ಮನ್ನಣೆ ಪಡೆಯದ ಪ್ರೇಮಿಗಳ ದಿನಾಚರಣೆ !
ಇಂದು ವ್ಯಾಲೆಂಟೈನ್ಸ್ ಡೇ
Team Udayavani, Feb 14, 2020, 5:38 AM IST
ಮಹಾನಗರ: ಪ್ರೇಮಿಗಳ ದಿನಾಚರಣೆಗೆ ಕೆಲವಾರು ವರ್ಷಗಳಿಂದ ವಿರೋಧ ಮತ್ತು ಸಾಮಾಜಿಕ ಜಾಲ ತಾಣಗಳ ಅಬ್ಬರ ಜೋರಾಗಿರುವ ಕಾರಣ ಫೆ. 14ರ ವ್ಯಾಲೆಂಟೈನ್ಸ್ ಡೇ ಆಚರಣೆಯ ಬೇಡಿಕೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.
ಇನ್ನೊಂದೆಡೆ ಕೆಲವು ಸಂಘಟನೆಗಳು ಪ್ರೇಮಿಗಳ ದಿನವನ್ನು ದೇಶಪ್ರೇಮಿಗಳ ದಿನಾಚರಣೆಯಾಗಿ ಆಚರಿಸುವ ಮೂಲಕ ಅದನ್ನು ಅವಗಣಿಸಲಾಗುತ್ತಿ¤ದೆ. ವಿದೇಶದಲ್ಲಿ ಪ್ರೇಮಿಗಳಿಗಾಗಿ ಆಚರಣೆಗೆ ಬಂದ ಈ ದಿನವು ಕೆಲವು ವರ್ಷಗಳಿಂದ ದೇಶದಲ್ಲಿಯೂ ಮಹತ್ವ ಪಡೆಯಿತು. ಆದರೆ ಆ ದಿನದಂದು ಅಹಿತಕರ ಘಟನೆಗಳು ನಡೆಯಬಾರದು ಎಂಬ ಕಾರಣಕ್ಕಾಗಿ ಕೆಲವು ಸಂಘಟನೆಗಳು ಇದಕ್ಕೆ ವಿರೋಧ ಮಾಡುತ್ತಲೇ ಬಂದಿದ್ದವು. ಹಾಗಾಗಿ ಪ್ರೇಮಿಗಳ ದಿನ ಆಚರಣೆ ಕಡಿಮೆಯಾಗುತ್ತಿದ್ದು, ಬೆಂಗಳೂರಿನಂಥ ಮಹಾನಗರಗಳಿಗೆ ಹೋಲಿಸಿದರೆ ಮಂಗಳೂರಿಲ್ಲಿ ಈ ಆಚರಣೆ ಅಷ್ಟೊಂದು ಮನ್ನಣೆ ಪಡೆದುಕೊಂಡಿಲ್ಲ.
ಅಂಗಡಿ ಮಾಲಕರಲ್ಲಿ ವಿನಂತಿ
ಭಾರತೀಯ ಪರಂಪರೆಯಲ್ಲಿ ಪ್ರೇಮಿಗಳ ದಿನಾಚರಣೆ ಸರಿಯಲ್ಲ ಮತ್ತು ಇದರಿಂದ ಅಹಿತಕರ ಘಟನೆ ಗಳು ನಡೆಯುವ ಸಾಧ್ಯತೆಗಳೂ ಇಲ್ಲದಿಲ್ಲ ಎಂಬ ಕಾರಣಕ್ಕಾಗಿ ಕೆಲವು ಸಂಘಟನೆಗಳು ಹಿಂದಿನಿಂದಲೇ ಈ ದಿನವನ್ನು ವಿರೋಧಿಸುತ್ತಾ ಬಂದಿವೆ. ಈ ಬಾರಿಯೂ ಪ್ರೇಮಿಗಳ ದಿನವನ್ನು ಆಚರಿಸಬಾರದು ಎಂದು ಸಂಘಟನೆಗಳು ತಿಳಿಸಿವೆ. ಪ್ರೇಮಿಗಳ ದಿನಾಚರಣೆ ಸಂಬಂಧಿಸಿದ ಯಾವುದೇ ಗ್ರೀಟಿಂಗ್ಸ್, ವಸ್ತುಗಳನ್ನು ಮಾರಾಟ ಮಾಡಬಾರದು ಎಂದು ಅಂಗಡಿ ಮಾಲಕರಲ್ಲಿ ಬಜರಂಗದಳ ವಿನಂತಿಸಿದೆ.
ಕೆಂಬಣ್ಣದ ಸಿಂಗಾರ
ನಗರದಲ್ಲಿ ಪ್ರೇಮಿಗಳ ದಿನ ಆಚರಣೆ ಇಲ್ಲವಾದರೂ ಕೆಲವೊಂದು ಅಂಗಡಿಗಳಲ್ಲಿ ಈಗಾಗಲೇ ಆ ದಿನವನ್ನು ಸಾರುವ ಕೆಂಪು ಬಣ್ಣ ರಾರಾಜಿಸುತ್ತಿದೆ. ವ್ಯಾಲೆಂಟೈನ್ಸ್ ಡೇ ಹಿನ್ನೆಲೆಯಲ್ಲಿ ವ್ಯಾಪಾರ ತಾಣಗಳಿಗೆ ಯುವ ಸಮು ದಾಯವನ್ನು ಆಕರ್ಷಿಸುವ ಸಲುವಾಗಿ ಅಂಗಡಿಗಳನ್ನು ಕೆಂಬಣ್ಣದಿಂದ ಸಿಂಗಾರಗೊಳಿಸಲಾಗಿದೆ. ಕೆಲವು ಬಟ್ಟೆ ಅಂಗಡಿಗಳಲ್ಲಿ ಕೆಂಬಣ್ಣದ ಬಟ್ಟೆಗಳನ್ನೇ ಜೋಡಿಸಿ ತೂಗು ಹಾಕಲಾಗಿದೆ. ಫ್ಯಾನ್ಸಿ ಅಂಗಡಿ ಗಳಲ್ಲಿ ಕೆಂಬಣ್ಣದ ಗೊಂಬೆಗಳನ್ನು ಜೋಡಿಸಿದ್ದು, ಆಕರ್ಷಕವಾಗಿ ಕಾಣುತ್ತಿವೆ. ಹೂವಿನಂಗಡಿಗಳಲ್ಲಿಯೂ ಇದೇ ರೀತಿಯ ಜೋಡಣೆ ಗಮನ ಸೆಳೆ ಯುತ್ತಿದೆ. ಅಂಗಡಿಯೊಂದರಲ್ಲಿ ಹೃದಯಾಕಾರದಲ್ಲಿ ಹೂವು ಮತ್ತು ಚಾಕೋಲೇಟ್‌ಗಳನ್ನು ಜೋಡಿ ಸಿಟ್ಟಿರುವುದು ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಆಚರಣೆ ಹೆಸರಿನಲ್ಲಿ ದುರುಪಯೋಗವಾಗದಿರಲಿ
ಪ್ರೇಮಿಗಳ ದಿನ ಆಚರಿಸುವುದು, ಆಚರಿಸದೇ ಇರುವುದು ಅವರವರಿಗೆ ಬಿಟ್ಟ ವಿಚಾರ. ಆದರೆ ಯಾವುದೇ ಆಚರಣೆಗಳು ಕೂಡ ಯುವ ಸಮುದಾಯವನ್ನು ತಪ್ಪು ದಾರಿಗೆ ಕೊಂಡೊಯ್ಯಬಾರದು. ಆಚರಣೆ ಹೆಸರಿನಲ್ಲಿ ದುರುಪಯೋಗ ನಡೆಯಬಾರದು. ಇಷ್ಟೇ ನಾನು ಹೇಳುವುದು.
- ಚಿರಶ್ರೀ ಅಂಚನ್, ನಟಿ
ಸಾಮಾಜಿಕ ತಾಣಗಳಲ್ಲೇ ಶುಭಾಶಯ
ಹಿಂದೆಲ್ಲ ಯಾವುದೇ ವಿಶೇಷ ದಿನಾಚರಣೆ ಶುಭಾಶಯ ವಿನಿಮಯ ಮಾಡಿಕೊಳ್ಳಲು ಪತ್ರದ ಮುಖೇನ ಅಥವಾ ನೇರವಾಗಿ ಭೇಟಿಯಾಗಬೇಕಿತ್ತು. ಆದರೆ ಈಗ ಹಾಗಿಲ್ಲ. ಸಾಮಾಜಿಕ ಜಾಲತಾಣಗಳು ಇಡೀ ವಿಶ್ವದಲ್ಲೇ ಪಸರಿಸಿರುವುದರಿಂದ ಶುಭಾಶಯ ವಿನಿಮಯಕ್ಕೂ ವೇದಿಕೆಯಾಗುತ್ತಿದೆ. ಅದರಂತೆ ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಅಂಗಡಿಗಳಿಗೆ ತೆರಳಿ ಗ್ರೀಟಿಂಗ್ಸ್ ತಂದು ಶುಭಾಶಯ ವಿನಿಮಯ ಮಾಡಬೇಕಾದ ಅಗತ್ಯ ಈಗಿಲ್ಲ. ಕೈಯಲ್ಲಿರುವ ಸ್ಮಾರ್ಟ್‌ಫೋನ್‌ನಲ್ಲಿಯೇ ಶುಭಾಶಯ ವಿನಿಮಯ ಮಾಡಲಾಗುತ್ತದೆ.
- ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.