ಟೆಲಿವಿಷನ್ ಸದ್ವಿಚಾರ ಪಸರಿಸಲಿ
Team Udayavani, Nov 21, 2018, 10:08 AM IST
ಟಿವಿ ಇಂದು ಜಗತ್ತನ್ನು ವ್ಯಾಪಿಸಿರುವ ಒಂದು ಸಾಧನ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಇದನ್ನು ನೋಡಿ ಆನಂದಿಸುತ್ತಾರೆ. ಹಿಂದಿನ ಕಾಲದಲ್ಲಿ ಇದರ ಉಪಯೋಗ ಅಷ್ಟು ವ್ಯಾಪಕವಾಗಿಲ್ಲದಿದ್ದರೂ ಆಧುನಿಕರಣದಿಂದಾಗಿ ಇಂದು ಅದು ಎಲ್ಲೆಡೆ ವ್ಯಾಪಿಸಿದೆ. ಅಲ್ಲದೆ ನವೀನ ರೀತಿಯ ಕಾರ್ಯಕ್ರಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತರಿಸುತ್ತಿದೆ. ಇದರ ಪರಿಣಾಮವೇ ಟಿವಿಯ ಪ್ರಸಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂದು ವಿವಿಧ ವಿನ್ಯಾಸ, ಅತ್ಯಾಧುನಿಕ ತಂತ್ರ ಜ್ಞಾನ ಅಳವಡಿಸಿರುವ ಟಿವಿ ಮಾರುಕಟ್ಟೆಗಳಲ್ಲಿ ಲಭ್ಯವಿರುವುದು ಅವುಗಳ ಬೇಡಿಕೆ ಹೆಚ್ಚಿರುವುದಕ್ಕೆ ಸಾಕ್ಷಿ.
ಇತಿಹಾಸ
ವಿಶ್ವದ ಮೊದಲ ವಿದ್ಯುನ್ಮಾನವಾದ ಎಲೆಕ್ಟ್ರಾನಿಕ್ ಟೆಲಿವಿಷನ್ ಅನ್ನು 1927ರಲ್ಲಿ 21 ವರ್ಷದ ಸಂಶೋಧಕ ಫಿಲೋ ಟೇಲರ್ ಫಾರ್ನ್ಸ್ವರ್ತ್ ಕಂಡು ಹಿಡಿದರು. ಅವರು ತಮ್ಮ 14ನೇ ವಯಸ್ಸಿನವರೆಗೂ ಮನೆಯಲ್ಲಿ ವಿದ್ಯುತ್ಛಕ್ತಿಯಿಲ್ಲದೆ ವಾಸಿಸಿದ್ದರು. 19ನೇ ಶತಮಾನದ ಉತ್ತರಾರ್ಧದಲ್ಲಿ ಮತ್ತು 20ನೇ ಶತಮಾನದ ಆರಂಭದಲ್ಲಿ ಹಲವಾರು ಸಂಶೋಧಕರಿಂದ ದೂರದರ್ಶನದ ಆವಿಷ್ಕಾರ ನಡೆಯಿತು. ಹಿಂದಿನ ತಂತ್ರಜ್ಞಾನವನ್ನು ಮೀರಿಸಲು ಅನೇಕರು ಸ್ಪರ್ಧಿಸಿದ್ದಾರೆ. ಅದಲ್ಲದೆ ಕೆಲವರು ದೃಶ್ಯ ಮತ್ತು ಆಡಿಯೋ ಸಂವಹನ ತಂತ್ರಜ್ಞಾನದ ಮೂಲಕ ಪ್ರಪಂಚವನ್ನು ಬದಲಿಸಲು ಬಯಸಿದ್ದರು.
2ನೇ ವಿಶ್ವ ಸಮರದ ಅನಂತರ ಕಪ್ಪು ಬಿಳುಪಿನ ಟಿವಿಯ ಸುಧಾರಿತ ರೂಪ ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟನ್ ನಲ್ಲಿ ಜನಪ್ರಿಯಗೊಂಡಿತು. ಅನಂತರ ಮನೆಗಳಲ್ಲಿ, ವ್ಯವಹಾರ ಕೇಂದ್ರಗಳಲ್ಲಿ, ಸಂಸ್ಥೆಗಳಲ್ಲಿ ಟೆಲಿವಿಷನ್ ಸಾಮಾನ್ಯವಾದವು. 1960ರ ದಶಕದಲ್ಲಿ ಯುಎಸ್‌ಎ ಸೇರಿದಂತೆ ಮುಂತಾದ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕಲರ್ ಟಿವಿಗಳ ಪ್ರಸಾರತೆ ಪರಿಚಯಗೊಂಡಿತು. 2000 ದಶಕದಲ್ಲಿ ಡಿಜಿಟಲ್ ಟೆಲಿವಿಷನ್ ಪ್ರಸರಣಗಳು ಹೆಚ್ಚಾದವು.
ಉದ್ದೇಶ
ಪ್ರಪಂಚಾದ್ಯಂತ ನ. 21ರಂದು ಟೆಲಿವಿಷನ್ ದಿನವನ್ನು ಆಚರಿಸುತ್ತಿದ್ದು ವಿಶ್ವ ಸಂಸ್ಥೆಯು ಇದನ್ನು 1996ರಲ್ಲಿ ಅಂಗೀಕರಿಸಿದೆ. ಜನರಿಗೆ ಪ್ರಮುಖವಾದ ಮಾಹಿತಿಯ ಜತೆ ಸುದ್ದಿಗಳ ನೀಡುವಿಕೆ, ಪಕ್ಷ ಪಾತವಿಲ್ಲದೆ ನಕಲಿ ನ್ಯೂಸ್ ಗಳ ಹಾವಳಿಗೆ ತಡೆ, ಜಗತ್ತಿನಾದ್ಯಂತ ಪರಿಣಾಮ ಬೀರಬಲ್ಲ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ಟೆಲಿವಿಷನ್‌ಗಳ ಪರಿಣಾಮ
ಟಿವಿಗಳಿಂದ ನಾವು ಮಹತ್ವದ ಮಾಹಿತಿಗಳನ್ನು ಪಡೆಯುವ ಜತೆಗೆ ಅದನ್ನು ಚರ್ಚಿಸಲು ಅವಕಾಶ ಮಾಡಿಕೊಡುತ್ತವೆ. ಆದರೆ ಈಗಿನ ಕೆಲವು ಮಾಧ್ಯಮಗಳು ಜನರ ಅಗತ್ಯಕ್ಕೆ ಮೀರಿದ್ದನ್ನು ನೀಡಲು ಹಾತೊರೆಯುತ್ತಿದ್ದು, ತನ್ನ ಪಥ ಮರೆತು ಮುಂದುವರಿಯುತ್ತಿವೆ. ಇನ್ನು ಕೆಲವು ಮಾಧ್ಯಮಗಳು ಮನೋರಂಜನೆ, ಮಾಹಿತಿ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಜನರಿಗೆ ಮಾಹಿತಿ ಒದಗಿಸುತ್ತಿವೆ. ದಿನಗಳು ಉರುಳುತ್ತಿದ್ದಂತೆ ಮಾನವನ ದೃಷ್ಟಿಕೋನಗಳು ಬದಲಾಗುತ್ತಿವೆ. ಅದೇ ರೀತಿ ಇಲೆಕ್ಟ್ರಾನಿಕ್ ಮಾಧ್ಯಮಗಳು ಕೂಡ ತಮ್ಮ ಛಾಪನ್ನು ಬದಲಿಸಿ ಹೊಸ ಮಾದರಿಯಲ್ಲಿ ಜನರ ಮುಂದೆ ನಿಲ್ಲಲು ಪ್ರಯತ್ನಿಸುತ್ತಿದೆ. ಏನೇ ಇರಲಿ ನಮಗೆ ಬೇಕಾಗುವ ಮಾಹಿತಿಗಳನ್ನು ನಾವು ಉಪಯೋಗಿಸಿಕೊಂಡು ಇರುವ ಸಾಧನವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳೋಣ.
ಪ್ರತಿ ವರ್ಷ ಏರುತ್ತಿರುವ ಸಂಖ್ಯೆ
ಟಿಎ ಎಂ ವಾರ್ಷಿಕ ಯೂನಿವರ್ಸ್ ಅಪ್‌ಡೆಟ್ 2015ರ ಪ್ರಕಾರ, ಭಾರತದ 234 ದಶಲಕ್ಷ ಮನೆಗಳಲ್ಲಿ 167 ದಶಲಕ್ಷದಷ್ಟು ಮನೆಗಳಲ್ಲಿ ಟೆಲಿವಿಷನ್ ಸೆಟ್‌ಗಳನ್ನು ಹೊಂದಿದ್ದರು. ಇದರಲ್ಲಿ 161 ದಶಲಕ್ಷಕ್ಕೂ ಹೆಚ್ಚಿನ ಜನರು ಕೇಬಲ್ ಟಿವಿಗಳನ್ನು ಬಳಸುತ್ತಿದ್ದರು. ಅದರಲ್ಲಿ 84 ದಶ ಲಕ್ಷ ಮನೆಗಳು ಡಿಟಿಎಚ್ ಚಂದಾದಾರರಾಗಿವೆ. 2018ರ ಇನ್ನೊಂದು ಸಮೀಕ್ಷೆ ಪ್ರಕಾರ ಟಿವಿ ಮಾಲಿಕತ್ವದ ಕುಟುಂಬಗಳ ಸಂಖ್ಯೆಯಲ್ಲಿ ಶೇ. 7.5 ಅಂದರೆ ಸುಮಾರು 197 ಮಿಲಿಯನ್ ಏರಿಕೆಯಾಗಿದೆ. ಅದಲ್ಲದೆ ವೀಕ್ಷಕರ ಸಂಖ್ಯೆಯೂ ಶೇ. 7.2 ಏರಿಕೆಯಾಗಿ 836 ಮಿಲಿಯನ್‌ಗೆ ತಲುಪಿದ್ದು ಪ್ರತಿ ವರ್ಷ ಇದರ ಸಂಖ್ಯೆ ಏರುತ್ತಲೇ ಇದೆ. ಭಾರತದ ಅಗ್ರ ವೀಡಿಯೋ ಸ್ಟ್ರೀಮಿಂಗ್ ಫ್ಲಾಟ್ಫಾರ್ಮ್ಆದ ಹಾಟ್‌ಸ್ಟಾರ್‌ಗೆ 60 ಮಿಲಿಯನ್ ಬಳಕೆದಾರರಿದ್ದಾರೆ ಎಂಬುದು ಜುಲೈ 27, 2018ರ ವರದಿಯಿಂದ ಬಹಿರಂಗಗೊಂಡಿದೆ.
ಪ್ರೀತಿ ಭಟ್, ಗುಣವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.