ಟಿಪ್ಪು ಜಯಂತಿ ಆಚರಣೆ: ಮೂಲ್ಕಿಯಲ್ಲಿ ಬಂದೋಬಸ್ತ್
Team Udayavani, Nov 11, 2017, 11:55 AM IST
ಹಳೆಯಂಗಡಿ: ಜಿಲ್ಲೆಯಲ್ಲಿ ನಡೆದ ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ಸಹಿತ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಗಿ ಬಂದೋ ಬಸ್ತ್ ಮಾಡಲಾಗಿತ್ತು.
ದ.ಕ., ಉಡುಪಿ ಜಿಲ್ಲೆಯಲ್ಲಿ ಶಾಂತಿಯುತವಾಗಿ ಆಚರಣೆ ನಡೆಸಲು ಜಿಲ್ಲಾಡಳಿತ ಸೂಚನೆ ನೀಡಿದ್ದರಿಂದ ಎರಡೂ ಜಿಲ್ಲೆಯ ಗಡಿ ಪ್ರದೇಶವಾದ ಮೂಲ್ಕಿಯಲ್ಲಿ ಪೊಲೀಸ್ ಸಿಬಂದಿ ಹೋಬಳಿಯ ಎಲ್ಲ ಆಯಾ ಕಟ್ಟಿನಲ್ಲಿ ಕಟ್ಟೆಚ್ಚರ ವಹಿಸಿದ್ದರು.
ಕಿನ್ನಿಗೋಳಿಯ ಮೂರು ಕಾವೇರಿ, ಮೂಲ್ಕಿ ಬಳಿಯ ಕಾರ್ನಾಡು, ಹಳೆಯಂಗಡಿಯ ಪಕ್ಷಿಕೆರೆ ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಮುಂಜಾನೆಯಿಂದಲೇ ಸಂಶಯಿತ ವಾಹನಗಳನ್ನು ತಪಾಸಣೆ ನಡೆಸಿದರು. ಮಧ್ಯಾಹ್ನದವರೆಗೆ ಬಿಗಿ ಬಂದೋ ಬಸ್ತ್ ನ್ನು ನೀಡಲಾಗಿತ್ತು. ಅನಂತರ ಸ್ವಲ್ಪ ಸಡಿಲಗೊಳಿಸಲಾಯಿತು.
ಮೂಲ್ಕಿ ಹೋಬಳಿಯ ಕೆ.ಎಸ್.ರಾವ್‌ನಗರ, ಕಾರ್ನಾಡು, ಕಿನ್ನಿಗೋಳಿ, ಪಕ್ಷಿಕೆರೆ, ಇಂದಿರಾನಗರ, ಎಸ್.ಕೋಡಿಯಂತಹ
ಸೂಕ್ಷ್ಮಪ್ರದೇಶಗಳಲ್ಲಿ ಪೊಲೀಸರನ್ನು ನಿಯುಕ್ತಿಗೊಳಿಸಲಾಗಿತ್ತು. ಹೋಬಳಿಯ ಎಲ್ಲಾ ಗ್ರಾಮೀಣ ಪ್ರದೇಶದಲ್ಲೂ ಸಹ ವಿಶೇಷ ಬೀಟ್‌ಗಳನ್ನು ನಡೆಸಲಾಯಿತು.
ಅಹಿತಕರ ಘಟನೆ ನಡೆದಿಲ್ಲ
ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇಲಾಧಿಕಾರಿಗಳ ಆದೇಶದಂತೆ ಪ್ರಮುಖ ಮೂರು ಕಡೆಗಳಲ್ಲಿ ನಾಕಾಬಂದಿ ಹಾಗೂ ಎಲ್ಲ ಪ್ರದೇಶಗಳಲ್ಲಿ ಬೀಟ್ ಮಾಡಿದ್ದೇವೆ. ಹೆದ್ದಾರಿಯಲ್ಲಿ ಸಂಚಾರಕ್ಕೆ ಯಾವುದೇ ಅಡತಡೆ ಮಾಡಿಲ್ಲ, ಒಳ ಪ್ರದೇಶದಲ್ಲಿ ಮಾತ್ರ ವಾಹನಗಳ ತಪಾಸಣೆ ನಡೆದಿದೆ. ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.
–ಅನಂತ ಪದ್ಮನಾಭ ,
ಇನ್‌ಸ್ಪೆಕ್ಟರ್,ಮೂಲ್ಕಿ ಠಾಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.