ಅಡಿಕೆ ಮರಗಳಿಗೆ ಕುತ್ತು : ಕೃಷಿಕರಿಂದ ಪರಿಹಾರಕ್ಕೆ ಬೇಡಿಕೆ
Team Udayavani, Feb 1, 2018, 11:33 AM IST
ಆರಂಬೋಡಿ: ಆರಂಬೋಡಿ ಗ್ರಾ.ಪಂ. ವ್ಯಾಪ್ತಿಯ ಹಕ್ಕೇರಿ ಫಲ್ಗುಣಿ ನದಿಗೆ 4.73 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಸೇತುವೆಗೆ ಇದೀಗ ವಿಘ್ನ ಎದುರಾಗಿದೆ.
ಮೂರು ಮಂದಿ ಸ್ಥಳೀಯ ನಿವಾಸಿಗಳ ಕೃಷಿ ಜಮೀನಿಗೆ ಸೇತುವೆ ನಿರ್ಮಾಣದಿಂದ ಹಾನಿಯಾಗಲಿರುವುದು ಸಮಸ್ಯೆಗೆ ಕಾರಣವಾಗಿದೆ. ತಕ್ಕ ಪರಿಹಾರ ದೊರೆತರೆ ಭೂಮಿ ಬಿಟ್ಟುಕೊಡುವುದಾಗಿ ಜಮೀನುದಾರರು ತಿಳಿಸಿದ್ದಾರೆ. 2.5 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ಗುಂಡೂರಿಯಿಂದ ಹಕ್ಕೇರಿಗೆ ರಸ್ತೆ ನಿರ್ಮಾಣವಾಗುತ್ತಿದೆ. ಮೂರು ಮಂದಿ ಕೃಷಿಕರ ಸುಮಾರು190ರಷ್ಟು ಅಡಿಕೆ ಮರಗಳಿಗೆ ಸೇತುವೆ ನಿರ್ಮಾಣದಿಂದ ಕುತ್ತು ಬರಲಿದ್ದು, ಪರಿಹಾರ ಮೊತ್ತ ಯಾಚಿಸಿದ್ದಾರೆ.
ಸರ್ವೆ ಬಳಿಕ ಸ್ಪಷ್ಟ ಚಿತ್ರಣ
ಸರ್ವೆ ಬಳಿಕ ಸೇತುವೆ ನಿರ್ಮಾಣದ ಬಗ್ಗೆ ಹಾಗೂ ವಶವಾಗುವ ಕೃಷಿ ಪ್ರದೇಶದ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಒಂದು ವೇಳೆ ಜಮೀನುದಾರರಿಗೆ ಪರಿಹಾರ ಮೊತ್ತ ನೀಡುವಲ್ಲಿ ವಿಫಲವಾದರೆ ಭಾರೀ ಮೊತ್ತದ ಯೋಜನೆ ಯೊಂದು ಗ್ರಾಮಸ್ಥರಿಂದ ಕೈತಪ್ಪಲಿದೆ.
ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ಆರಂಬೋಡಿ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಎಚ್. ಹುಲಿಮೇರು, ಸದಸ್ಯರಾದ ಶಶಿಧರ ಶೆಟ್ಟಿ, ಹರೀಶ್ ಕುಮಾರ್, ರಮೇಶ್ ಪೂಜಾರಿ, ಮುಖ್ಯಮಂತ್ರಿ ಸಡಕ್ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ ಜಯಾನಂದ ಅವರು ಭೇಟಿ ನೀಡಿ ಕೃಷಿಕರೊಂದಿಗೆ ಮಾತುಕತೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.