ವಿಶಿಷ್ಟ ವಿಚಾರ ಚಿಂತನ ಮಂಥನ: ಮಂಗಳೂರು ಲಿಟ್‌ಫೆಸ್ಟ್‌ ಇಂದಿನಿಂದ

Team Udayavani, Jan 11, 2025, 6:39 AM IST

ವಿಶಿಷ್ಟ ವಿಚಾರ ಚಿಂತನ ಮಂಥನ : ಮಂಗಳೂರು ಲಿಟ್‌ಫೆಸ್ಟ್‌ ಇಂದಿನಿಂದ

ಮಂಗಳೂರು: ವಿಚಾರ- ಸಂಸ್ಕೃತಿ-ಸಾಹಿತ್ಯ ಪ್ರಿಯರನ್ನು ಆಕರ್ಷಿಸುವ ಭಾರತ್‌ ಫೌಂಡೇಶನ್‌ ಆಯೋಜನೆಯ ಮಂಗಳೂರು ಲಿಟ್‌ ಫೆಸ್ಟ್‌ 7 ನೇ ಆವೃತ್ತಿ ಇಂದು (ಜ.11) ಆರಂಭಗೊಳ್ಳುತ್ತಿದೆ.

2018ರಲ್ಲಿ ಆರಂಭಗೊಂಡ ಈ ಸಮ್ಮೇಳನ ವಿಚಾರ-ವಿಮರ್ಶೆ ಮಂಥನ-ಸಮಾಲೋಚನೆ ಗಳಿಗೆ ವಿಶಿಷ್ಟತೆ ತಂದುಕೊಟ್ಟಿತು. ಸಾಮಾನ್ಯ ಸಾಹಿತ್ಯ ನುಡಿಹಬ್ಬಗಳಷ್ಟೇ ಇರುವ ಕಾಲದಲ್ಲಿ ದೇಶದ ಇತರ ಪ್ರಮುಖ ಲಿಟ್‌-ಫೆಸ್ಟ್‌ಗಳ ಮಾದರಿ ಪಡೆದು, ಈ ಫೆಸ್ಟ್‌ಗೆ ನಾಂದಿ ಹಾಡಿತು.

2018ರಲ್ಲಿ ಮೊದಲ ಸಮ್ಮೇಳನವನ್ನು ಉದ್ಘಾಟನೆಯನ್ನು ಆರ್ಗನೈಸರ್‌ ಪತ್ರಿಕೆ ಸಂಪಾದಕ ಪ್ರೊ| ಪ್ರಫುಲ್ಲ ಕೇತ್ಕರ್‌, ತರಂಗ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಪೈ ಹಾಗೂ ನಿಟ್ಟೆ ಶಿಕ್ಷಣ ಟ್ರಸ್ಟ್‌ ಅಧ್ಯಕ್ಷ ಎನ್‌. ವಿನಯ ಹೆಗ್ಡೆ ನೆರವೇರಿಸಿದ್ದರು. ಹಿರಿಯ ಸಾಹಿತಿ ಡಾ|ಎಸ್‌.ಎಲ್‌.ಭೆ„ರಪ್ಪ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಲಾಗಿತ್ತು. ರಾಷ್ಟ್ರೀಯತೆ ವಿಚಾರಕ್ಕೆ ಮೊದಲ ಸಮ್ಮೇಳನ ಆದ್ಯತೆ ನೀಡಿ, ಚಿಂತಕ ಡಾ|ಡೇವಿಡ್‌ ಫ್ರಾಲಿ ಅವರು ರಾಮಮಂದಿರ ನಿರ್ಮಾಣದ ಬಗ್ಗೆ ಒಲವು ತೋರಿದ್ದರೆ, ಚಿತ್ರ ನಿರ್ಮಾ ಪಕ ವಿವೇಕ್‌ ಅಗ್ನಿ ಹೋತ್ರಿ ಅರ್ಬನ್‌ ನಕ್ಸಲಿಸಂ ಬಗ್ಗೆ ಚರ್ಚಿಸಿದ್ದರು.

2019ರಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ| ಚಂದ್ರಶೇಖರ ಕಂಬಾರ ಅವರು ಉದ್ಘಾಟನೆ ನೆರವೇರಿಸಿದ್ದರೆ, ಸಂಶೋಧಕ ಡಾ|ಚಿದಾನಂದ ಮೂರ್ತಿ ಪ್ರಶಸ್ತಿ ಸ್ವೀಕರಿಸಿ ಧರ್ಮವು ಭಾರತದ ಅಂತಃಸತ್ವ ಎಂದಿದ್ದರು. ಕೇಂದ್ರ ಸಚಿವ ಅನು ರಾಗ್‌ ಸಿಂಗ್‌ ಠಾಕೂರ್‌ ಪಾಲ್ಗೊಂಡಿದ್ದರು.

2021ರಲ್ಲಿ ನಡೆದ ಲಿಟ್‌ಫೆಸ್ಟ್‌ ಪ್ರಮುಖವಾಗಿ ಕೋವಿಡ್‌ ಅನಂತರದ ಬೆಳವಣಿಗೆಗಳ ಬಗ್ಗೆ ಗಮನ ಹರಿಸಿತ್ತು. 2022ರ ಸಮ್ಮೇಳನ ಉದ್ಘಾಟಸಿದವರು ಶತಾವಧಾನಿ ಡಾ| ಆರ್‌.ಗಣೇಶ್‌. ಆಗಿನ ಬಿಸಿಬಿಸಿ ವಿಷಯವಾಗಿದ್ದ ಪಠ್ಯದ ಬಗ್ಗೆ ರೋಹಿತ್‌ ಚಕ್ರತೀರ್ಥ, ಅರವಿಂದ ಚೊಕ್ಕಾಡಿ ಅವರ ಚರ್ಚೆಯೂ ಇತ್ತು.2023ರಲ್ಲಿ ಮಿಥಿಕ್‌ ಸೊಸೈಟಿಯ ಗೌರವ ಕಾರ್ಯದರ್ಶಿ ವಿ.ನಾಗರಾಜ್‌ ಚಾಲನೆ ನೀಡಿದ್ದರು. ವಿದ್ವಾಂಸ ಡಾ| ತುಕಾರಾಮ ಪೂಜಾರಿ ಅವರಿಗೆ ಪ್ರಶಸ್ತಿ ನೀಡಲಾಗಿತ್ತು.

ಇಂದು ನಾಳೆ ಲಿಟ್‌ ಫೆಸ್ಟ್‌
ಈ ಬಾರಿ ಡಾ| ಎಸ್‌.ಎಲ್‌.ಭೈರಪ್ಪ, ಶತಾವಧಾನಿ ಡಾ| ಆರ್‌. ಗಣೇಶ್‌, ಕೇಂದ್ರ ಸಚಿವ ಹದೀìಪ್‌ ಸಿಂಗ್‌ ಪುರಿ ಮುಖ್ಯ ಆಕರ್ಷಣೆ. ಅಲ್ಲದೆ ಬಿಜೆಪಿ ತಮಿಳುನಾಡಿನ ಅಧ್ಯಕ್ಷ ಅಣ್ಣಾಮಲೈ, ಫ್ರೆಂಚ್‌ ಲೇಖಕ ಡಾ| ಕ್ಲಾಡ್‌ ಆರ್ಪಿ, ಲೇಖಕಿ ಭಾವನಾ ಆರೋರ ಮುಂತಾದವರ ಗೋಷ್ಠಿಗಳಿವೆ. ಸಿನೆಮಾ, ತುಳು, ಸಂಸ್ಕೃತ, ಜಾನಪದ ಹೀಗೆ ಹತ್ತು ಹಲವು ಆಯಾಮಗಳ ಸಮ್ಮೇಳನವನ್ನು ಜ.11ರಂದು ಬೆಳಗ್ಗೆ 10ಕ್ಕೆ ಡಾ| ಎಸ್‌.ಎಲ್‌.ಭೈರಪ್ಪ ಉದ್ಘಾಟಿಸುವರು. ಸಾಮರ್ಥ್ಯ ಆಯೋಗದ ಸದಸ್ಯ ಡಾ|ಸುಬ್ರಹ್ಮಣ್ಯಂ ಅವರಿಗೆ ಈ ಬಾರಿಯ ಪ್ರಶಸ್ತಿ ಎರಡನೇ ದಿನವಾದ ಜ.12ರಂದು ನೀಡಲಾಗುತ್ತದೆ. ಹಲವು ಪುಸ್ತಕ ಮಳಿಗೆಗಳು ಇರಲಿದ್ದು ಸಾಹಿತ್ಯಾಸಕ್ತರ ಮನತಣಿಸಲಿವೆ.

ಟಾಪ್ ನ್ಯೂಸ್

3-road-mishap

Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

2-katapady

Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ

BJP-SPL-Meet

BJP Politics: ಬಿ.ಎಸ್‌.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ

CM-DCM

Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ  “ಗುರಿ’!

ASHA_WORKERs

Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ

1-horoscope

Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

ಕಂಬಳಕ್ಕೆ ನೆರವು: ಇಂದು ಸಿಎಂಗೆ ಅಹವಾಲು

Mangaluru ಕಂಬಳಕ್ಕೆ ನೆರವು: ಇಂದು ಸಿಎಂಗೆ ಅಹವಾಲು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಡಾ| ವೀರಪ್ಪ ಮೊಯ್ಲಿ ಕೃತಿ “ವಿಶ್ವ ಸಂಸ್ಕೃತಿಯ ಮಹಾಯಾನ’ ಭಾಗ-2 ನಾಳೆ ಬಿಡುಗಡೆ

ಡಾ| ವೀರಪ್ಪ ಮೊಯ್ಲಿ ಕೃತಿ “ವಿಶ್ವ ಸಂಸ್ಕೃತಿಯ ಮಹಾಯಾನ’ ಭಾಗ-2 ನಾಳೆ ಬಿಡುಗಡೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

3-road-mishap

Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

2-katapady

Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ

BJP-SPL-Meet

BJP Politics: ಬಿ.ಎಸ್‌.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ

CM-DCM

Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ  “ಗುರಿ’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.