ಕೋಸ್ಟಲ್‌ವುಡ್‌ನ‌ಲ್ಲಿ ಇಂದು ತುಳು ಚಿತ್ರ ಶತೋತ್ಸವ


Team Udayavani, Jan 27, 2019, 4:22 AM IST

27-january-1.jpg

ಮಹಾನಗರ: ಕೋಸ್ಟಲ್‌ವುಡ್‌ ಚಿತ್ರರಂಗಕ್ಕೀಗ ಶತಕ ತಲುಪಿದ ಸಂಭ್ರಮ. ಈ ಹಿನ್ನೆಲೆಯಲ್ಲಿ ತುಳು ಚಿತ್ರ ಶತೋತ್ಸವಕ್ಕೆ ಮಂಗಳೂರು ಸಜ್ಜಾಗಿದೆ. ಜ. 27ರಂದು ಬೆಳಗ್ಗೆ 10ರಿಂದ ರಾತ್ರಿ 10ರ ವರೆಗೆ ತುಳು ಸಿನೆಮಾ ಸಂಬಂಧಿತ ವಿವಿಧ ಕಾರ್ಯಕ್ರಮಗಳು ನಗರದ ನೆಹರೂ ಮೈದಾನದಲ್ಲಿ ಜರಗಲಿವೆ.

ಕೋಸ್ಟಲ್‌ವುಡ್‌ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟದ ವತಿಯಿಂದ ಈ ತುಳು ಚಿತ್ರ ಶತೋತ್ಸವ ನಡೆಯಲಿದೆ. ಹಲವು ಸಮಯಗಳಿಂದಲೇ ಈ ಉತ್ಸವ ಕ್ಕಾಗಿ ತಯಾರಿಗಳು ನಡೆದಿವೆ. ಶನಿವಾರ ಮಧ್ಯಾಹ್ನದ ವೇಳೆಗೆ ತಯಾರಿ ಬಹುತೇಕ ಪೂರ್ಣಗೊಂಡಿದೆ. ರವಿವಾರ ನಿರಂತರ ಸಭಾ ಕಾರ್ಯಕ್ರಮ, ಸಮ್ಮಾನ, ಮನೋ ರಂಜನ ಕಾರ್ಯಕ್ರಮಗಳು ನಡೆಯಲಿವೆ. ಕೋಸ್ಟಲ್‌ವುಡ್‌ನ‌ ಸಂಭ್ರಮಕ್ಕೆ ಸ್ಯಾಂಡಲ್‌ವುಡ್‌ನ‌ ಕೆಲವು ನಟ- ನಟಿಯರೂ ಭಾಗವಹಿಸುವುದು ಕಾರ್ಯಕ್ರಮದ ಅಂದ ಹೆಚ್ಚಿಸಲಿದೆ.

ವಿಶಾಲ ವೇದಿಕೆ
ಕಾರ್ಯಕ್ರಮಕ್ಕಾಗಿ ನೆಹರೂ ಮೈದಾನ ದಲ್ಲಿ ವಿಶಾಲ ವೇದಿಕೆಯನ್ನು ಸಿದ್ಧಗೊಳಿಸ ಲಾಗಿದೆ. 60 ಅಡಿ ಅಗಲ, 40 ಅಡಿ ಉದ್ದ ಹೊಂದಿರುವ ವೇದಿಕೆ ತುಳು ಚಿತ್ರ ಶತೋತ್ಸವಕ್ಕೆ ಸಾಕ್ಷಿಯಾಗಲಿದೆ. ಕಾರ್ಯ ಕ್ರಮದಲ್ಲಿ ಸುಮಾರು 3 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಎರಡು ಸಾವಿರದಷ್ಟು ಆಸನ ವ್ಯವಸ್ಥೆಯನ್ನು ಮಾಡಲಾಗಿದೆ. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಶಾಮಿಯಾನ ಅಳವಡಿಸಲಾಗಿದೆ. ಸ್ವಯಂ ಸೇವಕರು, ಅತಿಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಇರಲಿದೆ ಎಂದು ಒಕ್ಕೂಟದ ಗೌರವಾಧ್ಯಕ್ಷ ಕಿಶೋರ್‌ ಡಿ. ಶೆಟ್ಟಿ ತಿಳಿಸಿದ್ದಾರೆ.

100 ಮಂದಿಗೆ ಸಮ್ಮಾನ
‘ತುಳು ಚಿತ್ರ ಶತೋತ್ಸವ’ದಲ್ಲಿ ತುಳು ಚಿತ್ರದ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರ ಸಹಿತ 100 ಮಂದಿಗೆ ಸಮ್ಮಾನ ನಡೆಯಲಿದೆ. ಅಲ್ಲದೆ, ರಾಷ್ಟ್ರ, ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ತುಳು ಚಿತ್ರ ನಿರ್ಮಾಪಕರು, ನಿರ್ದೇಶಕರು, ಕಲಾವಿರನ್ನು ಗೌರವಿಸುವ ಕಾರ್ಯಕ್ರಮವೂ ಇದೆ.

ಬೆಳಗ್ಗೆ 9.45ಕ್ಕೆ ಧ್ವಜಾರೋಹಣ, 10 ಗಂಟೆಗೆ ಉದ್ಘಾಟನೆ ನಡೆಯಲಿದೆ. 11ಕ್ಕೆ ನಿರ್ಮಾಪಕರು, ನಿರ್ದೇಶಕರು ಹಾಗೂ ಚಿತ್ರಮಂದಿರ ಮಾಲಕರು, ವ್ಯವಸ್ಥಾಪಕರಿಗೆ ಅಭಿನಂದನೆ, ಮಧ್ಯಾಹ್ನ 12 ಗಂಟೆಗೆ ತುಳುಚಿತ್ರದ ಬೆಳವಣಿಗೆ ಬಗ್ಗೆ ಸಂವಾದ, 2ಕ್ಕೆ ವಿದ್ಯಾರ್ಥಿಗಳಿಗೆ ಚಿತ್ರರಂಗದ ಬಗ್ಗೆ ರಸಪ್ರಶ್ನೆ, 3ಕ್ಕೆ ಅಭಿನಂದನೆ, ಸಂಜೆ 4 ಗಂಟೆಗೆ ರಸಮಂಜರಿ, 5ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, 6ಕ್ಕೆ ತುಳು ಚಿತ್ರ ತಾರೆಯರಿಂದ ಮನೋರಂಜನ ಕಾರ್ಯಕ್ರಮ ನಡೆಯಲಿದೆ. ಸಂಜೆ 6.30ಕ್ಕೆ ಕರ್ನಾಟಕ ಪ್ರಾದೇಶಿಕ ಚಲನಚಿತ್ರ ನಿರ್ಮಾಪಕರ ಸಂಘದ ಉದ್ಘಾಟನೆ, 7 ಗಂಟೆಗೆ ಸಮಾರೋಪ ನಡೆಯಲಿದೆ.

ಎನ್ನ ತಂಗಡಿಯಿಂದ ಕರ್ಣೆವರೆಗೆ
1971ರಲ್ಲಿ ತೆರೆಕಂಡ ‘ಎನ್ನ ತಂಗಡಿ’ ಚಿತ್ರದಿಂದ ಮೊದಲ್ಗೊಂಡು 2018ರಲ್ಲಿ ತೆರೆ ಕಂಡ ‘ಕರ್ಣೆ’ ಚಿತ್ರದವರೆಗೆ ಸುಮಾರು 48 ವರ್ಷಗಳಲ್ಲಿ ಕೋಸ್ಟಲ್‌ವುಡ್‌ ನಡೆದು ಬಂದ ದಾರಿ ಅದ್ಭುತ. ಪ್ರಾದೇಶಿಕ ಭಾಷಾ ಚಲನಚಿತ್ರವನ್ನು ವಿದೇಶಗಳಲ್ಲಿ ಯೂ ಪಸ ರಿಸಿ ಯಶಸ್ವಿಯಾದ ಖ್ಯಾತಿ ತುಳು ಚಿತ್ರರಂಗಕ್ಕಿದೆ. ಲಭ್ಯ ತಂತ್ರಜ್ಞಾನಗಳನ್ನೇ ಬಳಸಿ ಕೊಂಡು ಅಭಿಮಾನಿಗಳ ಮನಸ್ಸಿಗೆ ಮುದ ನೀಡುವಂತಹ ಚಿತ್ರಗಳನ್ನೇ ನೀಡುತ್ತಾ ಬೆಳೆದ ಚಿತ್ರರಂಗ, ಆಧುನಿಕ ತಂತ್ರಜ್ಞಾನ ಯುಗವನ್ನೂ ಸಮರ್ಥವಾಗಿ ಬಳಸಿ ಕೊಂಡು ಅತ್ಯುತ್ತಮ ಚಿತ್ರಗಳನ್ನು ನೀಡುವ ಮೂಲಕ ಚಿತ್ರರಂಗದಲ್ಲಿ ಹೊಸಚರಿತ್ರೆ ಯನ್ನೇ ನಿರ್ಮಿಸಿದೆ. ಹಾಗೆ ಬಿಡುಗಡೆಗೊಂಡ ಚಿತ್ರಗಳ ಸಂಖ್ಯೆ ಈಗ ನೂರಾಗಿದೆ.

ಟಾಪ್ ನ್ಯೂಸ್

Jammu Kashmir: Big plan fails; Army destroys terrorist hideout

Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ

BGT 2024: Good news for Team India; A key player back in the team

BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Pune: Batter collapses on the field!; Video goes viral

Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!;‌ ವಿಡಿಯೋ ವೈರಲ್

Photo of female commando with Modi goes viral: Was it real?

Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್:‌ ಏನಿದರ ಅಸಲೀಯತ್ತು?

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Jammu Kashmir: Big plan fails; Army destroys terrorist hideout

Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ

7-shahapur

Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು

6-dandeli

Dandeli: ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದೊಳಗೆ ಹಾವು ಪ್ರತ್ಯಕ್ಷ

BGT 2024: Good news for Team India; A key player back in the team

BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.