14 ವರ್ಷಗಳ ಬಳಿಕ ಇಂದು ಶಾಲಾ ವಾರ್ಷಿಕೋತ್ಸವ
Team Udayavani, Dec 24, 2018, 12:28 PM IST
ಆಲಂಕಾರು: ಹದಿನಾಲ್ಕು ವರ್ಷಗಳ ಬಳಿಕ ಪೆರಾಬೆ ಸರಕಾರಿ ಶಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ನೂತನ ಶಾಲಾಭಿವೃದ್ಧಿ ಸಮಿತಿಯ ನಿರಂತರ ಪ್ರಯತ್ನ ಹಾಗೂ ಮದ ಜನತೆ ಸಹಕಾರದೊಂದಿಗೆ ಡಿ. 24ರಂದು ವಾರ್ಷಿಕೋತ್ಸವ ನಡೆಯಲಿದೆ.
ಶಾಲೆ ಆರಂಭವಾಗಿ 64 ವರ್ಷಗಳು ಪೂರೈಸಿದ್ದು, ಈ ದಿನವನ್ನು ‘ಸಂಭ್ರಮ 2018’ ವಾರ್ಷಿಕೋತ್ಸವವನ್ನಾಗಿ ಆಚರಿಸಲಾಗುತ್ತಿದೆ. 1954ರ ಡಿ. 24ರಂದು ಗ್ರಾಮದ ಹಿರಿಯ ಮುತುವರ್ಜಿಯಲ್ಲಿ ಏಕೋಪಾಧ್ಯಾಯರ ಮೂಲಕ ಮಣ್ಣಿನ ನೆಲ, ಮುಳಿಹುಲ್ಲಿನ ಛಾವಣಿಯ ಮೂಲಕ ಪೆರಾಬೆ ಎಂಬ ಪುಟ್ಟ ಹಳ್ಳಿಯಲ್ಲಿ ಶಾಲೆ ಆರಂಭವಾಗಿತ್ತು.
1954ರ ಡಿ. 24ರಂದು ಮನವಳಿಕೆ ದಿ| ಕರಿಯಪ್ಪ ರೈಗಳ ಅಧ್ಯಕ್ಷತೆ ಯಲ್ಲಿ ಮರುವಂತಿಲ ದಿ| ಸೀತಾರಾಮಾಚಾರ್ಯರ ಮತ್ತು ಬೇಳ್ಪಾಡಿ ದಿ| ಬಂಟಪ್ಪ ರೈಗಳ ಮುಂದಾಳತ್ವದಲ್ಲಿ ಪೆರಾಬೆ ಸರಕಾರಿ ಶಾಲೆ ಆರಂಭಗೊಂಡಿತು. ಏಕೋಪಾಧ್ಯಾಯ ಶಾಲೆಗೆ ಪ್ರಥಮ ಶಿಕ್ಷಕರಾಗಿ ಕೆ. ಹರಿಶ್ಚಂದ್ರರಾಯರು ನಿಯುಕ್ತಿಗೊಂಡಿದ್ದರು.
ಏರಿಕೆ ಕಂಡ ವಿದ್ಯಾರ್ಥಿಗಳು
ಶಾಲೆಯ ಸುವರ್ಣ ಮಹೋತ್ಸವವನ್ನು 2014ರ ಡಿ. 26ರಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಸ್. ಅಂಗಾರ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಗಿತ್ತು. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 1ರಿಂದ 7ನೇ ತರಗತಿಯ ವರೆಗೆ ಒಟ್ಟು 58 ವಿದ್ಯಾರ್ಥಿಗಳು ವಿದ್ಯಾರ್ಜನೆ ಪಡೆಯುತ್ತಿದ್ದಾರೆ. ಕಳೆದ ಸಾಲಿಗಿಂತ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಏರಿಕೆ ಕಂಡಿದೆ.
ಸರಕಾರಿ ಶಾಲೆಗಳತ್ತ ಸೆಳೆಯುವ ಉದ್ದೇಶ
ಸರಕಾರಿ ಶಾಲೆಗಳು ಮುಚ್ಚುತ್ತಿವೆ ಎಂಬ ಭೀತಿ ಜನತೆಯಲ್ಲಿದೆ. ಈ ಭೀತಿಯನ್ನು ಹೋಗಲಾಡಿಸಿ ಸರಕಾರಿ ಶಾಲೆಗಳತ್ತ ವಿದ್ಯಾರ್ಥಿಗಳನ್ನು ಸೆಳೆಯುವುದೇ ನಮ್ಮ ಮೂಲ ಉದ್ದೇಶವಾಗಿದೆ. ಪೆರಾಬೆ ಸರಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವ ಆ ನಿಟ್ಟಿನಲ್ಲಿ ಪೆರಾಬೆ ಶಾಲೆಯನ್ನು ಉಳಿಸುವ ಬಹುದೊಡ್ಡ ಕನಸನ್ನು ಮುಂದಿಟ್ಟುಕೊಂಡು ಈ ಬಾರಿ ‘ಸಂಭ್ರಮ 2018’ ಶಾಲಾ ವಾರ್ಷಿಕೋತ್ಸವ ನಡೆಯುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ಕನಸು ಖಂಡಿತ ನನಸಾಗಲಿದೆ.
– ಹೇಮಲತಾ ಪ್ರದೀಪ್
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru; ಸದ್ಯ ಖಾಸಗಿ ಬಸ್ ಟಿಕೆಟ್ ದರ ಏರಿಕೆ ಇಲ್ಲ
Kasaragod:ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; 10 ಮಂದಿಗೆ ಅವಳಿ ಜೀವಾವಧಿ ಸಜೆ
Bus ಪ್ರಯಾಣ ದರ ಏರಿಕೆ; ಮೊದಲು ಉದ್ದೇಶ ಅರಿಯಲಿ: ಖಾದರ್
Hunsur: ಹೊಸ ವರ್ಷಾಚರಣೆ: ಕೇಕ್ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ
“ನಿಮ್ಹಾನ್ಸ್ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.