ವಿವಿಧ ಯೋಜನೆಗಳಿಗೆ ಇಂದು ಶಿಲಾನ್ಯಾಸ
Team Udayavani, Mar 15, 2018, 11:27 AM IST
ಮಹಾನಗರ: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಹತ್ವದ ಬೃಹತ್ ಯೋಜನೆಗಳಿಗೆ ಮಾ. 15ರಂದು ಕ್ಷೇತ್ರದ ಶಾಸಕ ಬಿ.ಎ. ಮೊಯಿದಿನ್ ಬಾವ ಅವರು ಶಿಲಾನ್ಯಾಸ ನಡೆಸಲಿದ್ದಾರೆ ಎಂದು ಮೇಯರ್ ಭಾಸ್ಕರ ಕೆ. ತಿಳಿಸಿದರು.
ನಗರದ ಪಾಲಿಕೆಯಲ್ಲಿನ ಶಾಸಕ ಮೊಯಿದಿನ್ ಬಾವಾ ಅವರ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಮಾರು 126 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಸುರತ್ಕಲ್ ಮಾರುಕಟ್ಟೆಯ ಪ್ರಥಮ ಹಂತದ ಕಾಮಗಾರಿಗೆ ಶಿಲಾನ್ಯಾಸ ನಡೆಯಲಿದೆ. ಪ್ರಥಮ ಹಂತದಲ್ಲಿ 61 ಕೋಟಿ ರೂ. ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಅದರಲ್ಲಿ 11 ಕೋಟಿ ರೂ. ಪಾಲಿಕೆ ಅನುದಾನವಾಗಿದ್ದು, ಉಳಿದ 50 ಕೋಟಿ ರೂ.ರಾಜ್ಯ ಸರಕಾರದ ವಿಶೇಷ ಅನುದಾನವಾಗಿದೆ ಎಂದರು.
ಸುಮಾರು 62.10 ಕೋಟಿ ರೂ. ಸುರತ್ಕಲ್‌ನಿಂದ ಕೈಕಂಬ ವೃತ್ತ ಗಣೇಶಪುರ ದೇವಸ್ಥಾನದ ವರೆಗಿನ ಪಿ.ಡಬ್ಲ್ಯು.ಡಿ. ಷಟ್ಪಥ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಶಿಲಾನ್ಯಾಸ ನಡೆಯಲಿದ್ದು, ಕಾಮಗಾರಿಗೆ 4.10 ಕೋಟಿ ರೂ. ಅನುದಾನ ಪಾಲಿಕೆ ನೀಡಿದ್ದು, ಉಳಿದ 58 ಕೋಟಿ ರೂ. ಅನುದಾನವು ಪಿ.ಡಬ್ಲ್ಯೂಡಿ. ಇಲಾಖೆಯದ್ದಾಗಿರುತ್ತದೆ. ಇದಲ್ಲದೆ, ಪ್ರೀಮಿಯರ್ ಎಫ್‌ಎಆರ್ ಫಂಡ್‌ನಿಂದ 113 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಸುರತ್ಕಲ್-ಗುಡ್ಡೆ ಕೊಪ್ಲ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಶಿಲಾನ್ಯಾಸ ನೆರವೇರಲಿದೆ.
ಎಸ್‌ಎಫ್‌ಸಿಯು 2.25 ಕೋಟಿ ರೂ. ಅನುದಾನದಲ್ಲಿ ಸುರತ್ಕಲ್ ಮನಪಾ ವಲಯ ಕಚೇಗೆ ಶಿಲಾನ್ಯಾಸ ನಡೆಯಲಿದೆ. ನೀಡಿದೆ. ಹೊಸಬೆಟ್ಟು ಕಡಲಕಿನಾರೆಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಲಿದ್ದು, 5 ಕೋಟಿ ರೂ. ಬಂದರು ಮತ್ತು ಮೀನುಗಾರಿಕಾ ಇಲಾಖಾ ಅನುದಾನದಲ್ಲಿ ನೀಡಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಉಪ ಮೇಯರ್ ಮಹಮ್ಮದ್, ಕಾರ್ಪೊ ರೇಟರ್ ದೀಪಕ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Forest Department: ಇದ್ದಲ್ಲಿಯೇ ಅರಣ್ಯ ಅಪರಾಧಗಳ ದಾಖಲು: “ಗರುಡಾಕ್ಷಿ’ಗೆ ಚಾಲನೆ
Commission: 60 ಪರ್ಸೆಂಟ್ ಕಮಿಷನ್: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.