ಬೇಸಗೆ: ಸುರಕ್ಷೆ ಕಾಪಾಡಲು ಆಹಾರ ಉದ್ಯಮಿಗಳಿಗೆ ಸಲಹೆ
Team Udayavani, Mar 19, 2023, 6:10 AM IST
ಮಂಗಳೂರು: ಬೇಸಗೆಯಲ್ಲಿ ಆಹಾರ ಮತ್ತು ನೀರಿನ ಮೂಲಕ ಹರಡುವ ರೋಗಗಳು ಹೆಚ್ಚಾಗುವ ಕಾರಣ ಉಪಾಹಾರ ಗೃಹಗಳು, ಕ್ಯಾಂಟೀನ್‌ಗಳು, ಹೊಟೇಲ್‌ಗಳು, ಬಾರ್‌ಗಳು, ಬೇಕರಿಗಳು ಮುಂತಾದ ಸಿದ್ಧಪಡಿಸಿದ ಆಹಾರಗಳನ್ನು ಮಾರಾಟ ಮಾಡುವ ಆಹಾರ ಉದ್ಯಮಿಗಳು ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಸಂಬಂಧಪಟ್ಟ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.
ಆಹಾರೋದ್ಯಮಿಗಳು ನೀರಿನ ಸಂಪು, ನೀರಿನ ಸಂಗ್ರಹ ಟ್ಯಾಂಕ್, ತೆರೆದ ಬಾವಿ ಕೊಳವೆಬಾವಿ ಮುಂತಾದ ನೀರಿನ ಮೂಲಗಳನ್ನು ಶುಚಿಗೊಳಿಸಬೇಕು. ಸಮರ್ಪಕ ತಾಪಮಾನದಲ್ಲಿ ಆಹಾರ ಸಂಗ್ರಹಿಸಬೇಕು. ಸಾರ್ವಜನಿಕರಿಗೆ ಕುಡಿಯಲು ಶುದ್ಧೀಕರಿಸಿದ ಹಾಗೂ ಬಿಸಿನೀರು ಪೂರೈಕೆ ಮಾಡಬೇಕು. ಅಡುಗೆ ತಯಾರಕರು ವೈಯಕ್ತಿಕ ಶುಚಿತ್ವ ಕಾಪಾಡಬೇಕು. ಏಪ್ರನ್, ಕೈಗವಸುಗಳು ಮತ್ತು ಹೆಡ್‌ಕವರ್ ಧರಿಸಬೇಕು.
ತಯಾರಿಸಿದ ಆಹಾರವನ್ನು ನೊಣ ಮುಂತಾದ ಕೀಟಗಳಿಂದ ರಕ್ಷಿಸಬೇಕು. ತರಕಾರಿಗಳು ಮತ್ತು ಹಣ್ಣುಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಡಬೇಕು. ಮಂಜುಗಡ್ಡೆಯನ್ನು ಶುದ್ಧ ನೀರಿನಲ್ಲಿ ತಯಾರಿಸುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಹಸಿ ಮೀನು ಮತ್ತು ಹಸಿ ಮಾಂಸ ಮಾರಾಟಗಾರರು ಮಾಂಸವನ್ನು ಮಾರಾಟ ಮಾಡುವ ಸಂದರ್ಭದಲ್ಲಿ ತಾಜಾತನ ಖಚಿತಪಡಿಸಿಕೊಳ್ಳಬೇಕು.
ಎಲ್ಲ ದಿನಸಿ ಅಂಗಡಿಗಳು, ಅಡುಗೆ ಕೋಣೆ ಇರುವ ಹಾಸ್ಟೆಲ್‌ಗಳು, ಅಡುಗೆ ಕೋಣೆ ಇರುವ ವಾಸ್ತವ್ಯ ಸೇವೆ ಒದಗಿಸುವವರು, ಉಪಾಹಾರ ಗೃಹಗಳು, ಕ್ಯಾಂಟೀನ್, ಹೋಟೆಲ್, ಬಾರ್, ಬೇಕರಿ ಆಹಾರ ಉದ್ಯಮಿಗಳು, ಕಡ್ಡಾಯವಾಗಿ ಆಹಾರ ಸುರಕ್ಷ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ನೋಂದಣಿ ಅಥವಾ ಪರವಾನಿಗೆ ಪಡೆದಿರಬೇಕು ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬಸ್ಸಿನಲ್ಲಿ ನೀರಿನ
ವ್ಯವಸ್ಥೆ ಕಲ್ಪಿಸಿ
ಉಡುಪಿ: ಜಿಲ್ಲಾ ವಿಪತ್ತು ನಿರ್ವಹಣ ಸಮಿತಿ ಸಭೆಯ ಸೂಚನೆಯಂತೆ ವಾತಾವರಣದಲ್ಲಿ ತಾಪಮಾನ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜಿಲ್ಲೆಯ ಎಲ್ಲ ಬಸ್ಸುಗಳಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಬಸ್ಸು ಮಾಲಕರು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.