ಮಹಾಲಿಂಗೇಶ್ವರ ಜಾತ್ರೆಯಲ್ಲಿ ಇಂದು ವಿಷುಕಣಿ ಸಂಭ್ರಮ


Team Udayavani, Apr 15, 2018, 11:02 AM IST

15-April-7.jpg

ಸೌರಮಾನ ಯುಗಾದಿ ತುಳುನಾಡಿನಲ್ಲಿ ಹೊಸ ವರ್ಷವನ್ನು ಆಚರಿಸುವ ದಿನ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಜಾತ್ರಾ ಉತ್ಸವದೊಂದಿಗೆ ವಿಷು ಕಣಿ ಸಂಭ್ರಮವೂ ಸೇರಿಕೊಂಡು ಎ. 15ರಂದು ಶಿಷ್ಟ ಸಂಪ್ರದಾಯದ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.

ಶನಿವಾರ ವಿಷು ಸಂಕ್ರಮಣದ ದಿನ ರಾತ್ರಿ ದೇವರ ದೈನಂದಿನ ಪೇಟೆ ಸವಾರಿ ಮುಗಿದು, ದೇವಾಲಯದ ಆಡಳಿತದವರು, ಭಕ್ತರು ಸೇರಿ ಕಾಲ ಕಾಲಕ್ಕೆ ಮಳೆ – ಬೆಳೆ ಸಮೃದ್ಧಿಯಾಗಿ, ಸುಭಿಕ್ಷೆ ಉಂಟಾಗಲಿ ಎಂದು ದೇವಸ್ಥಾನದ ತಂತ್ರಿಗಳ ಮೂಲಕ ದೇವರ ಸತ್ಯ, ಧರ್ಮ ನಡೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಬಳಿಕ ಫಲಪುಷ್ಪಾದಿ ಸುವಸ್ತುಗಳನ್ನು ದರ್ಪಣ ಸಹಿತ ಗರ್ಭಗುಡಿಯಲ್ಲಿ ಇರಿಸಿ ಬಾಗಿಲು ಮುಚ್ಚಲಾಗುತ್ತದೆ.

ವಿಷು (ಬಿಸು)ವಿನ ದಿನ (ತುಳು ಪಂಚಾಂಗದಲ್ಲಿ ತಿಂಗಳಡಿ ದಿನ) ಪ್ರಾತಃ ಕಾಲದಲ್ಲಿ ಶ್ರೀ ದೇವರ ಗರ್ಭಗುಡಿಯ ಬಾಗಿಲು ತೆರೆದು ದರ್ಪಣ ಬಿಂಬ ದರ್ಶನವಾಗುತ್ತದೆ. ದೇವಾಲಯದ ಒಳಾಂಗಣದ ಸಾಂಪ್ರದಾಯಿಕ ಚಪ್ಪರದ ಕಂಬಗಳನ್ನು ತಳಿರು ತೋರಣ ಕಟ್ಟಿ ಸಿಂಗರಿಸಲಾಗುತ್ತದೆ. ದೇವರು ಬಂದು ನಿಲ್ಲುವ ಕೊಡಿಮರದ ಬಲ ಭಾಗದಲ್ಲಿ ಚಪ್ಪರಕ್ಕೆ ಮೇಲ್ಕಾಪು ಹಾಸಲಾಗುತ್ತದೆ.

ವಿಶೇಷ ಊಟ
ವಿಷುಕಣಿಯ ಅಂಗವಾಗಿ ಮಧ್ಯಾಹ್ನ ದೇವಾಲಯದಲ್ಲಿ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆಯಲ್ಲಿ ವಿಷು ಹಬ್ಬದ ಪ್ರಯುಕ್ತ ವಿಶೇಷ ಊಟ ಇರುತ್ತದೆ. ಮನೆಗಳಲ್ಲಿ ಸೌರಯುಗಾದಿ ಆಚರಣೆ ಇದ್ದರೂ ಒಬ್ಬ ಸದಸ್ಯನಾದರೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯುವ ವಿಷು ಊಟದಲ್ಲಿ ಅನ್ನಪ್ರಸಾದವನ್ನು ಸ್ವೀಕರಿಸುವುದು ಅಂದಿನ ವಿಶೇಷ.

ಇಂದಿನ ಪೇಟೆ ಸವಾರಿ
ಎ. 15ರಂದು ಬೆಳಗ್ಗೆ ಸೌರಯುಗಾದಿ ವಿಷು ಆಚರಣೆ, ಅನಂತರ ಉತ್ಸವ, ವಸಂತ ಕಟ್ಟೆಪೂಜೆ, ರಾತ್ರಿ ಉತ್ಸವ ಬಲಿ, ಹೊರಾಂಗಣದಲ್ಲಿ ಚಂದ್ರಮಂಡಲ ಉತ್ಸವ, ಬಳಿಕ ಬನ್ನೂರು, ಅಶೋಕ ನಗರ, ರೈಲ್ವೇ ಮಾರ್ಗ, ಕೊಂಬೆಟ್ಟು, ಸಕ್ಕರೆಕಟ್ಟೆ ತನಕ ಪೇಟೆ ಸವಾರಿ ತೆರಳಿ ದೇವರು ದೇವಾಲಯಕ್ಕೆ ಮರಳಲಿದೆ.

ವಿಶೇಷ ಉತ್ಸವ
ಸೌರ ಯುಗಾದಿ ವಿಷುಕಣಿ ಅಂಗವಾಗಿ ದೇವಾಲಯದ ಒಳಾಂಗಣದಲ್ಲಿ ಬೆಳಗ್ಗೆ ವಿಶೇಷ ಉತ್ಸವ ಬಲಿ, ವಸಂತ ಕಟ್ಟೆಪೂಜೆ ನಡೆಯುತ್ತದೆ. ಸಂಜೆ ತುಳು ಪಂಚಾಂಗ ಸಾಂಪ್ರದಾಯದಂತೆ ದೇವಾಲಯದ ಹೊರಾಂಗಣದಲ್ಲಿ ‘ಬಯ್ಯದ ಬಲಿ’ (ಸಂಜೆಯ ಉತ್ಸವ) ನಡೆದು ಬಳಿಕ ಶ್ರೀ ದೇವರ ಸಾಂಪ್ರದಾಯಿಕ ಚಂದ್ರ ಮಂಡಲ ಉತ್ಸವ (ಬಂಡಿ ಉತ್ಸವ) ನಡೆಯುತ್ತದೆ. ಇಲ್ಲಿ ಶತಮಾನಗಳ ಹಿಂದೆ ಬಂಡಿಯ ಪೀಠದಲ್ಲಿ ದೇವರ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ಹೊರಾಂಗಣದಲ್ಲಿ ಎಳೆಯಲಾಗುತ್ತಿತ್ತು.
ಚಂದ್ರಮಂಡಲ ರಥವನ್ನು ನಿರ್ಮಿಸಿದ ಬಳಿಕ ಚಂದ್ರಮಂಡಲ ರಥ ಉತ್ಸವ ನಡೆಯುತ್ತದೆ. ಪುತ್ತೂರು ಸೀಮೆಯ ಜನರು ಇದನ್ನು ಬಂಡಿ ಉತ್ಸವ ಎಂದೂ ಕರೆಯುತ್ತಾರೆ.

ಟಾಪ್ ನ್ಯೂಸ್

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.