ಸಾರ್ವಜನಿಕ ಕೆಲಸಕ್ಕೆ ಹೆಚ್ಚಿನ ಸಹಕಾರ ನೀಡಿ: ವಿಜಯನಾಥ ಶೆಟ್ಟಿ
Team Udayavani, Mar 28, 2017, 11:13 AM IST
ಕಾವು: ಧಾರ್ಮಿಕ ಕೇಂದ್ರಗಳು ಜೀವನದ ಒತ್ತಡದ ಸಮಯವನ್ನು ದೂರ ಮಾಡಲು ಸಹಕಾರಿಯಾಗುತ್ತವೆ. ಮಕ್ಕಳ ಮಾನಸಿಕ ವೃದ್ಧಿ, ಜತೆಯಾಗಿ ಧಾರ್ಮಿಕ ಆಚರಣೆ ಮಕ್ಕಳಿಗೆ ತಿಳಿಯಲು ಅವರನ್ನು ದೇವಾಲಯಗಳಿಗೆ ಕರೆತರಬೇಕು. ಒಂದಾಗಿ ಕೂಡಿ ಮಾಡುವ ಸಾರ್ವಜನಿಕ ಕಾರ್ಯಕ್ರಮಗಳಿಗೆ ಜನರ ಹೆಚ್ಚಿನ ಕಾಳಜಿಯಿಂದ ಸಹಕಾರ ನೀಡಬೇಕು ಎಂದು ಎಡಪದವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯನಾಥ ಶೆಟ್ಟಿ ಅವರು ಹೇಳಿದರು.
ಅವರು ಇಲ್ಲಿನ ಕಾವು ಪಂಚಲಿಂಗೇಶ್ವರ ದೇವಾ ಲಯದ ವಾರ್ಷಿಕ ಜಾತ್ರೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪುತ್ತೂರು ಮಹಾಲಿಂಗೇಶ್ವರ ದೇವಾಲಯ ವ್ಯವಸ್ಥಾಪನ ಸಮಿತಿ ಸದಸ್ಯ ಸಂಜೀವ ಕಲ್ಲೇಗ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವಾಲಯದಲ್ಲಿ ಪ್ರಗತಿ ಕೆಲಸವನ್ನು ಮಾಡಲು ಆಡಳಿತ ಮಂಡಳಿ ಯಾವಾಗಲೂ ಸಿದ್ಧರಿರಬೇಕು. ಆಗ ದೇವರ, ಜನರ ಸಹಕಾರ ಇರುತ್ತದೆ ಎಂದು ಹೇಳಿದರು.
ಕಾವು ಪಂಚಲಿಂಗೇಶ್ವರ ದೇವಾಲಯದ ಆಡಳಿತ ಸಮಿತಿ ಮಾಜಿ ಅಧ್ಯಕ್ಷ ಕಾವು ಹೇಮನಾಥ, ಪುತ್ತೂರು ಪುರಸಭೆ ಮಾಜಿ ಅಧ್ಯಕ್ಷ ಲೋಕೇಶ್ ಹೆಗ್ಡೆ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಸುಬ್ರಾಯ ಬಲ್ಯಾಯ ಮದ್ಲ, ಗೋಪಾಲ ಪಾಟಾಳಿ ಪಟ್ಟುಮೂಲೆ, ತಿಮ್ಮಯ್ಯ ಉಜುಗುಳಿ, ಚಿನ್ನಪ್ಪ ವಿಶ್ವನಾಥ, ಗುಲಾಬಿ ರೈ ಡೆಂಬಾಳೆ ಉಪಸ್ಥಿತರಿದ್ದರು.
ಸಮ್ಮಾನ
ಕಾರ್ಯಕ್ರಮದಲ್ಲಿ ದೇವಾಲಯದ ಜಾತ್ರೆಯಲ್ಲಿ ವಿವಿಧ ಕೆಲಸಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿರುವ ಕಾವು ಮಾಣಿಯಡ್ಕ ಶಿವಶಕ್ತಿ ಯುವಕ ವೃಂದದ ಪರವಾಗಿ ವೃಂದದ ಅಧ್ಯಕ್ಷ ವೆಂಕಪ್ಪ ಕುಲಾಲ್ ಕಾವು ಮತ್ತು ದೇವಾಲಯಕ್ಕೆ ಹೂವಿನ ಅಲಂಕಾರ ಪ್ರಾಯೋಜಿಸಿರುವ ಯೋಗೀಶ್ ಕಾವು ಅವರನ್ನು ವಿಜಯನಾಥ ವಿಟuಲ ಶೆಟ್ಟಿ ಶಾಲು ಹೊದಿಸಿ ಗೌರವಿಸಿದರು. ದಾನಿ ಸಂಜೀವ ಕಲ್ಲೇಗ ದೇವಾಲಯಕ್ಕೆ 100 ಸ್ಟೀಲ್ ತಟ್ಟೆ ಮತ್ತು 75 ಲೀಟರ್ ದೀಪದ ಎಣ್ಣೆ ಸೇವಾರೂಪವಾಗಿ ನೀಡಿದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ದಿವ್ಯನಾಥ ಶೆಟ್ಟಿ ಕಾವು ಸ್ವಾಗತಿಸಿದರು. ದೇರಣ್ಣ ರೈ ಮುದರಪಳ್ಳ ಕಾರ್ಯಕ್ರಮ ನಿರೂಪಿಸಿದರು. ಜಗನ್ನಾಥ ರೈ ಡೆಂಬಾಳೆ ಸಹಕರಿಸಿದರು. ವ್ಯವಸ್ಥಾಪನ ಸಮಿತಿ ಸದಸ್ಯ ಮೋನಪ್ಪ ಪೂಜಾರಿ ಕೆರೆಮಾರು ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಕಾವು ಮಾಣಿಯಡ್ಕ ಶಿವಶಕ್ತಿ ಯುವಕ ವೃಂದದ ಪ್ರಾಯೋಜಕತ್ವದಲ್ಲಿ ವಿಟuಲ ನಾಯಕ್ ವಿಟ್ಲ ಇವರಿಂದ “ಗೀತಾ ಸಾಹಿತ್ಯ ಸಂಭ್ರಮ’ ನಡೆಯಿತು ಬೆಳಗ್ಗೆ ದೇವರ ಬಲಿ ಉತ್ಸವ, ಮಧ್ಯಾಹ್ನ ಮಹಾಪೂಜೆ, ದೇವರ ಬಲಿ, ಮುಳಿಯ ಪಾಪರ್ಟಿಸ್ ಕಾವು ವತಿಯಿಂದ ಅನ್ನಸಂತರ್ಪಣೆ ಸೇವೆ, ರಾತ್ರಿ ತಾಯಂಬಕ ಸೇವೆ, ನಡುದೀಪೋತ್ಸವ, ಸಭಾ ಕಾರ್ಯಕ್ರಮ ನಡೆಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.