ಇಂದು ರೆ| ಡಾ| ಪೀಟರ್ ಪಾವ್ಲ್ ಸಲ್ದಾನಾ ಅಧಿಕಾರ ಸ್ವೀಕಾರ
Team Udayavani, Sep 15, 2018, 10:22 AM IST
ಮಹಾನಗರ: ಮಂಗಳೂರು ಧರ್ಮ ಪ್ರಾಂತದ ನೂತನ ಬಿಷಪ್ ಆಗಿ ಕಿನ್ನಿಗೋಳಿ ಮೂಲದ ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಶನಿವಾರ ಬೆಳಗ್ಗೆ ‘ದೀಕ್ಷಾ ವಿಧಿ’ ಸ್ವೀಕರಿಸಲಿದ್ದು, ಕ್ರಿಶ್ಚಿಯನ್ ಸಮುದಾಯದ ಈ ಐತಿಹಾಸಿಕ ಸಮಾರಂಭಕ್ಕೆ ನಗರ ಈಗ ಸಜ್ಜಾಗಿದೆ.
ನಗರದ ರೊಜಾರಿಯೊ ಕೆಥೆಡ್ರಲ್ ನಲ್ಲಿ ಬೆಳಗ್ಗೆ 9.30ಕ್ಕೆ ಈ ಸಮಾರಂಭವು ಶುರುವಾಗಲಿದ್ದು, ಸುಮಾರು ನಾಲ್ಕು ತಾಸುಗಳ ಈ ಮಹತ್ವದ ಕಾರ್ಯಕ್ರಮಕ್ಕೆ ಮಂಗಳೂರು ಧರ್ಮಪ್ರಾಂತದ ಸಾವಿರಾರು ಮಂದಿ ಸಾಕ್ಷಿಯಾಗಲಿದ್ದಾರೆ. ವಿಶೇಷ ಅಂದರೆ, 22 ವರ್ಷಗಳ ಬಳಿಕ ಇಂತಹ ಅಪರೂಪದ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದು, ಭಾರತದ ಪೋಪ್ ಪ್ರತಿನಿಧಿ (ನುನ್ಸಿಯೊ)ಯ ಕೌನ್ಸಿಲರ್ ರೆ| ಜ್ಹವಿಯರ್ ಡಿ. ಫೆರ್ನಾಂಡಿಸ್ ಜಿ., ದೇಶದ ವಿವಿಧ ಭಾಗಗಳ 25- 30ರಷ್ಟು ಬಿಷಪರು, 500ಕ್ಕೂ ಮಿಕ್ಕಿ ಧರ್ಮ ಗುರುಗಳು ಹಾಗೂ ಮಂಗಳೂರು ಧರ್ಮ ಪ್ರಾಂತದಾದ್ಯಂತದ ಕೈಸ್ತರು ಸೇರಿದಂತೆ ಒಟ್ಟು 10,000ಕ್ಕೂ ಅಧಿಕ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ.
ಮಂಗಳೂರಿನ ಹಾಲಿ ಬಿಷಪ್ ಹಾಗೂ ಆಡಳಿತಾಧಿಕಾರಿ ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ ಅವರು ಬೆಂಗಳೂರಿನ ಆರ್ಚ್ ಬಿಷಪ್ ರೆ| ಡಾ| ಪೀಟರ್ ಮಚಾದೊ ಮತ್ತು ಉಡುಪಿಯ ಬಿಷಪ್ ರೆ| ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರ ಜತೆಗೂಡಿ ನೂತನ ಬಿಷಪರನ್ನು ಅಭಿಷೇಕಿಸಿ ವಿಧಿ ಬದ್ಧವಾಗಿ ನಿಯೋಜಿಸುವರು.
ಮಂಗಳೂರು ಧರ್ಮಪ್ರಾಂತ್ಯಕ್ಕೆ 14ನೇ ಧರ್ಮಾಧ್ಯಕ್ಷರು
ಮಂಗಳೂರು ಧರ್ಮಪ್ರಾಂತದ ಧರ್ಮ ಗುರು ಫಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರನ್ನು ಧರ್ಮಪ್ರಾಂತದ ನೂತನ ಧರ್ಮಾಧ್ಯಕ್ಷರನ್ನಾಗಿ ನೇಮಕ ಮಾಡಿ 2018 ಜು. 3ರಂದು ಅಪರಾಹ್ನ 3.30ಕ್ಕೆ ಪೋಪ್ ಫ್ರಾನ್ಸಿಸ್ ಪ್ರಕಟನೆ ಹೊರಡಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.