ದೇಗುಲಗಳಲ್ಲಿ ವಿಶೇಷ ಪೂಜೆ, ಜಾಗರಣೆ
Team Udayavani, Mar 4, 2019, 4:34 AM IST
ಮಹಾನಗರ: ಮಹಾ ಶಿವರಾತ್ರಿ ಆಚರಣೆಗೆ ಕರಾವಳಿ ಭಾಗದಲ್ಲಿ ಭಕ್ತರು ಅಣಿಯಾಗಿದ್ದು, ಸೋಮವಾರ ಬಹು ತೇಕ ಶಿವನ ದೇವಸ್ಥಾನಗಳಲ್ಲಿ ಜಾತ್ರೆ, ರುದ್ರಾಭಿಷೇಕ, ಪಾರಾಯಣ ಮತ್ತು ವಿಶೇಷ ಪೂಜೆಗಳ ಜತೆಗೆ ಜಾಗರಣೆಯೂ ನಡೆಯಲಿವೆ.
ನಗರದ ವಿವಿಧ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆಯು ತ್ತಿದ್ದು, ರವಿವಾರ ಹೂ-ಹಣ್ಣುಗಳ ಮಾರಾಟ ಜೋರಾಗಿತ್ತು. ಭಾರೀ ಸಂಖ್ಯೆ ಯಲ್ಲಿ ಭಕ್ತರು, ತಮ್ಮ ಇಷ್ಟದ ದೇವರಿಗೆ ಸಮರ್ಪಣೆಗೆ ಹೂ-ಹಣ್ಣು ಖರೀದಿಯಲ್ಲಿ ತೊಡಗಿದ್ದರು. ಹೂ, ಹಣ್ಣಿನ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲವಾದರೂ ಖರೀದಿ ಸುವವರ ಸಂಖ್ಯೆ ಹೆಚ್ಚಿತ್ತು.
ಕುದ್ರೋಳಿ ಕ್ಷೇತ್ರ
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವರ್ಷಾವಧಿ ಉತ್ಸವ- ಶಿವರಾತ್ರಿ ಮಹೋತ್ಸವ ಫೆ. 27ರಿಂದ ಆರಂಭಗೊಂಡಿದೆ. ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 11ಕ್ಕೆ ಮಹಾರುದ್ರಾಭಿಷೇಕ, ಶತಸೀಯಾಳ ಅಭಿಷೇಕ, ಮಹಾಪೂಜೆ, ರಾತ್ರಿ 8ಕ್ಕೆ ವೈಭವದ ರಥೋತ್ಸವ ನಡೆಯಲಿದೆ. ವಿಷ್ಣುಬಲಿ, ರಾತ್ರಿ 1ಕ್ಕೆ ಶಿವಬಲಿ, ಜಾಗರಣೆ ಬಲಿ, ಕಟ್ಟೆ ಪೂಜೆ, ರಥೋತ್ಸವ, ಕೆರೆದೀಪ, ಮಂಟಪ ಪೂಜೆ ನಡೆಯಲಿದೆ.
ಕದ್ರಿ ದೇವಸ್ಥಾನ
ಕದ್ರಿ ಮಂಜುನಾಥ ದೇಗುಲದಲ್ಲಿ ವಿಶೇಷವಾಗಿ ರುದ್ರಾಭಿಷೇಕ, ಶಿವಪೂಜೆ, ರಾತ್ರಿ ಜಮಾ ಪೂಜೆ, ಉತ್ಸವ ಬಲಿ, ಬೆಳ್ಳಿ ರಥೋತ್ಸವ ಜರಗಲಿದೆ. ಇದರೊಂದಿಗೆ ರಾತ್ರಿ ಜಾಗರಣೆ ಮಾಡು ವವರಿಗೆ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಪಾಂಡೇಶ್ವರ ದೇವಸ್ಥಾನ
ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಸೋಮವಾರ ಬೆಳಗ್ಗೆಯಿಂದ ಮರುದಿನ ಬೆಳಗ್ಗೆವರೆಗೆ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 10ಕ್ಕೆ ಸಾಮೂಹಿಕ ಶತರುದ್ರಾಭಿಷೇಕ ಜರಗಲಿದೆ. ಮಧ್ಯಾಹ್ನ 1ಕ್ಕೆ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 5ರಿಂದ ಶ್ರೀ ಮಹಾಲಿಂಗೇಶ್ವರ ಮಂಡಳಿಯಿಂದ ಭಜನೆ, ಸಂಜೆ 6.30ರಿಂದ ಸೂರಜ್ ಕುಡುಪು ಅವರಿಂದ ಸ್ಯಾಕ್ಸೋಫೋನ್ ವಾದನ, 8ಕ್ಕೆ ಸಭಾ ಕಾರ್ಯಕ್ರಮ, 8.30ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಅವರಿಂದ ಶ್ರೀದೇವಿ ಮಹಾತ್ಮೆ ನಡೆಯಲಿದೆ. ರಾತ್ರಿ 12ಕ್ಕೆ ಶಿವರಾತ್ರಿ ಜಾಗರಣೆ ಪ್ರಯುಕ್ತ ಶ್ರೀ ಮಹಾಲಿಂಗೇಶ್ವರ ದೇವರ ವಿಶೇಷ ಪೂಜೆ ನಡೆಯಲಿದೆ.
ಶರವು ದೇವಸ್ಥಾನ
ಶರವು ಮಹಾಗಣಪತಿ ದೇಗುಲದಲ್ಲಿ ಬೆಳಗ್ಗೆ 6ರಿಂದ ಉಷಾಕಾಲ ಪೂಜೆ, ಏಕಾದಶ ರುದ್ರಾಭಿಷೇಕ, ವಿಶೇಷ ಸೀಯಾಳ ಅಭಿಷೇಕ ನಡೆಯಲಿದೆ. ಸಂಜೆ 7.30ರಿಂದ ವಿಶೇಷ ಅಲಂಕಾರ ಪೂಜೆ, ಮಹಾಪೂಜೆ, ಕಾರ್ತಿಕಾ ಪೂಜೆ, 8ಕ್ಕೆ ಶತರುದ್ರಾಭಿಷೇಕ, ರಂಗಪೂಜೆ,
ಮಹಾಪೂಜೆ ಜರಗಲಿದೆ.
ಬಿಲ್ವಪತ್ರೆ, ಎಕ್ಕದ ಹೂವು, ಎಳನೀರಿಗೆ ಬೇಡಿಕೆ
ಶಿವರಾತ್ರಿ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಗಳಲ್ಲಿಯೂ ಬಿಲ್ವಪತ್ರೆ, ಎಕ್ಕದ ಹೂವು, ಎಳನೀರು, ತುಳಸಿ ಮಾಲೆ, ಹೂವು, ಹಣ್ಣು-ಕಾಯಿಗಳಿಗೆ ಹೆಚ್ಚಿನ ಬೇಡಿಕೆಯಿರುವುದು ಕಂಡುಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.