ಇಂದು ‘ದಿಶಾ’ ಉದ್ಯೋಗ ಮೇಳ
Team Udayavani, Feb 17, 2018, 9:39 AM IST
ಕೊಣಾಜೆ : ಮಂಗಳೂರು ವಿವಿ ‘ಮಂಗಳಗಂಗೋತ್ರಿ ಕ್ಯಾಂಪಸ್‌ನಲ್ಲಿ ಫೆ.17ರಂದು ಶನಿವಾರ ನಡೆಯುವ ಉದ್ಯೋಗ ಮೇಳಕ್ಕೆ ಸರ್ವ ಸಿದ್ಧತೆ ನಡೆಯುತ್ತಿದೆ. 135 ಕಂಪೆನಿಗಳು ಭಾಗವಹಿಸಲಿದ್ದು, 9 ಸಾವಿರ ಉದ್ಯೋಗ ಅವಕಾಶವಿದೆ. ಈ ಮೇಳದಲ್ಲಿ 10,000ಕ್ಕೂ ಅಧಿಕ ಆಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಜಿಲ್ಲಾಡಳಿತ, ಉದ್ಯೋಗ ಮತ್ತು ತರಬೇತಿ ಇಲಾಖೆ, ಸಿಇಒಎಲ್ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಉದ್ಯೋಗ ಮೇಳವು ಈಗಾಗಲೇ ಪದವಿ, ಸ್ನಾತಕೋತ್ತರ, ನರ್ಸಿಂಗ್, ಐಟಿಐ, ಹೊಟೇಲ್, ಮ್ಯಾನೆಂಜ್‌ಮೆಂಟ್/ ಡಿಪ್ಲೊಮಾ ಕೋರ್ಸನ್ ಪೂರ್ಣಗೊಳಿಸಿರುವವರಿಗೆ ಈ ಮೇಳದಲ್ಲಿ ಭಾಗವಹಿಸಲು ಅವಕಾಶವಿದೆ.
10 ಸಾವಿರ ಮಂದಿ ನೋಂದಣಿ
ಸುಮಾರು 10,000ದಷ್ಟು ಅಭ್ಯರ್ಥಿಗಳು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮೇಳದ ಉಸ್ತುವಾರಿ ವಹಿಸಿಕೊಂಡಿರುವ ವಿವೇಕ್ ಆಳ್ವ ತಿಳಿಸಿದರು. ಉದ್ಯೋಗ ಮೇಳದ ಸ್ಥಳದಲ್ಲೇ ನೋಂದಣಿ ಮಾಡಲು ಅವಕಾಶವಿದೆ ಎಂದರು.
ಉದ್ಯೋಗ ಮೇಳಕ್ಕಾಗಿ ಈಗಾಗಲೇ ಮಂಗಳೂರು ವಿಶ್ವ ವಿದ್ಯಾನಿಲಯದ 169 ಕೊಠಡಿಗಳನ್ನು ಗೊತ್ತುಪಡಿಸಲಾಗಿದೆ. ಒಟ್ಟು 91 ಕಂಪ್ಯೂಟರ್ ವ್ಯವಸ್ಥೆ ಮಾಡಲಾಗಿದೆ. ಮಂಗಳಗಂಗೋತ್ರಿ ಕ್ಯಾಂಪಸ್‌ನ ಮಾನವಿಕ ವಿಭಾಗ, ವಿಜ್ಞಾನ ಸಂಕೀರ್ಣ, ಮ್ಯಾನೇಜ್ ಮೆಂಟ್ ಬ್ಲಾಕ್‌ನಲ್ಲಿ ಕಂಪೆನಿಗಳನ್ನು ಕ್ರಮವಾಗಿ ವಿಂಗಡಿಸಲಾಗಿದೆ. ಅಭ್ಯರ್ಥಿಗಳ ಅನುಕೂಲಕ್ಕಾಗಿ ಮಾಹಿತಿ ಇರುವ ಫಲಕಗಳನ್ನು ಅಳವಡಿಸಲಾಗಿದೆ.
ಬಸ್ ವ್ಯವಸ್ಥೆ
ಉದ್ಯೋಗ ಮೇಳಕ್ಕೆ ಬರುವ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಕೋಣಾಜೆವರೆಗೆ ಕೆ.ಎಸ್.ಆರ್ .ಟಿ.ಸಿ. ವತಿಯಿಂದ ವಿಶೇಷ ಬಸ್‌ಗಳ ಸಂಚಾರ ನಡೆಯಲಿದೆ. ನಗರದ ಸ್ಟೇಟ್‌ಬ್ಯಾಂಕ್, ಪಿ.ವಿ.ಎಸ್. ಹಾಗೂ ಪಂಪ್‌ವೆಲ್ ಈ ಮೂರು ಸ್ಥಳಗಳಿಂದ ಬೆಳಗ್ಗೆ 7ಗಂಟೆಯಿಂದ 10 ಗಂಟೆವರೆಗೆ ವಿಶೇಷ ಬಸ್‌ಗಳು ಸಂಚರಿಸಲಿವೆ. ಅದೇ ರೀತಿ ಅಪರಾಹ್ನ 3 ಗಂಟೆಯಿಂದ ಸಂಜೆ 7 ಗಂಟೆವರೆಗೆ ಕೊಣಾಜೆಯಿಂದ ಮಂಗಳೂರಿಗೆ ವಿಶೇಷ ಬಸ್ ಗಳು ಸಂಚಾರಿಸಲಿವೆ.
ಮಿತದರದಲ್ಲಿ ಊಟದ ವ್ಯವಸ್ಥೆ
ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಮಿತದರದಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಮೊದಲ ಹಂತದಲ್ಲಿ 7,000 ಊಟದ ವ್ಯವಸ್ಥೆಯನ್ನು ನಡೆಸಲಾಗಿದೆ. ಇದರ ಸದುಪಯೋಗ ಪಡೆದು ಕೊಳ್ಳಬಹುದಾಗಿದೆ. ಶನಿವಾರ ಬೆಳಗ್ಗೆ 9.30ಕ್ಕೆ ವಿಶ್ವ ವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಯೋಗ ಮೇಳವನ್ನು ಉದ್ಘಾಟಿಸಲಿದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್, ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಭಾಗವಹಿಸಲಿದ್ದಾರೆ.
ಸ್ವಯಂ ಸೇವಕರಾಗಿ ವಿದ್ಯಾರ್ಥಿಗಳು
ಮಂಗಳೂರು ವಿವಿಯ ಮಾನವಿಕ ವಿಭಾಗದ ಬಳಿ ಬೆಳಗ್ಗೆ 8 ಗಂಟೆಯಿಂದ ನೋಂದಣಿ ಕೌಂಟರ್ ಕಾರ್ಯಾರಂಭಗೊಳ್ಳಲಿದೆ. ಅಭ್ಯರ್ಥಿಗಳ ಅನುಕೂಲಕ್ಕೆ ಆಳ್ವಾಸ್ ಕಾಲೇಜಿನ 300 ವಿದ್ಯಾರ್ಥಿಗಳು ಮತ್ತು 60 ಸಿಬಂದಿ, ಕೆ.ಪಿ.ಟಿ.ಯ 50 ವಿದ್ಯಾರ್ಥಿಗಳು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.