ಬಾಣಂತಿ ಪತ್ನಿಯ ಕೊಲೆಗೈದ ಪತಿಯ ಆರೋಪ ಸಾಬೀತು


Team Udayavani, Feb 10, 2017, 3:45 AM IST

court 600.jpg

ಮಂಗಳೂರು: ಬಾಣಂತಿ ಪತ್ನಿಯನ್ನು ಅಮಾನವೀಯವಾಗಿ ಕತ್ತಿಯಿಂದ ಕಡಿದು ಕೊಲೆಗೈದ ಹಾಗೂ ಎರಡು ದಿನಗಳ ಹಿಂದೆ ಜನಿಸಿದ ಹಸು ಗೂಸನ್ನು ಹತ್ಯೆ ಮಾಡಲು ಯತ್ನಿಸಿದ ಆರೋಪಿಯ ಮೇಲಣ  ಆರೋಪ ಮಂಗಳೂರು 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌  ನ್ಯಾಯಾಲಯದಲ್ಲಿ ಗುರುವಾರ ಸಾಬೀತಾಗಿದೆ.

ತೆಂಕ ಎಡಪದವು ಕುವೆದಪಾಡಿ ನಿವಾಸಿ ಜಯಂತ್‌ (33) ಅಪರಾಧಿ. ಈತ ತನ್ನ ಬಾಣಂತಿ ಪತ್ನಿಯನ್ನು ಕೊಲೆಗೈದು, ಎರಡು ದಿನಗಳ ಹಸುಗೂಸಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ,ಸಾರ್ವಜನಿಕರಿಗೆ ಬೆದರಿಕೆಯೊಡ್ಡಿ ಭಯದ ವಾತಾವರಣ ಸೃಷ್ಟಿಸಿದ ಆರೋಪ ಎದುರಿಸುತ್ತಿದ್ದ. 

ಪ್ರಕರಣದ ಹಿನ್ನೆಲೆ: ಜಯಂತ್‌ ಬಡಗಮಿಜಾರು ಗ್ರಾಮದ ಕೊಪ್ಪದ ಕುಮೇರಿನ ಜಯಂತಿ (24)ಯನ್ನು ಪ್ರೀತಿಸಲಾರಂಭಿಸಿದ್ದ. ಪ್ರೀತಿ ದೈಹಿಕ ಸಂಬಂಧ ಬೆಳೆಸುವ ತನಕ ಮುಂದುವರಿದು ಆಕೆ ಗರ್ಭವತಿಯಾಗಿದ್ದಳು. ಆಕೆ  ಮದುವೆಯಾಗುವಂತೆ ಒತ್ತಾಯಿಸಿದಾಗ ಜಯಂತ್‌ ನಿರಾಕರಿಸಿದ.  ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾದಾಗ ಹೆದರಿದ ಆತ 2012ರ  ಮಾ.  1 ರಂದು ಮದುವೆಯಾದ. ಬಳಿಕ ಸುಮಾರು 15 ದಿನಗಳ ಕಾಲ ಆಕೆಯ ಮನೆಯಲ್ಲಿದ್ದು, ಅನಂತರ  ಆಕೆಯನ್ನು ಬಿಟ್ಟು ಹೊರ ನಡೆದಿದ್ದ.
ಜಯಂತಿ ಜೂನ್‌ ತಿಂಗಳಿನಲ್ಲಿ ಹೆರಿಗೆಗಾಗಿ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಜೂ.18 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಳು.  ಜೂ.20 ರಂದು ರಾತ್ರಿ 11 ಗಂಟೆಗೆ ಜಯಂತ್‌ ಆಸ್ಪತ್ರೆಗೆ ಬಂದಿದ್ದ. ದಾದಿಯರು ಅವನನ್ನು ಒಳಗೆ ಬಿಡಲು ನಿರಾಕರಿಸಿದರು.  ಆದರೆ ಆತ ಪತ್ನಿ ಹಾಗೂ ಮಗುವನ್ನು ಒಂದು ಬಾರಿ ನೋಡಿ ಹೋಗುವುದಾಗಿ ತಿಳಿಸಿದ ಮೇರೆಗೆ ಅನುಮತಿ ನೀಡಿದ್ದರು,. ಪತ್ನಿ ಇದ್ದ ಮಹಿಳಾ ವಾರ್ಡ್‌ಗೆ ಹೋದ ಆತ ಮೊದಲು ಆಕೆಯೊಂದಿಗೆ ಮಾತನಾಡಿ ಏಕಾಏಕಿ ಕತ್ತಿಯಿಂದ ಕಡಿದ‌‌.  ಜೀವ ಉಳಿಸಿಕೊಳ್ಳುವುದಕ್ಕಾಗಿ ಆಕೆ ಇನ್ನೊಂದು ವಾರ್ಡ್‌ಗೆ ಓಡಿ ಹೋಗಿದ್ದರು. . ಆಗ ಬೆಡ್‌ ಮೇಲಿದ್ದ ಎರಡು ದಿನಗಳ ಮಗುವನ್ನು ಕತ್ತಿಯಲ್ಲಿ ಎತ್ತಿ ನೆಲಕ್ಕೆ ಬಿಸಾಡಿದ್ದ. ಮತ್ತೆ ಪತ್ನಿಯನ್ನು ಹಿಂಬಾಲಿಸಿ ತಲೆ,ಕುತ್ತಿಗೆಗೆ ಕಡಿದು ಕೊಲೆ ಮಾಡಿದ್ದ. ಅಲ್ಲಿದ್ದವರು ರಕ್ಷಣೆಗೆ ಬಂದಾಗ ಅವರಿಗೂ ಕತ್ತಿ ತೋರಿಸಿ ಜೀವ ಬೆದರಿಕೆ ಒಡ್ಡಿದ್ದ. ಗಂಭೀರ ಸ್ವರೂಪದ ಗಾಯಗೊಂಡಿದ್ದ ಮಗು ಪವಾಡಸದೃಶವಾಗಿ ಬದುಕುಳಿದಿತ್ತು.

ಆರೋಪ ಸಾಬೀತು: ಜಯಂತ್‌ ವಿರುದ್ಧ ಪತ್ನಿಯ ಕೊಲೆ,ಮಗುವಿಗೆ ಗಂಭೀರ ಗಾಯ,ಕೊಲೆ ಯತ್ನ,ಜೀವಬೆದರಿಕೆ ಪ್ರಕರಣ ದಾಖಲಾಗಿದ್ದು, ಎಲ್ಲಾ ಆರೋಪಗಳು  ಸಾಬೀತಾಗಿವೆ. ಪಬ್ಲಿಕ್‌ ಪ್ರಾಸಿಕ್ಯೂಟರ್‌ ರಾಜು ಪೂಜಾರಿ ಬನ್ನಾಡಿ ಒಟ್ಟು 39 ಸಾಕ್ಷಿ ಒದಗಿಸಿದ್ದರು. 58 ದಾಖಲಾತಿ ಹಾಗೂ 17 ಸೊತ್ತುಗಳನ್ನು ಹಾಜರುಪಡಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಕ ಹಂತದಲ್ಲಿ ಸೀನಿಯರ್‌ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳಾದ  ಪುಷ್ಪರಾಜ ಅಡ್ಯಂತಾಯ ಮತ್ತು  ಮಂಜುನಾಥ ಭಟ್‌ಪನ್ನೆ ಅವರು ನಡೆಸಿದ್ದರು.

ಮೂಡಬಿದಿರೆಯ ಅಂದಿನ ಪೊಲೀಸ್‌ ಇನ್‌ಸ್ಪೆಕ್ಟರ್‌ ಎ.ಕೆ.ತಿಮ್ಮಯ್ಯ ಪ್ರಕರಣದ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದರು. 

ನ್ಯಾಯಾಧೀಶ ಸಿ.ಎಂ.ಜೋಶಿ ಅವರು ಪ್ರಕರಣದ ವಿಚಾರಣೆ ನಡೆಸಿ ಜಯಂತ್‌ ಅಪರಾಧಿ ಎಂದು ತೀರ್ಪು ನೀಡಿದ್ದಾರೆ. ಫೆ.13 ರಂದು ಶಿಕ್ಷೆ  ಪ್ರಮಾಣದ ವಾದ ಮಂಡನೆ ನಡೆಯಲಿದೆ. ಅಪರಾಧಿಗೆ ಗರಿಷ್ಠ ಪ್ರಮಾಣದ ಶಿಕ್ಷೆ ನೀಡಬೇಕು ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌  ನ್ಯಾಯಾಲಯಕ್ಕೆ ಮನವಿ ಮಾಡಲಿದ್ದಾರೆ.

ಟಾಪ್ ನ್ಯೂಸ್

Sringeri-DKS

Devotee: ಟೆಂಪಲ್‌ ರನ್‌ ಎನ್ನುವುದಾದರೆ ದೇಗುಲಗಳನ್ನು ಮುಚ್ಚಿಬಿಡಿ: ಡಿ.ಕೆ.ಶಿವಕುಮಾರ್‌

Jai Hanuman: ರಿಷಬ್‌ ಶೆಟ್ಟಿ ಚಿತ್ರತಂಡದ ವಿರುದ್ಧ ದೂರು

Jai Hanuman: ರಿಷಬ್‌ ಶೆಟ್ಟಿ ಚಿತ್ರತಂಡದ ವಿರುದ್ಧ ದೂರು

CT-Ravi-Threat

Threat: ಹೆಬ್ಬಾಳ್ಕರ್‌ ಕ್ಷಮೆ ಕೇಳದೆ ಹೋದ್ರೆ ಹತ್ಯೆ: ಸಿ.ಟಿ.ರವಿಗೆ ಬೆದರಿಕೆ ಪತ್ರ ರವಾನೆ

Daily Horoscope: ವಸ್ತ್ರ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ, ಆರೋಗ್ಯ ತಕ್ಕಮಟ್ಟಿಗೆ ಉತ್ತಮ

DKS-MUG

Naxal Surrender: ‘ಶರಣಾಗುವಾಗ ಬಂದೂಕು ಹಿಡಿದುಕೊಂಡು ಬರುತ್ತಾರಾ?’: ಡಿ.ಕೆ.ಶಿವಕುಮಾರ್‌

14

Belthangady: ವಾರದ ಹಿಂದೆ ನಾಪತ್ತೆಯಾಗಿದ್ದ ಅನ್ಯಕೋಮಿನ ಜೋಡಿ ವಿವಾಹ

JDS

ಇಂದು ಜೆಡಿಎಸ್‌ ಸಭೆ: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಒತ್ತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kamb

ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ; ನರಿಂಗಾನ ಕಂಬಳೋತ್ಸವದಲ್ಲಿ ಸಿಎಂ ಭರವಸೆ

1-h-d-r

ಮಂಗಳೂರಿನಲ್ಲಿ ಇಂಧನ ಭದ್ರತಾ ಸಮಾವೇಶ ನಡೆಸಿ: ಸಚಿವ ಹರ್ದೀಪ್‌ ಸಿಂಗ್

Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ

Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Sringeri-DKS

Devotee: ಟೆಂಪಲ್‌ ರನ್‌ ಎನ್ನುವುದಾದರೆ ದೇಗುಲಗಳನ್ನು ಮುಚ್ಚಿಬಿಡಿ: ಡಿ.ಕೆ.ಶಿವಕುಮಾರ್‌

Jai Hanuman: ರಿಷಬ್‌ ಶೆಟ್ಟಿ ಚಿತ್ರತಂಡದ ವಿರುದ್ಧ ದೂರು

Jai Hanuman: ರಿಷಬ್‌ ಶೆಟ್ಟಿ ಚಿತ್ರತಂಡದ ವಿರುದ್ಧ ದೂರು

CT-Ravi-Threat

Threat: ಹೆಬ್ಬಾಳ್ಕರ್‌ ಕ್ಷಮೆ ಕೇಳದೆ ಹೋದ್ರೆ ಹತ್ಯೆ: ಸಿ.ಟಿ.ರವಿಗೆ ಬೆದರಿಕೆ ಪತ್ರ ರವಾನೆ

Daily Horoscope: ವಸ್ತ್ರ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ, ಆರೋಗ್ಯ ತಕ್ಕಮಟ್ಟಿಗೆ ಉತ್ತಮ

DKS-MUG

Naxal Surrender: ‘ಶರಣಾಗುವಾಗ ಬಂದೂಕು ಹಿಡಿದುಕೊಂಡು ಬರುತ್ತಾರಾ?’: ಡಿ.ಕೆ.ಶಿವಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.