ಜನರಿಗಾಗಿ ವಿಜ್ಞಾನ ಧ್ಯೇಯವಾಗಲಿ


Team Udayavani, Feb 28, 2019, 5:10 AM IST

28-february-2.jpg

ದೇಶದ ಪ್ರಗತಿಗೆ ವಿಜ್ಞಾನದ ಕೊಡುಗೆ ಅಪಾರ. ಸಮಾಜದಲ್ಲಿ ಮೂಢ ನಂಬಿಕೆಯನ್ನು ಹೋಗಲಾಡಿಸುವಲ್ಲಿ ವಿಜ್ಞಾನದ ಪಾತ್ರ ಮಹತ್ವವಾದದ್ದು. ಹೀಗಾಗಿಯೇ ವಿಜ್ಞಾನ ದಿನದ ಆಚರಣೆಯ ಮಹತ್ವ ಅಷ್ಟೇ ಹೆಚ್ಚಾಗಿದೆ. ವಿಜ್ಞಾನ ಕ್ಷೇತ್ರದ ಸಂಶೋಧನೆಗಳು, ಮಾಹಿತಿಗಳನ್ನು ಜನ ಸಾಮಾನ್ಯರಿಗೆ ತಿಳಿಸಲು ಇದೊಂದು ದಾರಿ. ಇಂದು (ಫೆ. 28) ದೇಶಾದ್ಯಂತ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದ ಆಚರಣೆಗೊಂದು ಭಾರತದ ಇತಿಹಾಸದಲ್ಲಿ ಮೈಲುಗಲ್ಲಾದ ವಿಶೇಷ ಕಾರಣವೂ ಇದೆ. 

ಭಾರತ ದೇಶದ ಆಡಳಿತಾಂಗ ನಿರ್ವಹಣೆಗೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹೇಗೆ ಮೂರು ಅಂಗಗಳಾಗಿ ಕಾರ್ಯ ನಿರ್ವಹಿಸುತ್ತವೆಯೋ ಅಂತೆಯೇ ದೇಶದ ಜನರು ನೆಮ್ಮದಿ ಜೀವನ ನಡೆಸಲು ಕೃಷಿ ಹಾಗೂ ಸೇನೆಯ ಸೇವೆ ಅನನ್ಯ. ಅದಕ್ಕೆ ಮಾಜಿ ಪ್ರಧಾನಿ ಲಾಲ್‌ ಬಹದ್ದೂರು ಶಾಸ್ತ್ರಿ  ಅವರು ‘ಜೈ ಜವಾನ್‌- ಜೈ ಕಿಸಾನ್‌’ ಎಂದು ಘೋಷಿಸಿದರು. ಈ ತರುವಾಯ ಮುಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಈ ಘೋಷ ವಾಕ್ಯಕ್ಕೆ ಒಂದು ಸೇರಿಸಿದರು. ಅದುವೇ ಜೈ ವಿಜ್ಞಾನ. 

ವಿಜ್ಞಾನ ಎಂಬುದು ಪಠ್ಯೆಕ್ಕೆ ಹೋಲಿಸಿದರೆ ಕಬ್ಬಿಣದ ಕಡಲೆ. ಆದರೆ ದೇಶದ ಉನ್ನತಿಗೆ ಅದರ ಕೊಡುಗೆ ಅಮೋಘ. ಯಾವ ದೇಶವೂ ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡುತ್ತದೆಯೋ ಆ ದೇಶ ಪ್ರಪಂಚದ ಸೂಪರ್‌ ಪವರ್‌ ದೇಶಗಳಲ್ಲಿ ಸ್ಥಾನ ಗಳಿಸುವುದರಲ್ಲಿ ಎರಡು ಮಾತಿಲ್ಲ. ಸೂಪರ್‌ ಪವರ್‌ ಸ್ಥಾನಕ್ಕಷ್ಟೇ ಸೀಮಿತವಲ್ಲದೇ, ದೇಶದ ಅಭ್ಯುದಯಕ್ಕೆ ವಿಜ್ಞಾನ ಅತ್ಯವಶ್ಯಕ. 

ವಿಜ್ಞಾನದ ಬಗ್ಗೆ ಇಷ್ಟು ಪೂರ್ವ ಪೀಠಿಕೆಗೆ ಕಾರಣ ಇಂದು (ಫೆಬ್ರವರಿ 28) ದೇಶದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ದೇಶಾದ್ಯಂತ ವಿಜ್ಞಾನದ ಸಂಶೋಧನೆಗಳು, ವಿಜ್ಞಾನಿಗಳು, ವಿಜ್ಞಾನ ಕ್ಷೇತ್ರದ ಬಗ್ಗೆ ಮಾಹಿತಿಗಳ ಬಗ್ಗೆ ವಿಚಾರ ಸಂಕಿರಣ, ಜಾಥಾ ಹಾಗೂ ಪ್ರದರ್ಶನದ ಮೂಲಕ ಅರಿವು ಮೂಡಿಸಲಾಗುತ್ತದೆ.

ಭಾರತರತ್ನ , ನೊಬೆಲ್‌ ಪ್ರಶಸ್ತಿ ವಿಜೇತ ವಿಜ್ಞಾನಿ ಸರ್‌ ಸಿ.ವಿ. ರಾಮನ್‌ ಅವರು 1928 ರಂದು ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಬೆಳಕಿನ ಚದುರುವಿಕೆಯಲ್ಲಿ ಸಾಮಗ್ರಿಗಳ ಗುಣಲಕ್ಷಣ ಪರಿಣಾಮದ ಬಗ್ಗೆ ಸಂಶೋಧನೆಯನ್ನು ಪ್ರತಿಪಾದಿಸಿದರು. ಇದು ಸಂಶೋಧನೆ ಯಶಸ್ವಿಯಾಗಿ ಮುಂದೆ ರಾಮನ್‌ ಪರಿಣಾಮ ಎಂದು ಜಗತ್‌ಪ್ರಸಿದ್ಧಿಯಾಯಿತು. ರಾಮನ್‌ ಅವರ ಈ ಸಂಶೋಧನೆಗೆ 1930ರಲ್ಲಿ ನೊಬೆಲ್‌ ಪ್ರಶಸ್ತಿಯೂ ದೊರಕಿತು.

ಸರ್‌ ಸಿ.ವಿ. ರಾಮನ್‌ ಅವರ ಈ ವಿನೂತನ ಸಂಶೋಧನೆ ಪರಿಗಣಿಸಿದ ಭಾರತ ದೇಶವೂ ರಾಮನ್‌ ಪರಿಣಾಮವನ್ನು ಮಂಡಿಸಿದ ದಿನವಾದ ಫೆ. 28 ಅನ್ನು ದೇಶದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ 1987ರಿಂದ ಆಚರಿಸಲಾಗುತ್ತಿದೆ. 1999ರಲ್ಲಿ ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹ ಯೋಗದಲ್ಲಿ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ.

ಜನರಿಗಾಗಿ ವಿಜ್ಞಾನ
ರಾಷ್ಟ್ರೀಯ ವಿಜ್ಞಾನ ದಿನವನ್ನು ವಿಶೇಷ ಥೀಮ್‌ ಸಂದೇಶದೊಂದಿಗೆ ಶಿಷ್ಟಾಚಾರವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. 1999ರಲ್ಲಿ ‘ನಮ್ಮ ಭೂಮಿ ಬದಲಾಗುತ್ತಿದೆ (ಅವರ್‌ ಚೇಜಿಂಗ್‌ ಅರ್ಥ್)’ ಎಂಬ ಸಂದೇಶದೊಂದಿಗೆ ಮೊದಲ ಬಾರಿಗೆ ಆಚರಿಸಲಾಗಿತ್ತು. ಅಂತೆಯೇ 2019ರಲ್ಲಿ ‘ಜನರಿಗಾಗಿ ವಿಜ್ಞಾನ, ವಿಜ್ಞಾನಕ್ಕಾಗಿ ಜನ’ ಎಂಬ ಸಂದೇಶದೊಂದಿಗೆ ಈ ವರ್ಷ ಆಚರಿಸಲಾಗುತ್ತಿದೆ. 2018ರಲ್ಲಿ ‘ಸುಸ್ಥಿರ ಭವಿಷ್ಯಕ್ಕೆ ವಿಜ್ಞಾನ ತಂತ್ರಜ್ಞಾನ’ ಎಂಬ ಸಂದೇಶ ನೀಡಿತ್ತು. 

ವಿಜ್ಞಾನ ಮತ್ತು ಚಿಂತನೆ
ಅಜ್ಞಾನವನ್ನು ಕಳೆಯಬೇಕಾದರೆ ನಮ್ಮಲ್ಲಿ ವಿಜ್ಞಾನ ಉದಯಿಸಬೇಕು ಎಂಬ ಮಾತಿದೆ. ವಿಜ್ಞಾನ ಮತ್ತು ತಂತ್ರಜ್ಞಾನವೂ ಮಾನವ ಸಂಕುಲದ ಏಳ್ಗೆಗೆ ಅಷ್ಟು ಪಾತ್ರ ವಹಿಸುತ್ತದೆ. ಮಾನವನಲ್ಲಿ ವೈಚಾರಿಕ ಪ್ರಭೆಯೊಂದು ಹುಟ್ಟಿಗೆ ಕಾರಣವಾಗಿದ್ದು ಅದು ವಿಜ್ಞಾನದಿಂದ. ವಿಜ್ಞಾನವೂ ನಮ್ಮನ್ನು ಸದಾ ಆಲೋಚಿಸುವ ಹಾಗೂ ಸತ್ಯವನ್ನು ನುಡಿಯುವಂತೆ ಮಾಡುತ್ತದೆ. ಹೀಗಾಗಿ ವಿಜ್ಞಾನದಿಂದ ದೇಶದಲ್ಲಿ ಜ್ಞಾನ ಪಸರಿಸುತ್ತದೆ. 

ವಿಜ್ಞಾನ ಮತ್ತು ಭಾರತ
ಜಗತ್ತಿನ ಸಂಶೋಧನೆಗೆ ಮೂಲಾಧಾರವೇ ಭಾರತ ಎಂದು ಐನ್‌ಸ್ಟೆ çನ್‌ ಹೇಳಿ ದ್ದಾರೆ. ಹಾಗಾಗಿ ವಿಜ್ಞಾನ ಕ್ಷೇತ್ರಕ್ಕೆ ಭಾರತದ ಕೊಡುಗೆ ಅನನ್ಯವಾದದ್ದು. ಅಣು, ಜೀವ ವಿಜ್ಞಾನ ಹಾಗೂ ಸಸ್ಯ ವಿಜ್ಞಾನ, ಆಧುನಿಕ ತಂತ್ರಜ್ಞಾನದ ನವನವೀನ ಸಂಶೋಧನೆಗಳ ಮೂಲಕ ಭಾರತ ತನ್ನ ಹೆಸರನ್ನು ಗುರುತಿಸಿಕೊಂಡಿದೆ.

ವಿಜ್ಞಾನ ಮತ್ತು ಶಿಕ್ಷಣ
ಭಾರತದ ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಭಾರತವೂ ಈಗಾಗಲೇ ಮೇಕ್‌ ಇನ್‌ ಇಂಡಿಯಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿದೆ. ಇದಕ್ಕೆ ಅನುಗುಣವಾಗಿ ಬೌದ್ಧಿಕ ಸಂಪನ್ಮೂಲ ಒದಗಬೇಕಾದರೆ ಶಿಕ್ಷಣದಲ್ಲಿ ಪ್ರಾಯೋಗಿಕ ವಿಜ್ಞಾನ ಕ್ಷೇತ್ರವನ್ನು ಬಹುವಾಗಿ ಪರಿಗಣಿಸಬೇಕಿದೆ. 

ಎಸ್‌ . ಚಂದ್ರಶೇಖರ್‌
ಲಾಹೋರ್‌ನಲ್ಲಿ 1910ರ ಅಕ್ಟೋಬರ್‌ 19ರಂದು ಜನಿಸಿದರು. ಇವರು ಸಿ.ವಿ. ರಾಮನ್‌ ಅವರ ಸೋದರಳಿಯ. ಕ್ಯಾಂಬ್ರಿಜ್‌ ವಿಶ್ವವಿದ್ಯಾನಿಲಯದಿಂದ ಪಿಎಚ್‌.ಡಿ. ಪದವಿ ಯನ್ನು ಪಡೆಯುತ್ತಾರೆ. ಭೌತಶಾಸ್ತ್ರ ವಿಭಾಗದಲ್ಲಿನ ಸಾಧನೆಗಾಗಿ ಇವರಿಗೆ 1983ರಲ್ಲಿ ಪ್ರತಿಷ್ಠಿತ ನೊಬೆಲ್‌ ಪ್ರಶಸ್ತಿ ಲಭಿಸಿದೆ. 1953ರಲ್ಲಿ ಇವರು ಅಮೆರಿಕದ ಪೌರತ್ವ ಪಡೆದಿದ್ದಾರೆ. ಶೇತ್ವ ಕುಜ್ಜ ನಕ್ಷತ್ರಗಳು, ನಕ್ಷತ್ರಗಳಾಗಿ ವಿಕಿರಣ ಕುರಿತಾಗಿ ಇವರು ಸಂಶೋಧನೆ ನಡೆಸಿದ್ದಾರೆ. ತಮ್ಮ 82ನೇ ವಯಸ್ಸಿನಲ್ಲಿ (ಆಗಸ್ಟ್‌ 21 ,1995 ) ಶಿಕಾಗೋದಲ್ಲಿ ನಿಧನ ಹೊಂದಿದರು. 

ಹೋಮಿ ಜೆ. ಬಾಬ
ಭಾರತದ ನ್ಯೂಕ್ಲಿಯರ್‌ ಶಕ್ತಿಯ ಪಿತಾಮಹ ಎಂದೇ ಕರೆಯಲ್ಪಡುವ ಇವರ ಪೂರ್ಣನಾಮ ಹೋಮಿ ಜಹಾಂಗೀರ್‌ ಬಾಬ ಎಂದಾಗಿದೆ. ಭಾರತೀಯ ಆಟಾಮಿಕ್‌ ಎನರ್ಜಿ ಕಮಿಷನ್‌ನ ಮೊದಲ ಚೆಯರ್‌ ಮೆನ್‌ ಇವರು. ಕೋಸ್ಕಮಿಕ್‌ ರೇಡಿಯೇಷನ್‌ ಅನ್ನು ತಿಳಿದುಕೊಳ್ಳಲು ಎಲೆಕ್ಟ್ರೋನ್‌ಗಳ ಬಳಕೆ ಹೇಗೆ ಎಂಬ ಅಧ್ಯಯನದಲ್ಲಿ ಹೋಮಿ ಜೆ. ಬಾಬ ಕೂಡ ಭಾಗಿಯಾಗಿದ್ದರು. 1939ರಲ್ಲಿ ಸಿ.ವಿ. ರಾಮನ್‌ ಅವರ ಜತೆ ಸೇರಿ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ನಲ್ಲಿ ಕೋಸ್ಮಿಕ್‌ ರೇ ಸಂಶೋಧನ ವಿಭಾಗವನ್ನು ಆರಂಭಿಸಿದ್ದಾರೆ. ಇವರು ಭಾರತೀಯ ಮತ್ತು ವಿದೇಶಗಳ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಸಿ. ಎನ್‌. ಆರ್‌. ರಾವ್‌
ಚಿಂತಾಮಣಿ ನಾಗೇಶ ರಾಮಚಂದ್ರ ರಾವ್‌ ಅವರ ಹುಟ್ಟೂರು ಮೈಸೂರು. ವಿದ್ಯಾ ಭ್ಯಾಸವೂ ಇಲ್ಲೇ ಆಗಿರುವುದು. ಭಾರತದ ಪ್ರಮುಖ ರಸಾಯನ ಶಾಸ್ತ್ರಜ್ಞ. ಇವರ ಪ್ರಮುಖ ಸಂಶೋಧನೆಯೆಂದರೆ ಟ್ರಾನ್ಸಿಷನ್‌ ಮೆಟಲ್‌ ಆಕ್ಸೈಡ್ . 2 ಭಿನ್ನ ಸಾಮರ್ಥ್ಯವನ್ನು ಹೊಂದಿರುವ ಮೆಟಲ್‌ ಆಕ್ಸೈಡ್ ಗಳನ್ನು ಸಂಯೋಜಿಸುವ ಸಂಶೋಧನೆಯನ್ನು ಇವರು ನಡೆಸುತ್ತಿದ್ದಾರೆ. ರಸಾಯನ ಶಾಸ್ತ್ರ ಕ್ಷೇತ್ರದಲ್ಲಿ ನ್ಯಾನೋ ಮೆಟೀರಿಯಲ್‌ಗ‌ಳ ಸಂಶೋದನೆ ಕೂಡ ಇವರ ಕೊಡುಗೆ. ಇವರ ಸಾಧನೆಗೆ ಭಾರತರತ್ನ ಪ್ರಶಸ್ತಿ ಒಲಿದಿದೆ ಮತ್ತು ಇತರ ಅನೇಕ ಪ್ರಶಸ್ತಿಗಳೂ ಲಭಿಸಿವೆ.

ಎಪಿಜೆ ಅಬ್ದುಲ್‌ ಕಲಾಂ
ತಮಿಳುನಾಡು ಮೂಲದ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರು ಒಂದು ವಿಶ್ವ ಕೋಶವಿದ್ದಂತೆಯೇ. ಅನೇಕ ಸಂಶೋಧನೆಗಳನ್ನು ಮಾಡಿ ಅದರ ಯಶಸ್ಸನ್ನು ಮುಡಿಗೇರಿಸಿಕೊಂಡವರು. ಭಾರತೀಯ ಸೇನೆಗೆ ಸಣ್ಣ ಹೆಲಿಕಾಪ್ಟರ್‌ ವಿನ್ಯಾಸಗೊಳಿಸುವ ಮೂಲಕ ಕಲಾಂ ತಮ್ಮ ವೃತ್ತಿ ಜೀವನ ಆರಂಭಿಸಿದರು. ಅನಂತರ ಏರೋ ಸ್ಪೇಸ್‌ ಎಂಜಿನಿಯರ್‌ ಆಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಇವರದ್ದು. ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಸಹಿತ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಜಗದೀಶ್‌ ಚಂದ್ರ ಬೋಸ್‌ 
ಪಶ್ಚಿಮ ಬಂಗಾಲ ಮೂಲದವರಾದ ಜಗದೀಶ್‌ ಚಂದ್ರ ಬೋಸ್‌ ಅವರು ಜೆ.ಸಿ. ಬೋಸ್‌ ಪಾಲಿಮಾತ್‌, ಭೌತ ಶಾಸ್ತ್ರ, ಜೀವ ಶಾಸ್ತ್ರ, ಸಸ್ಯ ಶಾಸ್ತ್ರ ಮತ್ತು ಪುರಾತಣ್ತೀ ಶಾಸ್ತ್ರಜ್ಞರಾಗಿದ್ದರು. ಇವರು ಸಸ್ಯಗಳ ಅಧ್ಯಯನಕ್ಕೆ ಪ್ರಮುಖ ಪಾತ್ರ ವಹಿಸಿದ್ದು , ಇವರ ಪ್ರಮುಖ ಆವಿಷ್ಕಾರ ವಾದ ಕ್ರೆಸ್ಕೋ ಗ್ರಾಫ್ ಮೂಲಕ ಸಸ್ಯಗಳು ಕೆಲವು ಪ್ರಚೋದನೆಗಳಿಗೆ ಪ್ರತಿಕ್ರಿಯಿಸುತ್ತವೆ. ಅವುಗಳಿಗೂ ನೋವು ಮತ್ತು ಪ್ರೀತಿಯ ಅನುಭವವಾಗುತ್ತದೆ ಎಂಬುದನ್ನು ಜನತೆಗೆ ಸಾರಿದವರು. ಅದಲ್ಲದೆ ಇವರು ರೇಡಿಯೋ ಸಿಗ್ನಲ್‌ ಪತ್ತೆ ಹಚ್ಚಲು ಸೆಮಿ ಕಂಡಕ್ಟರ್‌ ಜಂಕ್ಷನ್‌ ಗಳನ್ನು ಬಳಸಿದ ಮೊದಲ ವ್ಯಕ್ತಿಯಾಗಿದ್ದು, ಹಲ ವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ವಿಕ್ರಮ್‌ ಸಾರಾಬಾಯಿ
ಬಾಹ್ಯಾಕಾಶ ಸಂಶೋಧನ ಸಂಸ್ಥೆಯ ಸ್ಥಾಪನೆಗೆ ಕಾರಣರಾದ ಗುಜರಾತ್‌ ಮೂಲದ ವಿಕ್ರಮ್‌ ಸಾರಾಬಾಯಿ ಅವರನ್ನು ಬಾಹ್ಯಾಕಾಶ ಕಾರ್ಯಕ್ರಮಗಳ ಪಿತಾಮಹ ಎಂದೇ ಕರೆಯಲಾಗುತ್ತದೆ. ನಮ್ಮದು ಹಿಂದುಳಿದ ರಾಷ್ಟ್ರ ಎಂದು ಯಾರಾ ದರೂ ಹೇಳುವಾಗ ಅವರು ಹೇಳುತ್ತಿದ್ದ ಮಾತೆಂದರೆ ಬೇರೆಯವರಿಗೆ ಸ್ಪರ್ಧಿಸಬೇಕೆಂಬ ಫ್ಯಾಂಟಸಿ ಇರಬಾರದು. ಅದರ ಬದಲಾಗಿ ನೈಜ ಸಮಸ್ಯೆಗಳಿಗೆ ಮುಂದುವರಿದ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಮುಂದಿರಬೇಕು ಎನ್ನುತ್ತಿದ್ದರು. ಇವರ ಅತ್ಯುತ್ತಮ ಸಾಧನೆಗಾಗಿ 1966ರಲ್ಲಿ ಪದ್ಮಭೂಷಣ, ಮರಣಾ ನಂತರ 1972ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 

ಯು. ಆರ್‌. ರಾವ್‌
ಜಗದ್ವಿಖ್ಯಾತ ಸಾಧಕರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಮೊದಲ ಭಾರತೀಯರಾದ ಉಡುಪಿ ರಾಮಚಂದ್ರ ರಾವ್‌ ಮಾಡಿರುವ ಸಾಧನೆ ಅಪಾರ. ಮಂಗಳ ಯಾನ ಉಪಗ್ರಹ ವಿನ್ಯಾಸದಲ್ಲಿ ತೊಡಗಿಕೊಂಡ ಶ್ರೇಯಸ್ಸಿನ ಜತೆಗೆ ಇಸ್ರೋ ಅಧ್ಯಕ್ಷರಾಗಿ ಹತ್ತು ವರ್ಷಗಳ ಕಾಲ ಸಂಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು 1976ರಲ್ಲಿ ಪದ್ಮಭೂಷಣ ಮತ್ತು ರಾಷ್ಟ್ರೀಯ- ಅಂತಾರಾಷ್ಟ್ರೀಯ ವಿಶ್ವ ವಿದ್ಯಾಲಯಗಳ ಗೌರವ ಡಾಕ್ಟರೇಟ್‌, ಫಾಲೋಶಿಪ್‌ ಹಾಗೂ ಪುರಸ್ಕಾರಗಳು ಲಭಿಸಿವೆ. 

ಚಂದ್ರಶೇಖರ್‌ ವೆಂಕಟ್‌ ರಾಮನ್‌
ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ 1888ರ ನವೆಂಬರ್‌ ನಲ್ಲಿ ಜನಿಸಿದ ಚಂದ್ರಶೇಖರ್‌ ವೆಂಕಟ್‌ ರಾಮನ್‌ ಅವರ ತಂದೆ ಚಂದ್ರಶೇಖರ್‌ ಅಯ್ಯರ್‌, ತಾಯಿ ಪಾರ್ವತಿ ಅಮ್ಮಾಳ್‌. ಇವರು ಭೌತಶಾಸ್ತ್ರದಲ್ಲಿ ಎಂ.ಎ., ಮದ್ರಾಸ್‌ ಸರಕಾರ ನಡೆಸುವ ಅಖಿಲಭಾರತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. 1954ರಲ್ಲಿ ಇವರನ್ನು ಭಾರತರತ್ನ ನೀಡಿ ಗೌರವಿಸಲಾಗಿದೆ. 

‡ ಶಿವ ಸ್ಥಾವರಮಠ, ಪ್ರೀತಿ ಭಟ್‌, ಸುಶ್ಮಿತಾ ಶೆಟ್ಟಿ, ಧನ್ಯಶ್ರೀ ಬೋಳಿಯಾರ್‌

ಟಾಪ್ ನ್ಯೂಸ್

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

de

Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

11

Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

accident

Kundapura: ಕಾರು ಢಿಕ್ಕಿ; ಸ್ಕೂಟರ್‌ ಸವಾರನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.