ಇಂದು ಅತ್ತಾವರ ಶ್ರೀ ಅರಸು ಮುಂಡತ್ತಾಯ ದೈವಸ್ಥಾನದ ಬಂಡಿ ನೇಮ
Team Udayavani, Apr 11, 2018, 10:20 AM IST
ಮಹಾನಗರ: ಅತ್ತಾವರ ಶ್ರೀ ಅರಸು ಮುಂಡತ್ತಾಯ ದೈವಸ್ಥಾನದ ವರ್ಷಾವಧಿ ಉತ್ಸವ ಎ.8ರಿಂದ ಆರಂಭಗೊಂಡಿದ್ದು, ಎ.11ರಂದು ಇಡೀ ಬಂಡಿ ನೇಮ ವೈಭವದಿಂದ ನಡೆಯಲಿದೆ.
ಎ. 8ರಂದು ಶ್ರೀ ಚಕ್ರಪಾಣಿ ಕ್ಷೇತ್ರಕ್ಕೆ ಕೊಪ್ಪರಿಗೆ ಒಪ್ಪಿಸಿ ಧ್ವಜಸ್ತಂಭ ಏರಿಸಲಾಯಿತು. ರಾತ್ರಿ 8ರಿಂದ ಚಕ್ರಪಾಣಿ ದೇವಸ್ಥಾನಕ್ಕೆ ವೈದ್ಯನಾಥ ದೈವ ಭೇಟಿ, ಭಂಡಾರ ಗುಡಿಯಿಂದ ದೈವಸ್ಥಾನಕ್ಕೆ ಭಂಡಾರ ಆಗಮನವಾಗಿ ಧ್ವಜಾರೋಹಣವಾಯಿತು. ಎ. 9ರಂದು ಅರಸು ದೈವಗಳ ಕಂಚಿಲು ಬಲಿ ಸೇವೆ ಜರಗಿತು. ಎ. 10ರಂದು ವೈದ್ಯನಾಥ ದೈವದ ಅರ್ಧಬಂಡಿ ನೇಮ ನಡೆಯಿತು.
ಇಡೀ ಬಂಡಿ ನೇಮ
ಎ. 11ರಿಂದ ಅರಸು ದೈವದ ಇಡೀ ಬಂಡಿ ನೇಮ, ಎ.12ರಿಂದ ಧೂಮಾವತಿ ಬಂಟ ದೈವಗಳ ನೇಮ, ಎ. 13ರಿಂದ ವೈದ್ಯನಾಥ ದೈವದ ವಲಸರಿ ನೇಮ, ಪರಿವಾರ ದೈವಗಳ ನೇಮ ನಡೆಯಲಿದೆ. ಬಳಿಕ ಧ್ವಜಾವರೋಹಣವಾಗಿ ಭಂಡಾರ ನಿರ್ಗಮನವಾಗಲಿದೆ ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.