ಕರಾವಳಿಯಾದ್ಯಂತ ‘ನುಗ್ಗೆಕಾಯಿ’ ತೆರೆಗೆ
Team Udayavani, Nov 11, 2017, 12:37 PM IST
ಮಹಾನಗರ: ಕರಾವಳಿ ಮೂಲದ ಚಿತ್ರ ತಂಡ ನಿರ್ಮಿಸಿದ ‘ನುಗ್ಗೇಕಾಯಿ’ ಸಿನೆಮಾ ಶುಕ್ರವಾರ ಮಂಗಳೂರಿನ ರಾಮಕಾಂತಿ ಥಿಯೇಟರ್‌ನಲ್ಲಿ ಬಿಡುಗಡೆಗೊಂಡಿತು.
ಇದು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಲನಚಿತ್ರವಾಗಿದ್ದು, ಜಿಲ್ಲೆಯಲ್ಲಿ ಚಿತ್ರೀಕರಣಗೊಂಡ ಮತ್ತು ತಮ್ಮ ಕಾಲೇಜಿನ ಹಳೆ ವಿದ್ಯಾರ್ಥಿ ವರ್ಧನ್ ಪೈ ಖಳನಾಯಕರಾಗಿ ನಟಿಸಿದ್ದಾಗಿದ್ದು, ಇದು ನೂರು ದಿನ ಪ್ರದರ್ಶನ ಕಾಣಲಿ ಎಂದು ಎಸ್.ಡಿ.ಎಂ. ಉದ್ಯಮ, ವ್ಯವಹಾರ ಆಡಳಿತ ಕಾಲೇಜಿನ ನಿರ್ದೇಶಕ ಡಾ| ದೇವರಾಜ್ ಹೇಳಿದರು.
ಪತ್ರಕರ್ತ ಜಿತೇಂದ್ರ ಕುಂದೇಶ್ವರ ಅವರು ಚಿತ್ರದ ತಾಂತ್ರಿಕ ಮತ್ತು ಕಲಾವಿದರ ತಂಡವನ್ನು ಅಭಿನಂದಿಸಿದರು. ಅಭಯಾಶ್ರಮದ ಅಧ್ಯಕ್ಷ ಶ್ರೀನಾಥ್ ಹೆಗ್ಡೆ, ಮಾಧ್ಯಮ ಮತ್ತು ಪ್ರಚಾರ ಸಲಹೆಗಾರ ವಸಂತ ಮಲ್ಯ, ಪ್ರಮುಖರಾದ ವಿಠಲದಾಸ ಪೈ, ಚಿತ್ರಮಂದಿರದ ಪಾಲುದಾರರಾದ ವಸಂತ ರಾವ್ ಉಪಸ್ಥಿತರಿದ್ದರು.
ನಟ ವರ್ಧನ್ ಪೈ ಮಾತನಾಡಿ, ಚಿತ್ರವು ಕೌಟುಂಬಿಕ ಆಧಾರಿತ ಹಾಸ್ಯ ಪ್ರಧಾನಚಿತ್ರವಾಗಿದ್ದು, ಮಧುಸೂದನ್ ನಾಯಕ ನಟ, ಎಸ್ತರ್ ನೊರೊನ್ಹಾ ನಾಯಕ ನಟಿ ಜೋಡಿ ಉತ್ತಮವಾಗಿ ಅಭಿನಯಿಸಿದ್ದಾರೆ. ಬ್ಯಾಂಕ್ ಜನಾರ್ದನ್ ಸಹನಟರಾಗಿದ್ದಾರೆ. ಉದ್ಯಮಿ ಪ್ರೀತೀಶ್ ಹೆಗ್ಡೆ ನಿರ್ಮಾಪಕರಾಗಿದ್ದು, ಎ.ವೇಣುಗೋಪಾಲ ಚಿತ್ರಕಥೆ ಮತ್ತು ನಿರ್ದೇಶಕರಾಗಿದ್ದಾರೆ. ಸೂರ್ಯಕಾಂತ ಛಾಯಾಗ್ರಾಹಣ, ಸುರೇಶ್ ಸಂಗೀತ ನಿರ್ದೇಶಕರಾಗಿದ್ದಾರೆ ಎಂದರು. ಅವಿನಾಶ್ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.