ಆತ್ಮವಿಶ್ವಾಸ ಹೆಚ್ಚಿಸುವ ಕಲೆಗಳಿಂದ ಚೈತನ್ಯ: ಮಂಡ್ಯ ರಮೇಶ್
Team Udayavani, Apr 10, 2017, 3:24 PM IST
ಸುಳ್ಯ : ಸಂವಹನ ಕಲೆ ನಾಟಕ ಇನ್ನಿತರ ಪ್ರಕಾರಗಳ ಮಾಧ್ಯಮವಲ್ಲ. ಅದು ಜೀವನದ ಉಸಿರು ಕೂಡ ಹೌದು. ಆತ್ಮವಿಶ್ವಾಸ ಹೆಚ್ಚಿಸುವ ಕಲೆಗಳು ನಮ್ಮ ಜೀವನದುದ್ದಕ್ಕೂ ಚೈತನ್ಯ ನೀಡುತ್ತವೆ ಎಂದು ಖ್ಯಾತ ಚಿತ್ರನಟ, ರಂಗನಿರ್ದೇಶಕ ಮಂಡ್ಯ ರಮೇಶ್ ತಿಳಿಸಿದರು.
ಸುಳ್ಯ ಹಳೆಗೇಟಿನಲ್ಲಿರುವ ಸಾಂಸ್ಕೃತಿಕ ಕಲಾಕೇಂದ್ರ ರಂಗಮನೆಯಲ್ಲಿ ರವಿವಾರ ರಾಜ್ಯ ಮಟ್ಟದ ಚಿಣ್ಣರಮೇಳವನ್ನು ಉದ್ಘಾ ಟಿಸಿ ಅವರು ಮಾತನಾಡಿದರು. ಕಲೆಗಾ ಗಿಯೇ ಜೀವನವನ್ನು ಮುಡಿಪಾಗಿಟ್ಟಿ ರುವ ಜೀವನ್‌ರಾಂ ಅವರನ್ನು ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದರೆ ಅದು ಯುವ ಜನಾಂಗಕ್ಕೆ ಸ್ಫೂರ್ತಿಯಾಗುತ್ತದೆ. ಈ ನಿಟ್ಟಿನಲ್ಲಿ ಶಾಸಕ ಅಂಗಾರ ಅವರು ಪ್ರಯತ್ನಿಸಬೇಕೆಂದರು.
ಶ್ರದ್ಧೆ ಅಗತ್ಯ
ಶಾಸಕ ಎಸ್. ಅಂಗಾರ ಅವರು ಅಧ್ಯಕ್ಷತೆ ವಹಿಸಿ, ಕಲೆ ಕರಗತವಾಗಲು ಶ್ರದ್ಧೆಬೇಕು. ಕಲಿತ ವಿದ್ಯೆ ಸಾರ್ಥಕ ವಾಗುವಂತೆ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಯಶಸ್ಸು ಸಾಧಿಸಿ ನಾಡು ನಮ್ಮನ್ನು ಗುರುತಿಸುತ್ತದೆ ಎಂದರು.
ವೈವಿಧ್ಯ ವಿಚಾರ ಲಭ್ಯ
ಅತಿಥಿಯಾಗಿದ್ದ ಸುಳ್ಯ ಎನ್.ಎಂ.ಸಿ.ಯ ಸಮಾಜಕಾರ್ಯ ಸ್ನಾತಕೋ ತ್ತರ ವಿಭಾಗದ ಉಪನ್ಯಾಸಕಿ ಮೀನಾ ಕೃಷ್ಣಮೂರ್ತಿ, ಶಿಕ್ಷಣ ವ್ಯವಸ್ಥೆಯಲ್ಲಿ ಸಿಗದ ವಿಚಾರ ವೈವಿಧ್ಯಗಳು ಮಕ್ಕಳಿಗೆ ಈ ಶಿಬಿರದಿಂದ ಸಿಗುತ್ತವೆ. ಇಂದಿನ ಶಿಕ್ಷಣ ಪದ್ಧತಿ ಉದ್ಯೋಗಕ್ಕಾಗಿ ಮಕ್ಕ ಳನ್ನು ತಯಾರು ಮಾಡುತ್ತಿದ್ದು, ಮುಂದೆ ಉತ್ತಮ ಉದ್ಯೋಗ ದೊರೆ ಯುತ್ತದೆ ಎಂಬ ಭರವಸೆ ಇಲ್ಲ. ಈ ಶಿಬಿರದಲ್ಲಿ ಪೇಪರ್‌ಗೆ ಬಣ್ಣ ತುಂಬು ಕಲೆಯನ್ನು ಮಾತ್ರ ಕಲಿಯುವುದಲ್ಲ, ಬದುಕಿಗೆ ಬಣ್ಣ ತುಂಬುವ ಕಲೆಯಲ್ಲಿ ಯಶಸ್ವಿಯಾಗುತ್ತಾರೆ ಎಂದರು.
ರಂಗ ನಿರ್ದೇಶಕ ಜೀವನ್‌ರಾಂ ಸುಳ್ಯ ಸ್ವಾಗತಿಸಿ, ಎಂಟು ದಿನಗಳ ಕಾಲ ನಡೆಯುವ ಈ ಚಿಣ್ಣರ ಮೇಳದ ಸಂಪ ನ್ಮೂಲ ವ್ಯಕ್ತಿಗಳಾಗಿ ಮಂಡ್ಯ ರಮೇಶ್, ಜಾದೂಗಾರ ಕುದ್ರೋಳಿ ಗಣೇಶ್, ಸತ್ಯನಾ ಕೊಡೇರಿ ಕುಂದಾಪುರ, ಮುರಹರಿ ಕಾಸರಗೋಡು, ಗೀತಾ ಕುಮಾರಿ ಸುಳ್ಯ, ಕೃಷ್ಣಪ್ಪ ಬಂಬಿಲ, ಎಂ.ಜಿ. ಕಜೆ ಮಂಗಳೂರು, ಜನಾರ್ದನ ಹಾವಂಜೆ ಉಡುಪಿ, ತಾರಾನಾಥ ಕೈರಂಗಳ, ಭಾಸ್ಕರ ನೆಲ್ಯಾಡಿ, ಶ್ರೀಹರಿ ಪೈಂದೋಡಿ, ಪ್ರಸನ್ನ ಐವರ್ನಾಡು, ಪದ್ಮನಾಭ ಕೊಯಿನಾಡು, ಡಾ| ಸುಂದರ ಕೇನಾಜೆ, ಸ್ಮಿತಾ ಅಮೃತರಾಜ್, ಡಾ| ವೀಣಾ ಎನ್., ಗುರುಪ್ರಸಾದ್ ಮಂಗಳೂರು, ಭಗೀರಥ ಕುಮಟಾ, ಮೈಮ್ ರಾಮ್‌ದಾಸ್, ಮನಸ್ವಿ ಮಂಗಳೂರು, ಪಟ್ಟಾಭಿರಾಂ ಸುಳ್ಯ, ಡಾ| ಮೌಲ್ಯಾ ಜೀವನ್‌ರಾಂ, ಮೀನಾ ಕೃಷ್ಣಮೂರ್ತಿ ಮೊದಲಾದವರು ಭಾಗವ ಹಿಸಲಿದ್ದಾರೆ ಎಂದರು.ಮನುಜ ನೇಹಿಗ ನಿರೂಪಿಸಿ, ಡಾ| ಮೌಲ್ಯ ಜೀವನ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.