುವ ಭಕ್ತರು, ಯಾತ್ರಾರ್ಥಿಗಳು ಸೇವೆ ಬಳಿಕ ಬಿಡುವಿನ ಅವಧಿಯಲ್ಲಿ ವಿಶ್ರಾಂತಿ ಪಡೆಯಲು ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ಈ ಕುರಿತು ಆಸಕ್ತಿ ವಹಿಸಿ ಇದರ ಅನುಷ್ಠಾನಕ್ಕೆ ಸಹಕಾರ ನೀಡಿದ್ದೇವೆ. ಇದು ಯಶಸ್ವಿಯಾಗುತ್ತದೆ.
– ನಿತ್ಯಾನಂದ ಮುಂಡೋಡಿ, ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ, ಕುಕ್ಕೆ ಸುಬ್ರಹ್ಮಣ್ಯ

— ಬಾಲಕೃಷ್ಣ  ಭೀಮಗುಳಿ

ಟಾಪ್ ನ್ಯೂಸ್

Kharge’s mother, sister victims of violence by Razakars: Yogi takes revenge

Maha Election: ರಜಾಕಾರರ ಹಿಂಸೆಗೆ ಖರ್ಗೆ ತಾಯಿ, ಸಹೋದರಿ ಬಲಿ: ಯೋಗಿ ತಿರುಗೇಟು

Saffron is the color of God: Rambhadracharya’s speech against Kharge

Bhagava: ಕೇಸರಿ ಎಂದರೆ ಭಗವಂತನ ಬಣ್ಣ : ಖರ್ಗೆ ವಿರುದ್ಧ ರಾಮಭದ್ರಾಚಾರ್ಯ ವಾಗ್ಧಾಳಿ

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

Melkar-Tjam

Bantwala: ಮೆಲ್ಕಾರ್‌-ಕಲ್ಲಡ್ಕ ಮಧ್ಯೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌

Waqf Board Eyeing 400 Acre Land in Ernakulam: Allegation

Waqf issue; ಎರ್ನಾಕುಳಂನಲ್ಲಿ 400 ಎಕ್ರೆ ಜಮೀನು ಮೇಲೆ ವಕ್ಫ್ ಮಂಡಳಿ ಕಣ್ಣು: ಆರೋಪ

election

By Election: ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ: ಸಲ್ಲಿಕೆಯಾಗದ ನಾಮಪತ್ರ

Mangaluru: ಪಿಲಿಕುಳದಲ್ಲಿ ನ. 17ರಂದು ಕಂಬಳ ಆಯೋಜನೆ ಇಲ್ಲ

Mangaluru: ಪಿಲಿಕುಳದಲ್ಲಿ ನ. 17ರಂದು ಕಂಬಳ ಆಯೋಜನೆ ಇಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

byndoor

Sullia: ಆತ್ಮಹ*ತ್ಯೆಗೆ ಯತ್ನಿಸಿದ್ದ ಯುವಕ ಸಾವು

13

Belthangady: ಅಸೌಖ್ಯದಿಂದ ಯುವ ಪ್ರತಿಭೆ ಸಾವು

Kukke-Kanchi-Sri-visit

Kanchi Sri Visit: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಾಂಚಿ ಸ್ವಾಮೀಜಿ ಭೇಟಿ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Kharge’s mother, sister victims of violence by Razakars: Yogi takes revenge

Maha Election: ರಜಾಕಾರರ ಹಿಂಸೆಗೆ ಖರ್ಗೆ ತಾಯಿ, ಸಹೋದರಿ ಬಲಿ: ಯೋಗಿ ತಿರುಗೇಟು

Saffron is the color of God: Rambhadracharya’s speech against Kharge

Bhagava: ಕೇಸರಿ ಎಂದರೆ ಭಗವಂತನ ಬಣ್ಣ : ಖರ್ಗೆ ವಿರುದ್ಧ ರಾಮಭದ್ರಾಚಾರ್ಯ ವಾಗ್ಧಾಳಿ

congress leader Nana Patole compared BJP to a dog: Criticism

Mumbai: ಬಿಜೆಪಿಯನ್ನು ನಾಯಿಗೆ ಹೋಲಿಸಿದ ಕೈ ನಾಯಕ ನಾನಾ ಪಟೋಲೆ: ಟೀಕೆ

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

Melkar-Tjam

Bantwala: ಮೆಲ್ಕಾರ್‌-ಕಲ್ಲಡ್ಕ ಮಧ್ಯೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.